Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಪ್ರಸಿದ್ಧ ಲೇಖಕಿ ಅಗಾಥಾ ಕ್ರಿಸ್ಟಿ
ವಿಶೇಷ ಲೇಖನ

ಪ್ರಸಿದ್ಧ ಲೇಖಕಿ ಅಗಾಥಾ ಕ್ರಿಸ್ಟಿ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ
ಪುಣೆ

ಉದಯರಶ್ಮಿ ದಿನಪತ್ರಿಕೆ

ಅಗಾಥಾ ಕ್ರಿಸ್ಟಿ ಅವರ ಪೂರ್ಣ ಹೆಸರು ಡೇಮ್ ಅಗಾಥಾ ಮೇರಿ ಕ್ಲರಿಸ್ ಕ್ರಿಸ್ಟಿ. ಇವರು ಸೆಪ್ಟೆಂಬರ್ 15 1893 ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದರು. ಇವರು ಮೇಲ್ವರ್ಗದ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರು.ಈಕೆ ಕ್ಲಾರ ಮತ್ತು ಮಿಲ್ಲರ್ ದಂಪತಿಗಳ ಕೊನೆಯ ಪುತ್ರಿ. ಇವರ ಅಕ್ಕ ಮಾರ್ಗ್ರೇಟ್ ಮಿಲ್ಲರ್ ಮತ್ತು ಅಣ್ಣ ಲೂಯಿಸ್ ಮಿಲ್ಲರ್ . ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ಪಿಯಾನೋ ಮತ್ತು ಮಾಂಡೋಲಿನ ನುಡಿ ಸುತ್ತಿದ್ದರು. ಇವರು ಜೀವಮಾನವಿಡಿ ಪುರಾತತ್ವ ಕ್ಷೇತ್ರದಲ್ಲಿ ಆಸಕ್ತಿ ಉಳಿಸಿಕೊಂಡಿದ್ದರು. ಕಾದಂಬರಿಕಾರರು ಮಾತ್ರವಲ್ಲದೆ ಸಣ್ಣ ಕಥೆಗಾರರು ಮತ್ತು ನಾಟಕಕಾರರಾಗಿ ಕೂಡ ಹೆಸರುವಾಸಿಯಾಗಿದ್ದಾರೆ. ಇವರು ಮೇಲೆ ” ಮೇರಿ ವೆಸ್ಟ್ ಮೆಕ್ಕೊಟ್ “ಎಂಬ ಮತ್ತೊಂದು ಹೆಸರಿನಲ್ಲಿ ಪ್ರಣಯ ಕಥೆಗಳನ್ನು ಬರೆದಿದ್ದಾರೆ. ಇವರು ಅಗಾಥಾ ಕ್ರಿಸ್ಟಿ ಎನ್ನುವ ಹೆಸರಿನಲ್ಲಿ ಹೆಸರಿನಲ್ಲಿ 66 ಪತ್ತೆದಾರಿ ಕಾದಂಬರಿಗಳನ್ನು ಮತ್ತು 14 ಸಣ್ಣ ಕಥಾ ಸಂಗ್ರಹಗಳನ್ನು ಬರೆದಿದ್ದಾರೆ.
ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ ಇವರ ಪುಸ್ತಕಗಳು ಅದರಲ್ಲೂ ಕಾದಂಬರಿಗಳು ಅತಿ ಹೆಚ್ಚು ಮಾರಾಟವಾಗುವುದೆಂದು ಗಿ ನ್ನಿಸ್ ಪುಸ್ತಕವು ದಾಖಲು ಮಾಡಿದೆ. ಆಕೆಯ ಬರವಣಿಗೆಗಳು ವಿಶ್ವದಲ್ಲಿ ಅತ್ಯಂತ ವ್ಯಾಪಕವಾಗಿ ಪ್ರಕಟವಾದ ಪುಸ್ತಕಗಳ ಶ್ರೇಯಾಂಕಗಳಲ್ಲಿ ಮೂರನೇ ಸ್ಥಾನ ಹೊoದಿದೆ.
