Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಯರಗಲ್ಲ ಗ್ರಾಮದ ಕಲಾವಿದ ಬಸವರಾಜ ಹಡಪದ ಅವರು ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಅಂಬೇಡ್ಕರ್ ಅವರ ಚಿತ್ರವನ್ನು ಪೆನ್ಸಿಲ್ ನಿಂದ ಚಿತ್ರಿಸಿ ಅಭಿಮಾನ ಮೆರೆದರು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಅಜ್ಞಾನ, ಅಂಧಕಾರ, ಜಾತಿ ವ್ಯವಸ್ಥೆಯಿಂದ ಬೇಯುತ್ತಿರುವ ನಾಡನ್ನು ಕಟ್ಟಲು ಸಾಕಷ್ಟು ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಯಾರೊಬ್ಬರೂ ಪಾಲನೆ ಮಾಡದಿರುವದು ಬೇಸರದ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ.ಜಿ.ಮಠ ಮಾತನಾಡಿ, ಡಾ.ಅಂಬೇಡ್ಕರ್ ಅವರ ಕನಸಿನಂತೆ ಜಾತಿ, ವರ್ಗ, ಲಿಂಗಬೇಧ ತಾರತಮ್ಯ ಮಾಡದೇ ಎಲ್ಲರೂ ಒಂದಾಗಿ ಈ ದೇಶವನ್ನು ಉನ್ನತ ಸ್ಥಾನಕ್ಕೆ ಒಯ್ಯೋಣ ಎಂದು ಪ್ರತಿಜ್ಞೆ ಮಾಡೋಣ ಎಂದರು.ಶಾಸಕ ಸಿ.ಎಸ್.ನಾಡಗೌಡ ಮಾತನಾಡಿದರು.ಸಹ ಪ್ರಾಧ್ಯಾಪಕ ಆರ್.ಎಚ್.ಸಜ್ಜನ ವಿಶೇಷ ಉಪನ್ಯಾಸ ನೀಡಿದರು. ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ತಾ.ಪಂ ಕಚೇರಿಯ ಖೂಬಾಸಿಂಗ್ ಜಾಧವ, ಪ್ರಮುಖರಾದ ತಿಪ್ಪಣ್ಣ ದೊಡಮನಿ, ಪ್ರಕಾಶ ಸರೂರ ಸೇರಿದಂತೆ ಹಲವರು ರಕ್ತದಾನ ಮಾಡಿದರು.ತಹಸೀಲ್ದಾರ ಬಲರಾಮ ಕಟ್ಟಿಮನಿ, ತಾ.ಪಂ ಇಓ ನಿಂಗಪ್ಪ ಮಸಳಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಕ್ರಾಂತಿಯ ಹರಿಕಾರ, ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರವರು ರಚಿಸಿದ ಸಂವಿಧಾನ ಸೂರ್ಯ ಚಂದ್ರದರು ಇರುವವರೆಗೆ ಈ ದೇಶದ ಸಂವಿಧಾನವಾಗಿ ಉಳಿಯುತ್ತದೆ. ಯಾವುದೇ ಕಾಲಕ್ಕೂ ಸಂವಿಧಾನಕ್ಕೆ ಧಕ್ಕೆ ಆಗದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೇರಿದಂತೆ ನಮ್ಮ ನಾಯಕರು ನೋಡಿಕೊಳ್ಳುತ್ತಾರೆ ಎಂಬ ಅಚಲ ವಿಶ್ವಾಸವಿದೆ. ಅಂಬೇಡ್ಕರ್ ಜಯಂತಿ ಅಂದರೆ ನಮಗೆಲ್ಲ ಹಬ್ಬವಿದ್ದಂತೆ. ಏಕೆಂದರೆ ಎಲ್ಲ ಜನಾಂಗದವರಿಗೆ ನ್ಯಾಯ ಕೊಟ್ಟಿರುವ ಪುಣ್ಯಾತ್ಮರು ಅಂಬೇಡ್ಕರರು ಎಂದು ಹೇಳಿದರು.