Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಆಲಮೇಲ: ವರ್ಷದ ೧೨ ತಿಂಗಳಲ್ಲಿ ಒಂದು ಪವಿತ್ರವಾದ ಮಾಸ ವೆಂದರೆ ಅದು ಶ್ರಾವಣ ಮಾಸ ಈ ಮಾಸದಲ್ಲಿ ಬಹಳ ವಿಶೇಷವಾಗಿ ಆಚರಿಸುವುದರೊಂದಿಗೆ ನಾವು ಒಳ್ಳೇಯದನ್ನು ಮಾತನಾಡಿ, ಒಳ್ಳೆಯದನ್ನು ಕೇಳಿ, ಒಳ್ಳೆಯ ಜಾಗಕ್ಕೆ ಹೋಗಿ, ಒಳ್ಳೆಯ ನುಡಿಗಳನ್ನು ಕೇಳಿ ಪಾಲಿಸಿಕೊಂಡು ಹೋದಾಗ ಮಾತ್ರ ಈ ತಿಂಗಳಿಗೆ ಒಂದು ಅರ್ಥ ಬರುತ್ತದೆ ಎಂದು ಬಡದಾಳದ ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.ಅವರು ತಾಲೂಕಿನ ದೇವರನಾವದಗಿ ಗ್ರಾಮದ ಮಲ್ಲಿಕಾರ್ಜುನ ಹಾಗೂ ಸೋಮೇಶ್ವರ ದೇವರ ಜಾತ್ರಾ ಮಹೋತ್ಸವದ ಪುರಾಣ ಮಹಾಮಂಗಲ ಹಾಗೂ ಧರ್ಮಸಭೆಯನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.ಜಗತ್ತನಲ್ಲಿ ಮನೆ ಕಟ್ಟಬೇಕಾದರೆ ಬೇರೆ ಬೇರೆ ದೇಶದವರು ಮನೆಯ ಕೋಲಿಗೆ ಬೇರೆ ಬೇರೆ ಹೆಸರಿಡುತ್ತಾರೆ. ಆದರೆ ನಮ್ಮ ಭಾರತ ದೇಶದಲ್ಲಿ ದೇವರ ಕೋಲಿಗೆ ಭಾರತ ಎಂದು ಹೆಸರಿಡುತ್ತಾರೆ. ಇದು ನಮ್ಮ ಭಾರತ ದೇಶ ಕಲಿಸಿಕೊಟ್ಟ ಆಚಾರ, ವಿಚಾರ, ಸಂಪ್ರದಾಯ. ಇವತ್ತಿನ ದಿನಮಾನದಲ್ಲಿ ಪುರಾಣ ಪುಣ್ಯ ಕಥೆಗಳು ಏಕೆ ಹಚ್ಚುತ್ತಾರೆ ಅಂದರೆ ನಮ್ಮಲ್ಲಿರುವ ಅವಗುಣಗಳನ್ನು ತೊಲಗಿ ಶಿವಗುಣಗಳು ಬರಲಿ ಎಂದು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಕನ್ನಡ ಫಿಲಂ ಚೇಂಬರ ವತಿಯಿಂದ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವೈ ಎಂ ಪೂಜಾರ ಅವರಿಗೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ವೈದ್ಯಕೀಯ ಸೇವೆ ಆರೋಗ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವವಿಸಲಾಗಿದೆ.ಇಂಡಿ ತಾಲ್ಲೂಕಿನ ಚಿಕಬೇವನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ವೈ ಎಮ್ ಪೂಜಾರ ಅವರ ಗಣನೀಯ ಸೇವೆಗೆ ಕನ್ನಡ ಫಿಲಂ ಚೇಂಬರ ವತಿಯಿಂದ ಪ್ರಶಸ್ತಿ ಲಭಿಸಿದೆತಮ್ಮ ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಧಾರ್ಮಿಕ ಸಂಘ ಸಂಸ್ಥೆಗಳ ಹಾಗೂ ಚುನಾಯಿತ ಪ್ರತಿನಿಧಿಗಳ ಜೊತೆ ಚರ್ಚಿಸಿ ಯುವ ರಕ್ತಧಾನಿಗಳ ಮನವೊಲಿಸಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ರಕ್ತದ ಕೊರತೆಯಿಂದ ಹೋಗುವ ಜೀವಗಳು ಉಳಿಸುವ ಕಾರ್ಯ ಮಾಡಿದ್ದಾರೆ.