ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಹಡಲಗೇರಿ ಗ್ರಾಮ ವ್ಯಾಪ್ತಿಯ ಮಾದರಿ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡದ ವಸತಿಯುಕ್ತ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿಗೆ ಬಿಎ, ಬಿಎಸ್ಸಿ, ಬಿಕಾಂ ಮತ್ತು ಬಿಸಿಎ ಕೋರ್ಸ್ಗಳಿಗೆ ಪ್ರವೇಶಗಳು ಪ್ರಾರಂಭವಾಗಿವೆ.
ಪ್ರತಿಕೋರ್ಸ್ಗೆ ೪೦ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾತಿಯ ಅವಕಾಶವಿದ್ದು, ಡೋನೇಷನ್ ರಹಿತ ಪ್ರವೇಶವನ್ನು ವಿದ್ಯಾರ್ಥಿಗಳು ಪಡೆಯಬಹುದು. ಈ ಕಾಲೇಜಿನಲ್ಲಿ ಎಲ್ಲಾ ಜಾತಿ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅವಕಾಶವಿದೆ. ಸ್ಮಾರ್ಟ್ಕ್ಲಾಸ್ ಸೌಲಭ್ಯ, ಶಿಷ್ಯವೇತನಗಳು, ಗ್ರಂಥಾಲಯ, ಪ್ರಯೋಗಾಲಯಗಳು, ಪರಿಣಿತ ಬೋಧಕರು ಹಾಗೂ ಉದ್ಯೋಗಾಧಾರಿತ ಉಚಿತ ಕ್ಲಾಸ್‌ಗಳು ಈ ಕಾಲೇಜಿನ ವೈಶಿಷ್ಟ್ಯವಾಗಿದ್ದು, ಆಸಕ್ತರು ಸದುಪಯೋಗ ಪಡೆದುಕೊಳ್ಳುವಂತೆ ಮತ್ತು ಹೆಚ್ಚಿನ ಮಾಹಿತಿಗಾಗಿ ೮೯೫೧೧೯೧೨೪೨, ೯೪೮೦೯೯೪೧೪೨, ೯೭೪೦೩೬೫೧೮೨, ೮೦೯೫೧೦೦೯೧೦, ೯೭೩೮೬೩೬೦೦೫ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಪ್ರಾಂಶುಪಾಲ ಎಸ್.ಎಲ್.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
