Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಬಡವರ ಬಾಳಿನ ಆಶಾಕಿರಣ ಆರ್ಥಿಕ ಪ್ರಗತಿಯ ಒಂದು ಕನಸಿನ ಯೋಜನೆ ಪಂಚ ಗ್ಯಾರಂಟಿ ಯೋಜನೆ ಜನರ ಮನೆ ಮನೆ ಬಾಗಿಲಿಗೆ ತಲುಪುವಂತಾಗಿದ್ದು ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸಮಾಡುವಂತಾಗಿದೆ ಎಂದು ಕೊಲ್ಹಾರ ತಾಲೂಕು ಪಂಚ ಗ್ಯಾರಂಟಿ ಯೋಜನಾ ಸಮೀತಿಯ ಅಧ್ಯಕ್ಷ ಸಂತೋಷ ಗಣಾಚಾರಿ ಹೇಳಿದರು.ತಾಲೂಕಿನ ಮುಳವಾಡ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ತಾಲೂಕಾ ಮಟ್ಟದ ಪಂಚ ಗ್ಯಾರಂಟಿ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಸ್ತ್ರೀ ಶಕ್ತಿ ಯೋಜನೆಯ ಅಡಿ ತಾಲೂಕಿನಲ್ಲಿ ೨೬೮೯೫೫೬ ಮಹಿಳೆಯರು ಬಸ್‌ನಲ್ಲಿ ಪ್ರಯಾಣ ಮಾಡಿದ್ದರಿಂದ ಆದಾಯ ದ್ವಿಗುಣವಾಗಿದೆ, ಗೃಹ ಲಕ್ಷ್ಮಿ ಯೋಜನೆಯ ಅಡಿ ತಾಲೂಕಿನಲ್ಲಿ ೨೦೦೩೬ ಅರ್ಜಿದಾರರು ಇದ್ದು ೧೯೬೮೨ ಫಲಾನುಭವಿಗಳು ಯೋಜನೆಯ ಲಾಭ ಪಡೆದುಕೊಂಡಿದ್ದು ೨೯೦ ಜನ ಬಾಕಿ ಉಳಿದಿದ್ದಾರೆ ಎಂದರು.ಗೃಹ ಜ್ಯೋತಿ ಯೋಜನೆಯ ಅಡಿ ೧೭೯೧ ಫಲಾನುಭವಿಗಳು ಅರ್ಜಿ ಹಾಕಿದ್ದು ೧೭೦೨ ಫಲಾನುಭವಿಗಳಿಗೆ ಅವಕಾಶ ಲಭಿಸಿದ್ದು ಬಾಕಿ ೮೧ ಕುಟುಂಬಗಳು ಉಳಿದುಕೊಂಡಿವೆ. ಯುವನಿಧಿ ಯೋಜನೆಯ ಅಡಿ ತಾಲೂಕಿನಲ್ಲಿ ೪೦೯ ಅರ್ಜಿದಾರರಿದ್ದು ೨೧೯ ಜನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ನೇ ಸಾಲಿನ ಮೂಲಭೂತ ಸೌಕರ್ಯ ಯೋಜನೆಯಡಿ ನಗರ ಮತಕ್ಷೇತ್ರದ ವ್ಯಾಪ್ತಿಯ ವಿವಿಧ ತಾಂಡಾಗಳಲ್ಲಿ ಹೈಮಾಸ್ಕ ದೀಪಗಳನ್ನು ಅಳವಡಿಸುವ ಕಾಮಗಾರಿ ಕೈಗೊಳ್ಳಲು ರೂ.೪೯.೯೦ ಲಕ್ಷ ಅನುದಾನ ಮಂಜೂರಿಸಲಾಗಿದೆ.ಕಳೆದ ಚಳಿಗಾಲ ಅಧಿವೇಶನದ ವೇಳೆ (೨೦೨೫ ಮಾರ್ಚ ೧೮ ರಂದು) ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ಪತ್ರ ಬರೆದು, ಈ ಕೆಳಕಂಡ ತಾಂಡಾಗಳಲ್ಲಿ ಹೈಮಾಸ್ಕ್ ದೀಪಗಳನ್ನು ಅಳವಡಿಸುವ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲು ಕೋರಿದ್ದರು. ಅದಕ್ಕೆ ಸ್ಪಂದಿಸಿ, ಇದೀಗ ಮಂಜೂರಾತಿ ನೀಡಲಾಗಿದೆ. ಆದಷ್ಟು ಶೀಘ್ರವಾಗಿ ಪಂಚಾಯತ್ ರಾಜ್ ಎಂಜನಿಯರಿಂಗ್ ವಿಭಾಗ ವಿಜಯಪುರ ಮೂಲಕ ಕಾಮಗಾರಿ ಕೈಗೊಳ್ಳಲಾಗುವುದು.