ಹಿರೇಬೇವನೂರ ಗ್ರಾಮದಲ್ಲಿ ೧.೨೫ ಕೋಟಿ ರೂ ವೆಚ್ಚದ ಶಾದಿ ಮಹಲ್ ಕಟ್ಟಡ ಲೋಕಾರ್ಪಣೆಗೊಳಿಸಿದ ಶಾಸಕ ಯಶವಂತರಾಯಗೌಡ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಮುಸ್ಲಿಂ ಸಮಾಜದ ಬಡ ಜನತೆಗೆ ಮದುವೆ ಮತ್ತಿತರ ಕಾರ್ಯಗಳನ್ನು ನಡೆಸಲು ಶಾದಿಮಹಲ ಕಟ್ಟಲಾಗಿದ್ದು ಸದುಪಯೋಗ ಪಡೆದುಕೊಳ್ಳಲು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಹಿರೇಬೇವನೂರ ಗ್ರಾಮದ ಸಕ್ಕರೆ ಕಾರ್ಖಾನೆ ಹತ್ತಿರ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಂಜುಮನ ಇಸ್ಲಾಂ ಸಮಿತಿ ಇವರಿಂದ ನಿರ್ಮಿಸಲಾದ ಒಂದು ಕೋಟಿ ೨೫ ಲಕ್ಷ ರೂ ವೆಚ್ಚದ ಶಾದಿ ಮಹಲ್ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಅಲ್ಪ ಸಂಖ್ಯಾತರ ಮದುವೆ ಹಾಗೂ ಸಮುದಾಯದ ಕಾರ್ಯಕ್ರಮಗಳ ಉದ್ದೇಶಕ್ಕಾಗಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಮುಖ್ಯಮಂತ್ರಿಗಳು ಸಾಕಷ್ಟು ಅನುದಾನವನ್ನು ನೀಡಿದ್ದು ಇಂಡಿ ತಾಲೂಕಿನ ಅಭಿವೃದ್ದಿಗೆ ಮುಖ್ಯಮಂತ್ರಿಗಳ ಕೊಡುಗೆ ಅಪಾರವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಮೌಲಾನಾ ಶಾಕಿರ ಹುಸೇನ ಖಾಸ್ಮಿ ಮಾತನಾಡಿ ಹಿಂದು ಮುಸ್ಲಿಂ ಬಾಂಧವರು ಈ ನೆಲದಲ್ಲಿ ಅನ್ಯೋನತೆಯಿಂದ ಸಹೋದರತ್ವದಿಂದ ಬಾಳೋಣ ಎಂದರು.
ಸಾನಿದ್ಯ ವಹಿಸಿದ ದೇವಾನಂದ ಹಿರೇಮಠ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಾವೇದ ಮೋಮಿನ, ಶಾಕಿರ ಮುಲ್ಲಾ ಸಾನಿದ್ಯ ವಹಿಸಿ ಮಾತನಾಡಿದರು.
ನಿಂಬೆ ಅಬಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಅಲ್ಪ ಸಂಖ್ಯಾತರ ಇಲಾಖೆಯ ಉಪನಿರ್ದೇಶಕ ಪ್ರಶಾಂತ ಪೂಜಾರಿ, ಇಲಿಯಾಸ ಬೋರಾಮಣಿ, ಬಿ.ಕೆ.ಪಾಟೀಲ, ಪ್ರಶಾಂತ ಕಾಳೆ, ಕಜಾಪ ಅಧ್ಯಕ್ಷ ಆರ್.ವಿ.ಪಾಟೀಲ , ಸತ್ತಾರ ಬಾಗವಾನ, ನಾಗಪ್ಪಗೌಡ ಬಿರಾದಾರ, ಸಂಗಪ್ಪ ಉಪ್ಪಿನ, ಬಸಪ್ಪ ಸೋಲಾಪುರ, ರಮಜಾನ ಮಕಾನದಾರ, ಚಾಂದ ಶೇಖ, ಚಾಂದಸಾಬ ಮೋಮಿನ, ಮೂಬೂಬ ಮುಜಾವರ, ಮಹಮ್ಮದ ಹನೀಫ ಜಾಲೆಗಾರ, ಅಣ್ಣಾರಾಯ ಬಮ್ಮನಳ್ಳಿ ಮತ್ತಿತರಿದ್ದರು.