ಇಂಡೆಕ್ಸ್ ಟ್ರಾನ್ಸ್ಲೇಟಿಯಂ ರ ಪ್ರಕಾರ ಇವರ ಕೃತಿಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಅನುವಾದಗೊಳ್ಳುತ್ತವೆ. ಸಂಖ್ಯೆಯ ಮೊತ್ತವನ್ನು ಗಮನಿಸಿದಾಗ ಅನ್ಯ ಭಾಷೆಗಳಿಗೆ ಅನುವಾದ ಗೊಳ್ಳುವ ಅತ್ಯುತ್ತಮ ಹಾಗೂ ಏಕೈಕ ಲೇಖಕಿಯಾಗಿದ್ದಾರೆ. ಇವರ ಕಥೆಗಳು ಕನಿಷ್ಠ 103 ಭಾಷೆಗಳಲ್ಲಿ ಅನುವಾದಗೊಂಡಿವೆ. ಇವರ ” ಯಾoಡ್ ದೆನ್ ದೆರ್ ವೆರ್ ನನ್ ” ವಿಶ್ವದಲ್ಲೇ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ಒಂದನಿಸಿದೆ. ಈ ಪುಸ್ತಕವು ಇಲ್ಲಿಯವರೆಗೆ 10 ಲಕ್ಷ ಮಾರಾಟವನ್ನು ಕಂಡಿದೆ.ಇವರು ವಿಶ್ವದ ದೀರ್ಘಕಾಲಿನ ನಾಟಕ, ಒಂದು ಕೊಲೆ ರಹಸ್ಯ ಮತ್ತು ದಿ ಮೌಸ್ಟ್ರಾಪ್ ಎಂಬ ನಾಟಕಗಳನ್ನು ರಚಿಸಿದ್ದಾರೆ ಇದು 25ನೇ ಸೆಪ್ಟೆಂಬರ್ 1952 ರಂದು ಅಂಬಾಸಿಡರ್ ನಾಟ್ಯಮಂದಿರದಲ್ಲಿ ಮುಕ್ತವಾಗಿ ಇಡಲಾಗಿತ್ತು. ಇದು ಅತ್ಯಂತ ದೀರ್ಘಕಾಲಿಕ ನಾಟಕ ಎಂದು ದಾಖಲೆಯಾಗಿದೆ ಇವರ ಮೊದಲನೆಯ ಸಣ್ಣ ಕಥೆ ದಿ ಹೌಸ್ ಆಫ್ ಬ್ಯೂಟಿ.


ಇದು ಕೇವಲ 6000 ಪದಗಳನ್ನು ಹೊಂದಿದೆ ಇವರ ಮೊದಲ ಕಾದಂಬರಿಯ ಹೆಸರು “ಸ್ನೋ ಅಪೋನ್ ದಿ ಡೆಸರ್ಟ್ “. ಇವರು ಕೆಲವು ಕಾಲ್ಪನಿಕವಲ್ಲದ ಕಥೆಗಳನ್ನು ಬರೆದಿದ್ದರೆ “ಕಮ್ ಟೆಲ್ ಮಿ ಹೌ ಯು ಲಿವ್, ದಿ ಗ್ರಾಂಡ್ ಟೂರ್ ” ಮೊದಲಾದವು ಇವರ ಕಾಲ್ಪನಿಕವಲ್ಲದ ಕಥೆಗಳು. ಇವರ ಆತ್ಮಕತೆಯ ಹೆಸರು “ಅಗಾಥಾ ಕ್ರಿಸ್ಟಿ ಆತ್ಮಚರಿತ್ರೆ “. ಇದು 1977ರಲ್ಲಿ ಪ್ರಕಟವಾಯಿತು. ಅಗಾಥಾ ಕ್ರಿ ಸ್ಟಿ ಅತ್ಯುತ್ತಮ ಪತ್ತೆದಾರಿ ಕಾದಂಬರಿಕಾರರು.