ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಅಭ್ಯುದಯ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಶರಣಬಸು ವನಕಿಹಾಳ (೯೪.೦೦%) ಪ್ರಥಮ, ಐಶ್ವರ್ಯ ಪೂಜಾರಿ (೯೩.೩೩%) ದ್ವಿತೀಯ ಮತ್ತು ಸಾನಿಕಾ ಜಾಲಿಹಾಳ (೯೨.೮೩) ತೃತೀಯ ಸ್ಥಾನ ಪಡೆದು ಸಂಭ್ರಮಿಸಿದರೆ, ಪರೀಕ್ಷೆ ಬರೆದ ಒಟ್ಟು ೨೫೭ ವಿದ್ಯಾರ್ಥಿಗಳ ಪೈಕಿ ೬೫ ಡಿಸ್ಟಿಗ್ಷನ್, ೧೧೭ ಪ್ರಥಮ, ೪೫ ದ್ವಿತೀಯ ದರ್ಜೆಯಲ್ಲಿ ಪಾಸಾಗುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.