ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸ್ಪಷ್ಠನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸವೋಚ್ಛ ನ್ಯಾಯಾಲಯದ ಆದೇಶದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಾನೂನು ಬಾಹಿರ ಕಟ್ಟಡಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರು ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಗಳಿಗೆ ಸಂಬಂಧಿಸಿದಂತೆ ಮೊದಲ ಹಂತವಾಗಿ ವಿಜಯಪುರ ಮಹಾನಗರ ಪಾಲಿಕೆ ವಾರ್ಡ ನಂ.೧೨ರಲ್ಲಿನ ಮದ್ದಿನ ಖಣಿಯ ಸರ್ಕಾರಿ ರಸ್ತೆ ಜಾಗೆಯಲ್ಲಿ ಒತ್ತುವರಿ ಮಾಡಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳು, ವಾರ್ಡ ನಂ.೧೩ರಲ್ಲಿನ ಆಶ್ರಮ ರಸ್ತೆಯ ಬಿಎಲ್‌ಡಿಇ ಇಂಜಿನೀಯರಿಂಗ್ ಕಾಲೇಜ್ ಎದುರುಗಡೆಯ ರಸ್ತೆ ಅತಿಕ್ರಮಣ ಮಾಡಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳು ಹಾಗೂ ವಾರ್ಡ ನಂ.೪ರಲ್ಲಿನ ಸೋಲಾಪುರ ರಸ್ತೆಯ ಬಂಜಾರಾ ಕ್ರಾಸ್‌ದಿಂದ ಬಿಎಂ ಪಾಟೀಲ ವೃತ್ತದವರೆಗಿನ ರಸ್ತೆಯ ಕಟ್ಟಡ ರೇಖೆಯಲ್ಲಿ ಬರುವ ನಿಯಮಬಾಹಿರ ಕಟ್ಟಡಗಳ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂದಿಂದ ಕಡಿತಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಾರ್ವಜನಿಕ ರಸ್ತೆ ಜಾಗೆಯಲ್ಲಿ ಹಾಗೂ ಕಟ್ಟಡ ರೇಖೆಯಲ್ಲಿ ಬರುವ ನಿಯಮಬಾಹಿರ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು.
ಸಾರ್ವಜನಿಕರು ಇದಕ್ಕೆ ಆಸ್ಪದ ನೀಡದೇ ಸಾರ್ವನಿಕ ರಸ್ತೆ ಜಾಗೆಯಲ್ಲಿ ಹಾಗೂ ಕಟ್ಟಡ ರೇಖೆಯಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಿಕೊಳ್ಳಬಾರದು. ಒಂದು ವೇಳೆ ನಿರ್ಮಿಸಿದ್ದಲ್ಲಿ ತೆರವುಗೊಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.