ವಿಜಯಪುರದಲ್ಲಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಠಿಣ ಪರಿಶ್ರಮ ಹಾಗೂ ಛಲ ಹೊಂದಿ ಸಾಧನೆಯಡೆಗೆ ಸಾಗಿ ಸಾಧಕರಾಗಬೇಕು. ಭಗೀರಥ ಪ್ರಯತ್ನ ಮೈಗೂಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಗೀರಥ ಎಂದರೆ ವಿಶೇಷ ಪ್ರಯತ್ನ, ಅಸಾಧ್ಯವಾದನ್ನು ಸಾಧಿಸಿ ಬಿಟ್ಟರೆ ಅವರು ಮಾಡಿರುವುದು ಭಗೀರಥ ಪ್ರಯತ್ನ ಎಂದು ಭಗೀರಥರನ್ನು ವರ್ಣಿಸಿದರು.
ಕಾರ್ಯಕ್ರಮದಲ್ಲಿ ಸಂಗಮೇಶ ಮಿರಗಿ ಅವರು ಉಪನ್ಯಾಸ ನೀಡಿ, ಇಂದಿನ ವಿದ್ಯಾರ್ಥಿಗಳು, ಸಾಧಕರು ಅನೇಕ ಎಡರು-ತೊಡರುಗಳನ್ನು ಸೋಲುಗಳನ್ನು ಲೆಕ್ಕಿಸದೇ ಹಿಡಿದ ಕಾರ್ಯವನ್ನು ಬಿಡದೇ ಭಗೀರಥ ಪ್ರಯತ್ನ ನಮಗೆಲ್ಲ ಮಾದರಿ. ಇಂತಹ ಮಹನೀಯರ ಆದರ್ಶ ಅವರ ಬದುಕು ಮಾದರಿಯಾಗಿಸಿಕೊಂಡು ಸಾಧನೆ ಮಾಡಬೇಕು ಎಂದರು.
ಸಮಾಜ ಮುಖಂಡರಾದ ಜಕ್ಕಪ್ಪ ಯಡವೆ ಮಾತನಾಡಿದರು.
ಜಿಲ್ಲಾ ಪಂಚಾಯತಿಯ ಉಪ ನಿರ್ದೇಶಕರಾದ ನಾಗಭೂಷಣ ಮಾಡಕಿ, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ವಾರ್ತಾಧಿಕಾರಿ ಅಮರೇಶ ದೊಡಮನಿ, ಅಡಿವೆಪ್ಪ ಸಾಲಗಲ್, ಸೋಮಗೌಡ ಕಲ್ಲೂರು, ವಿದ್ಯಾವತಿ ಅಂಕಲಗಿ,
ಭೀಮರಾಯ ಜಿಗಜಿಣಗಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು,
ವಿವಿಧ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

