Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಝಳಕಿ: ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ ವರ್ಷಗಳ ಹಿಂದೆ ಉದ್ಘಾಟನೆಗೊಂಡರೂ ಝಳಕಿ ಗ್ರಾಮದ ವಿದ್ಯಾರ್ಥಿ/ ವಿದ್ಯರ್ಥಿನಿಯರ ವಸತಿ ನೀಲಯಗಳು ಉಪಯೋಗಿಸದೆ ಕಿಡಿಗೇಡಿಗಳಿಗೆ, ನಾಯಿಗಳಿಗೆ ಉಪಯೋಗಿಸಲು ಅನುವು ಮಾಡಿದಂತಾಗಿದೆ ಎಂಬುದು ಝಳಕಿ ಗ್ರಾಮದ ಇಂಡಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಉಪಾಧ್ಯಕ್ಷ ಪ್ರಕಾಶಗೌಡ ಪಾಟೀಲ ಇವರ ಆರೋಪ.ಸರ್ಕಾರ ಶಾಲಾ/ಕಾಲೇಜಿನ ವಿದ್ಯಾರ್ಥಿಗಳಿಗೆ ಸಹಾಯ, ಸಹಕಾರ ಸಲುವಾಗಿ ಯೋಚನೆಮಾಡಿ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಿರ್ಮಿಸಿದ್ದರೂ ಇತ್ತ ಗಮನ ಹರಿಸದ ಸಂಬಂಧ ಪಟ್ಟ ಇಲಾಖೆ, ಈ ರೀತಿಯಾಗಿ ಹಣದ ದುರುಪಯೋಗ ಮಾಡೋದು ಸರಿಯಲ್ಲ, ಬಡ ವಿದ್ಯಾರ್ಥಿಗಳು ದಿನಾಲೂ ಕಣ್ಣೀರಲ್ಲಿ ಕೈತೋಳೆಯುವಂತಾಗಿದೆ, ವಿದ್ಯಾರ್ಥಿಗಳಿಗೆ ಮಾತ್ರ ಅಲೆದಾಟ ತಪ್ಪದಾಗಿದೆ, ಇದನ್ನು ಕೂಡಲೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಹೋದಲ್ಲಿ ವಿದ್ಯಾರ್ಥಿಗಳು, ಪಾಲಕರು, ಸಂಘದ ಸದಸ್ಯರು ಹೋರಾಟ ಮಾಡುವುದಾಗಿ, ಬಾಲಕೃಷ್ಣ ಭೋಸಲೆ, ಪಿಂಟು ಹಾಡ್ಸoಗೆ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

