ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲ್ಲೂಕಿನ ಹುಲ್ಯಾಳ ಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳ 4ನೇ ಭಾನುವಾರ ಹಮ್ಮಿಕೊಳ್ಳುವ ‘ಶ್ರೀಗುರುದೇವ ಸತ್ಸಂಗ’ ಮಾಸಿಕ ಕಾರ್ಯಕ್ರಮ ಇಂದು ಸಂಜೆ 6.00 ಗಂಟೆಗೆ ಜರುಗಲಿದೆ ಎಂದು ಹರ್ಷಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಮುಧೋಳ ವೈದ್ಯರು, ಸಾಹಿತಿಗಳಾದ ಡಾ.ಶಿವಾನಂದ ಕುಬಸದ ‘ಆಧುನಿಕ ಸಮಾಜದಲ್ಲಿ ಶರಣರ ಪ್ರಸ್ತುತತೆ’ ಎಂಬ ವಿಷಯ ಕುರಿತು ಅನುಭಾವ ಹಂಚಿಕೊಳ್ಳಲಿದ್ದಾರೆ. ಶ್ರೀಗುರುದೇವ ಸಂಗೀತ ಬಳಗದಿಂದ ಸಂಗೀತ ಸೇವೆ ನಡೆಯಲಿದೆ. ಆಲಬಾಳ ಗ್ರಾಮದ ಸಂಗಣ್ಣ ತೇಲಿ ಅವರು ಮಹಾಪ್ರಸಾದದ ದಾಸೋಹ ಸೇವೆ ನೆರವೇರಿಸಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.

