Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 14, 2026

ಕೋವಿಡ್ ಸಂದರ್ಭ ಸೇವೆಗೈದ ಆಯುಷ್ಯ ವೈದ್ಯರ ನೇಮಕವಾಗಲಿ

ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ೨(ಈ) ಮಾನ್ಯತೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಆಸೆ ಹೇಳುವಾಸೆ ಹೇಳಲಾರೆ ನಾನು ತಾಳಲಾರೆ..
ವಿಶೇಷ ಲೇಖನ

ಆಸೆ ಹೇಳುವಾಸೆ ಹೇಳಲಾರೆ ನಾನು ತಾಳಲಾರೆ..

By No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ

ನನ್ಮುದ್ದಿನ ಹಳ್ಳಿ ಹುಡ್ಗ
ಪೇಟೆಯ ಹುಡುಗರೆಲ್ಲ ‘ರಂಭಾ ಬೇಡ ಜಂಭ’ ಎಂದು ಕಾಲೆಳೆಯುತ್ತಿದ್ದರು. ‘ನಾನು ರಂಭೆ ಮೀರಿಸೋ ತರ ಇದ್ದರೂ, ಜಂಭದ ಕೋಳಿ.’ ‘ಕಿಲಾಡಿ ಹೆಣ್ಣು’ ಕೈಗೆ ಸಿಗೋದು ಕಷ್ಟ ಅಂತ ‘ಕೈಗೆಟುಕದ ದ್ರಾಕ್ಷಿ’ ಎಂದು ಹೆಸರಿಟ್ಟು ಬೆನ್ನ ಹಿಂದೆ ಮಾತನಾಡೋದು ನನಗೆ ಗೊತ್ತು. ನಗರದ ಜಾಣತನ ಮೆರೆವ ಚೆಲುವ ಚೆನ್ನಿಗರಾಯರು ಹಿಂದೆ ಬಿದ್ದರೂ ಕಣ್ಣೆತ್ತಿ ನೋಡದ ನಾನು, ಹಳ್ಳಿಯ ಸೀದಾ ಸಾದಾ ಹೈದನ ಕಂಡು ಮನಸೋತೆ. ನಿನ್ನಲ್ಲಿ ಏನೋ ಒಂದು ಮೋಹಕತೆ ಇದೆ. ಹುಡುಗಿಯರ ನಿನ್ನತ್ತ ಸೆಳೆಯುವ ಶಕ್ತಿಯಿದೆ. ಅರಳು ಹುರಿದಂತೆ ಆಡುವ ನಿನ್ನ ಸವಿ ಸವಿಯಾದ ಮಾತಿಗೆ ಮರುಳಾದೆ. ನಿನ್ನ ಮಾತಿಗೆ ಮರಳಾಗದವರು ಯಾರೂ ಇಲ್ಲ ಬಿಡು. ಇದು ‘ಜೋಡಿಯ ಬೇಡುವ ವಯಸ್ಸು’ಎಂದಾಗಲಂತೂ ನಾನೇ ನಿನ್ನ ಜೋಡಿ ಎನ್ನುವ ಪದಪುಂಜ ತುಟಿ ಮೇಲೆ ಬಂದು ನಾಚಿ ಮರಳಿತು. ಆದರೆ ನನ್ನುಸಿರಲಿ ನಿನ್ಹೆಸರನು ಬರೆಯುವುದನು ಮರೆಯಲಿಲ್ಲ.