ತೊರವಿ ತಾಂಡಾ ನಂ.೧, ೨, ೩, ಕೌಜಲಗಿ ತಾಂಡಾ, ಬಾರಾಕೊಟ್ರಿ ತಾಂಡಾ, ಭೂತನಾಳ ತಾಂಡಾ (ಪೂರ್ವ), ಭೂತನಾಳ ತಾಂಡಾ (ಪಶ್ಚಿಮ), ಸೇವಾಲಾಲ್ ನಗರ ತಾಂಡಾ, ಖಂಡಕಾರಿ ತಾಂಡಾ ಹಾಗೂ ಬೇಗಮ್ ತಲಾಬ್ ತಾಂಡಾ (ದೊಡ್ಡಿ) ದಲ್ಲಿ ತಲಾ ರೂ.೪.೯೯ ಲಕ್ಷದಂತೆ ಒಟ್ಟು ರೂ.೪೯.೯೦ ಲಕ್ಷ ಮೊತ್ತದಲ್ಲಿ ೧೦…
1,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಆದೇಶ | 9,834 ಮಂಜೂರಾದ ಹುದ್ದೆಗಳಿಗೆ ಲ್ಯಾಪ್‌ಟಾಪ್ ನೀಡಲು ಸರ್ಕಾರ ನಿರ್ಧಾರ | ಬೆಂಗಳೂರು: ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವ್ಯಾಪ್ತಿಯ ಪಂಚಾಯಿತಿಯ ಕೇಂದ್ರಸ್ಥಾನದಲ್ಲಿಯೇ ವಾಸ್ತವ್ಯವಿದ್ದು, ರೈತರ ಕುಂದುಕೊರತೆಗಳನ್ನು ಆಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.ನೂತನವಾಗಿ ಆಯ್ಕೆಯಾಗಿರುವ 1,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಿ ಮಾತನಾಡಿದ ಮುಖ್ಯಮಂತ್ರಿ, ಗ್ರಾಮ ಆಡಳಿತಾಧಿಕಾರಿಗಳ 9,834 ಮಂಜೂರಾದ ಹುದ್ದೆಗಳಿಗೆ ಲ್ಯಾಪ್‌ಟಾಪ್ ನೀಡಲು ಸರ್ಕಾರ ನಿರ್ಧರಿಸಿದ್ದು, ಮೊದಲನೇ ಹಂತದಲ್ಲಿ 4,000 ಲ್ಯಾಪ್ ಟಾಪ್ ಗಳನ್ನು ಇಂದು ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಕೊಡುವುದಾಗಲಿ, ಭ್ರಷ್ಟಾಚಾರಕ್ಕಾಗಲಿ ಅವಕಾಶ ಕೊಡಬಾರದು ಎಂದು ಎಚ್ಚರಿಕೆ ನೀಡಿದರು.ಕೃಷಿ ಲಾಭದಾಯಕ ವೃತ್ತಿಯಾಗಿ ಉಳಿದುಕೊಂಡಿಲ್ಲ. ಅನ್ನದಾತರು ನಾಡಿನ ಒಳಿತಿಗೆ ಕೆಲಸ ಮಾಡುತ್ತಿರುವವರು ಎಂಬ ಅರಿವಿರಬೇಕು. ರೈತರಿಗೆ ಭೂಮಿ ಬೀಟ್ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತಂದಿದೆ ಎಂದು ತಿಳಿಸಿದರು.ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಯನ್ನು ಒಂದು ರೂಪಾಯಿ ಲಂಚವಿಲ್ಲದೇ, ಮಧ್ಯವರ್ತಿಗಳ ಹಾವಳಿಯಿಲ್ಲದೇ ಮಾಡಲಾಗಿದೆ. ಸದಾ ಇಷ್ಟೇ ಪಾರದರ್ಶಕ ನೇಮಕಾತಿ ನಡೆದರೆ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಇವತ್ತಿನ ಸಾಮಾಜಿಕ ಜಾಲತಾಣಗಳು ಹಾಗೂ ಪತ್ರಿಕೆಗಳ ಮೂಲಕ ಎಲ್ಲರಿಗೂ ತಿಳುವಳಿಕೆ ಬಂದಿದೆ ಡಾ|| ಬಿ.ಆರ್.ಅಂಬೇಡ್ಕರ ಅವರು ಮೂಲಭೂತ ಹಕ್ಕುಗಳನ್ನು ದೇಶದ ಜನರಿಗೆ ಕೊಡದೆ ಹೋಗಿದ್ದರೆ ನಾವ್ಯಾರು ಈ ವೇದಿಕೆ ಮೇಲೆ ಇರುತ್ತಿರಲಿಲ್ಲ ಅಸ್ಪೃಶ್ಯತೆ ಎನ್ನುವದು ಸಮಾಜಕ್ಕೆ ಅಂಟಿದ ಶಾಪ ಅದನ್ನು ಕಿತ್ತೊಗೆಯಬೇಕು ಅಂತಹ ತಪ್ಪನ್ನು ಇನ್ನೊಂದು ಬಾರಿ ಸಮಾಜ ಮಾಡಬಾರದು ಎಂದು ತಹಶೀಲ್ದಾರ್ ಎಸ್.ಎಸ್.ನಾಯ್ಕಲಮಠ ಹೇಳಿದರು.ತಾಲೂಕಿನ ಮಸೂತಿ ಗ್ರಾಮದಲ್ಲಿ ನಡೆದ ಬಾಬಾ ಸಾಹೇಬ್ ಅಂಬೇಡ್ಕರ್ ೧೩೪ ನೇ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ದೇಶದ ಜನ ತಮ್ಮ ತಪ್ಪು ಭಾವನೆಗಳಿಂದ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಂಡಿರಲಿಲ್ಲ ಈಗ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲ್ಲಿ ಸತ್ಯ ನಿಷ್ಠ ವರದಿಗಳು ಬರುತ್ತಿರುವದರಿಂದ ಸಂವಿಧಾನದ ಮೂಲ ಆಶಯ ಜನರಿಗೆ ತಿಳಿಯುವಂತಾಗಿದೆ ಎಂದರು.ಕೂಡಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಸವರಾಜ ಜಾಲವಾದಿ ಮಾತನಾಡಿ ಸಮಗ್ರ ತಳ ಸಮುದಾಯಗಳು ತಮ್ಮ ಪಂಚೇAದ್ರಿಯಗಳನ್ನು ಸರಿಯಾದ ನಿಟ್ಟಿನಲ್ಲಿ ಬಳಸಿಕೊಂಡು ಶಿಕ್ಷಣ ಸಂಘಟನೆ ಹೋರಾಟದ ಕಡೆಗೆ ಗಮನಕೊಡಬೇಕು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ, ಇದರ ಕೇಂದ್ರ ಸಂಘಟಣೆಯ ಜನರಲ್ ಸೆಕ್ರೆಟರಿ ಎಸ್.ಎಸ್.ಮಹಾದೇವಯ್ಯನವರ ಕರೆಯ ಮೇರೆಗೆ ವಿಜಯಪುರ ವಿಭಾಗದ ಗ್ರಾಮೀಣ ಅಂಚೆ ಸೇವಕರು ಏ.೨೯ ರಂದು ಅಂಚೆ ಅಧೀಕ್ಷಕರ ವಿಭಾಗೀಯ ಕಾರ್ಯಾಲಯದ ಮುಂದೆ ಒಂದು ದಿನದ ಧರಣಿ’ ಹಮ್ಮಿಕೊಂಡು ಅಂಚೆ ಅಧೀಕ್ಷಕ ಎಮ್. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಧರಣಿಯಲ್ಲಿ ಅಧ್ಯಕ್ಷತೆ ವಹಿಸಿ ಎಸ್.