Read More

ಬಾವೊಬಾಬ್ ಮರಗಳ ಜೀವಿತಾವಧಿ ಸುಮಾರು 2000 ವರ್ಷಗಳು! ಉದಯರಶ್ಮಿ ದಿನಪತ್ರಿಕೆ ವರದಿ: ಎಸ್ ಎಮ್ ಇಟ್ಟಿಜಮಖಂಡಿ: ನಗರದ ಪಿ ಬಿ ಹೈಸ್ಕೋಲ್ ಆವರಣದಲ್ಲಿರುವ ಎರಡು ಬೃಹತ್ ಮರಗಳಿವೆ ಅವುಗಳ ಹೆಸರು ಬಾವೊಬಾಬ್ ಮರ ಅವುಗಳು ಸುಮಾರು 500 ವರ್ಷಗಳಷ್ಟು ಹಳೆಯದಾಗಿವೆ.ಈ ಮರಗಳ ಡಿ.ಎನ್.ಎ (DNA) ಅಧ್ಯಯನಗಳ ಪ್ರಕಾರ ಇವುಗಳು ಮೊದಲು 21 ಮಿಲಿಯನ್ ವರ್ಷಗಳ ಹಿಂದೆ ಮಿಡ್ಗಾಸ್ಕರನಲ್ಲಿ ಕಂಡು ಬಂದಿವೆ. ಈ ಮರಗಳ ಬೀಜಗಳು ನಂತರ ಸಮುದ್ರದ ಪ್ರವಾಹದಲ್ಲಿ ಆಸ್ಟ್ರೇಲಿಯಾ ಹಾಗೂ ಆಫ್ರಿಕಾದ ಮುಖ್ಯ ಭೂ ಭಾಗಗಳಿಗೆ ಬಂದು ವಿಭಿನ್ನ ಜಾತಿಗಳಾಗಿ ವಿಕಸನಗೊಂಡಿವೆ.ಬಾವೋಬಾಬ್ ಮರಗಳು ಅಡಾನ್ಸೋನಿಯಾ ಜಾತಿಗೆ ಸೇರಿದ್ದು, ಇದರಲ್ಲಿ 9 ಜಾತಿ ಮರಗಳಿವೆ, ಎರಡು ಆಫ್ರಿಕಾ, ಆರು ಮಡಗಾಸ್ಕರ ಮತ್ತು ಒಂದು ಆಸ್ಟ್ರೇಲಿಯಾಕ್ಕೆ ಸೇರಿದೆ. ಕೆಲವು ಪ್ರಬೇಧಗಳು ಭಾರತದಲ್ಲೂ ಕಂಡು ಬರುತ್ತವೆ, ಮಧ್ಯಪ್ರದೇಶ ಧಾರ ಜಿಲ್ಲೆಯ ಮಾಂಡು ಬಾವೊಬಾಬ್ ಮರಗಳು ಹೇರಳವಾಗಿ ಕಂಡು ಬರವು ಭಾರತದ ಏಕೈಕ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಅಂದಾಜು 1000 ಮರಗಳಿವೆ.ಬಾವೊಬಾಬ್ ಮರಗಳ ಬೆಳೆವಣಿಗೆಬಾವೊಬಾಬ್ ಮರಗಳು…

Read More

ಇಂದು (೦೭ ಸೆಪ್ಟೆಂಬರ್, ರವಿವಾರ) “ಜೋಕುಮಾರಸ್ವಾಮಿ ಹುಣ್ಣಿಮೆ” ಪ್ರಯುಕ್ತ ಈ ವಿಶೇಷ ಲೇಖನ ಲೇಖನಡಾ. ಎಂ.ಎಸ್.ಆಲಮೇಲಯಡ್ರಾಮಿಜಿಲ್ಲಾ: ಕಲಬುರ್ಗಿಮೋ: 9740499814 ಉದಯರಶ್ಮಿ ದಿನಪತ್ರಿಕೆ “ಅಡ್ಡಡ್ಡ ಮಳಿ ಬಂದುದೊಡ್ಡ ದೊಡ್ಡ ಹನಿಯಾಗಿಗೊಡ್ಡು ಗೋಳೆಲ್ಲಾ ಹೈನಾಗಿಜೋಕುಮಾರ..” ಇದು ನಮ್ಮ ಉತ್ತರ ಕರ್ನಾಟಕದ ಸಹೋದರಿಯರು, ಜೋಕುಮಾರನ ಕುರಿತು ಹಾಡುವ ಹಾಡುಗಳಲ್ಲಿ ಒಂದು ಸುಂದರ ಗೀತೆಪುರಾತನವಾದ ಜಾನಪದ ಸಂಸ್ಕೃತಿಯು ನಮ್ಮ ಆಡುಭಾಷೆಯ ಜೀವನಾಡಿ, ಹಲವು ವೈವಿಧ್ಯಮಯನಂಬಿಕೆಯ( ಕೆಲವು ಮಹಾಬುದ್ಧಿ ಜೀವಿಗಳು ಮೂಡನಂಬಿಕೆ ಅನ್ನುವರು, ನಂಬುಗೆಯೇ ಸಾಂಬನರಮನೆ ಅನ್ನುವದು ಅವರುಗಳು ಅರಿತು ಕೊಂಡಿಲ್ಲ ) ಆಚರಣೆಗಳು, ಉತ್ಸವಗಳು, ಇಂದಿಗೂ ನಡೆದುಕೊಂಡು ಬರುತ್ತಿವೆ, ನಂಬಿಕೆಯಿಂದಲೇ ಈ ಜಗವು ಸಾಗುತ್ತಿರುವದು, ಒಬ್ಬ ತಾಯಿ ತನ್ನ ಮಗುವಿಗೆ ಒಬ್ಬ ಪುರುಷನ ತೋರಿಸಿ ( ತನ್ನ ಗಂಡನ ) ಇವರೇ ನಿನ್ನ ತಂದೆಯೆಂದು ಹೇಳಿದಾಗ ಆ ಮಗುವ ಕ್ಷಣಮಾತ್ರವು ಯೋಚಿಸದೆ ತನ್ನ ತಂದೆಯಂದು ಜೀವನವಿಡೀ ಒಪ್ಪಿಕೊಳ್ಳುತ್ತದೆ, ಪ್ರೀತಿಯಿಂದ ಅಪ್ಪಿಕೊಳ್ಳತ್ತದೆ, ತನ್ನ ಪ್ರೌಡಾವಸ್ಥೆಯಲ್ಲಿಯೂ ಅಪ್ಪನ ಕುರಿತು ಕಿಂಚಿತ್ತು ಸಂಶಯ ವ್ಯಕ್ತಪಡಿಸುವದಿಲ್ಲ, ಕಾರಣ ಹೆತ್ತ ತಾಯಿಯ ಮೇಲಿನ ಅಪಾರ…

Read More

ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ “ಗುರುರ್ ಬ್ರಹ್ಮ ಗುರುರ್ ವಿಷ್ಣು ಗುರುರ್ ದೇವೋ ಮಹೇಶ್ವರಃಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ “ಇದರ ಅರ್ಥ”ಗುರುವು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಾಕಾರವಾಗಿದ್ದು, ಸ್ವತಃ ಪರಬ್ರಹ್ಮನೇ ಆಗಿರುವ ಗುರು ಅಜ್ಞಾನವೆಂಬ ಕತ್ತಲಿನಿಂದ ಜ್ಞಾನವೆಂಬ ಬೆಳಕಿನೆಡೆಗೆ ಕೊಂಡೊಯುತ್ತಾನೆ” ಎಂಬುದಾಗಿದೆ.ಶಿಕ್ಷಕ ಶಿಕ್ಷಣದ ಮುಖ್ಯಭಾಗ ಎಂಬುದನ್ನು ಮರೆಯುವಂತಿಲ್ಲ. ಅಲ್ಲವೇ?ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲು ನಿಯೋಜನೆಗೊಂಡ ಎಲ್ಲರೂ ಔಪಚಾರಿಕವಾಗಿ ಶಿಕ್ಷಕರೆ. ಅದನ್ನು ಅವರು ಮಾಡಿಯೇ ಮಾಡುತ್ತಾರೆ. ಏಕೆಂದರೆ ಅಲ್ಲೊಂದು ಕಟ್ಟುಪಾಡು, ಬದ್ಧತೆ ಇರುತ್ತದೆ. ಆದರೆ ಗುರುವಾಗುವ ಹಂತ ಬೆಣ್ಣೆಯಿಂದ ತುಪ್ಪವಾದಂತೆ. ತುಪ್ಪದ ಶುದ್ಧತೆ, ಅದನ್ನು ಕೆಡಲು ಬಿಡುವುದಿಲ್ಲ.ಸ್ವಸ್ಥ ಸಮಾಜದ ನಿರ್ಮಾಣ ಉತ್ತಮ ಶಿಕ್ಷಕರ ಸಮರ್ಪಣಾಭಾವದಿಂದ ಸಾಧ್ಯ ಎಂಬುದನ್ನು ಯಾವ ಶಿಕ್ಷಕರೂ ಮರೆಯದಿದ್ದರೆ ಒಳಿತು.ಇಂದಿನ ಶಿಕ್ಷಣ ವ್ಯವಸ್ಥೆ ಹೇಗಿದೆ ಎಂದು ಕೇಳಿದರೆ, ಏನು ಹೇಳುವುದು. ಬೆಂಗಳೂರಿನಲ್ಲಿ ಒಂದು ಹೋಟೆಲ್ ನೋಡಿದೆ “ಹಳ್ಳಿ ಹಟ್ಟಿ”. ನಿಜವಾದ ಗಿಡ ಮರಗಳನ್ನು ಕಡಿದು ತೆಗೆದು, ಆ ಜಾಗದಲ್ಲಿ ಹೋಟೆಲ್…