ಅದಲ್ಲದೆ ವಯೋವೃದ್ಧರು ಕಣ್ಣು ಪೊರೆಯಿಂದ ಕಣ್ಣು ಕಾಣದೆ ಕಂಗಾಲಾಗಿ ಬದುಕುತ್ತಿರುವವರಿಗೆ ಉಚಿತ ಕಣ್ಣಿನ ಆಪರೇಷನ್ ಕ್ಯಾಂಪುಗಳು ಆಯೋಜನೆ ಹಾಗೂ ತಾಯಿ ಮಗುವಿನ ಆರೈಕೆ, ಸಾಂಕ್ರಾಮಿಕ, ಅಸಾಂಕ್ರಮಿಕ ರೋಗಗಳು ನಿಯಂತ್ರಣ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸ್ನಾತಕ ಅಧ್ಯಯನ ವಿಭಾಗ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ ಇವರ ಸಹಯೋಗದಲ್ಲಿ ‘ಕನ್ನಡ ಸಾಹಿತ್ಯ ಪರಂಪರೆ- ಅವಲೋಕನ’ ಕಾರ್ಯಕ್ರಮವನ್ನು ಇದೇ ದಿ. ೩೦ ರಂದು ಮಧ್ಯಾಹ್ನ ೩ ಗಂಟೆಗೆ ಕನ್ನಡ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿವಿಯ ಕುಲಸಚಿವ ಶಂಕರಗೌಡ ಎಸ್ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ಹಾಗೂ ಮೈಸೂರಿನ ಹಿರಿಯ ಪತ್ರಕರ್ತ ಡಾ.ಗಣೇಶ ಅಮೀನಗಡ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತಿತರಿರಲಿದ್ದಾರೆ. ಅಧ್ಯಕ್ಷತೆಯನ್ನು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ವಹಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕರಾದ ಕನ್ನಡ ವಿಭಾಗದ ಮುಖ್ಯಸ್ಥ, ಪ್ರೊ.ಎಂ.ನಾಗರಾಜ ಮತ್ತು ಸ್ನಾತಕ ಅಧ್ಯಯನ ವಿಭಾಗದ ವಿಶೇಷಾಧಿಕಾರಿ ಪ್ರೊ.ಸಕ್ಪಾಲ್ ಹೂವಣ್ಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಬಿಜೆಪಿ ಅಭಿವೃದ್ದಿ ಕೆಲಸ ಮಾಡದೆಯೇ ಪ್ರಚಾರ ಪಡೆದುಕೊಳ್ಳುತ್ತದೆ, ಆದರೆ ಕಾಂಗ್ರೆಸ್ ಅಭಿವೃದ್ದಿ ಮಾಡಿಯೂ ಪ್ರಚಾರ ಪಡದುಕೊಳ್ಳುವುದಿಲ್ಲ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಾರಂಭಿಸಲಾಗಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಇನ್ಮುಂದೆ ಹೆಚ್ಚೆಚ್ಚು ಮತದಾರರನ್ನು ತಲುಪಲಿದೆ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.