ಮೊದಲೇ ನೀನು ಅಪ್ಪಟ ಮಣ್ಣಿನ ಮಗ ಬಾಲ ನೇಸರ ಕಣ್ತೆರೆಯುವ ಮೊದಲೆ ನಿನ್ನ ದಿನಚರಿ ಶುರು. ನಗರದ ಹುಡುಗರಂತೆ ಜಿಮ್‌ಗೆ ಹೋಗದಿದ್ದರೂ ಕಟ್ಟುಮಸ್ತಾದ ದೇಹ. ಮೈ ಬಣ್ಣ ಬಿಸಿಲಿನಲ್ಲಿ ಬೆಂದು ಕಪ್ಪಾಗಿದ್ದರೂ ಅದರಲ್ಲಿ ಮಣ್ಣಿನ ಘಮವಿದೆ. ಕಂದು ಬಣ್ಣದ ಮೈಸಿರಿ ಕೆದರಿದ ಕೂದಲು ಹಣೆ ಮೇಲೆ ಹರಳುಗಟ್ಟಿದ ಬೆವರಿನ ಹನಿಗಳು ಹಸಿರು ಗದ್ದೆಯಲ್ಲಿ ಕಷ್ಟಪಟ್ಟು ದುಡಿದು ಬಂದಿದ್ದಕ್ಕೆ ಸಾಕ್ಷಿ. ಚಿಗುರಿದ ಮೀಸೆ ನೀಳವಾದ ಕದಪು ಕಲ್ಲು ಮುಳ್ಳಿನ ಹಾದಿಯಲ್ಲಿ ನನಗೆ ಬ್ರ್ಯಾಂಡೆಸ್ ಶೂಸ್ ಧರಿಸಿದರೂ ನಡೆಲಾಗುವುದಿಲ್ಲ. ಆದರೆ ನೀನು ಆ ಹಾದಿಯಲ್ಲಿ ಓಡುವ ಹುರುಪಿನ ನಡಿಗೆಯ ವೇಗಕ್ಕೆ ಗಾಳಿಯೇ ನಾಚಿ ಓಡುತ್ತದೆ.
ನಗರದ ಕೃತಕ ಜೀವನಕ್ಕೆ ಒಗ್ಗಿಕೊಂಡಿರುವ ನನಗೆ ನಿನ್ನ ಸಹಜ ಸೌಂದರ್ಯದ ಬಗೆಗೆ ಅಚ್ಚರಿ ಉಂಟಾಯಿತು. ವಾವ್! ಎನ್ನಿಸುವ ಪರ್ಪ್ಯೂಮ್ ವಾಸನೆಗಿಂತ ನಿನ್ನ ಮೈಯಿಂದ ಬರುವ ಮಣ್ಣಿನ ವಾಸನೆ ನನ್ನನ್ನು ಇನ್ನಿಲ್ಲದಂತೆ ಆಕರ್ಷಿಸಿತು. ಯಾವುದೇ ಕಷ್ಟವನ್ನು ಎದುರಿಸಬಲ್ಲ ನಿನ್ನ ಗುಂಡಿಗೆ ಕಂಡಾಗಲಂತೂ ನನಗರಿವಿಲ್ಲದೇ ನಿನ್ನ ಹೆಸರಿಗೆ ನನ್ನ ಹೃದಯ ಬರೆದೆ.
ಮನೆಯಲ್ಲಿ ಗೆಳತಿಯರೊಂದಿಗೆ ಟ್ರಿಪ್ ಎಂಬ ನೆಪ ಹೇಳಿ ನಿನ್ನ ಹಳ್ಳಿಗೆ ನಾ ಬಂದಾಗ ನಿನ್ನಪ್ಪ ಅವ್ವ ನೀಡಿದ ಪ್ರೀತಿಯನ್ನು ಮರೆಯಲಾರೆ. ಬೆಳ್ಳಂಬಳ್ಳಿಗ್ಗೆ ದನಕರಗಳನ್ನು ಮೆಯ್ಯಿಸಲು ಕಾಡಿಗೆ ನಾನೂ ಬರುವೆನೆಂದು ಹಠ ಹಿಡಿದೆ. ಸಾಧಾರಣ ಪಂಚೆ ಮೇಲೊಂದು ಅರ್ಧ ತೋಳಿನ ಚೆಕ್ ಶರ್ಟ ಧರಿಸಿದ್ದೆ. ಚುರುಕಾದ ಕಣ್ಣುಗಳು ಮುಖದಲ್ಲಿ ಯೌವ್ವನದ ಕಳೆ ಎದ್ದು ಕಾಣುತ್ತಿತ್ತು. ಹಸಿರಿನ ಸಿರಿಯಲ್ಲಿ ಜೇನಿನಂತಿರುವ ನಿನ್ನ ಮಾತುಗಳ ಕೇಳುತ್ತ ಕಳೆದುಹೋದೆ. ಆಗಲೇ ಬಿಗಿಯಾಗಿ ತಬ್ಬಿಕೊಳ್ಳಬೇಕೆನಿಸಿತು. ಅರಿಬೆ ಮುಳ್ಳಿನ ಮೇಲೆ ಬಿದ್ದರೂ ಮುಳ್ಳು ಅರಿಬೆ ಮೇಲೆ ಬಿದ್ದರೂ ಹರಿಯೋದು ಅರಿಬೆಯೇ ಎಂಬುದು ನೆನಪಾಗಿ ನಿಯಂತ್ರಿಸಿಕೊಂಡೆ. ಕಿಚಾಯಿಸಲೆಂದೇ ನಿನ್ನ ಸೊಂಪಾದ ಕೂದಲಲ್ಲಿ ಬೆರಳಾಡಿಸಿದೆ. ಅದಕ್ಕೆ ಪ್ರತಿಯಾಗಿ ನನಗೆ ಬೆರಳಿನಿಂದ ತಿವಿದಾಗ ನಾಚುತ್ತ ಕೆಂಪಗಾದೆ. ಕೆಂಪು ಕೆನ್ನೆ ಇನ್ನಷ್ಟು ಕೆಂಪಾಗಿಸುವ ಅವಕಾಶ ಯಾವಾಗ ಸಿಗುವುದೋ ಎಂದು ಛೇಡಿಸಿದೆ. ಆ ನಿನ್ನ ನುಡಿ ಕೇಳಿ ನನ್ನ ಮೈ ಬಿಸಿಯೇರಿತು.
ಮರಳಿ ಮನೆಗೆ ಬಂದಾಗಿನಿಂದ ಎದುರಿಗಿದ್ದ ಕನ್ನಡಿಯಲ್ಲಿ ನೋಡುವಾಗ ನೀನು ಹಿಂದೆ ಬಂದು ತುಂಟ ನಗು ಚೆಲ್ಲುತ್ತ ನನ್ನ ಬಳಸಿ ನಿಂತಂತೆ, ತುಂಟಾಟ ಮುಂದುವರೆಸಿ ಬೆನ್ನಲ್ಲಿ ಚಿಕ್ಕ ಚಿಕ್ಕ ರಂಗೋಲಿ ಹಾಕಿದಂತೆ ಭಾಸವಾಗುತ್ತದೆ. ಬೆಚ್ಚಗಿನ ಸ್ಪರ್ಶಕ್ಕೆ ಇದು ನಿಜವೇನೋ ಎಂದು ಹಿಂದೆ ನೋಡಿದರೆ ನೀನಿರುವುದಿಲ್ಲ. ಎದೆಗೆ ಬಿಗಿಯಾಗಿ ಕಟ್ಟಿಕೊಂಡ ಟವೆಲ್ ಕೂಡ ನನ್ನೊಂದಿಗೆ ನಾಚಿ ನೀರಾಗಿರುತ್ತದೆ. ಇದೆಲ್ಲ ನನ್ನ ಕನಸೆಂದು ವಾಸ್ತವಕ್ಕೆ ಮರಳಲು ನೋಡಿದಾಗ ಕಣ್ಸನ್ನೆಯಲ್ಲಿ ಕರೆದಂತೆ ಇದನ್ನೆಲ್ಲ ನಿನ್ನ ಮುಂದೆ ಹೇಳಲು ಈ ಹೆಣ್ಣು ಜೀವಕೆ ನಾಚಿಕೆ. ಒಮ್ಮೊಮ್ಮೆಯಂತೂ ನಾಚಿಕೆಯ ಗಡಿ ದಾಟಿದ ಕನಸು: ಅಕ್ಕಿ ಮೂಟೆಯಂತೆ ನನ್ನ ಹೊತ್ತು ಮೃದುವಾದ ಹೂ ಚೆಲ್ಲಿದ ಹಾಸಿಗೆಯ ಮಧ್ಯೆ ಹಾಕಿದಂತೆ ಇಬ್ಬರ ನಡುವೆ ಹುಡುಗಾಟದ ವೇಗ ಹೆಚ್ಚಿದಂತೆ. ಇನ್ನೂ ಏನೇನೋ ಹೀಗೆ ರಸಿಕತೆ ಮುಂದುವರಿಯತ್ತಿದ್ದಂತೆ, ‘ಆಸೆ ಹೇಳುವಾಸೆ ಹೇಳಲಾರೆ ನಾನು ತಾಳಲಾರೆ.’ಎಂದು ಗುಣುಗುತ್ತ ಇನ್ನು ಏನೇನೋ ಬೇಕೆಂಬ ಭಾವ ಮೂಡುತ್ತದೆ. ಮೈ ಕಂಪನ ಶುರುವಾಗುತ್ತದೆ.


