Author: editor.udayarashmi@gmail.com

ಉದ್ಯಮಿ ಸಾತವೀರ ರೊಟ್ಟಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕಾಶ್ಮೀರದಿಂದ ಸೈಕಲ್ ಯಾತ್ರೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಸೈನ್ಸ್ ಫಾರ್ ಫ್ಯೂಚರ್’ (Science for Future) ಎಂಬ ಸಂದೇಶದೊಂದಿಗೆ ಬೆಳಗಾವಿ ಜಿಲ್ಲೆಯ ಅಥಣಿ ಮೂಲದ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ಸಾತವೀರ ರೊಟ್ಟಿ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿನೂತನ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದಾರೆ.ಕಾಶ್ಮೀರದ ಕಾಟ್ರಾದಿಂದ ಆರಂಭಗೊಂಡ ಈ ಸೈಕಲ್ ಯಾತ್ರೆ 25 ದಿನಗಳನ್ನು ಪೂರೈಸಿದೆ. 24ನೇ ದಿನದಂದು ಬೆಂಗಳೂರಿಗೆ ಆಗಮಿಸಿದ ತಂಡವು ಎರಡು ದಿನಗಳ ಕಾಲ ವಿಶ್ರಾಂತಿ ಪಡೆದು ಪುನಃ ಕನ್ಯಾಕುಮಾರಿಯತ್ತ ಸಾತವೀರ ರೊಟ್ಟಿ ಹಾಗೂ ಪುತ್ರರಾದ ವಿನಯ ಮತ್ತು ಸುಮಂತ ಅವರು ತೆರಳುವ ಸಮಯದಲ್ಲಿ ಬೆಂಗಳೂರಿನ ವಿಧಾನಸೌಧದ ಮುಂದೆ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸದಸ್ಯರ ಪರವಾಗಿ ಯಾತ್ರಿಗಳನ್ನು ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಸೈಕಲ್ ಯಾತ್ರೆಗೆ ಶುಭ ಕೋರಿ ಮಾತನಾಡಿದ ಕೆ.ಎಸ್.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಪಿ.ಕೆ.ಎಂ. ಅವರು, ಇಂದಿನ ಯುವಜನತೆ ದೈನಂದಿನ ಕಾರ್ಯದ ಒತ್ತಡದಲ್ಲಿ ತಮ್ಮ ಆರೋಗ್ಯದ ಕಡೆ…

Read More

ಉದಯರಶ್ಮಿ ದಿನಪತ್ರಿಕೆ ಧಾರವಾಡ: ನಗರದಲ್ಲಿ ಆ.೦೨ ರಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ವತಿಯಿಂದ ನಡೆಯುತ್ತಿರುವ ಸುಧಾ ಪಾಟೀಲ್ ಅವರ 60ರ ಸಂಭ್ರಮದ ಅಭಿನಂದನಾ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಭಾನುವಾರ ಬೆಳಿಗ್ಗೆ 10 ಗಂಟೆಗೆ ವಿದ್ಯಾವರ್ಧಕ ಸಂಘದ ಡಾ. ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಜರುಗಲಿದೆ.ಮಹಾದೇವ ಹೊರಟ್ಟಿ, ಚಿಂತಕರು ಧಾರವಾಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾರೆ. ಡಾ.ಬಸವರಾಜ ಸಾದರ, ಸಾಹಿತಿಗಳು -ಚಿಂತಕರು ಬೆಂಗಳೂರು ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ.ಸುಧಾ ಪಾಟೀಲ ಅವರ ಕೃತಿಗಳ ಬಿಡುಗಡೆಯನ್ನು ಡಾ.ಸುರೇಶ ಜಂಗಮಶೆಟ್ಟಿಕುಲಪತಿಗಳು, ಹಾವೇರಿ ವಿಶ್ವವಿದ್ಯಾಲಯ ಮತ್ತು ಡಾ. ಚಂದ್ರಶೇಖರ ಗಾಣಿಗೇರ, ಕಾರ್ಯದರ್ಶಿಗಳು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅವರು ನಡೆಸಿಕೊಡುತ್ತಾರೆ.ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಧಾರವಾಡ ಜಿಲ್ಲಾ ಘಟಕ ಉದ್ಘಾಟನೆಯನ್ನು ಡಾ.ಅಶೋಕ್ ಆಲೂರ, ಕುಲಪತಿಗಳು ಕೊಡಗು ವಿಶ್ವವಿದ್ಯಾಲಯ ಅವರು ನೆರವೇರಿಸುತ್ತಾರೆ.ಜೀವ ಸುಧೆ ಅಭಿನಂದನಾ ಕೃತಿ ಬಿಡುಗಡೆಯನ್ನು ಖ್ಯಾತ ಸಾಹಿತಿ ಪ್ರೊ. ಎಸ್‌.ಜಿ.ಸಿದ್ದರಾಮಯ್ಯ ಬೆಂಗಳೂರು ಅವರು ಮಾಡಲಿದ್ದಾರೆ.ಡಾ.ಶಶಿಕಾಂತ ಪಟ್ಟಣ ಅಧ್ಯಕ್ಷರು -ಬಸವ…