ಮುಖಂಡರಾದ ಮಡಿವಾಳ ಯಾಳವಾರ, ದಾದಾಸಾಹೇಬ ಬಾಗಾಯತ, ವಿಠ್ಠಲ ನಡುವಿನಕೇರಿ, ಶಶಿಧರ ಅಥರ್ಗಾ, ಗುರು ಗಚ್ಚಿನಮಠ, ರಾಘವ ಅಣ್ಣಿಗೇರಿ, ಶಂಕರ ಹೂಗಾರ, ಪಾಂಡುಸಾಹುಕಾರ ದೊಡಮನಿ, ಕಿರಣ ಪಾಟೀಲ, ರಾಜಶೇಖರ ಕುರಿಯವರ, ಜವಾಹರ ಗೋಸಾವಿ, ದತ್ತಾ ಗೊಲಂಡೆ, ಅಶೋಕ ಬೆಲ್ಲದ, ರಾಚು ಬಿರಾದಾರ,…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಬಾಗಲಕೋಟೆ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಯಲು ಪೊಲೀಸ್ ಇಲಾಖೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಖ್ಯ ರಸ್ತೆಗಳಲ್ಲಿ ಅಪಘಾತ ವಲಯಗಳಲ್ಲಿ ಅಳವಡಿಸಿರುವ ಸೋಲಾ‌ರ್ ಬ್ಲಿಂಕರ್ಸ್ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.ಜಮಖಂಡಿ ಮತ್ತು ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಆಲಗೂರ ಮತ್ತು ಕವಟಗಿ ಆರ್ ಸಿ ಸೇರಿ ಜಿಲ್ಲೆಯಲ್ಲಿನ ಮುಖ್ಯರಸ್ತೆಗಳಲ್ಲಿನ ಅಪಘಾತ ವಲಯಗಳನ್ನು ಗುರುತಿಸಿ ಅಲ್ಲಿ ಜಿಗ್‌ಜಾಗ್ ಬ್ಯಾರಿಕೇಡ್ ಅಳವಡಿಸಿ ವಾಹನಗಳ ವೇಗ ಕಡಿಮೆ ಮಾಡುವುದರ ಮೂಲಕ ಅಪಘಾತಗಳ ಸಂಖ್ಯೆ ಕಡಿಮೆಯಾಗುವಂತೆ ಮಾಡಿತ್ತು. ಈ ಪ್ರಯೋಗದ ಯಶಸ್ಸಿನ ಬೆನ್ನಲ್ಲೇ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸೋಲಾರ್ ಬ್ಲಿಂಕ‌ರ್ಸ್ ಅಳವಡಿಸಿದೆ.ವಿಜಯಪೂರ—ಧಾರವಾಡ ಮುಖ್ಯ ರಸ್ತೆಯಲ್ಲಿನ ಚಿಕ್ಕಪಡಸಲಗಿ ಸೇತುವೆ ಬಳಿ ತಿರುವುಗಳಲ್ಲಿ, ಕ್ರಾಸ್ ರೋಡ್‌ಗಳಲ್ಲಿ, ಮುಖ್ಯ ರಸ್ತೆಗೆ ಬರುವ ದಾರಿಯಲ್ಲಿ ಹೀಗೆ ಅಪಘಾತವಾಗುವ ಸಾಧ್ಯತೆಗಳಿರುವ ಕಡೆಗಳಲ್ಲಿ ಸೋಲಾ‌ರ್ ಬ್ಲಿಂಕರ್ಸ್ ಅಳವಡಿಸಿದ್ದು, ಇದರಲ್ಲಿರುವ ಕೆಂಪು ದೀಪ ಮಿನುಗುತ್ತಾ ವಾಹನ ಸವಾರರನ್ನು ಎಚ್ಚರಿಸುತ್ತಿದೆ. ಇದನ್ನು ಗಮನಿಸಿ ವಾಹನ ಸವಾರರು ಎಚ್ಚರದಿಂದ ವಾಹನ ಚಲಾಯಿಸುವುದರಿಂದ ಅಪಘಾತಗಳು…

Read More

ಚಡಚಣದ ಕಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಕ್ಕಮಹಾದೇವಿ ಜಯಂತಿ ಆಚರಣೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖವನ್ನು ತ್ಯಜಿಸಿ, ಚೆನ್ನಮಲ್ಲಿಕಾರ್ಜುನನ್ನು ತನ್ನ ಪತಿಯೆಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ವಚನ ಸಾಹಿತ್ಯದಲ್ಲಿ ಗುರುತಿಸಿಕೊಂಡು ಮಾದರಿಯಾಗಿದ್ದಾಳೆ. ಸ್ತ್ರೀವಾದಿ ಚಳುವಳಿಯ ಪ್ರತಿಪಾದಕಿಯಾಗಿ ಅಂದಿನ ಕಾಲದಲ್ಲಿ ತೋರಿದ ದಿಟ್ಟತನ, ಶ್ರದ್ಧೆ, ವೈಚಾರಿಕ ಮನೋಭಾವನೆ ಇಂದಿನ ಮಹಿಳೆಯರ ಬದುಕಿಗೆ ಅಕ್ಕಮಹಾದೇವಿ ಆದರ್ಶ ಎಂದು ಚಡಚಣ ತಾಲೂಕು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ದೀಪಾ ಪ್ರಶಾಂತ ಮಾಳಿಯವರು ಹೇಳಿದರು.