ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ನೆರಬೆಂಚಿ ಗ್ರಾಮದ ಎಚ್ಚರೇಶ್ವರ ದೇವಸ್ಥಾನದಲ್ಲಿ ಏ.೨೭ ರಂದು ಬೆಳಿಗ್ಗೆ ೧೦:೩೦ ಕ್ಕೆ ೨೦೮ನೇ ಶಿವಾನುಭವ ಗೋಷ್ಠಿ ಹಾಗೂ ಡಾ.ಪ್ರಕಾಶ ನರಗುಂದ ರಚಿತ, ನಿವೃತ್ತ ಶಿಕ್ಷಕ ಎನ್.ಎಸ್.ಪೊಲೇಶಿ ಅವರ ಶಿಕ್ಷಣ ಶಿಲ್ಪಿ ಎಂಬ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಾನಿಧ್ಯವನ್ನು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಮತ್ತು ಇಟಗಿ ಭೂಕೈಲಾಸ ಮೇಲ್ಗದ್ದುಗೆಯ ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಮಾಜಿ ಗ್ರಾ.ಪಂ ಅಧ್ಯಕ್ಷ ಸಂಗಯ್ಯ ಹಾಲಗಂಗಾಧರಮಠ ಅಧ್ಯಕ್ಷತೆ ವಹಿಸುವರು. ಎಂ.ಜಿ.ವ್ಹಿ.ಸಿ ಕಾರ್ಯದರ್ಶಿ ಅಶೋಕ ತಡಸದ ಉದ್ಘಾಟಿಸಲಿದ್ದು, ಶರಣಮ್ಮ ಗಿರೇಗೌಡರ ಉಪಸ್ಥಿತಿಯಲ್ಲಿ ಗುರುಲಿಂಗಪ್ಪಗೌಡ ಹಿರೇಗೌಡರ, ಎಸ್.ಎನ್.ಕಂಗಳ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಗಂಗಾಯಪೀಠ ಮಹಾಸ್ವಾಮಿಗಳು, ಶಿವಣ್ಣ ಗುಡಗುಂಟಿ, ಬಸನಗೌಡ ಪಾಟೀಲ, ಡಾ.ರಾಜಶೇಖರ ಹತ್ತರಸಂಘ, ಬಿ.ಪಿ.ಪಾಟೀಲ, ಜಿ.ಎಚ್.ಪಾಟೀಲ, ಎಂ.ಎಸ್.ಬಿರಾದಾರ, ಪರಶುರಾಮ ಚೌಡಕೇರ ಅನುಭವಗೋಷ್ಟಿ ನಿರೂಪಿಸಲಿದ್ದಾರೆ.