ಇವರನ್ನು ಕ್ವೀನ್ ಆಫ್ ಕ್ರೈಂ ಎಂದು ಕರೆಯಲಾಗುತ್ತದೆ. 2013ರಲ್ಲಿ ಮರ್ಡರ್ ಆಫ್ ರೋಜರ್ ಅ ಕ್ರೋಯ್ಡ್ ಎಂಬ ಅಪರಾಧಕ್ಕೆ ಸಂಬಂಧಿಸಿದ ಕಾದಂಬರಿ, ಅತ್ಯುತ್ತಮ ಅಪರಾಧ ಕಾದಂಬರಿ, ಎಂದು ಅಪರಾಧ ಬರಹಗಾರ ಸಂಘದ 600 ಬರಹಗಾರರು ಹೇಳಿದ್ದಾರೆ. “ಮರ್ಡರ್ ಇನ್ ಮೆಸೊಪೋಟ್ಯಾಮಿಯ” “ಡೆತ್ ಆನ್ ನೈಲ್ ” “ಅಪಾಯಿಂಟ್ಮೆಂಟ್ ವಿತ್ ಡೆತ್ ” ” ದೇ ಕೇಂ ಟು ಬಾಗ್ದಾದ ” ಮೊದಲಾದ ಕೃತಿಗಳು ಪುರಾತತ್ವ ಪ್ರಭಾವಗಳನ್ನು ಹೊಂದಿವೆ, ಕ್ರಿಸ್ಟಿ ಮೊದಲ ಪುಸ್ತಕ” ದಿ ಮಿಸ್ಟಿ ರಿಯಸ್ ಅಫೇರ್ ಅಟ್ ಸ್ಟೈಲ್ಸ್ “1920 ರಲ್ಲಿ ಪ್ರಕಟಿಸ ಲಾಯಿತು. ” ಹರ್ಕ್ಯೂಲಿ ಪೈ ರೋಟ್ ” ಇವರ 33 ಕಾದಂಬರಿಗಳು ಮತ್ತು 54 ಸಣ್ಣ ಕಥೆಗಳಲ್ಲಿ ಕಾಣಿಸಿಕೊಳ್ಳುವ ಪಾತ್ರವಾಗಿದೆ.
1920 ರಲ್ಲಿ ” ದಿ ಮಿಸ್ಟಿರಿಯಸ್ ಅಫೇರ್ ಆಫ್ ಸ್ಟೈಲ್ಸ್ ” ಎಂಬ ತಮ್ಮ ಮೊದಲ ಕಾದಂಬರಿಯನ್ನು ಪ್ರಕಟಿಸಿದರು. ಇವರು ಸೃಷ್ಟಿ ಸಿದ ಬೆಲ್ಜಿಯನ್ ಪತ್ತೆದಾರ ಹರ್ಕ್ಯೂಲ್ ಪಾಯ್ರಾನ್ ಪ್ರಥಮ ಪರಿಚಯವಾಗುತ್ತದೆ. “ದಿ ಮರ್ಡರ್ ಆಫ್ ರೋಜರ್ ಆಕ್ರಾಯ್ಡ್ ನಲ್ಲಿ ಕಥೆಗಾರನೇ ಕೊಲೆಗಾರ ಎಂಬ ವಿಷಯ ವಿಸ್ಮಯಕಾರಿಯಾಗಿದೆ.ಈ ನಡುವೆ ಕ್ರಿಸ್ತಿ ಇದ್ದಕ್ಕಿದ್ದಂತೆ ಕಾಣೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿ ಹಲವರ ಗಮನ ಸೆಳೆಯಿತು. ನಿಜಕ್ಕೂ ಇವರು ಆಗ ಮರುವು ರೋಗಕ್ಕೆ ತುತ್ತಾಗಿ ಯಾರಿಗೂ ಹೇಳದಂತೆ ಯಾಕ್ಶೈಡ್ನ ಆಸ್ಪತ್ರೆ ಸೇರಿದರು. 