ಉದಯರಶ್ಮಿ ದಿನಪತ್ರಿಕೆ
ಚಡಚಣ: ಎಸ್‌ಎಸ್‌ಎಲ್‌ಸಿ 2026ರ ಫಲಿತಾಂಶದಲ್ಲಿ ಬಳ್ಳೊಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆಯ ಒಟ್ಟು 45 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 43 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ ಎಂದು ಮುಖ್ಯಾಧ್ಯಾಪಕರಾದ ಮಹೇಶ ಅಳ್ಳೊಳ್ಳಿ ಅವರು ತಿಳಿಸಿದ್ದಾರೆ.
ಶಾಲೆಯ ವಿದ್ಯಾರ್ಥಿಗಳಾದ ಮಾಯಾವತಿ ಈರಣ್ಣ ಶಿರಶ್ಯಾಡ ಶೇ.93 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಬಂದಿದ್ದು,ಪ್ರಜ್ವಲ ಅಮಸಿದ್ದ ನಾಯ್ಕೋಡಿ ಶೇ.90 ಅಂಕಗಳಿಸಿ ಶಾಲೆಗೆ ದ್ವೀತಿಯ ಸ್ಥಾನ ಪಡೆದಿದ್ದು, ವಿಜಯಲಕ್ಷ್ಮಿ ಈರಣ್ಣ ವಾಲೀಕಾರ ಶೇ.88 ಅಂಕ ತೆಗೆದುಕೊಂಡು ತೃತಿಯಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮುಖ್ಯಾಧ್ಯಾಪಕರಾದ ಮಹೇಶ ಅಳ್ಳೊಳ್ಳಿ ಅವರು ಸೇರಿದಂತೆ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು, ವಿದ್ಯಾರ್ಥಿ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