ಚಡಚಣ ಪಟ್ಟಣದ ಕಲ್ಮೇಶ್ವರ ಪ್ರಾಥಮಿಕ ಶಾಲೆಯಲ್ಲಿ ಕದಳಿ ಮಹಿಳಾ ವೇದಿಕೆ ಹಾಗೂ ಕಲ್ಮೇಶ್ವರ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಅಕ್ಕಮಹಾದೇವಿ’ ಜಯಂತಿ ಕಾರ್ಯಕ್ರಮವನ್ನು ಉದ್ದೇಶಸಿ ಮಾತನಾಡಿದ ಅವರು. ಅಕ್ಕಮಹಾದೇವಿಯವರ ಧಾರ್ಮಿಕ ತತ್ತ್ವಗಳು, ಸಾಧನೆ ಹಾಗೂ ಮಹಿಳಾ ಸಬಲೀಕರಣಕ್ಕೆ ನೀಡಿದ ಕೊಡುಗೆಗಳು ಅಜರಾಮರ ಎಂದರು.ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕಾಶಿಬಾಯಿ ವಾಲಿಕಾರರವರು ಮಾತನಾಡುತ್ತ. ೧೨ನೇ ಶತಮಾನದ ವಚನಕಾರರಲ್ಲಿ ಅಕ್ಕಮಹಾದೇವಿ ಪ್ರಮುಖರಾಗಿದ್ದಾರೆ. ಅಧಿಕಾರ,…

Read More

ರೇವತಗಾಂವ ಉಮರಜ ಮಾರ್ಗ ಮಧ್ಯದ ರಸ್ತೆ | ಸಂಚಾರಕ್ಕೆ ನಿತ್ಯ ಪರದಾಟ | ಚಾಲಕರಿಗೆ ಧೂಳಿನ ಸ್ವಾಗತ | ಬೈಕ್ ಸವಾರರೇ ಹುಷಾರ್! ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ ಮಾಳಿಚಡಚಣ: ಶಿರಾಡೋಣ, ರೇವತಗಾಂವ ಉಮರಜ ಮಾರ್ಗ ಮಧ್ಯದ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನಲೆ ವಾಹನ ಚಾಲಕರು, ಬೈಕ್ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೆ ಭಾರಿ ಅನಾಹುತಗಳು ಸಂಭವಿಸಬಹುದಾಗಿದೆ.ತೀವ್ರ ಹದಗೆಟ್ಟಿರುವ ರಸ್ತೆಯುದ್ಧಕ್ಕೂ ಅಲ್ಲಲ್ಲಿ ಭಾರೀ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ. ಡಾಂಬರು ಕಾಣದೆ ದಶಕಗಳೇ ಕಳೆದಿವೆ. ಕಲ್ಲು-ಮಣ್ಣು, ಜಲ್ಲಿ ಕಲ್ಲು ಮೇಲೆದ್ದಿರುವುದರಿಂದ ಸಂಚಾರಕ್ಕೆ ಇನ್ನಿಲ್ಲದ ಅಡಚಣೆಯಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿಷ್ಕಾಳಜಿಯಿಂದ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ತಗ್ಗು-ಗುಂಡಿಗಳಿರುವ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದ ಕಾರಣ, ವಾಹನ ಸವಾರರು ಜನಪ್ರತಿನಿಧಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.