Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಖಿಲ ಭಾರತ ವೀರಶೈವ ಲಿಮಗಾಯತ ಮಹಾಸಭಾ ಜಿಲ್ಲಾ ಘಟಕ ವಿಜಯಪುರದಿಂದ ೨೦೨೫-೨೬ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ವ್ಯಾಸಂಗ ಮಾಡಿ ಪದವಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ಪಾಸಾದ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿದಾರರು ಬಿ.ಎ., ಬಿ.ಕಾಂ, ಬಿ.ಎಸ್.ಸಿ., ಬಿ.ಎ.ಎಂ.ಎಸ್. ಬಿ.ಬಿ.ಎ. ಬಿ.ಸಿ.ಎ. ಬಿ.ಎಸ್.ಸಿ. ನರ್ಸಿಂಗ್ ಬಿ. ಫಾರ್ಮಸಿ, ಎಲ್.ಎಲ್.ಬಿ. ಪದವಿ ಪಾಸಾದವರಾಗಿರಬೇಕು.ವಿದ್ಯಾರ್ಥಿ ವಿಜಯಪುರ ಜಿಲ್ಲೆಯವರಾಗಿದ್ದು, ಜಿಲ್ಲೆಯ ಯಾವುದೇ ಕಾಲೇಜಿನಿಂದ ಪದವಿ ಪಡೆದವರಾಗಿರಬೇಕು. ಪ್ರತಿ ವಿಭಾಗದಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಯನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುವುದು. ಸ್ವವಿವರ ಅರ್ಜಿಯೊಂದಿಗೆ ಆಧಾರ ಕಾರ್ಡ ಹಾಗೂ ದೃಢೀಕರಿಸಲ್ಪಟ್ಟ ಪದವಿ ಅಂಕಪಟ್ಟಿಯನ್ನು ಲಗತ್ತಿಸಿ, ದಿನಾಂಕ ೨೦-೮-೨೦೨೬ ರೊಳಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬಂಜಾರಾ ಹೈಸ್ಕೂಲ ಎದುರು ವಿಜಯಪುರ ೫೮೬೧೦೩ ಈ ವಿಳಾಸಕ್ಕೆ ಕಳಿಸಿ ಕೊಡಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ವಿ.ಸಿ. ನಾಗಠಾಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸಚಿವ ಸಂಪುಟದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಿಂದಗಿ ತಾಲೂಕು ಗಾಣಿಗ ಸಮಾಜದ ಮಾಜಿ ಅಧ್ಯಕ್ಷ ಮಲ್ಲಣ್ಣ ಮನಗೂಳಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಮಾನ್ಯ ಲಕ್ಷ್ಮಣ ಸವದಿ ಅವರ ರಾಜಕೀಯ ಮುತ್ಸದ್ದಿತನ ಹಾಗೂ ಜನಪರ ದೃಷ್ಟಿಕೋನವು ರಾಜ್ಯದ ಸಮಗ್ರ ಪ್ರಗತಿಗೆ ಸಾಕ್ಷಿಯಾಗಲಿದೆ. ಅವರ ಸಚಿವ ಅವಧಿಯಲ್ಲಿ ಹಿಂದುಳಿದ ವರ್ಗಗಳ ಏಳಿಗೆ ಹಾಗೂ ಉತ್ತರ ಕರ್ನಾಟಕ ಭಾಗದ ನನೆಗುದಿಗೆ ಬಿದ್ದಿರುವ ನೀರಾವರಿ ಸೇರಿದಂತೆ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಹೊಸ ವೇಗ ಸಿಗಲಿದೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ. ಭಗವಂತನು ಅವರಿಗೆ ಸಾರ್ವಜನಿಕ ಸೇವೆ ಮಾಡಲು ಹೆಚ್ಚಿನ ಶಕ್ತಿಯನ್ನು ಕರುಣಿಸಲಿ” ಎಂದು ಮನಗೂಳಿ ಶುಭ ಹಾರೈಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳು ಏಕಾಗ್ರತೆ, ಶಿಸ್ತು‌ ಹಾಗೂ ನಿರಂತರವಾಗಿ ಅಧ್ಯಯನಶೀಲರಾದರೆ ಯಾವುದೇ ಕಠಿಣ ಪರೀಕ್ಷೆಗಳಲ್ಲಿಯೂ ಯಶಸ್ವಿಯಾಗಬಹುದು ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಹಣಕಾಸು ಉಪ‌ಅಧಿಕಾರಿ‌ ಯಲ್ಲಾಲಿಂಗ ಜನವಾಡ ಹೇಳಿದ್ದಾರೆ.ಶುಕ್ರವಾರ ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜ ಮತ್ತು ಅಲೆನ್ ಕರಿಯರ್ ಇನ್‌ಸ್ಟಿಟ್ಯೂಟ್ ವತಿಯಿಂದ ಆಯೋಜಿಸಲಾದ ನೂತನ ವಿದ್ಯಾರ್ಥಿಗಳ ಸ್ವಾಗತ ಹಾಗೂ ನೀಟ್-2026ರ ಸಾದಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶೈಕ್ಷಣಿಕವಾಗಿ ಶ್ರೇಷ್ಠತೆಯನ್ನು ಸಾಧಿಸಲು ಎಲ್ಲರೂ ಬದ್ಧತೆಯಿಂದ ವಿದ್ಯಾಭ್ಯಾಸ ಮಾಡಬೇಕು. ಸಮರ್ಪಣೆ, ಕಠಿಣ ಪರಿಶ್ರಮ ಮಾಡುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.ಅಲೆನ್ ಕರಿಯರ್ ಇನಸ್ಟಿಟ್ಯೂಟ್ ಸಂಯೋಜಕ ಪ್ರೇಮ ಕಿಶೋರ ಚೌಧರಿ ಅವರು ಸಾಧಕರಿಗೆ ಬೆಳ್ಳಿ ಪದಕಗಳನ್ನು ನೀಡಿ ಗೌರವಿಸಿ ಮಾತನಾಡಿ, ಕಳೆದ ವರ್ಷ ಅಲೆನ್-ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ ತರಬೇತಿ ಪಡೆದ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಪಾಸಾಗಿ ಯಶಸ್ವಿಯಾಗಿ ಅರ್ಹತೆ ಪಡೆದಿದ್ದಾರೆ. ಇದು ಸಂಸ್ಥೆಯ ಸ್ಥಿರ ಶೈಕ್ಷಣಿಕ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.ಇದೇ ವೇಳೆ ನೀಟ್ ಸಾಧಕರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಶರಣರ, ಸಂತರ ನಾಡು. ಸಂಸ್ಕೃತಿ, ಸಂಸ್ಕಾರ ಆಚಾರ-ವಿಚಾರಗಳು ನಮ್ಮ ಈ ಮಣ್ಣಿನ ಗುಣ ಧರ್ಮದಲ್ಲಿಯೇ ಅಡಗಿವೆ. ೧೨ನೇ ಶತಮಾನದ ಶರಣರ ಕಾಯಕ ಸಂದೇಶಗಳು ಸಮಾನತೆ, ಕಾಯಕನಿಷ್ಠೆ ಮತ್ತು ಮಾನವೀಯತೆಯ ಮೇಲೆ ಆಧಾರಿತವಾಗಿದ್ದು, ಜಾತಿ ಬೇಧವಿಲ್ಲದೇ ಪ್ರತಿಯೊಬ್ಬರಿಗೂ ಸಮಾನ ಅವಕಾಶವಿರುವ ಸಮಾಜ ನಿರ್ಮಾಣವೇ ಅವರ ಮುಖ್ಯ ಗುರಿಯಾಗಿತ್ತು. ಇಂದು ನಾವೆಲ್ಲರೂ ಮೌಲ್ಯಾಧಾರಿತ ಬದುಕನ್ನು ನಡೆಸಲು ಶರಣರ ಕಾಯಕ ತತ್ವಗಳೇ ದಾರಿದೀಪವಾಗಿವೆ ಎಂದು ನಿಕಟಪೂರ್ವ ಜಿಲ್ಲಾಧ್ಯಕ್ಷರು ಭಾರತೀಯ ಜನತಾಪಕ್ಷ ವಿಜಯಪುರದ ಆರ್.ಎಸ್ ಪಾಟೀಲ ಅಭಿಪ್ರಾಯಪಟ್ಟರು.ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಗುರುಬಾಯಿ ಬಸನಗೌಡ ಪಾಟೀಲ ದತ್ತಿ, ಡಾ. ರಾಮರಾವ ಮಲ್ಲರಾವ ನಾಡಗೇರ, ದಿ. ಮಲ್ಲಪ್ಪ ರುದ್ರಪ್ಪ ತೋಟದ ದತ್ತಿ, ಲಿಂ.ಅಮರಪ್ಪ ಬಸಪ್ಪ ಸಾಲಕ್ಕಿ ದತ್ತಿ . ದತ್ತಿನಿಧಿಗೋಷ್ಠಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ದತ್ತಿಗೋಷ್ಠಿಗಳ ಮೂಲಕ ಶರಣರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯಪುರದ ವಿಶ್ರಾಂತ ಪ್ರಾಚಾರ್ಯರಾದ ಬಿ. ಎಮ್. ಅಜೂರ ಮಾತನಾಡಿ,…

Read More

ಆಲಮೇಲ‌ದಲ್ಲಿ ನಡೆದ ತಾಲ್ಲೂಕು‌‌ ಬಣಜಿಗ ಸಮಾವೇಶ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಸಲಹೆ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಬಣಜಿಗ ಸಮಾಜದ ಸಂಘಟನೆ ಬಲಿಷ್ಠವಾಗಬೇಕಾದರೆ ಸಮಾಜದ ಎಲ್ಲ ವರ್ಗದವರನ್ನು ಒಗ್ಗೂಡಿಸಿಕೊಂಡು ಸಾಗಬೇಕು. ಶಿಕ್ಷಣ, ಉದ್ಯೋಗ ಹಾಗೂ ಸ್ವಾವಲಂಬನೆಯ ಮೂಲಕ ಯುವಜನತೆ ಮುಂದೆ ಬರಬೇಕು. ಸಮಾಜದ ಅಭಿವೃದ್ಧಿಗೆ ಹಿರಿಯರ ಅನುಭವ ಮತ್ತು ಯುವಕರ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಂಸದ ಜಗದೀಶ ಶೆಟ್ಟರ ಹೇಳಿದರು.ಅವರು ಆಲಮೇಲ‌ ಪಟ್ಟಣದ ವಿಶ್ವೇಶ್ವರ ದೇವಸ್ಥಾನದಲ್ಲಿ ನಡೆದ ತಾಲ್ಲೂಕು‌‌ ಬಣಜಿಗ ಸಮಾವೇಶವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಉನ್ನತ ಸ್ಥಾನಗಳಿಗೆ ತಲುಪಿಸುವ ಜವಾಬ್ದಾರಿ ಸಮಾಜದ ಮೇಲಿದೆ. ಸಮಾಜದ ಪ್ರತಿಯೊಬ್ಬರೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಸಮಾಜದ ಸಂಘಟನೆ ಕೇವಲ ಚುನಾವಣೆ ಅಥವಾ ಸಮಾವೇಶಗಳಿಗೆ ಸೀಮಿತವಾಗಬಾರದು. ವರ್ಷಪೂರ್ತಿ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದಸ್ಯರಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಶರಣರ, ಸಂತರ ನಾಡು. ಸಂಸ್ಕೃತಿ, ಸಂಸ್ಕಾರ ಆಚಾರ-ವಿಚಾರಗಳು ನಮ್ಮ ಈ ಮಣ್ಣಿನ ಗುಣ ಧರ್ಮದಲ್ಲಿಯೇ ಅಡಗಿವೆ. ೧೨ನೇ ಶತಮಾನದ ಶರಣರ ಕಾಯಕ ಸಂದೇಶಗಳು ಸಮಾನತೆ, ಕಾಯಕನಿಷ್ಠೆ ಮತ್ತು ಮಾನವೀಯತೆಯ ಮೇಲೆ ಆಧಾರಿತವಾಗಿದ್ದು, ಜಾತಿ ಬೇಧವಿಲ್ಲದೇ ಪ್ರತಿಯೊಬ್ಬರಿಗೂ ಸಮಾನ ಅವಕಾಶವಿರುವ ಸಮಾಜ ನಿರ್ಮಾಣವೇ ಅವರ ಮುಖ್ಯ ಗುರಿಯಾಗಿತ್ತು. ಇಂದು ನಾವೆಲ್ಲರೂ ಮೌಲ್ಯಾಧಾರಿತ ಬದುಕನ್ನು ನಡೆಸಲು ಶರಣರ ಕಾಯಕ ತತ್ವಗಳೇ ದಾರಿದೀಪವಾಗಿವೆ ಎಂದು ನಿಕಟಪೂರ್ವ ಜಿಲ್ಲಾಧ್ಯಕ್ಷರು ಭಾರತೀಯ ಜನತಾಪಕ್ಷ ವಿಜಯಪುರದ ಆರ್.ಎಸ್ ಪಾಟೀಲ ಅಭಿಪ್ರಾಯಪಟ್ಟರು.ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಗುರುಬಾಯಿ ಬಸನಗೌಡ ಪಾಟೀಲ ದತ್ತಿ, ಡಾ. ರಾಮರಾವ ಮಲ್ಲರಾವ ನಾಡಗೇರ, ದಿ. ಮಲ್ಲಪ್ಪ ರುದ್ರಪ್ಪ ತೋಟದ ದತ್ತಿ, ಲಿಂ.ಅಮರಪ್ಪ ಬಸಪ್ಪ ಸಾಲಕ್ಕಿ ದತ್ತಿ . ದತ್ತಿನಿಧಿಗೋಷ್ಠಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ದತ್ತಿಗೋಷ್ಠಿಗಳ ಮೂಲಕ ಶರಣರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯಪುರದ ವಿಶ್ರಾಂತ ಪ್ರಾಚಾರ್ಯರಾದ ಬಿ. ಎಮ್. ಅಜೂರ ಮಾತನಾಡಿ,…

Read More

ಸಿಸಿಟಿವಿ, ವೆಬ್ ಕಾಸ್ಟಿಂಗ್ ವ್ಯವಸ್ಥೆ | ಪರೀಕ್ಷೆ ಬರೆಯಲಿರುವ ೨೪೪೩೪ ಅಭ್ಯರ್ಥಿಗಳು | ೬೧ ಪರೀಕ್ಷಾ ಕೇಂದ್ರಗಳಲ್ಲಿ ೨೪೪೩೪ ಅಭ್ಯರ್ಥಿಗಳು ನೋಂದಣಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ವೃಂದ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ (ಆ. ೨) ಭಾನುವಾರ ಜಿಲ್ಲೆಯ ೬೧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು ೨೪೪೩೪ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಪಾರದರ್ಶಕ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.