ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೨೫ ಅಂಕಗಳನ್ನು ಗಳಿಸುವ ಮೂಲಕ ರಾಜ್ಯವೇ ತನ್ನತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ ಪಾಟೀಲ್ಸ್ ಶಾಲೆಯ ವಿದ್ಯಾರ್ಥಿ ಅಖಿಲ ನದಾಫ್ ಗೆ ತನ್ನ ಕುಟುಂಬದವರು ಸಿಹಿ ತಿನ್ನಿಹಿ ಶುಭಹಾರೈಸಿದರು.
ಮಹಾರಾಷ್ಟ್ರದ ಸೊಲಾಪೂರದಲ್ಲಿ ಸಂಬಂಧಿಕರ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಅಖಿಲನನ್ನು ಫೊನ್ ಕರೆ ಮೂಲಕ ಸಂಪರ್ಕಿಸಿದಾಗ ಈ ಅಂಕ ಬರುವ ನಿರೀಕ್ಷೆಯಲ್ಲಿರುವದಾಗಿ ತಿಳಿಸಿದ್ದಾನೆ. ತನ್ನ ಸಾಧನೆಗೆ ತನ್ನ ತಂದೆ ತಾಯಿಯವರ ಶ್ರಮ, ಆಶೀರ್ವಾದ ಮತ್ತು ತನಗೆ ಪಾಠ ಮಾಡಿದ ಶಿಕ್ಷಕರು ಕಾರಣ ಎಂದು ತಿಳಿಸಿದ್ದಾನೆ.