ರಸ್ತೆ ತುಂಬ ಗುಂಡು ಕಲ್ಲುಗಳು ತುಂಬಿಕೊಂಡಿದ್ದು, ಅಲ್ಲಲ್ಲಿ ತಗ್ಗು-ದಿನ್ನೆಗಳು ನಿರ್ಮಾಣವಾಗಿವೆ. ಅಲ್ಲದೆ, ಗಾಡಿಗಳ ಓಡಾಟದಿಂದ ಧೂಳು ಏಳುತ್ತಿದ್ದು, ಚಾಲಕರು ಪರದಾಡುತ್ತಿದ್ದಾರೆ. ಬೈಕ್ ಸವಾರರು ಈ ರಸ್ತೆಯಲ್ಲಿ ಜೀವ ಕೈಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮನಸ್ಸು ಆಗೋಚರವಾಗಿದ್ದು ಸೂಕ್ಷ್ಮ ಹಾಗೂ ಸಂಕೀರ್ಣವಾದ ರಚನೆಹೊಂದಿದೆ. ಸ್ವಸ್ಥ ಮನದಲ್ಲಿ ಸ್ವಸ್ಥ ಮನಸ್ಸಿರಬೇಕು. ಒಮ್ಮೆ ಮನಸ್ಸು ಆಘಾತಕ್ಕೊಳಗಾದರೆ ಅದನ್ನು ತಿದ್ದುವುದು ಕಠಿಣ, ಇತ್ತೀಚೆಗೆ ಹಿರಿಯರಂತೆ ಮಕ್ಕಳೂ ಕೂಡ ಮೊಬೈಲ ನೋಡುವುದರಲ್ಲಿ ತಲ್ಲೀನರಾಗಿರುತ್ತಾರೆ. ಅವರ ಆಳುವನ್ನು ನಿಲ್ಲಿಸಲು ಕೈಗೆ ಮೊಬೈಲ ಕೊಟ್ಟು ಸುಮ್ಮನಾಗಿಸುತ್ತಾರೆ. ಸದಾ ಮೊಬೈಲ ನೋಡುವುದರಿಂದ ಕಣ್ಣು ಮತ್ತು ಮನಸ್ಸುಗಳ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಮಕ್ಕಳಿಗೆ ಮೊಬೈಲ ಬದಲಿಗೆ ಪುಸ್ತಕಗಳನ್ನು ಕೊಟ್ಟು ನೈತಿಕ ಮೌಲ್ಯಗಳನ್ನು ಹೆಚ್ಚಿಸಬೇಕೆಂದು ನಾಡಿನ ಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಹೇಳಿದರು.ಅವರು ಶರಣ ಸಾಹಿತ್ಯ ಪರಿಷತ್ತಿನ ಜನ ಕಲ್ಯಾಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ಕಂಚ್ಯಾಣಿ ಶರಣಪ್ಪನವರ ಪುಣ್ಯ ಸ್ಮರಣೆಯ ದತ್ತಿ ಸಮಾರಂಭ ಲಿಂ. ಕಂಚ್ಯಾಣಿ ಶರಣಪ್ಪನವರ ಸ್ಮರಣಾರ್ಥ ನಡೆದ ದತ್ತಿ ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ತು ಡಾ. ಆನಂದ ಪಾಂಡುರಂಗಿ ಹಾಗೂ ಶ್ರೀ ಎಸ್.ಎಸ್. ಝಳಕಿ ದಂಪತಿಗಳನ್ನು ಸನ್ಮಾನಿಸಿ ಜನಕಲ್ಯಾಣ ಪ್ರಶಸ್ತಿ ನೀಡಿ ಗೌರವಿಸಿತು.ನಿವೃತ್ತ ಉಪಪ್ರಾಚಾರ್ಯ ಎಸ್.ಎಸ್. ಝಳಕಿ ಸನ್ಮಾನ ಸ್ವೀಕರಿಸಿ ಮಾತನಾಡಿಶರಣಪ್ಪನವರು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕರ್ನಾಟಕ ಛಾಯಾ ಚಿತ್ರಗ್ರಾಹಕ ಸಂಘದ ವತಿಯಿಂದ ಪ್ರತೀ ವರ್ಷ ಕೊಡಮಾಡುವ ಛಾಯಾಶ್ರೀ ಪ್ರಶಸ್ತಿಗೆ ತಾಲೂಕಿನ ತಾರನಾಳ ಗ್ರಾಮದ ರಂಜಾನ ಅಲ್ಲಾಸಾ ನಧಾಫ (ರಾಜು ಢವಳಗಿ) ಭಾಜನರಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ೭೦ನೇ ವರ್ಷದ ಛಾಯಾಗ್ರಾಹಕರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಹಡಲಗೇರಿ ಗ್ರಾಮ ವ್ಯಾಪ್ತಿಯ ಮಾದರಿ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡದ ವಸತಿಯುಕ್ತ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿಗೆ ಬಿಎ, ಬಿಎಸ್ಸಿ, ಬಿಕಾಂ ಮತ್ತು ಬಿಸಿಎ ಕೋರ್ಸ್ಗಳಿಗೆ ಪ್ರವೇಶಗಳು ಪ್ರಾರಂಭವಾಗಿವೆ.