ಗ್ರಾಮದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಬಾಗಲಕೋಟ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ನೇಮಕಗೊಂಡ ಸಲೀಮ ಸರಕಾವಸ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಡವರಿಗೆ ಜೀವನ ಮಟ್ಟ ಸುಧಾರಿಸಲು ರಾಜ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಯೂ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದೆ, ಬಡವರು, ಹಿಂದುಳಿದವರ ಏಳ್ಗೆಯೆ ಕಾಂಗ್ರೆಸ್ ಧೇಯವಾಗಿದ್ದು ಸಾಮಾಜಿಕ ಜಾಲತಾಣದ ಮೂಲಕ ಯುವ ಮತದಾರರನ್ನು ತಲುಪುತ್ತಿರುವ ಕಾಂಗ್ರೆಸ್ ಮುಂಬರುವ ಚುನಾವಣೆಗಳಲ್ಲಿ ಭರ್ಜರಿ ಜಯ ಗಳಿಸಲಿದೆ ಎಂದರು.ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ ಮಾತನಾಡಿ ಕಟ್ಟ ಕಡೆಯ ವ್ಯಕ್ತಗಳೂ ರಾಜಕೀಯವಾಗಿ ಬೆಳೆಯುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ ಇದಕ್ಕೆ ಸಲೀಮ ಸರಕಾವಸ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದಲ್ಲಿ ಸೆ. ೪ ರಂದು ನಡೆಯಲಿರುವ ಕಿಚಡಿ ಜಾತ್ರೆಗಾಗಿ ಸುಮಾರು ೪೦ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಬೃಹತ್ ರಥದ ಪುರ ಪ್ರವೇಶ ಕಾರ್ಯಕ್ರಮ ರವಿವಾರ ನಡೆಯಿತು.ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳ ಹಾಗೂ ಶ್ರೀ ಜನಾರ್ಧನ ಮಹಾರಾಜರ ಸಾನಿಧ್ಯದಲ್ಲಿ ನಡೆದ ನೂತನ ರಥದ ಪುರಪ್ರವೇಶ ಕಾರ್ಯಕ್ರಮದಲ್ಲಿಸ್ಥಳಿಯ ಬಸ್ ನಿಲ್ದಾಣದ ಮಹಾದ್ವಾರದಿಂದ ನೂರಾರು ಮಹಿಳೆಯರಿಂದ ಆರತಿ ಕುಂಭ, ಸಕಲ ವಾದ್ಯ ವೃಂದಗಳೊAದಿಗೆ ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆ ಮೂಲಕ ತರಲಾಯಿತು. ನಂತರ ವಿಶೇಷ ಪೂಜೆ, ಮಹಾಮಂಗಳಾರತಿಯ ನಂತರ ಮಹಾಪ್ರಸಾದ ವಿತರಣೆ ನಡೆಯಿತು.ಪ್ರಭುಲಿಂಗ ಸೇವಾ ಸಮೀತಿಯ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ಬಾಳಪ್ಪ ಹಳಿಂಗಳಿ, ರಾಚಯ್ಯ ಮಠಪತಿ, ರಾಮಣ್ಣ ಬಗನಾಳ, ಗುರಪ್ಪ ಬಳಗಾರ, ಬಸಪ್ಪ ಮುಗಳಖೋಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಶಂಕರ ಬಟಕುರ್ಕಿ, ಪರಪ್ಪಾ ಪಾಲಭಾವಿ, ಬೀರಪ್ಪ ಹಳೆಮನಿ, ಪ್ರಕಾಶ ಪಾಟೀಲ, ಬಸವರಾಜ ಕುಂಚನೂರ, ಉಮೇಶ ಪೂಜಾರಿ, ಅಶೋಕ…

