ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಅಭಿವೃದ್ಧಿಯಲ್ಲಿ ಜೈನ್ ಸಮುದಾಯದ ಕೊಡುಗೆ ಮೆಚ್ಚುವಂತದ್ದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.
ಇಲ್ಲಿಯ ಪಾರ್ಶ್ವ ಹೀರಾ ಧಾಮದಲ್ಲಿ ಮಾತೋಶ್ರೀ ಹೀರಾಬೆನ್ ಚೋಗಾಲಾಲ್ ಜೀ ಪಾಲರೇಚಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ೧೦೦೮ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪಂಚ ಕಲ್ಯಾಣಕ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೈನ್ ಸಮುದಾಯ ತನು ಮನದಿಂದ ಅನೇಕ ಜೀವಗಳನ್ನು ಉಳಿಸಿದ ಸಮುದಾಯವಾಗಿದೆ. ಏನೇ ಮಾಡಿದರೂ ಮೊದಲಿಗೆ ಹಿಂದೂ ಸಮುದಾಯದವರಿಗೆ ಆದ್ಯತೆ ನೀಡುತ್ತಾರೆ. ನಿರಂತರವಾಗಿ ಈ ಸಮುದಾಯ ನಮ್ಮನ್ನು ಬೆಂಬಲಿಸಿದ್ದರಿಂದ ವಿಜಯಪುರ ನಗರದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ನಿತ್ಯಸೂರೂಜಿ ಗುರು ಮಹಾರಾಜರ ಆಶೀರ್ವಾದ ಪಡೆದುಕೊಂಡರು. ಜೈನ್ ಸಮಾಜದ ಗಣ್ಯರಾದ ಶಾಂತಿಲಾಲ ಓಸ್ವಾಲ, ಡಾ.ಕಿರಣ್ ಓಸ್ವಾಲ, ಲಾಲಾಜಿ ಶೆಟ್ ವಗತಾವರ ಪಾರಿಕ, ಸಂಜಯ ಪೋರವಾಲ, ಮಹಾವೀರ ಪೋರವಾಲ, ನೀಲೇಶ ಷಹಾ, ಮಹಾನಗರ ಪಾಲಿಕೆ ಸದಸ್ಯರಾದ ಕಿರಣ ಪಾಟೀಲ, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಶೀತಲ ಓಗಿ, ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ಗುರು ಗಚ್ಚಿನಮಠ, ಮುಖಂಡರಾದ ಎಂ.ಎಸ್.ರುದ್ರಗೌಡರ ಉಪಸ್ಥಿತರಿದ್ದರು.