ಅದೇ ಸಮಯಕ್ಕೆ ಅವ್ವ ಬಂದು ಸೂರ್ಯ ನೆತ್ತಿ ಮೇಲೆ ಬರುವ ಹೊತ್ತಾಯಿತು ಏಳೆಂದು ಎಬ್ಬಿಸುತ್ತಾಳೆ. ಇದೇನು ನಿನ್ನ ಕೆನ್ನೆ ಇಷ್ಟು ಕೆಂಪಾಗಿದೆ ಎಂದು ಪ್ರಶ್ನಿಸುತ್ತಾಳೆ. ಏನು ಹೇಳೋದು ತಿಳಿಯದೆ ನಗುತ್ತ ಮತ್ತೆ ಮುಸಕೆದ್ದು ಮೆಲ್ಲನೇ ಮಲಗಿ ಮತ್ತೆ ಮತ್ತೆ ಆ ಕನಸನ್ನು ಮೆಲಕು ಹಾಕುತ್ತೇನೆ. ಕಾಳಿದಾಸನ ಕಾವ್ಯದಂತೆ ನನ್ನಂದ ಹೊಗಳಿದ ನಿನ್ನ ಮೆಚ್ಚುಗೆಯ ನೂರಾರು ಪದಗಳು ಥಕಥೈ ಆಡುತ್ತವೆ. ಹೃದಯದ ತಕದಿಮಿ ಹೆಚ್ಚುತ್ತದೆ. ರವಿವರ್ಮನ ಕುಂಚವೂ ನಿನ್ನ ಚಿತ್ರ ಬರೆಯಲು ಸೋತು ಹೋಗುತ್ತದೆ. ಎಂಬೆಲ್ಲ ಹೊಗಳಿಕೆಯನ್ನು ನೆನೆದಾಗ ಈ ಚೋರಿಯ ಹೃದಯ ಕೋಟೆಯಲ್ಲಿ ನಿನ್ನದೇ ಸದ್ದು. ನಾ ನಿನ್ನ ಸಹಚಾರಿಣಿ ರತಿ ಮನ್ಮಥರ ಆಟ ಮುಂದುವರೆಯಲಿ ಎಂದು ಮನಸ್ಸು ಹಾತೊರೆಯುತ್ತದೆ. ಕಿಟಕಿಯಿಂದ ನುಗ್ಗುವ ತಂಪು ತಂಗಾಳಿ ನನ್ನ ಸಂತೋಷಕ್ಕೆ ಸಾಥ್ ನೀಡುತ್ತದೆ. ಏನೇ ಹೇಳು ಯೌವ್ವನದ ಹಾದಿಯ ನಿನ್ನೊಂದಿಗಿನ ಕನಸುಗಳು ಬಲು ಸೊಗಸು. ಪ್ರೀತಿಯಲ್ಲಿ ಬಿದ್ದರೆ ಹೀಗೆಲ್ಲ ಆಗುತ್ತೆ ಅಂತ ಗೊತ್ತೆ ಇರಲಿಲ್ಲ. ಇದೆಲ್ಲ ನನಗೆ ತೀರ ತೀರ ಹೊಸದು
ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎಂದು ನಿನ್ನ ಕಂಚಿನ ಕಂಠದಿಂದ ಹಾಡಿ, ಹ್ಞೂಂ ಅಂತಿಯಾ ಉಹ್ಞೂಂ ಅಂತಿಯಾ ಎಂಬ ಮುಂದಿನ ಸಾಲು ನನಗೆ ಹಾಡು ಎಂದು ದುಂಬಾಲು ಬೀಳುತ್ತಿದ್ದೆ. ನಾನು ಹೆಜ್ಜೆ ಇಟ್ಟಲೆಲ್ಲ ನಿನ್ನ ಹೆಜ್ಜೆಗಳು ಹಿಂಬಾಲಿಸಿವೆ. ಕಾಲಡಿ ಹೂವನು ಹಾಸುವ ಮನಸ್ಸಿಗೆ ಹೆಜ್ಜೆಗಳು ಮನಸಾರೆ ನಿನ್ನ ಮೇಲೆ ಮನಸ್ಸು ಮಾಡಿವೆ. ಕಣ್ರಪ್ಪೆಯಂತೆ ಕಾಯುವ ನಿನ್ನ ಹೃದಯಕೆ ಹಗಲಿರುಳು ತುಂಬು ಪ್ರೀತಿಯನು ನೀಡುವಾಸೆ ಇನಿಯ. ನನ್ನೆದೆ ಆಳೋ ಅರಸನು ನೀನೇ ಎಂದು ಈಗಾಗಲೇ ನಿರ್ಧರಿಸಿಯಾಗಿದೆ. ಸುಂದರಾಂಗಿ ನೀ ನನ್ನ ಕನಕಾಂಗಿ ಸರಳ ಶಾಂತ ಸ್ವಭಾವಕೆ ಮನಸೋತಿರುವೆ ಬಾ ಹತ್ತಿರಕೆ ಚೆಲುವೆ ಎಂದು ಕರೆದರೆ ಸಾಕು ಎನ್ನುತಿರುವೆ.
ಹಳ್ಳಿಯ ಸರಳ ಜೀವನಕ್ಕೆ ಹೊಂದಿಕೊಳ್ಳಲು ಆಗುತ್ತದೆಯೋ ಇಲ್ಲವೋ? ಸಿರಿವಂತ ವಲಯದ ನಮ್ಮ ಸಂಬಂಧಿಕರು ಏನಂದಾರು ಎಂಬುದು ಅಪ್ಪ ಅವ್ವನ ಪ್ರಶ್ನೆಗಳು ನೀನು ನನ್ನವನು ಎಂಬ ಸುರಕ್ಷಿತ ಭಾವ ನನ್ನಲ್ಲಿದೆ. ಹೀಗಾಗಿ ಬಡತನದ ಹಳ್ಳಿ ಜೀವನದ ಯಾವ ಚಿಂತೆಯೂ ನನಗಿಲ್ಲವೆಂದು ಹೆತ್ತವರಿಗೆ ಕಾಡಿ ಬೇಡಿ ನಮ್ಮ ಮದುವೆಗೆ ಒಪ್ಪಿಕೊಳ್ಳುವಂತೆ ಮಾಡಿದ್ದೇನೆ. ಹೆಣ್ಣು ನೋಡುವ ಶಾಸ್ತ್ರ ಮುಗಿಸಿ ಓಲಗ ಊದಿಸುವುದೊಂದೇ ಬಾಕಿ. ಬಾಕಿ ಜೀವನವೆಲ್ಲ ನಿನ್ನ ಹರವಾದ ಎದೆಯಲ್ಲಿ ಮುಖವಿಟ್ಟು ಪ್ರೀತಿಯ ಪಿಸುಮಾತಿನಲಿ ನವಿರಾದ ನಗುವನು ಬೆರೆಸುವಾಸೆ. ಅಧರಗಳ ಕಂಪನದಲಿ ಬಿಗಿಯಾದ ಆಲಿಂಗನದಲಿ ಮೈಮರೆತು ಬೆವರಿನ ಮುತ್ತುಗಳ ಹಾರವನು ಕತ್ತಲೆಯ ಕೋಣೆಗೆ ಕಾಣಿಕೆಯಾಗಿ ನೀಡುವಾ ಪ್ರತಿರಾತ್ರಿ ಜಗ ಮರೆಯುವ ಆಟದಲ್ಲಿ ಒಂದಾಗುವಾ. ಸ್ವರ್ಗದ ಸುಖದಲಿ ಮೀಯುವಾ.
ಇಂತಿ ನಿನ್ನ ಪ್ಯಾಟೆಯ ಹುಡ್ಗಿ