Read More

ವಿಜ್ಞಾನ – ತಂತ್ರಜ್ಞಾನ ಲೇಖನ- ಮಂಡ್ಯ.ಮ.ನಾ.ಉಡುಪಮಂಡ್ಯ ಉದಯರಶ್ಮಿ ದಿನಪತ್ರಿಕೆ ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೆ ನಾವು ಎಷ್ಟು ಬಾರಿ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತೇವೆ ಎಂಬುದನ್ನು ಲೆಕ್ಕ ಹಾಕಿದರೆ ಅಚ್ಚರಿಯಾಗುತ್ತದೆ. ಮೊಬೈಲ್ ಅನ್‌ಲಾಕ್ ಮಾಡುವ ಫೇಸ್ ರಿಕಾಗ್ನಿಷನ್, Google Map ನ ನ್ಯಾವಿಗೇಷನ್, ನಮ್ಮ ಆಸಕ್ತಿಗೆ ಅನುಗುಣವಾಗಿ YouTube ಮತ್ತು Facebook ಮಾಡುವ ಶಿಫಾರಸುಗಳು, ಬ್ಯಾಂಕಿನ ವಂಚನೆ ಪತ್ತೆ ವ್ಯವಸ್ಥೆ – ಇವೆಲ್ಲವುಗಳ ಹಿಂದೆ AI ಇದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು ಏಕೆಂದರೆ ಇದು ಸತ್ಯ!ಆದರೆ ಈ ತಂತ್ರಜ್ಞಾನ ರಾತ್ರೋರಾತ್ರಿ ಹುಟ್ಟಿದ್ದಲ್ಲ. ಇದರ ಕಥೆ 70 ವರ್ಷಗಳಷ್ಟು ಹಳೆಯದು, ಮತ್ತು ಅದರಲ್ಲಿ ಯಶಸ್ಸಿನಷ್ಟೇ ಸೋಲುಗಳೂ ಇವೆ.1. ಕನಸಿನ ಬೀಜ: ಮನುಷ್ಯನನ್ನು ಸೃಷ್ಟಿಸುವ ಕನಸುAI ಕಲ್ಪನೆ ಹೊಸದಲ್ಲ. ಗ್ರೀಕ್ ಪುರಾಣದ ಕಂಚಿನ ಮಾನವ ಟಾಲೋಸ್ ನಿಂದ ಹಿಡಿದು, ನಮ್ಮ ಪಂಚತಂತ್ರದ ಮಾತನಾಡುವ ಯಂತ್ರಗಳವರೆಗೆ ಮನುಷ್ಯನಂತೆಯೇ ಯೋಚಿಸುವ ವಸ್ತುವನ್ನು ಮಾಡುವ ಕನಸು ಬಹಳ ಹಳೆಯದು.ವೈಜ್ಞಾನಿಕವಾಗಿ ಇದಕ್ಕೆ ಅಡಿಪಾಯ ಹಾಕಿದವರು ಇಬ್ಬರು.1943 ರಲ್ಲಿ ವಾರೆನ್…

Read More

ಮೊದಲ ಪುಟ ವಿಜಯಪುರ: ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಹಾಗೂ ಸಬಲಾ– ಮಹಿಳಾ ಸಬಲೀಕರಣ ಘಟಕದ ವತಿಯಿಂದ ಬೋಧಕರ ಹೊರತಾದ ಮಹಿಳಾ ಸಿಬ್ಬಂದಿಗಾಗಿ ಸ್ವಾವಲಂಬಿ ಸಬಲಾ ಎಂಬ ಉಪಯುಕ್ತ ಕಾಗದದ ಚೀಲ ಹಾಗೂ ಪ್ಯಾಕೆಟ್ ತಯಾರಿಕಾ ಕಾರ್ಯಾಗಾರ ಶುಕ್ರವಾರ ನಡೆಯಿತು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿ.ಎಲ್‌.ಡಿ.ಇ ಸಂಸ್ಥೆಯ ಎಸ್‌.ಎಸ್‌. ಪ್ರೌಢಶಾಲೆ ‘ಎ’‌ ವಿಭಾಗದ ನಿವೃತ್ತ ಕರಕುಶಲ ಶಿಕ್ಷಕಿ‌ ಸಂಗೀತಾ ನಿಂಬಾಳ ಮಾತನಾಡಿ, ನಾನಾ ಗಾತ್ರ ಮತ್ತು ಗುಣಮಟ್ಟದ ಕಾಗದದ ಚೀಲಗಳು ಮತ್ತು ಪ್ಯಾಕೆಟ್‌ಗಳನ್ನು ತಯಾರಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿದರು. ಅಲ್ಲದೇ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಔಷಧ ವಿತರಣೆ ಸೇರಿದಂತೆ ನಾಬಾ ದೈನಂದಿನ ಕಾರ್ಯಗಳಲ್ಲಿ ಅವುಗಳ ಉಪಯುಕ್ತತೆಯನ್ನು ವಿವರಿಸಿ, ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಕಾಗದದ ಚೀಲಗಳ ಬಳಕೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾತನಾಡಿ, ಮಹಿಳಾ ಸಬಲೀಕರಣ ಘಟಕವನ್ನು ಇನ್ನಷ್ಟು ಬಲಪಡಿಸುವ ತಮ್ಮ ಸಂಕಲ್ಪವನ್ನು ವ್ಯಕ್ತಪಡಿಸಿದರು. ಈ ತರಬೇತಿಯು…

Read More

ಅಥಣಿ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರ ಆಗ್ರಹ ಉದಯರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸ್ಥಳೀಯ ಎಸ್.ಎಸ್.ಎಂ.ಎಸ್. ಕಾಲೇಜಿನ ಖೋತ ಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ತಾಲೂಕು ಅಧ್ಯಕ್ಷ ರಾಕೇಶ್ ಮೈಗೂರ ಅವರ ಅಧ್ಯಕ್ಷತೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಯುವ ನಾಯಕ ಚಿದಾನಂದ ಸವದಿ, ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ನಡುವೆಯೂ ಪತ್ರಿಕೆಗಳು ಸಮಾಜದ ವಿಶ್ವಾಸವನ್ನು ಉಳಿಸಿಕೊಂಡಿವೆ. ಪತ್ರಿಕಾ ರಂಗವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಪತ್ರಕರ್ತರು ಪಕ್ಷಾತೀತವಾಗಿ ಸತ್ಯವನ್ನು ಸಮಾಜದ ಮುಂದೆ ತರುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತಿದ್ದಾರೆ ಎಂದು ಹೇಳಿದರು.ಪತ್ರಕರ್ತರು ಯಾವುದೇ ಖಚಿತ ಸಂಭಾವನೆ ಇಲ್ಲದಿದ್ದರೂ ತಮ್ಮ ಸ್ವಂತ ವೆಚ್ಚದಲ್ಲಿ ಸ್ಥಳಕ್ಕೆ ತೆರಳಿ ಸುದ್ದಿಗಳನ್ನು ಸಂಗ್ರಹಿಸಿ ಜನತೆಗೆ ತಲುಪಿಸುತ್ತಿದ್ದಾರೆ. ಅವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರದ ಮಟ್ಟದಲ್ಲಿ ಯೋಗಕ್ಷೇಮ ಹಾಗೂ ಅಭಿವೃದ್ಧಿ ನಿಗಮ ಸ್ಥಾಪಿಸುವ…

Read More

ತಿಕೋಟಾದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ | ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಇಂದುಶೇಖರ ಮಣೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯ, ಜವಾಬ್ದಾರಿ ಹಾಗೂ ನೈತಿಕತೆಯನ್ನು ಸ್ಮರಿಸಿ ಗೌರವಿಸುವುದೇ ಪತ್ರಿಕಾ ದಿನಾಚರಣೆ ಉದ್ದೇಶವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಇಂದುಶೇಖರ ಮಣೂರ ಹೇಳಿದರು.ಶುಕ್ರವಾರ ಪಟ್ಟಣದ ವಿರಕ್ತಮಠದಲ್ಲಿ ತಾಲೂಕು ಕಾನಿಪ ಘಟಕ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು, ಸತ್ಯವನ್ನು ಸಮಾಜಕ್ಕೆ ತಿಳಿಸುವುದು ಪತ್ರಕರ್ತರ ಜವಾಬ್ದಾರಿ. ದೀನ-ದುರ್ಬಲರ ಶೋಷಿತರ ಧ್ವನಿಯಾಗಿ ಅವರ ದೂರು-ದುಮ್ಮಾನಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಕಾನಿಪ ಸಂಘದ ಗೌರವಕ್ಕೆ ಧಕ್ಕೆ ತರದಂತೆ ಪತ್ರಕರ್ತರು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕೆಂದು ಇಂದುಶೇಖರ ಕರೆ ನೀಡಿದರು. ಹೆಸ್ಕಾಂ ಅಧಿಕಾರಿ ಜಿ ಎಸ್ ದೇಶಮುಖ ಮಾತನಾಡಿ, ಕಾನಿಪ ಅದ್ಯಕ್ಷ ಸಾತಲಿಂಗಯ್ಯಾ ಸಾಲಿಮಠ ಅವರು ಯಾರೆ ಆಗಿರಲಿ ನೀವು ತಪ್ಪು ಮಾಡುತ್ತಿದ್ದಿರಿ, ಸರಿಮಾಡಿಕೊಳ್ಳಿರಿ ಎಂದು ನೇರವಾಗಿ ಹೇಳುತ್ತಾರೆ. ತಾಲೂಕಿನಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ತಾಳಿಕೋಟಿ: ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕರಾದ ಡಿ.ವಿ.ಗುಂಡಪ್ಪನವರ ಭಾವಚಿತ್ರಕ್ಕೆ ಪುಷ್ಪರ್ಪಾಣೆ ಸಲ್ಲಿಸುವ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ಮೈಬೂಬಸುಬಾನಿ ಸಿರಸಗಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಸಜ್ಜನ, ಕಾರ್ಯದರ್ಶಿ ಯಲಗೂರಪ್ಪ ವಡವಡಗಿ ಸೇರಿದಂತೆ ಅನೇಕ ಸದಸ್ಯರು ಭಾಗಿಯಾಗಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯಮಟ್ಟದ ಕಿರಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಜಿಲ್ಲಾ ತಂಡವನ್ನು ಆಯ್ಕೆ ಮಾಡುವ ಉದ್ದೇಶದಿಂದ ವಿಜಯಪುರ ಜಿಲ್ಲಾ ಕಿರಿಯ ಅಥ್ಲೆಟಿಕ್ಸ್ ಕ್ರೀಡಾಪಟುಗಳ ಆಯ್ಕೆ (ಸೆಲೆಕ್ಷನ್) ಶಿಬಿರವನ್ನು ಆಗಸ್ಟ್ 2ರಂದು ಬೆಳಿಗ್ಗೆ 9.30ಕ್ಕೆ ನಗರದ ಡಾ. ಬಿ.ಆರ್ ಅಂಬೇಡ್ಕರ ಕ್ರೀಡಾಂಗಣದ ಆವರಣದಲ್ಲಿರುವ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.ಅಥ್ಲೆಟಿಕ್ ಅಸೋಸಿಯೇಷನ್ ವಿಜಯಪುರ ವತಿಯಿಂದ ಪ್ರಕಟಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಆಗಸ್ಟ್ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಿರಿಯ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಜಿಲ್ಲೆಯ ತಂಡವನ್ನು ಈ ಆಯ್ಕೆ ಪ್ರಕ್ರಿಯೆ ಮೂಲಕ ಅಂತಿಮಗೊಳಿಸಲಾಗುವುದು.ಆಯ್ಕೆ ಶಿಬಿರದಲ್ಲಿ ಜಿಲ್ಲೆಯ ಅರ್ಹ ಕಿರಿಯ ಅಥ್ಲೆಟಿಕ್ಸ್ ಕ್ರೀಡಾಪಟುಗಳು ಕಡ್ಡಾಯವಾಗಿ ಭಾಗವಹಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಖಜಾಂಚಿ ಎಸ್.ಎಂ. ಲೋಣಿ (7204115107), ಜಂಟಿ ಕಾರ್ಯದರ್ಶಿ ಜಿ.ಬಿ. ಬುಟಾಡ (9620365980), ಕೋಚ್ ಮಹಮ್ಮದ್ ಪೀರ್ಜಾದೆ (9739531383), ಕಿರಣ ರಾಠೋಡ (9591386706) ಹಾಗೂ ಗೌತಮ್ ಕಸಬಗಿ (8951263669) ಅವರನ್ನು ಸಂಪರ್ಕಿಸಬಹುದಾಗಿದೆ.ಆಯ್ಕೆ ಶಿಬಿರಕ್ಕೆ ಆಗಮಿಸುವ ಕ್ರೀಡಾಪಟುಗಳು ಅಗತ್ಯ ದಾಖಲೆಗಳೊಂದಿಗೆ ಸಮಯಕ್ಕೆ…

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್.ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಬೇಸಿಗೆಯ ಧಗೆಯ ದಿನಗಳಲ್ಲಿ ಪರೀಕ್ಷೆಯ ಕಾವು ಮತ್ತು ಸೂರ್ಯನ ಬಿಸಿಲು ಎರಡರ ತಾಪಮಾನಹೆಚ್ಚಾಗಿಯೇ ಇರುತ್ತದೆ. ಬಾನಲ್ಲಿ ರವಿ ಉರಿದರೆ ಭುವಿಯಲ್ಲಿ ಪಾಲಕರು. ರವಿಯ ಉರವಣಿಗೆಗೆ ಮನೆಯಲ್ಲಿ ಕುಳಿತುಕೊಳ್ಳುವ ಬಹುತೇಕ ಪಾಲಕರು ಮಕ್ಕಳಿಗೆ ಪರೀಕ್ಷೆ ಹತ್ತಿರ ಇರುವುದರಿಂದ ಅಭ್ಯಾಸ ಮಾಡು ಎಂದು ಒಂದೇ ಸಮನೆ ಒತ್ತಾಯವನ್ನು ಮಾಡುತ್ತಾರೆ. ಇದು ಮಕ್ಕಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತದೆ.ಅವರು ತಮ್ಮ ಓದುವ ಸ್ಥಳಕ್ಕೆ ಹೋಗಿ ಕುಳಿತುಕೊಂಡು ಏನನ್ನೋ ಓದಿ, ಒಂದಷ್ಟು ಬರೆದು ಮತ್ತಷ್ಟು ಅತ್ತಿತ್ತ ಗಮನ ಹರಿಸಿ ಓದುವುದು ಮುಗಿಯಿತು ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಅಭ್ಯಾಸ ಮಾಡುವುದು ಎಂದರೆ ಏನು? ಎಂದು ಕೇಳಿದರೆ ಮಕ್ಕಳು ತಮ್ಮ ತಲೆಯನ್ನು ಅತ್ತಿತ್ತ ಅಲ್ಲಾಡಿಸುವುದು ಖಂಡಿತ. ಕೊರೋನಾ ಪ್ಯಾಂಡೆಮಿಕ್ ನಂತರ ವಿಶೇಷವಾಗಿ ಮಕ್ಕಳು, ಪಾಲಕರು, ಶಿಕ್ಷಕರು, ಶಾಲಾ ಆಡಳಿತ ವರ್ಗದವರು ಮಕ್ಕಳಿಗೆ ಹೇಗೆ ಕಲಿಸಬೇಕು ಎಂಬ ವಿಷಯದಲ್ಲಿ ವಿಚಲಿತರಾಗಿರುವುದು ನೂರು ಶೇಕಡ ನಿಜ. ಮಕ್ಕಳಲ್ಲಿ ಕುಸಿತಗೊಂಡಿರುವ ಕಲಿಕಾ ಆಸಕ್ತಿಯೇ ಇದಕ್ಕೆಲ್ಲ…

Read More

ಗೆದ್ದರೂ ‘ಕೈ’ಗೆ ಸಿಗದ ಪಟ್ಟ, ಕಮಲ-ತೆನೆಗೆ ಸರಳ ಬಹುಮತ ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ತಾಲೂಕಿನ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆಯ ಎ ತರಗತಿಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿದೆ. ಹೈಕೋರ್ಟ್ ಆದೇಶದ ಮೇರೆಗೆ ಫಲಿತಾಂಶ ಪ್ರಕಟಿಗೊಂಡಿದ್ದು, ನಾಲ್ಕೂ ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ಪಟ್ಟಣದ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ಗುರುವಾರ ಚುನಾವಣೆ ಅಧಿಕಾರಿಯಾದ ತಹಸಿಲ್ದಾರ್ ಶ್ರೀನಿವಾಸ್, ರೇಣುಕಾ ಅವರು ಫಲಿತಾಂಶ ಪ್ರಕಟಿಸಿದರು.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸೋಮೇಶ್ ಜಿಯಾರ 11 , ರಾಜನಾಯಕ ಜಿನ್ನಹಳ್ಳಿ 11 , ಶಿವನಂಜಮ್ಮ 11 ಹಾಗೂ ಮಹದೇವಪ್ಪ 10 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಜುಲೈ 26ರಂದು ನಡೆದ 12 ಸ್ಥಾನಗಳ ಚುನಾವಣೆಯಲ್ಲಿ ಬಿ ತರಗತಿಯ 8 ಸ್ಥಾನಗಳ ಫಲಿತಾಂಶವನ್ನು ಅಂದೇ ಪ್ರಕಟಿಸಗೊಳಿಸಲಾಗಿತ್ತು. ಆದರೆ ಎ ತರಗತಿಯ ಚುನಾವಣೆಯಲ್ಲಿ ಕೆಲ ಗೊಂದಲ ಹಿನ್ನೆಲೆ ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಮತದಾನ ನಡೆದರೂ ಫಲಿತಾಂಶ ಪ್ರಕಟಗೊಳಿಸಿರಲಿಲ್ಲ. ಆದರೆ ವಿಚಾರಣೆ ನಡೆಸಿ ಹೈಕೋರ್ಟ್ ಆದೇಶ ಹಿನ್ನೆಲೆ ಚುನಾವಣಾಧಿಕಾರಿಯಾದ ತಹಸೀಲ್ದಾರ್…

Read More