ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಶ್ರೀ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ೨೦೨೬ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಕುಮಾರ ಗೊಲ್ಲಾಳದಯ್ಯ ಗದ್ದಗೀಮಠ ೫೫೨ (೮೮.೩೨%) ಪ್ರಥಮ ಸ್ಥಾನ ಪಡೆದಿದ್ದು, ಕುಮಾರಿ ಸೌಮ್ಯ ಜೋಗೂರ ೫೪೮ (೮೭.೬೮%) ದ್ವಿತೀಯ ಸ್ಥಾನ ಹಾಗೂ ಕುಮಾರ ಮಹದೇವಪ್ಪ ಮಾದಾರ ೫೩೪ (೮೫.೪೪%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಒಟ್ಟು ೮೦ ವಿಧ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ ೭೪ ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ೩ ವಿಧ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೩೩ ವಿದ್ಯಾರ್ಥಿಗಳು ಪ್ರಥಮಶ್ರೇಣಿ,೧೭ ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ೨೧ ವಿಧ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದು, ಶಾಲೆಯ ಓಟ್ಟು ಪಲಿತಾಂಶ ಶೇ ೯೨.೫ ರಷ್ಟಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಮುಖ್ಯಗುರುಗಳಾದ ಜಗದೀಶ ಗುಮಶೆಟ್ಟಿ, ಸೇರಿದಂತೆ ಶಾಲೆಯ ಸಿಬ್ಬಂದ್ದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