Read More

ವಿಜಯಪುರದಲ್ಲಿ ಶಿಕ್ಷಕರ ದಿನೋತ್ಸವದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇವರ ಸ್ವರೂಪದಲ್ಲಿ ಶಿಕ್ಷಕರನ್ನು ಪೂಜಿಸುವ ದೇಶ ನಮ್ಮ ಭಾರತ ದೇಶವಾಗಿದೆ ಎಂದು ಜಮಖಂಡಿಯ ಓಲೆಮಠದ ಆನಂದ ದೇವರು ಸ್ವಾಮೀಜಿ ಹೇಳಿದರು.ನಗರದ ತೊರವಿ ರಸ್ತೆಯಲ್ಲಿರುವ ಜಿ.ಕೆ‌.ಪಾಟೀಲ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯದ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಶುಕ್ರವಾರ ಏರ್ಪಡಿಸಿದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಒಬ್ಬ ಆಶ್ಯಕ್ತನನ್ನು ಸಶಕ್ತನನ್ನಾಗಿ ಮಾಡುವ ಶಕ್ತಿ ಗುರುವಿಗಿದೆ. ಶಿಕ್ಷಕ, ರೈತ, ಸೈನಿಕ ಈ ಮೂವರು ದೇಶಕ್ಕೆ ಅಮೂಲ್ಯವಾದ ರತ್ನಗಳಾಗಿವೆ. ಯಾವ ಸ್ವಾರ್ಥವನ್ನು ಬಯಸದೇ ಅಕ್ಷರ ಕಲಿಸುವ ಮನೋಭಾವ ಉಳ್ಳವರಾಗಿದ್ದಾರೆ ಎಂದರು.ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ ಶಿಕ್ಷಕರ ಸ್ಥಾನ ವಿಶೇಷವಾದುದು, ಜಗತ್ತಿಗೆ ದಿವ್ಯ ಜ್ಞಾನ ಕೊಡುವ ಕಾರ್ಯ ಶಿಕ್ಷಕರ ಮೇಲಿದೆ. ತಂದೆ ತಾಯಿ ನಂತರದ ಸ್ಥಾನ ಗುರುವಿಗಿದೆ.…

