ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದ ಕಾಂಗ್ರೆಸ್ ಪಕ್ಷದ ಯುವ ಮುಖಂಡ, ಕೆಪಿಸಿಸಿ ಅಲ್ಪಸಂಖ್ಯಾತರ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪಟೇಲ್ ಬಿರಾದಾರ ಕಾಯಕಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಶ್ರೀ ಗುರು ಪಂಚಾಕ್ಷರಿ ಪುಟ್ಟರಾಜ ಸಂಗೀತ ಶಾಲೆ, ಹಾಗೂ ಗೀತಾ ಸಂಗೀತ ಅಕಾಡೆಮಿ (ರಿ) ಟ್ರಸ್ಟ್, ಖಾದ್ರಿಯಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶಿವಮೊಗ್ಗ ಈ ಸಂಸ್ಥೆಗಳ ಸಹಯೋಗದಲ್ಲಿ ಇದೇ ಮೇ 27 ರಂದು ಭಾನುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿರುವ ಕಲಾ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಮ್ಮದ್ ಪಟೇಲ್ ರವರ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಗಾಯಕ ಆರ್.ಯತೀಶ್ ಕುಮಾರ್, ಬರಹಗಾರ ಡಾ.ಮಹಾಂತೇಶ ಬಿರಾದಾರ, ಚಿತ್ರ ನಟ, ಡಾ.ಸಂಗಮೇಶ ಉಪಾಸೆ, ವಾಣಿಜ್ಯ ತೆರಿಗೆಗಳ ಉಪ ಆಯುಕ್ತೆ ಸವಿತಾ ಆರ್.ಇನಾಮದಾರ, ಡಿವೈಎಸ್ಪಿ ಕು.ಉಮಾರಾಣಿ ಎಸ್ ಸೇರಿದಂತೆ ಇತರರು ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಸಂಗೀತ ನಿರ್ದೇಶನ, ಗೀತಾ ಸಂಗೀತ ಅಕಾಡೆಮಿಯ ಗೌರವಾಧ್ಯಕ್ಷ ರಾಜು ಎಮ್ಮಿಗನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