1928 ರಲ್ಲಿ ವಿವಾಹ ವಿಚ್ಛೇದನ ಮಾಡಿಕೊಂಡು 1930ರಲ್ಲಿ ಪ್ರಾಕ್ತನ ಸಂಶೋಧಕನನ್ನು ಮದುವೆಯಾಗಿ ಅವರ ಜೊತೆ ಏಷ್ಯಾ ಖಂಡದಲ್ಲಿ ಸಂಚರಿಸಿ ಕಾದಂಬರಿಗಳನ್ನು ಬರೆದು ಬಹಳ ಹಣಗಳಿಸಿದರು. ಪತಿಯ ಪ್ರಾಕ್ತನ ಸಂಶೋಧನೆಗಳ ಸುತ್ತ ಕ್ರಿಸ್ಟಿ ನೇಯ್ದಿರುವ ಕಾದಂಬರಿ ಎಂದರೆ” ಮರ್ಡರ್ ಇನ್ ಮೆಸ್ಸಪ್ಪೋಟೋಮಿಯ”. ಇವರ ಮೂರು ನಾಟಕಗಳು ಏಕಕಾಲದಲ್ಲಿ ವೆಸ್ಟ ಎಂಡ್ ನಲ್ಲಿ ಪ್ರದರ್ಶಿತವಾದವು. ಇವರ ಪ್ರಸಿದ್ಧ ಕಾದಂಬರಿಗಳು “ದಿ ಮಿಸ್ಟ್ರಿ ಆಫ್ ದಿ ಬ್ಲೂ ಟ್ರೇನ್ ” ” ದಿ ಸೆವೆನ್ ಡಯಲ್ಸ್ ಮಿಸ್ಟರಿ “” ಲಾರ್ಡ್ ಎಜ್ವೇರ್ ಡೈಸ್ “”ಮೇರಿ ವೇಸ್ಪಮ್ಯಾ ಕಾಟ್” ಎಂಬ ಬದಲು ಹೆಸರು ಇಟ್ಟುಕೊಂಡು” ಆಬ್ಸೆಂಟ್ ಇನ್ ದ ಸ್ಪ್ರಿಂಗ್ ” ದಿ ರೋಜ್ ಅಂಡ್ ದಿ ಯೂ ಟ್ರೀ ” ಕಾದಂಬರಿಗಳನ್ನು ಬರೆದರು. “ವಿಟ್ನೆಸ್ ಫಾರ್ ದಿ ಪ್ರೊಸೀಕ್ಯೂಷನ್ “ಮೊದಲಾದ ಇವರ ಕೆಲವು ಕಥೆಗಳು ಚಲನಚಿತ್ರಗಳಾಗಿ ಖ್ಯಾತಿಗಳಿಸಿವೆ. ಈಕೆ ” ರಾಯಲ್ ಸೊಸೈಟಿ ಆಫ್ ಲಿಟರೇಚರ್” ಸಂಸ್ಥೆಯ ಫೆಲೋ ಆಗಿದ್ದರಲ್ಲದೆ 1956 ರಲ್ಲಿ ಇವರಿಗೆ ಸಿ.ಬಿ.ಇ ಪ್ರಶಸ್ತಿಯೂ ದೊರಕಿತು

ಸನ್ಮಾನಗಳು

1956 ಕಮಾಂಡರ್ ಆಫ್ ಬ್ರಿಟಿಷ್ ಎಂಪೈರ್
1957 ಪತ್ತೆ ಕ್ಲಬ್ ಅಧ್ಯಕ್ಷರು.
ಡೇಮ್ ಅಗಾಥಾ ಕ್ರಿಸ್ಟಿ ಜನವರಿ 12 1976ರಂದು ತಮ್ಮ ಮನೆಯಲ್ಲಿ ವಯೋ ಸಹಜ ಕಾರಣಗಳಿಂದ 85ನೇ ವಯಸ್ಸಿನಲ್ಲಿ ತೀರಿಕೊಂಡರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.