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 14, 2026

ಕೋವಿಡ್ ಸಂದರ್ಭ ಸೇವೆಗೈದ ಆಯುಷ್ಯ ವೈದ್ಯರ ನೇಮಕವಾಗಲಿ

ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ೨(ಈ) ಮಾನ್ಯತೆ

ಶಿವನ ಉರಿಗಣ್ಣನ್ನು ಪಡೆದು ಲೋಕೋದ್ಧಾರ ಮಾಡಿದ ಶಿವದಾಶಿಮಯ್ಯ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 14, 2026
    In ದಿನಪತ್ರಿಕೆ
  • ಕೋವಿಡ್ ಸಂದರ್ಭ ಸೇವೆಗೈದ ಆಯುಷ್ಯ ವೈದ್ಯರ ನೇಮಕವಾಗಲಿ
    In (ರಾಜ್ಯ ) ಜಿಲ್ಲೆ
  • ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ೨(ಈ) ಮಾನ್ಯತೆ
    In (ರಾಜ್ಯ ) ಜಿಲ್ಲೆ
  • ಶಿವನ ಉರಿಗಣ್ಣನ್ನು ಪಡೆದು ಲೋಕೋದ್ಧಾರ ಮಾಡಿದ ಶಿವದಾಶಿಮಯ್ಯ
    In (ರಾಜ್ಯ ) ಜಿಲ್ಲೆ
  • ಜೂ.30ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಾತಿ ಆರಂಭ
    In (ರಾಜ್ಯ ) ಜಿಲ್ಲೆ
  • ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡದಿದ್ದರೆ ಹೋರಾಟದ ಎಚ್ಚರಿಕೆ
    In (ರಾಜ್ಯ ) ಜಿಲ್ಲೆ
  • ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ :ಮನಗೂಳಿ
    In (ರಾಜ್ಯ ) ಜಿಲ್ಲೆ
  • ಅಮೃತ ೨ ಯೋಜನೆಯಡಿ ರೂ.೩.೦೪ಕೋಟಿ ಮಂಜೂರು :ಮನಗೂಳಿ
    In (ರಾಜ್ಯ ) ಜಿಲ್ಲೆ
  • ಎಸ್.ಕೆ ಹೂಗಾರಗೆ ಪಿಎಚ್ಡಿ ಪದವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.