ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಅನಾಪೆಲೀಸ್ ಎನ್ನುವ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ರೋಗ ಹರಡುತ್ತದೆ, ಇದು ಒಬ್ಬರಿಂದ ಇನ್ನೊಬ್ಬರಿಗೆ ಸೊಳ್ಳೆ ಕಚ್ಚಿದರೆ ಆ ವ್ಯಕ್ತಿಗೂ ಕೂಡಾ ಮಲೇರಿಯಾ ಹರಡುವ ಎಲ್ಲ ಸಾಧ್ಯತೆಗಳು ಇರುತ್ತದೆ ಹೀಗಾಗಿ ಮಲೇರಿಯಾ ಮುಕ್ತ ರೋಗಕ್ಕೆ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಹಿರಿಯ ಅರೋಗ್ಯ ನೀರಿಕ್ಷಣ ಅಧಿಕಾರಿ ಎಂ ಆರ್ ಮಾಶ್ಯಾಳ ಸಲಹೆ ನೀಡಿದರು.
ಗ್ರಾಮದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನದ ಅಂಗವಾಗಿ ಹಮ್ಮಿಕೊಂಡ ಮಲೇರಿಯಾ ವಿರೋಧಿ ಮಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ರೋಗ ನಿಯಂತ್ರಣಕ್ಕಾಗಿ ಪ್ರತಿಯೊಬ್ಬ ಸಾರ್ವಜನಿಕರು ತಮ್ಮ ಮನೆಯ ಅಕ್ಕಪಕ್ಕದಲ್ಲಿ ಗಡಸು ನೀರು ನಿಲ್ಲದಂತೆ ನಿಗಾ ವಹಿಸಬೇಕು ಮನೆಯಲ್ಲಿ ಸೊಳ್ಳೆ ಬತ್ತಿ ಪರದಿ ಉಪಯೋಗಿಸಬೇಕು ಕಿಟಗಿ ಬಾಗಿಲಿಗೆ ಸೊಳ್ಳೆ ಜಾಲರಿ ಅಳವಡಿಸಬೇಕು ಬೆಳಿಗ್ಗೆ ಮತ್ತು ಸಾಯಂಕಾಲ ಬೇವಿನ ಸೋಪ್ಪೆಯಿಂದ ಹೋಗೆ ಹಾಕಿದರೆ ಸೊಳ್ಳೆಗಳು ಮನಯೊಳಗಡೆ ಪ್ರವೇಶ ಮಾಡಲು ಅವಕಾಶ ಇರುವುದಿಲ್ಲ ಎಂದರು.
ಮುನ್ನೆಚ್ಚರಿಕೆ ಕ್ರಮ: ಶೀಘ್ರ ಚಳಿ ಮತ್ತು ಆಗಾಗ ಜ್ವರ ಬರುವುದು ಹಾಗೂ ತೆಲೆ ನೋವು, ಸುಸ್ತು, ಬೆವರು, ಈ ರೋಗದ ಮುಖ್ಯ ಲಕ್ಷಣಗಳಾಗಿವೆ ಇಂತಹ ಲಕ್ಷಣ ಕಂಡು ಬಂದರೆ ಸಾರ್ವಜನಿಕರೂ ಕೂಡಲೇ ತಮ್ಮ ಸಮುದಾಯದ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರಕ್ತ ಪರಿಶೀಲಿಸಿ ಚಿಕಿತ್ಸೆ ಪಡೆದು ಅರೋಗ್ಯ ಕಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪ್ರಾರ್ಥಮಿಕ ಅರೋಗ್ಯಸುರಕ್ಷಾ ಅಧಿಕಾರಿ ಜಿ ಎಂ ಸದಾಬ, ನಾಗರಾಜ ಜೋಗ, ಅಂಬ್ರುತರಾವ್ ರಾವೂ, ಬಸು ಅರಕೇರಿ, ರೇಣುಕಾ ಸೋನಿ, ಪ್ರಭು ಅರಳಿ, ಚನ್ನಬಸು ದೇಗಿಲ್, ಶ್ರೀನಾಥ ಹಿಟ್ಟಿನ, ರಾಜಶೇಖರ ಬಾಗಿ, ಸೇರಿದಂತೆ ಇತರರು ಇದ್ದರು.
ಗ್ರಾಪಂ ಅಧಿಕಾರಿಗಳು ಎಚ್ಚೆತ್ತಿಕೊಳ್ಳಬೇಕು
ತಗ್ಗು ಪ್ರದೇಶದಲ್ಲಿ ನೀರು ನಿಲ್ಲದ ಹಾಗೆ ಸಿಬ್ಬಂದಿಗಳು ಪ್ರತಿ ವಾರ್ಡ್ ನಲ್ಲಿ ಸಂಚರಿಸಿ ತೆಗ್ಗುಗಳನ್ನು ಮುಚ್ಚುವ ಕಾರ್ಯ ಮಾಡಬೇಕು. ಗ್ರಾಮದ ಮದ್ಯದಲ್ಲಿ ತಿಪ್ಪೆಗಳು ಗುಂಡಿಗಳು ಕಂಡು ಬಂದಲ್ಲಿ ತಕ್ಷಣ ತೆರವು ಮಾಡಿ ಮಲೇರಿಯಾ ರೋಗ ನಿಯಂತ್ರಣಕ್ಕೆ ಕೈ ಜೋಡಿಸಬೇಕು.