Read More

ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 33 ನೆಯ ದಿನದ ಶರಣ ಮಾಲಿಕೆಯಲ್ಲಿ ಶ್ರೀ ಅರವಿಂದ ಜತ್ತಿ ಅವರು ಬಸವ ತತ್ವ ಪ್ರಜ್ಞೆಯಾಗಲಿ ಎನ್ನುವ ವಿಷಯ ದ ಕುರಿತು ಅತ್ಯಂತ ಮನೋಜ್ಞವಾಗಿ ಮಾತನಾಡಿದರು.ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀ ಚರಣ ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀ ಮಕುಟಅಗಮ್ಯ ಅಗೋಚರ ಅಪ್ರತಿಮ ಲಿಂಗವೇಕೂಡಲಸಂಗಮದೇವಯ್ಯಾಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾಎನ್ನುವ ಬಸವಣ್ಣನವರ ವಚನದ ಮೂಲಕ ಇಡೀ ಉಪನ್ಯಾಸದ ತಿರುಳನ್ನು ನಮ್ಮ ಜೊತೆ ಹಂಚಿಕೊಳ್ಳುತ್ತಾ ಹೋದರು.ಬಸವ ಪ್ರಜ್ಞೆಯ ಅರಿವು ಆಗದೆ ಹೋದರೆ ಅದೇ ಅಜ್ಞಾನ,ಎಲ್ಲರಲ್ಲೂ ಬಸವ ಚೈತನ್ಯ ಹುಟ್ಟಬೇಕು, ಅರಿವು ಜಾಗೃತವಾದಾಗ ಮಾತ್ರ ಅದು ಪ್ರಜ್ಞೆಯಾಗುತ್ತದೆ. ಹತ್ತರೊಳಗೆ ಹನ್ನೊಂದಾಗಬೇಡಿ, ನಾವೆಲ್ಲರೂ ಚೌಕಟ್ಟಿನ ಹೊರಗೆ ಬಂದು ವಿಚಾರ ಮಾಡಬೇಕು, ನಮ್ಮನ್ನು ನಾವು ಅರಿಯುವ ಪ್ರಯತ್ನ ಮಾಡಬೇಕು, ವಚನ ಬಾಯಿ ಪಾಠ ಮಾಡಿದರೆ ಏನೂ ಸಿದ್ಧಿಸುವುದಿಲ್ಲ,ಅದರ ಒಳಾರ್ಥವನ್ನು ಅರಿಯಬೇಕು, ಬಸವತತ್ವವನ್ನು ಪ್ರಚಾರ ಮಾಡಬೇಕು ಎಂದು ಹೇಳುತ್ತಾ, ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಎನ್ನುವ…

Read More

ಆರೆಸ್ಸೆಸ್ ಅನ್ನು ಯಾರೂ ಸಮರ್ಥಿಸಿಕೊಳ್ಳಬಾರದು ಎಂದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಬೆಂಗಳೂರು: ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆ ಹಾಡಿದ್ದಕ್ಕಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕ್ಷಮೆಯಾಚಿಸಿರುವುದನ್ನು ಸ್ವಾಗತಿಸಿದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ಪಕ್ಷದಲ್ಲಿ ಯಾರೂ ಸಂಘವನ್ನು ಯಾವುದೇ ರೀತಿಯಲ್ಲೂ “ಸಮರ್ಥಿಸಿಕೊಳ್ಳಬಾರದು” ಎಂದು ಮಂಗಳವಾರ ಹೇಳಿದ್ದಾರೆ.ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ RSS ಗೀತೆ ಹಾಡಿದ್ದಕ್ಕೆ ಕ್ಷಮೆಯಾಚಿಸಬೇಕು ಎಂದು ಬಿಕೆ ಹರಿಪ್ರಸಾದ್ ಅವರು ಒತ್ತಾಯಿಸಿದ್ದರು.”ಕಾಂಗ್ರೆಸ್ ಪಕ್ಷವನ್ನು ನಾನು ಅಥವಾ ಡಿ.ಕೆ. ಶಿವಕುಮಾರ್ ಕಟ್ಟಿಲ್ಲ. ಭವಿಷ್ಯಕ್ಕಾಗಿ ಅದನ್ನು ಉಳಿಸಲು ಯಾರೋ ನಮಗೆ ನೀಡಿದ್ದಾರೆ, ನಮಗೆ ಶಕ್ತಿ ಇದ್ದರೆ, ನಾವು ಅದನ್ನು ಉಳಿಸಿ ಭವಿಷ್ಯದ ಪೀಳಿಗೆಗೆ ನೀಡಬೇಕಾಗುತ್ತದೆ. ಇಲ್ಲಿ ಯಾರೂ ಶಾಶ್ವತವಲ್ಲ, ಯಾರೂ 500 ವರ್ಷಗಳ ಕಾಲ ಬದುಕುವುದಿಲ್ಲ” ಎಂದು ಹರಿಪ್ರಸಾದ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರೊಂದಿಗೆ ವೈಯಕ್ತಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಬದಲಾಗಿ ಮಹಾತ್ಮ ಗಾಂಧಿಯನ್ನು ಕೊಂದ ಸಂಘಟನೆಯ…