ಪ್ರತಿಕೋರ್ಸ್ಗೆ ೪೦ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾತಿಯ ಅವಕಾಶವಿದ್ದು, ಡೋನೇಷನ್ ರಹಿತ ಪ್ರವೇಶವನ್ನು ವಿದ್ಯಾರ್ಥಿಗಳು ಪಡೆಯಬಹುದು. ಈ ಕಾಲೇಜಿನಲ್ಲಿ ಎಲ್ಲಾ ಜಾತಿ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅವಕಾಶವಿದೆ. ಸ್ಮಾರ್ಟ್ಕ್ಲಾಸ್ ಸೌಲಭ್ಯ, ಶಿಷ್ಯವೇತನಗಳು, ಗ್ರಂಥಾಲಯ, ಪ್ರಯೋಗಾಲಯಗಳು, ಪರಿಣಿತ ಬೋಧಕರು ಹಾಗೂ ಉದ್ಯೋಗಾಧಾರಿತ ಉಚಿತ ಕ್ಲಾಸ್‌ಗಳು ಈ ಕಾಲೇಜಿನ ವೈಶಿಷ್ಟ್ಯವಾಗಿದ್ದು, ಆಸಕ್ತರು ಸದುಪಯೋಗ ಪಡೆದುಕೊಳ್ಳುವಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ ೮೯೫೧೧೯೧೨೪೨, ೯೪೮೦೯೯೪೧೪೨, ೯೭೪೦೩೬೫೧೮೨, ೮೦೯೫೧೦೦೯೧೦, ೯೭೩೮೬೩೬೦೦೫ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಪ್ರಾಂಶುಪಾಲ ಎಸ್.ಎಲ್.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ವಿಜಯಪುರ ಶಾಸಕ ಬಸನಗೌಡ ಯತ್ನಾಳ ಅವರು ಪ್ರವಾದಿ ಮಹಮ್ಮದ ಪೈಗಂಬರ್ ಅವರ ಬಗ್ಗೆ ಮಾತನಾಡಿರುವದಕ್ಕೆ ಇಲ್ಲಿನ ಮುಸ್ಲಿಂ ಫೋರಂ ಖಂಡಿಸಿದೆ.ಈ ಬಗ್ಗೆ ನಡೆದ ಸುದ್ದಿಗೋಷ್ಟಿಯಲ್ಲಿ ಫೋರಂ ನ ಅಧ್ಯಕ್ಷ ಮಹೆಬೂಬ ಗೊಳಸಂಗಿ ಮಾತನಾಡಿ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಬಸನಗೌಡರು ಮನಸ್ಸಿಗೆ ಬಂದಂತೆ ಮಾತನಾಡುವದು ಸರಿಯಲ್ಲ. ಟೋಪಿ, ಜಾಳಿಗೆ, ಭುರ್ಕಾ ಧರಿಸಿದವರು ನಮ್ಮ ಮನೆಗೆ ಬರಬೇಡಿ, ಗಡ್ಡಾ ಬಿಟ್ಟವರು ನಮ್ಮ ಮನೆಗೆ ಬರಬೇಡಿ ಎಂದು ಹೇಳುವ ಇವರು ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ನಮ್ಮ ಮನೆಗೆ ತಾವೇ ಬಂದು ಊಟ ಮಾಡಿ ಹೋಗಿದ್ದಾರೆ. ಇದನ್ನೆಲ್ಲ ಮರೆತು ಹೀಗೆಲ್ಲ ಮಾತನಾಡುವದು ಸರಿಯಲ್ಲ. ಅವಶ್ಯತೆ ಇದ್ದಾಗ ಮುಸ್ಲೀಮರ ಬೆಂಬಲ ಪಡೆಯೋದು ಇಲ್ಲದಿರುವಾಗ ಹಿಂದೂಗಳ ಬೆಂಬಲ ಪಡೆಯೋ ಇವರು ಹಿಂದೂಗಳಿಗಾಗಿಯಾದರೂ ಏನು ಮಾಡಿದ್ದಾರೆ ಎಂದು ತೋರಿಸಿ ಕೊಡಬೇಕು. ಪೈಗಂಬರ ಅವರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ ಬಗ್ಗೆ ನಮ್ಮ ಸಮಾಜದ ವತಿಯಿಂದ ಸಭೆ ಕರೆದು ನಿರ್ಣಯಿಸಿ, ಅವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಒತ್ತಾಯಿಸುತ್ತೇವೆ…

Read More