ವಾಯ್. ಥೋರತ ಮಾತನಾಡಿ ಉಆS ಗೆ ಮಾಸಿಕ ಪಿಂಚಣಿ ಸೌಲಭ್ಯವನ್ನು ಕೊಡಬೇಕು. ಮತ್ತು ಸಿವಿಲ್ ದರ್ಜೆಯ ಸ್ಥಾನ-ಮಾನ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.ಸಂಘಟನೆಯ ವಿಭಾಗೀಯ ಕಾರ್ಯದರ್ಶಿ ಜಿ.ಎಸ್.ಬೆಳ್ಳುಬ್ಬಿ , ಕಾರ್ಯಧ್ಯಕ್ಷ ಮಹಾಂತೇಶ ಮ. ಇಂಗಳೆ, ಜಿ.ಡಿ.ಎಸ್ ನವರು ಎದುರಿಸುತ್ತಿರುವ ಎಲ್ಲ ರೀತಿಯ ಕಿರುಕುಳಗಳನ್ನು ನಿಲ್ಲಿಸಿ ಅವೈಜ್ಞಾನಿಕ ಗುರಿಗಳನ್ನು ಸ್ಥಗಿತಗೊಳಿಸಬೇಕೆಂದು ಹೇಳಿದರು.ಈ ಧರಣಿಯಲ್ಲಿ ಕಾರ್ಯಧ್ಯಕ್ಷ ಸೋಮಲಿಂಗ ಆರ್, ಉಪಾಧ್ಯಕ್ಷರುಗಳಾದ ಶಾಂತಗೌಡ ಜಹಾಗೀರದಾರ ಬಿರಾದಾರ, ಎಸ್.ಎಮ್.ಹಿರೇಮಠ, ಸಂಘಟನ ಎ.ಎಸ್.ಬಗಲಿ ಅಕ್ಷಯಕುಮಾರ ಕಾರ್ಯದರ್ಶಿ ಆರ್.ಬಿ.ನಿಂಗನೂರ, ಆರ್.ಎನ್.ತಂಬಾಕೆ, ಕಾರ್ಯಕಾರಿ ಸಮೀತಿ ಸದಸ್ಯರುಗಳಾದ ಜಿ.ಎಸ್.ಪಾಟೀಲ, ನಿಂಗಪ್ಪ ಮಸಬಿನಾಳ, ಐ.ಜಿ.ಹಿರೇಮಠ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮಹಿಳಾ ಧ್ವನಿ ಪ್ರಾಯೋಗಿಕ ಪತ್ರಿಕೆಯ ೧೦೦ನೇ ಸಂಚಿಕೆಯನ್ನು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಬಿಡುಗಡೆ ಮಾಡಿದರು.ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಮ್.ಚಂದ್ರಶೇಖರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ, ಸಹಾಯಕ ಪ್ರಾಧ್ಯಾಪಕ ಸಂದೀಪ, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಚಿತ್ರದಲ್ಲಿ ಇದ್ದಾರೆ.
ಎಎಸ್ಪಿ ಭರಮನಿ ಜೊತೆ ಅಸಭ್ಯ ವರ್ತನೆ | ಸಂಯಮ ಕಳೆದುಕೊಂಡ ಸಿಎಂ ನಡೆ ಖಂಡಿಸಿ ರಾಜ್ಯಪಾಲರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಧಾರವಾಡದ ಹೆಚ್ಚುವರಿ ಪೋಲೀಸು ವರಿಷ್ಠಾಧಿಕಾರಿ ನಾರಾಯಣ ಭರಮನಿಯರ ಅವರ ಜೊತ ಅಸಭ್ಯ ವರ್ತನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾ ಯುವ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಯುವ ಪರಿಷತ್, ಅಧ್ಯಕ್ಷರಾದ ಶರಣು ಸಬರದ ಅವರು ಮಾತನಾಡಿ, ಅತ್ಯಂತ ಗೌರವಾನ್ವಿತ ಪೋಲೀಸು ನೌಕರಿ ಮಾಡುತ್ತಿರುವ ಹಿರಿಯ ಪೋಲೀಸು ಅಧಿಕಾರಿ, ಧಾರವಾಡದ ಹೆಚ್ಚುವರಿ ಪೋಲೀಸು ವರಿಷ್ಠಾಧಿಕಾರಿಗಳಾದ ನಾರಾಯಣ ಭರಮನಿಯರ ಜೊತೆಗೆ ತುಂಬಿದ ಕಾಂಗ್ರೆಸ್ಸು ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆದುಕೊಂಡ ರೀತಿ ಇಡೀ ನಾಗರಿಕ ಸಮಾಜ ತೆಲೆತಗ್ಗಿಸುವಂತಾಗಿದೆ.