Read More

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಮಂಡಳಿಯ ಅಧ್ಯಕ್ಷ ಹಾಗೂ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಿವಂಗತ ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿದ್ದ “ಊಳುವವನೇ ಭೂಮಿಯ ಒಡೆಯ” ಎಂಬ ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆ ದೇಶದಲ್ಲಿಯೇ ಮಾದರಿಯಾಗಿತ್ತು ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಮಂಡಳಿಯ ಅಧ್ಯಕ್ಷ ಹಾಗೂ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಅವರು ಅಭಿಪ್ರಾಯಪಟ್ಟರು.ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಮತ್ತು ಸಮಾನ ಅವಕಾಶ ಘಟಕದ ಆಶ್ರಯದಲ್ಲಿ ದಿವಂಗತ ಡಿ.ದೇವರಾಜ ಅರಸರ ೧೧೦ನೇ ಜನ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಕರ್ನಾಟಕದಲ್ಲಿ ಜಮೀನ್ದಾರಿ ಪದ್ಧತಿ, ಜೀತ ಪದ್ಧತಿ ಮತ್ತು ತಲೆಮೇಲೆ ಮಲ ಹೊರುವ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿದ ಶ್ರೇಯಸ್ಸು ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅರಸು ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಬಹುವಾಗಿ ಶ್ರಮಿಸಿದ್ದರು ಎಂದ ಅವರು,…

Read More

ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ನೃತ್ಯಕಲಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದ ಮಹಿಳಾ ವಿವಿ ರಜಿಸ್ಟ್ರಾರ್ ಶಂಕರಗೌಡ ಸೋಮನಾಳ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜೀವನದಲ್ಲಿ ಗುರಿ ಮುಖ್ಯ, ನಿಗದಿಪಡಿಸಿಕೊಂಡ ಗುರಿಯೊಂದಿಗೆ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಪರಿಶ್ರಮ ಅಗತ್ಯ ಎಂದು ಮಹಿಳಾ ವಿಶ್ವ ವಿದ್ಯಾಲಯದ ರಜಿಸ್ಟ್ರಾರ್ ಶಂಕರಗೌಡ ಸೋಮನಾಳ ಅವರು ಹೇಳಿದರು.ಸೋಮವಾರ ಪರ್ಲ್ಸ್ ಕ್ಯಾಂಪಸ್‌ನಲ್ಲಿರುವ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಶಾಲಾ ವಿದ್ಯಾರ್ಥಿನಿಯರಿಗೆ ಆರು ತಿಂಗಳ ಕಾಲ ನೃತ್ಯಕಲಾ ತರಬೇತಿ ಶಿಬಿರದ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿ, ಎಲ್ಲರಲ್ಲೂ ಅಗಾಧವಾದ ಶಕ್ತಿ ಇದೆ. ಸತತ ಅಧ್ಯಯನಶೀಲತೆ ಬೆಳೆಸಿಕೊಳ್ಳಬೇಕು. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಮುಂದಿದ್ದಾರೆ. ಈ ವಸತಿ ನಿಲಯದಿಂದ ಪ್ರತಿಭೆಗಳು ಹೊರಹೊಮ್ಮಿ ಕೀರ್ತಿ ತರುವಂತಾಗಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಸಮಸ್ಯೆಗಳನ್ನು ನೀಗಿಸಿಕೊಂಡು ಸಾಧನೆ ಮಾಡಬೇಕು. ದಿನ ಪತ್ರಿಕೆಗಳನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಜಿಲ್ಲೆಯಾದ್ಯಂತ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೆಪ್ಟೆಂಬರ್ ೫ರ ಬೆಳಿಗ್ಗೆ ೬ ರಿಂದ ಸೆಪ್ಟೆಂಬರ್ ೬ರ ಬೆಳಿಗ್ಗೆ ೬ ಗಂಟೆಯವರೆಗೆ ಎಲ್ಲ ತರಹದ ಮದ್ಯ ಮಾರಾಟ, ಸಂಗ್ರಹಣೆ ಹಾಗೂ ಹಂಚಿಕೆಯನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಆದೇಶ ಹೊರಡಿಸಿದ್ದಾರೆ.

Read More