Read More

ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ತಾಲ್ಲೂಕಿನ ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಶರಣಬಸಪ್ಪ ಶಿ.ಗಡೇದ ಅವರಿಗೆ ಗುರುಶ್ರೀ ರಾಜ್ಯ ಪ್ರಶಸ್ತಿ ಲಭಿಸಿದೆ.ವಿವೇಕ ಚೇತನ ಚಾರಿಟಬಲ್ ಟ್ರಸ್ಟ್ ಬೆಂಗಳೂರು. ಹಾಗೂ ರಾಘವೇಂದ್ರ ಪ್ರಕಾಶನ ಬೆಂಗಳೂರು ಇವರ ಸಹಯೋಗದಲ್ಲಿ ಇದೇ ಸೆ.13 ರಂದು ಬೆಂಗಳೂರಿನಲ್ಲಿ ಜರುಗಲಿರುವ “ಶಿಕ್ಷಕರ ದಿನಾಚರಣೆ ಹಾಗೂ ಅಭಿಯಂತರರ ದಿನಾಚರಣೆ” “ರಾಜ್ಯ ಮಟ್ಟದ ‘ಗುರುಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ರಾಘವೇಂದ್ರ ಪ್ರಕಾಶನದ ರಾಘವೇಂದ್ರ ಜಿ.ಎನ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪ್ರಸಕ್ತ ಸಾಲಿನ (೨೦೨೬-೨೬) ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೋಮಾ ವ್ಯಾಲ್ಯು ಆಡೆಡ್ ಡಿಪ್ಲೋಮಾ/ಅಡ್ವಾನ್ಸ್ ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳ ಖಾಲಿ ಉಳಿದ ಸೀಟುಗಳ ಭರ್ತಿಗಾಗಿ ಸೆಪ್ಟೆಂಬರ್ ೨೮ರ ವರೆಗೆ ಪ್ರವೇಶ ದಿನಾಂಕ ವಿಸ್ತರಿಸಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ವಿದ್ಯಾರ್ಥಿನಿಯರು ಆ ದಿನಾಂಕದ ವರೆಗೆ ಪ್ರವೇಶಾತಿ ಪಡೆಯಬಹುದು ಎಂದು ಕುಲಸಚಿವ ಶಂಕರಗೌಡ ಸೋಮನಾಳ ಅವರು ತಿಳಿಸಿದ್ದಾರೆ.ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮಹಿಳಾ ಅಧ್ಯಯನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಅರ್ಥಶಾಸ್ತç, ಸಮಾಜಶಾಸ್ತç, ಸಮಾಜ ಕಾರ್ಯ, ಎಂ.ಎಸ್‌ಸಿ ಇನ್ ಬಯೋಇನ್ಫರ‍್ಮೆಟಿಕ್ಸ್, ಬಯೋಟೆಕ್ನಾಲಜಿ, ಭೌತಶಾಸ್ತ, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ, ಆಹಾರ ಸಂಸ್ಕರಣೆ ಮತ್ತು ಪೋಷಣೆ, ರಸಾಯನಶಾಸ್ತ, ಗಣಿತಶಾಸ್ತ, ಔಷಧೀಯ ರಸಾಯನಶಾಸ್ತ, ಮತ್ತು ಎಂಎಡ್, ಎಂಪಿಎಡ್, ಬಿಪಿಎಡ್, ಸಂಗೀತ ವಿಷಯಗಳ ಸ್ನಾತಕೋತ್ತರ ಕೋರ್ಸ್ಗಳಿಗೆ ಮತ್ತು ಪಿಜಿಡಿಸಿಯಲ್ಲಿ ಸೀಟುಗಳು ಲಭ್ಯವಿವೆ. ಸೆಪ್ಟೆಂಬರ್ ೨೮ರ ವರೆಗೆ ಈ ಕೋರ್ಸ್ಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು.ಈ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕೆರೂಟಗಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಅತಿಥೇಯ ಸರ್ಕಾರಿ ಉರ್ದು ಪ್ರೌಢಶಾಲೆ ಹುಣಶ್ಯಾಳ ತಂಡವು ಬಾಲಕರ ಕ್ರಿಕೆಟ್, ವಾಲಿಬಾಲ್, ಬಾಲಕಿಯರ ಥ್ರೋಬಾಲ್ ಪ್ರಥಮ, ಬಾಲಕಿಯರ ಖೋಖೋ, ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದರು.