ಬೆಳಗಾವಿಯ ಘಟನೆಯಿಂದ ಭರಮನಿ ಅಂತಹ ಅಧಿಕಾರಿಗಳಿಗೆ ಆಗುವ ಮಾನಸಿಕ ಹಿಂಸೆ ಅಷ್ಟಿಷ್ಟಲ್ಲ. ರಾಜಕಾರಣಿಗಳನ್ನು ತಮ್ಮ ಮನೆಯ ಹೆಂಡತಿ, ಮಕ್ಕಳು ಹಾಗೂ ಪಾಲಕರನ್ನು ಬಿಟ್ಟು ಹೊತ್ತಿಲ್ಲದ ಹೊತ್ತಿನಲ್ಲಿ ಒಬ್ಬ ಪೋಲೀಸು ಆಧಿಕಾರಿ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಕಟ್ಟೆಯ ಮೇಲೆ ಕುಳಿತು ಇನ್ನೊಬ್ಬರ ಕುರಿತು ಮಾತನಾಡುತ್ತ ನಮ್ಮ ಘನತೆ, ಗೌರವಗಳನ್ನು ನಾವೇ ಹಾಳು ಮಾಡಿಕೊಳ್ಳುವುದಕ್ಕಿಂತ ದೇವರು ಮಹಾಪುರುಷರ ಕುರಿತ ಚರ್ಚೆಮಾಡಿದಲ್ಲಿ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ದಾನೇಶ್ವರ ಶ್ರೀ ಹೇಳಿದರು.ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರಿಗಳ ಸ್ವಾಗತ ಹಾಗೂ ಸತ್ಸಂಗ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಸಾಧು ಸಂತರು, ಮಹಾನ್ ಪುರುಷರ ಕುರಿತ ಚರ್ಚೆಯಿಂದ ಜ್ಞಾನವೃಧ್ದಿಯಾಗುತ್ತದೆ, ದೇಶಪ್ರೇಮ ಬೆಳೆಯುತ್ತದೆ ಹಾಗೂ ಮಕ್ಕಳಿಗೆ ದೇಶದ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ. ನಾವು ಯಾರಿಗೂ ಅನ್ಯಾಯ ಮಾಡಬಾರದು ಅಣ್ಯಾಯ ಸಹಿಸಲೂಬಾರದು. ದೇಶದ ವಿಷಯ ಬಂದಾಗ ಒಗ್ಗಟ್ಟಾಗಿರಬೇಕೆಂದರು.ಬಾವಲತ್ತಿಯ ವಿಜಯ ವೇದಾಂಗ ಶ್ರೀ ಮಾತನಾಡಿ, ದೇವರು ಧರ್ಮದದಲ್ಲಿ ಜೊಳ್ಳು ಪೊಳ್ಳು ಹೋಗಿ ಗಟ್ಟಿ ಕಾಳುಗಳು ಮಾತ್ರ ಉಳಿಯಲಿವೆ. ಶರಣ ಮಹಾತ್ಮರು ನಿಜ ಭಕ್ತರಲ್ಲಿ ಯಾವತ್ತೂ ನೆಲೆಸಿರುತ್ತಾರೆಂದರು.ಯೂಥ ಕಾಂಗ್ರೇಸ್ ಅಧ್ಯಕ್ಷ ಪ್ರವೀಣ ಪೂಜಾರಿ ಮಾತನಾಡಿ ಬಂಡಿಗಣಿ ಮಠದ ಇತಿಹಾಸ ಶ್ರೀಗಳ ಸಾರ್ವಜನಿಕ ಸೇವೆಗಳ ಕುರಿತು…
ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ದತ್ತಾಂಶ ಶೇಖರಣಾ ಸಮೀಕ್ಷೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತಂತೆ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಕೈಗೊಳ್ಳಲಾಗುವ ಸಮೀಕ್ಷೆಗೆ ಮತಕ್ಷೇತ್ರ ಹಂತದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶಿಸಿದ್ದಾರೆ.೨೬-ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು, ೨೭-ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು, ೨೮-ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು, ೨೯-ಬಬಲೇಶ್ವರ ಮತಕ್ಷೇತ್ರಕ್ಕೆ ವಿಜಯಪುರ ಉಪವಿಭಾಗಾಧಿಕಾರಿಗಳು, ೩೦-ವಿಜಯಪುರ ನಗರ ಮತಕ್ಷೇತ್ರಕ್ಕೆ ಮಹಾನಗರ ಪಾಲಿಕೆ ಆಯುಕ್ತರು, ೩೧-ನಾಗಠಾಣ ಮತಕ್ಷೇತ್ರಕ್ಕೆ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು, ೩೨-ಇಂಡಿ ಮತಕ್ಷೇತ್ರಕ್ಕೆ ಇಂಡಿ ಉಪವಿಭಾಗಾಧಿಕಾರಿಗಳನ್ನು ಹಾಗೂ ೩೩-ಸಿಂದಗಿ ಮತಕ್ಷೇತ್ರಕ್ಕೆ ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಹಿಪ್ಪರಗಿ ಜಲಾಶಯದಿಂದ ಹರಿಸಲಾದ ನೀರು ಗ್ರಾಮದ ಶ್ರಮಬಿಂದು ಸಾಗರವರೆಗೆ ಹರಿದು ಬಂದಿದ್ದರಿಂದ ಈ ಭಾಗದ ರೈತರು ಸಂತಸಗೊಂಡಿದ್ದಾರೆ.ಕೃಷ್ಣಾ ನದಿ ತೀರದ ಗ್ರಾಮಗಳ ಜನ ಜಾನುವಾರುಗಳ ಕುಡಿಯುವ ನೀರಿನ ಅನುಕೂಲಕ್ಕಾಗಿ ಹಿಪ್ಪರಗಿ ಜಲಾಶಯದಿಂದ ನೀರು ಬಿಡುವಂತೆ ಕ.ನೀ.ನಿ. ಅಧೀಕ್ಷಕ ಅಭಿಯಂತರರು ಆದೇಶಿಸಿದ್ದರು. ಸೋಮವಾರ ಸಂಜೆ 0.30 ಟಿಎಂಸಿ ನೀರು ಬಿಡಲಾಗಿತ್ತು. ಈ ನೀರು ಮಂಗಳವಾರ ಬೆಳಗ್ಗೆ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ ತಲುಪಿದ್ದು, ಸುತ್ತಲಿನ ಗ್ರಾಮಸ್ಥರು ಸಂತಸಗೊಂಡಿದ್ದಾರೆ.ಕೇವಲ ಕುಡಿವ ನೀರಿನ ಉದ್ದೇಶಕ್ಕಾಗಿ ನೀರು ಹರಿಸಲಾಗಿದ್ದು, ರೈತರು ಪಂಪ್ ಸೆಟ್ ಮೂಲಕ ಕೃಷಿಗೆ ನೀರು ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ.ಈ ಕುರಿತು “ಉದಯರಶ್ಮಿ” ವಿಸ್ತೃತ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
