ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಪಂಚಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ಜರುಗಿತು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪಂಚಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಮಹಿಬೂಬ ನಾಯ್ಕೋಡಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ಗ್ರಾಮೀಣ ಭಾಗದ ಬಡಜನರಿಗೆ ಜೀವನಾಧಾರವಾಗಿವೆ. ರಾಜ್ಯದ ಜನರ ಬದುಕನ್ನು ಕಟ್ಟಿಕೊಳ್ಳಲು ಸಹಾಯಕವಾಗಿವೆ ಎಂದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ, ಉಕ್ಕಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗೊಂಡ ಸಿಂದಗಿ, ಪಂಡಿತ ಓಜಿ, ಸುಭಾಸ ಕಲ್ಯಾಣಿ, ಲಾಲಸಾಬ ದೇವರಗೋಳ, ಶಫೀಕ ಬೇದೆಕರ, ಬಿ.ಕೆ.ಮಸಳಿ, ಗ್ಯಾರಂಟಿ ಯೋಜನೆಯ ಸದಸ್ಯರಾದ ಮಹಾಂತೇಶ ತಳೇವಾಡ, ಬಂಡೆಪ್ಪ ನಾಟೀಕಾರ, ಕವಿತಾ ಮಣ್ಣೂರಮಠ, ರಾಕೇಶ ಬದ್ನೂರ, ಶಂಕರ ಚಕ್ರಮನಿ, ಪಂಚ ಗ್ಯಾರಂಟಿ ಯೋಜನೆ ಗ್ಯಾರಂಟಿಗಳ ಅನುಷ್ಠಾನಾಧಿಕಾರಿಗಳು ಇತರರು ಇದ್ದರು. ಶಶಿ ಪಾಟೀಲ ನಿರೂಪಿಸಿ, ವಂದಿಸಿದರು.