Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರದ ಯೋಜನೆಗಳ ಅನುಷ್ಠಾನವು ಗುಣಮಟ್ಟ ಮತ್ತು ಸಮಯಕ್ಕೆ ಸರಿಯಾಗಿ ಆಗಬೇಕು ಎಂಬ ಉದ್ದೇಶದಿಂದ ತಿಕೋಟಾ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದಕುಮಾರ ಮ್ಯಾಗೇರಿ ಅವರು ಮಂಗಳವಾರ ತಾಲೂಕಿನ ಟಕ್ಕಳಕಿ ಮತ್ತು ಘೋಣಸಗಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಮಾತನಾಡಿದರು.ವಿ-ಬಿ ಜಿ ರಾಮ ಜಿ ಯೋಜನೆಯಡಿ ಪ್ರತಿ ದಿನ ಕನಿಷ್ಠ 200 ರಿಂದ 300 ಜನರಿಗೆ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದರು.ನಂತರ ಕೂಲಿಕಾರರೊಡನೆ ಸಂವಾದ ನಡೆಸಿದ ಅವರು, “ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ನೇರವಾಗಿ ತಲುಪಬೇಕು. ಕಾಮಗಾರಿಯಲ್ಲಿ ಯಾವುದೇ ವಿಳಂಬವಾಗಬಾರದು ಮತ್ತು ನಿಗದಿತ ಮಾನದಂಡದಂತೆ ಗುಣಮಟ್ಟ ಕಾಪಾಡಿಕೊಳ್ಳಬೇಕು. ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸುವುದರ ಜೊತೆಗೆ ಪಾರದರ್ಶಕತೆಗೆ ಆದ್ಯತೆ ನೀಡಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರಾದ ಬಸವರಾಜ ಸಂಕಗೊಂಡ, ಟಕ್ಕಳಕಿ ಪಿಡಿಓ ಶ್ರೀಮತಿ ಅಕ್ಕಮಹಾದೇವಿ ಪವಾರ, ಘೋಣಸಗಿ ಪಿಡಿಓ ಉಮೇಶ ಕನಮಡಿ, ತಾಲೂಕು ಐಇಸಿ ಸಂಯೋಜಕರಾದ ಕಲ್ಲಪ್ಪ ನಂದರಗಿ…
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೂತನ ಸಚಿವ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಯ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಸಚಿವ ಎಂ.ಬಿ. ಪಾಟೀಲರನ್ನು ದೂಷಿಸುತ್ತಿರುವುದು ಸಂಪೂರ್ಣ ಅಸಮರ್ಥನೀಯ ಎಂದು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಗಂಗಾಧರ ಸಂಬಣ್ಣಿ ಅವರು ಸ್ಪಷ್ಟಪಡಿಸಿದ್ದಾರೆ.ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಆರೂ ಜನ ಶಾಸಕರು ಸಚಿವ ಸ್ಥಾನಕ್ಕೆ ಅತ್ಯಂತ ಅರ್ಹರಾಗಿದ್ದಾರೆ. ಹಿಂದಿನ ಸಂಪುಟ ವಿಸ್ತರಣೆಯಲ್ಲಿ ