ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದಲ್ಲಿರುವ ಭುವನೇಶ್ವರಿ ವಿದ್ಯಾವರ್ಧಕ ಸಂಸ್ಥೆಯ ಕಾವ್ಯಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-೧ರಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ-೧ರಲ್ಲಿ ೧೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಉತ್ತಮ ಶ್ರೇಣಿಯಲ್ಲಿ ೧೬ ವಿದ್ಯಾರ್ಥಿಗಳು ಪಾಸಾಗಿದ್ದು, ಶಾಲೆಯ ಒಟ್ಟು ಫಲಿತಾಂಶ ಶೇ.೧೦೦ಕ್ಕೆ ೧೦೦ರಷ್ಟಾಗಿದೆೆ.
ದಾನಮ್ಮ ಕಟ್ಟಿಮನಿ ೬೨೫ ಅಂಕಗಳಿಗೆ ೫೬೪ (೯೦.೨೪%) ಅಂಕ ಪಡೆದುಕೊಂಡು ಪ್ರಥಮ ಸ್ಥಾನ, ಜಿಯಾಅಂಜುಮ್ ಶೇಖ ೫೫೭ (೮೯.೧೨%) ದ್ವಿತೀಯ ಸ್ಥಾನ, ಅಶ್ವಿನಿ ಗಡೆದ ೫೫೩ (೮೮.೪೮%) ತೃತೀಯ ಸ್ಥಾನ, ಹರ್ಷ ಶಿವಸಿಂಪಿ ೫೧೫ (೮೨.೪%), ಶ್ರೇಯಸ್ ಮಠ ೫೧೨ (೮೧.೯೨%), ಸಾಕ್ಷಿ ಸುಣಗಾರ ೪೬೬ (೭೪.೫೬%), ಮಾಜಾನ್ ಮೋಕಾಸಿ ೪೬೦ (೭೩.೬%), ದಸಗೀಡಿಸಾಬ್ ಬಮ್ಮನಜೋಗಿ ೪೪೨ (೭೦.೭%), ಮಮತಾ ಚವ್ಹಾಣ ೪೫೧ (೭೨.೨೫%), ಸಂಧ್ಯಾ ಹಳ್ಳಪ್ಪನವರ್ ೪೦೪ (೬೪.೬೪%) ಅಂಕಗಳನ್ನು ಪಡದುಕೊಂಡು ಉತ್ತಮ ಶ್ರೇಣಿಯಲ್ಲಿ ಪಾಸಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಸಿ.ಎಂ.ನಾಗರಬೆಟ್ಟ, ಕಾರ್ಯದರ್ಶಿ ಕಾಂಚನಾ ನಾಗರಬೆಟ್ಟ, ಮುಖ್ಯಗುರು ರಾಜು ಕಾಂಬಳೆ ಸೇರಿದಂತೆ ಸಿಬ್ಬಂದಿಗಳು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

