ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ, ಇದರ ಕೇಂದ್ರ ಸಂಘಟಣೆಯ ಜನರಲ್ ಸೆಕ್ರೆಟರಿ ಎಸ್.ಎಸ್.ಮಹಾದೇವಯ್ಯನವರ ಕರೆಯ ಮೇರೆಗೆ ವಿಜಯಪುರ ವಿಭಾಗದ ಗ್ರಾಮೀಣ ಅಂಚೆ ಸೇವಕರು ಏ.೨೯ ರಂದು ಅಂಚೆ ಅಧೀಕ್ಷಕರ ವಿಭಾಗೀಯ ಕಾರ್ಯಾಲಯದ ಮುಂದೆ ಒಂದು ದಿನದ ಧರಣಿ’ ಹಮ್ಮಿಕೊಂಡು ಅಂಚೆ ಅಧೀಕ್ಷಕ ಎಮ್. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಧರಣಿಯಲ್ಲಿ ಅಧ್ಯಕ್ಷತೆ ವಹಿಸಿ ಎಸ್.ವಾಯ್. ಥೋರತ ಮಾತನಾಡಿ ಉಆS ಗೆ ಮಾಸಿಕ ಪಿಂಚಣಿ ಸೌಲಭ್ಯವನ್ನು ಕೊಡಬೇಕು. ಮತ್ತು ಸಿವಿಲ್ ದರ್ಜೆಯ ಸ್ಥಾನ-ಮಾನ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ವಿಭಾಗೀಯ ಕಾರ್ಯದರ್ಶಿ ಜಿ.ಎಸ್.ಬೆಳ್ಳುಬ್ಬಿ , ಕಾರ್ಯಧ್ಯಕ್ಷ ಮಹಾಂತೇಶ ಮ. ಇಂಗಳೆ, ಜಿ.ಡಿ.ಎಸ್ ನವರು ಎದುರಿಸುತ್ತಿರುವ ಎಲ್ಲ ರೀತಿಯ ಕಿರುಕುಳಗಳನ್ನು ನಿಲ್ಲಿಸಿ ಅವೈಜ್ಞಾನಿಕ ಗುರಿಗಳನ್ನು ಸ್ಥಗಿತಗೊಳಿಸಬೇಕೆಂದು ಹೇಳಿದರು.
ಈ ಧರಣಿಯಲ್ಲಿ ಕಾರ್ಯಧ್ಯಕ್ಷ ಸೋಮಲಿಂಗ ಆರ್, ಉಪಾಧ್ಯಕ್ಷರುಗಳಾದ ಶಾಂತಗೌಡ ಜಹಾಗೀರದಾರ ಬಿರಾದಾರ, ಎಸ್.ಎಮ್.ಹಿರೇಮಠ, ಸಂಘಟನ ಎ.ಎಸ್.ಬಗಲಿ ಅಕ್ಷಯಕುಮಾರ ಕಾರ್ಯದರ್ಶಿ ಆರ್.ಬಿ.ನಿಂಗನೂರ, ಆರ್.ಎನ್.ತಂಬಾಕೆ, ಕಾರ್ಯಕಾರಿ ಸಮೀತಿ ಸದಸ್ಯರುಗಳಾದ ಜಿ.ಎಸ್.ಪಾಟೀಲ, ನಿಂಗಪ್ಪ ಮಸಬಿನಾಳ, ಐ.ಜಿ.ಹಿರೇಮಠ, ಎಸ್.ಎಮ್. ಪತಂಗಿ, ಶ್ರೀರಾಮ ಕರಾಂಡೆ, ಕವಿತಾ ಮಾದರ, ಅನಿತಾ ಕುಲಕರ್ಣಿ, ಶೋಭಾ ಗಲಗಲಿ, ಆರ್.ಆರ್.ಕೋಲಕಾರ, ಪ್ರಕಾಶ ದೊಡಮನಿ. ಎಸ್.ಎಸ್.ಯಡಹಳ್ಳಿ, ಶಿವರುದ್ರಪ್ಪ ತೋಳೆ ಹಾಗೂ ಮುಂತಾದ ಪದಾಧಿಕಾರಿಗಳು ಸದಸ್ಯರು ವಿಜಯಪುರ ವಿಭಾಗದ ಎಲ್ಲಾ ಜಿ.ಡಿ.ಎಸ್ ಬಂಧುಗಳು ಪಾಲ್ಗೊಂಡಿದ್ದರು.