Read More

ದೇವರಹಿಪ್ಪರಗಿ ಜ್ಞಾನಜ್ಯೋತಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶಿಕ್ಷಕರೇ ನಾಡಕಟ್ಟುವ ಶಿಲ್ಪಿಗಳು ಜೊತೆಗೆ ಮಕ್ಕಳ ಉಜ್ವಲ ಭವಿಷ್ಯದ ನಿರ್ಮಾತೃಗಳು ಎಂದು ನಿವೃತ್ತ ಮುಖ್ಯಶಿಕ್ಷಕ ಎಸ್.ಎನ್.ಬಸವರೆಡ್ಡಿ ಹೇಳಿದರು.ಪಟ್ಟಣದ ಹೊಸನಗರದಲ್ಲಿ ಶುಕ್ರವಾರ ಸರ್ವೋದಯ ಶಿಕ್ಷಣ ಸಂಸ್ಥೆಯಡಿಯ ಜ್ಞಾನಜ್ಯೋತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜರುಗಿದ ಡಾ.ಎಸ್.ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಪ್ರತಿಭಾವಂತ ಮಕ್ಕಳೇ ದೇಶದ ನಿಜವಾದ ಸಂಪತ್ತು ಎಂದರು.ಸಂಸ್ಥೆಯ ಸಂಸ್ಥಾಪಕ ಎನ್.ಬಿ.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಮಕ್ಕಳೇ ಆಯೋಜಿಸಿ, ಶಾಲೆಯ ಎಲ್ಲ ಶಿಕ್ಷಕ ಸಿಬ್ಬಂದಿಯನ್ನು ವೇದಿಕೆಯ ಮೇಲೆ ಹೂಮಾಲೆ, ಪುಷ್ಪಗುಚ್ಛ ನೀಡಿ ಸನ್ಮಾನಿಸಿದ್ದು ವಿಶೇಷವಾಗಿತ್ತು.ಕಾರ್ಯಕ್ರಮದಲ್ಲಿ ಹಸನ್‌ಸಾಬ್ ಶಿಕ್ಷಕ ಸಿಬ್ಬಂದಿಗಳಾದ ಅಕೀಲ್ ನಾಗಾವಿ, ನಿಂಗಣ್ಣ ಹರಿಜನ, ವಿನೋದಕುಮಾರ ಬೆಳ್ಳಿಕಟ್ಟಿ, ಮಾಳು ಪೂಜಾರಿ, ಜ್ಯೋತಿ ಬಾಗೇವಾಡಿ, ಸೌಭಾಗ್ಯ ದೇಸಾಯಿ, ಅಶ್ವಿನಿ ಹೆಬ್ಬಾಳ, ಅಶ್ವಿನಿ ನಾಗರಬೆಟ್ಟ, ಮಹಾಲಕ್ಷ್ಮಿ ಗೊಡ್ಯಾಳ, ಶ್ರೀದೇವಿ ಬಾಗೇವಾಡಿ, ಲಕ್ಷ್ಮಿ, ರೇಣುಕಾ ಬಗಲಿ, ಶಶಿಕಲಾ ದೇಸಾಯಿ ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನ ಆಚರಿಸಲಾಯಿತು.ಶುಕ್ರವಾರ ಡೀಮ್ಡ್ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿವಿಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಶಿಕ್ಷಕರು ಸಮಾಜದ ನಿಜವಾದ ದಾರಿದೀಪ. ಅವರ ಮಾರ್ಗದರ್ಶನವಿಲ್ಲದೆ ಉತ್ತಮ ವಿದ್ಯಾರ್ಥಿಗಳನ್ನು ತಯಾರಿಸುವುದು ಅಸಾಧ್ಯ. ಶಿಕ್ಷಕರು ಕೇವಲ ಪಾಠ ಕಲಿಸುವವರಲ್ಲ. ಅವರು ಮೌಲ್ಯಗಳನ್ನು ಬೆಳೆಸುತ್ತ ವಿದ್ಯಾರ್ಥಿಗಳ ಜೀವನವನ್ನು ರೂಪಿಸುತ್ತಾರೆ. ಬಿ.ಎಲ್.ಡಿ.ಇ ವಿವಿ ಶ್ರೇಷ್ಠ ಶಿಕ್ಷಣ, ಗುಣಮಟ್ಟದ ಸಂಶೋಧನೆ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ದಿಸೆಯಲ್ಲಿ ಸದಾ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಂಗಾಮಿ ಕುಲಪತಿ ಡಾ. ಅರುಣ ಇನಾಮದಾರ, ಕುಲಸಚಿವ ಡಾ. ಆರ್. ವಿ. ಕುಲಕರ್ಣಿ, ಅಲೈಡ್ ಹೆಲ್ತ ಸೈನ್ಸ ಡೀನ್ ಡಾ. ಎಸ್. ವಿ. ಪಾಟೀಲ, ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ. ಆನಂದ ಪಿ. ಅಂಬಲಿ, ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ವೈದ್ಯಕೀಯ ಅಧೀಕ್ಷಕ, ಡಾ. ಆರ್.…

Read More