ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದಲ್ಲಿ ಗುರುವಾರ ವಿಜಯಪುರ ಸಿದ್ಧಸಿರಿ ಬಹುರಾಜ್ಯ ಬಹುಉದ್ದೇಶ ಸಹಕಾರಿ ಸೊಸೈಟಿ ನಿಯಮಿತದ ಕೊಲ್ಹಾರ ಶಾಖೆಯ ನೂತನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮವನ್ನು ಶ್ರೀ ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಬ್ಯಾಂಕ್ ನಿರ್ದೇಶಕ ಜಗದೀಶ ಚಂ. ಕ್ಷತ್ರಿ ಮಾತನಾಡಿ, ನಮ್ಮ ಬ್ಯಾಂಕ್ ಎಲ್ಲಾ ವರ್ಗದ ಜನರಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ಅವಕಾಶ ಒದಗಿಸುತ್ತಿದೆ. ಗ್ರಾಹಕರ ಹಿತರಕ್ಷಣೆ ನಮ್ಮ ಜವಾಬ್ದಾರಿ. ಗ್ರಾಹಕರ ಏಳಿಗೆಯಿಂದ ನಮ್ಮ ಬ್ಯಾಂಕ್‌ನ ಏಳಿಗೆಯಾಗಿದೆ, ಎಂದು ಹೇಳಿದರು.
ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಕಲ್ಲಿನಾಥ ದೇವರು, “ಕೊಲ್ಹಾರ ಪಟ್ಟಣವು ಮುಳುಗಡೆ ಸಂತ್ರಸ್ತರ ಪ್ರಮುಖ ವಾಸಸ್ಥಳವಾಗಿದೆ. ಇಲ್ಲಿ ಹೆಚ್ಚಿನವರು ಕೃಷಿ ಅವಲಂಬಿತ ಕಾರ್ಮಿಕರು ಮತ್ತು ರೈತರು ಇದ್ದಾರೆ. ಇವರ ಅಭಿವೃದ್ಧಿಗೆ ಬ್ಯಾಂಕ್‌ಗಳು ಹೆಚ್ಚಿನ ಸಹಕಾರ ನೀಡಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಷಣ್ಮುಖ ಹಿರೇಮಠ ಸ್ವಾಮಿಗಳು,
ಪಟ್ಟಣ ಪಂಚಾಯತ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಟಿ.ಟಿ. ಹಗೇದಾಳ, ವಿನೀತಕುಮಾರ್ ಟಿ. ದೇಸಾಯಿ, ಶಶಿಧರ್ ಮಲ್ಲಿಕಾರ್ಜುನ ದೇಸಾಯಿ, ಕಲ್ಲಪ್ಪ ಸಂಗಪ್ಪ ಕಾಖಂಡಕಿ, ಬಸವರಾಜ ಉಪ್ಪಶಪ್ಪ, ಗಿಡ್ಡಪ್ಪಗೋಳ, ಗುರುಪಾದಪ್ಪ ಈರಪ್ಪ ಡೆಂಗಿ, ಉಮೇಶ್ ಬಿ., ಚಾಮರಾಜ ಬೇಳಾಲ್, ಬಸವರಾಜ ಚೀಪರಿ, ಕಿರಣಕುಮಾರ ಹಡಪದ, ಆನಂದ್ ಬಿರಾದಾರ್, ಶಿವರಾಜ್ ದೇಸಾಯಿ ಸೇರಿದಂತೆ ಶಾಖಾ ವ್ಯವಸ್ಥಾಪಕ ಶಿವರಾಜ ದೇಶಪಾಂಡೆ, ಲಕ್ಷ್ಮಣ ಕಾಳಗಿ ಸೇರಿದಂತೆ ಹಲವರಿದ್ದರು.

