ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಕೀಲರ ಕ್ಷೇಮಾಭಿವೃದ್ದಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸುವ ಜೊತೆಗೆ ವಕೀಲರ ಕ್ಷೇಮಾಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ನೂತನ ಅಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ ಹೇಳಿದರು.
ಪಟ್ಟಣದ ವಕೀಲರ ಸಂಘದ ಕಚೇರಿಯಲ್ಲಿ ಸೋಮವಾರ ವಕೀಲರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಬಹುತೇಕ ವಕೀಲರ ಆಶೀರ್ವಾದದಿಂದ ರಾಜ್ಯ ವಕೀಲರ ಪರಿಷತ್ ನಿರ್ದೇಶಕರಾಗಿ ಆಯ್ಕೆಯಾಗುವ ಜೊತೆಗೆ ಇದೀಗ ಅಧ್ಯಕ್ಷರಾಗಿ ಆಯ್ಕೆಯಾಗಿ ಉತ್ತರ ಕರ್ನಾಟಕ ಭಾಗದ ವಕೀಲರ ಸೇವೆ ಮಾಡುವ ಜೊತೆಗೆ ಕೊಡುಗೆ ನೀಡಬೇಕಾದ ಜವಾಬ್ದಾರಿ ನನ್ನ ಮೇಲಿದ್ದು ವಕೀಲರ ಧ್ವನಿಯಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದ ವಕೀಲರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಪರಿಷತ್ ಕೆಲವು ಸೇವೆಗಳನ್ನು ಆನ್ಲೈನ್ ಮಾಡಿದ್ದು ವಕೀಲರು ಸಲಹೆ-ಸೂಚನೆ ನೀಡಿದರೇ ಖಂಡಿತವಾಗಿ ಸ್ವೀಕರಿಸಿ ಜಾರಿಗೆಗಾಗಿ ಪ್ರಯತ್ನಿಸುವೆ, ಉತ್ತರ ಕರ್ನಾಟಕಕ್ಕೆ ಒಂದು ಅವಕಾಶ ಸಿಕ್ಕಿದ್ದು ಈ ಭಾಗದ ವಕೀಲರ ಪರಿಶ್ರಮ ಪ್ರೋತ್ಸಾಹ ಕಾರಣವಾಗಿದೆ, ಮುಕ್ತವಾಗಿ ವಕೀಲರ ಪರಿಷತ್ ಸಹಾಯ ಪಡೆದುಕೊಳ್ಳಬೇಕೆಂದರು.
ಸ್ಥಳೀಯ ವಕೀಲರ ಸಂಘದ ನೂತನ ಅಧ್ಯಕ್ಷ ಎನ್.ಎಸ್.ಬಿರಾದಾರ ಮಾತನಾಡಿ, ಉತ್ತರ ಕರ್ನಾಟಕ ಭಾಗದ ವಕೀಲರು ತಮ್ಮೊಂದಿಗೆ ಯಾವಾಗಲೂ ಇರುತ್ತಾರೆ. ನಮ್ಮ ತಾಲೂಕಿನ ವಕೀಲರ ಸಂಘದ ಬೇಡಿಕೆಗಳು ಇದ್ದು ಮುಂಬರುವ ದಿನಗಳಲ್ಲಿ ರಾಜ್ಯ ಪರಿಷತ್ ಸಂಪರ್ಕಿಸುತ್ತೇವೆ. ತಾವೂ ಸಹಕಾರ ಮಾಡಿ ಸಂಘದ ಹಿತಾಸಕ್ತಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ಎಸ್.ಪಾಟೀಲ, ವಕೀಲರಾದ ಆರ್.ವಿ.ಗುತ್ತರಗಿಮಠ, ಎನ್.ಬಿ.ಕುಳಗೇರಿ, ಜಿ.ಬಿ.ಕೋಳೂರ. ವಕೀಲರ ಸಂಘದ ಉಪಾಧ್ಯಕ್ಷ ಸಿ.ಎಂ.ಹಡಪದ, ಖಜಾಂಚಿ ಅನಿಲ ಚಿಕ್ಕೊಂಡ, ವಕೀಲರಾದ ಸಂಗಮೇಶ ಹೌದೆ, ಎಂ.ಎಸ್.ಗೊಳಸಂಗಿ, ಬಿ.ಬಿ.ಬಿರಾದಾರ, ಎಸ್.ಪಿ.ಲಮಾಣಿ, ಎಸ್.ಎಸ್.ಬಶೆಟ್ಟಿ, ಎ.ಎಸ್.ಕೋಲಕಾರ, ಎಂ.ಎಂ.ಯರನಾಳ, ಎಸ್.ಎಸ್.ಕೋಳೂರ, ಜಿ.ಎನ್.ಬೇವಿನಮರದ, ಕುಮಾರ ಚೌಹಾಣ, ಎಸ್.ಎಂ.ಚಿಂಚೋಳಿ, ಎಂ.ಎನ್.ಕದಂ, ಆರ್.ಡಿ.ಜಾಧವ, ಎಲ್.ಬಿ.ಉಪ್ಪಾರ, ಸಂತೋಷ ಹೆಗಡ್ಯಾಳ, ಪ್ರಕಾಶ ಸಲಗರ, ಎಸ್.ಎಲ್.ಕಳ್ಳಿಗುಡ್ಡ, ಬಿ.ಎಸ್.ಕಳ್ಳಿಗುಡ್ಡ, ಜೀವನ ಮ್ಯಾಗೇರಿ, ಅಮೀನ ವಾಲಿಕಾರ, ಆಶೀಫ್ ನಧಾಪ್, ಆರ್.ಎಸ್.ಪವಾರ, ಎಂ.ಎಸ್.ಬಿರಾದಾರ, ಎಂ.ಎಸ್.ಬಿದರಕುಂದಿ ಸೇರಿದಂತೆ ಮುಂತಾದವರು ಹಾಜರಿದ್ದರು. ವಕೀಲ ಆರ್.ಬಿ.ಗಣಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರವಿ ರಾಠೋಡ ಸ್ವಾಗತಿಸಿ ನಿರೂಪಿಸಿದರು. ವಕೀಲ ಮಲ್ಲಿಕಾರ್ಜುನ ದೇವರಮನಿ ವಂದಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ನೂತನ ಅಧ್ಯಕ್ಷ ಎಸ್.ಎಸ್.ಮಿಟ್ಟಲಕೋಡ ಅವರನ್ನು ಸನ್ಮಾನಿಸಿ ಗೌರವಿಸಿದರು.