ವಿಜಯಪುರ ನಗರ-೫೫, ತಿಕೋಟಾ ನಗರ-೦೩ ಸೇರಿ ಒಟ್ಟು ೫೮ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದರೆ, ವಿಜಯಪುರ ಗ್ರಾಮೀಣ ಭಾಗದ ಕವಲಗಿಯಲ್ಲಿ ೨ ಹಾಗೂ ತಿಡಗುಂದಿಯಲ್ಲಿ ೧ ಸೇರಿದಂತೆ ಒಟ್ಟು ೩ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.೬೦ ಮಾರ್ಗಾಧಿಕಾರಿಗಳು: ನಕಲು ರಹಿತ ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸುವ ದೂರದೃಷ್ಟಿಯಿಂದ ಒಟ್ಟು ೨೦ ಮಾರ್ಗಗಳಿಗೆ ೬೦ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ೬೧ ವೀಕ್ಷಕರು, ೬೧ ಉಪ ಮುಖ್ಯ ಅಧೀಕ್ಷಕರು, ೬೧ ಜನ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಿದ್ಯಾರ್ಥಿಗಳು ಶೈಕ್ಷಣಿಕ ಬದುಕನ್ನು ತಪಸ್ಸಿನಂತೆ ಕಳೆಯಬೇಕು. ಸ್ಪಷ್ಟ ಗುರಿಯೊಂದಿಗೆ ನಿರಂತರ ಪರಿಶ್ರಮ ಮಾಡಿದರೆ ಯಶಸ್ಸು ಸಹಜವಾಗಿ ಲಭಿಸುತ್ತದೆ ಎಂದು ಬೆಂಗಳೂರು ಕ್ರೋಮ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರೊ. ವಿ.ಎಲ್.ಪಾಂಡುರಂಗ ಹೇಳಿದರು.ಅವರು ತಾಲ್ಲೂಕಿನ ಮೋರಟಗಿ ಗ್ರಾಮದಲ್ಲಿ ಶನಿವಾರ ಸಿದ್ದರಾಮೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ ಕಲ್ಪವೃಕ್ಷ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ಪಿಯುಸಿ ಮತ್ತು ಪ್ರಥಮ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ತಮ್ಮ ಹಿಂದೆ ಪೋಷಕರ ಶ್ರಮ ಮತ್ತು ತ್ಯಾಗವಿರುವುದನ್ನು ಅರಿತುಕೊಳ್ಳಬೇಕು. ಜೀವನದಲ್ಲಿ ಉನ್ನತ ಗುರಿಯನ್ನು ಇಟ್ಟುಕೊಂಡು ಶ್ರದ್ಧೆಯಿಂದ ಓದು–ಬರಹದಲ್ಲಿ ತೊಡಗಿದರೆ ಗುರಿ ತಲುಪುವುದು ಸಾಧ್ಯ. ಅವಕಾಶಗಳು ಎಲ್ಲರಿಗೂ ಸಿಗುತ್ತವೆ. ಆದರೆ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಾನ್ನಿಧ್ಯ ವಹಿಸಿದ್ದ ಸದಾನಂದ ಶರಣರು ಆಶೀರ್ವಚನ ನೀಡಿ, ಭಾರತವು ಶ್ರೇಷ್ಠ ಗುರುಪರಂಪರೆಯ ದೇಶವಾಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಅರ್ಥಿಕವಾಗಿ ಸದೃಡ ಮತ್ತು ಯುದ್ದ ರಹಿತ, ಗಲಭೆ ರಹಿತ ದೇಶಗಳಿಗೆ ಮಾತ್ರ ನಿಂಬೆ ರಪ್ತು ಮಾಡಿ ಎಂದು ಬೆಂಗಳೂರಿನ ರಪ್ತು ಸಲಹೆಗಾರರು ಡಾ. ನಾಗವೇಣಿ ಸಿ.ಆರ್ ಹೇಳಿದರು.ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ದಿ ನಿಗಮ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಇಂಡಿ ನಿಂಬೆ ರಪ್ತು ಪ್ರಕ್ರಿಯೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು.ನಿಂಬೆ ರಪ್ತು ಮಾಡುವ ರೈತ ಅಥವಾ ರೈತ ಸಂಘಟನೆಗಳು ಸಂಸ್ಥೆ ಸ್ಥಾಪಿಸಿ ಅದರ ಆಧಾರ ಕಾರ್ಡು, ಪಾನ ಕಾರ್ಡು, ಜಿಎಸ್ ಟಿ ನಂ, ಬ್ಯಾಂಕ ಅಕೌಂಟ ನಂ ನೀಡಿ ಆಮದು ಮತ್ತು ರಪ್ತು ಕೋಡ ಮಾಡಬೇಕು. ರಜಿಸ್ಟ್ರೇಷನ್ ಮಾಡಿ ಸರ್ಟಿಫಿಕೇಟ ಪಡೆಯಬೇಕು. ಆಮದು ರಪ್ತು ಬ್ಯಾಂಕ ಖಾತೆ ಮಾಡಿ ಇಸಿಜಿಸಿ ಇನ್ಸುರೆನ್ಸ ಮತ್ತು ಎಚ್ ಎಸ್ ಕೋಡ ತೆಗೆದು ರಪ್ತು ಮಾಡಬಹುದು ಎಂದರು. ಇದಕ್ಕೆ ಅಪೆಡಾ ಸಂಸ್ಥೆ ಇಲ್ಲವೆ ಕರ್ನಾಟಕ ಕೃಷಿ ವಾಣಿಜ್ಯ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಇಲಾಖೆ ಮೂಲಕ ಅನುಷ್ಠಾನವಾಗುತ್ತಿದ್ದ ಕೃಷಿ ಹೊಂಡಗಳ ನಿರ್ಮಾಣಕ್ಕೆ ಕೇಂದ್ರ ಸರಕಾರ ಕೊಕ್ಕೆ ಹಾಕಿದೆ.ತೋಟಗಾರಿಕೆ ಬೆಳೆಗಳ ಉತ್ತೇಜನ ಮಳೆ ನೀರು ಸಂರಕ್ಷಣೆಗಾಗಿ ಕೃಷಿ ಹೊಂಡ ನಿರ್ಮಿಸಲು ಈ ಯೋಜನೆಯಡಿ ರೈತರಿಗೆ ಸಿಗುತ್ತಿದ್ದ ಸಬ್ಸಿಡಿ ಪ್ರಸಕ್ತ ಸಾಲಿನಿಂದ ನಿಲ್ಲಿಸಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ ೮೦ ಹಾಗೂಎಸ್ಸಿ ಎಸ್ಟಿ ವರ್ಗದ ರೈತರಿಗೆ ಶೇ ೯೦ ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಆದರೀಗ ಕೃಷಿ ಹೊಂಡ ನಿರ್ಮಾಣ ಕಾರ್ಯದ ಅಂಶವನ್ನೇ ಕೈಬಿಟ್ಟು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರ ಮಾರ್ಗಸೂಚಿಗಳನ್ನು ಹೊರಡಿಸಿರುವದು ಅನ್ನದಾತರ ಅಕ್ರೋಶಕ್ಕೆ ಕಾರಣವಾಗಿದೆ.ಕಳೆದ ವರ್ಷ ತಾಲೂಕಿನಲ್ಲಿ ೫ ಕ್ಕೂ ಹೆಚ್ಚು ಕೃಷಿ ಹೊಂಡಗಳು ಇದೇ ಯೋಜನೆಯಡಿ ನಿರ್ಮಾಣವಾಗಿವೆ. ಒಂದು ಕೃಷಿ ಕೊಂಡಕ್ಕೆ ೪ ಲಕ್ಷ ರೂ ವರೆಗೆ ಖರ್ಚಾಗಲಿದ್ದು ಕೇಂದ್ರ ಸರಕಾರ ಈ ಕೃಷಿ ಹೊಂಡಗಳಿಗೆ ಸಬ್ಸಿಡಿ ಕೊಡುತ್ತಿದ್ದರಿಂದ ರೈತರು ಮುಂದೆ ಬರುತ್ತಿದ್ದರು.ತಾಲೂಕಾವಾರು ವಾರ್ಷಿಕ ಒಂದು ಕೋಟಿ ರೂ ವರೆಗೆ…

Read More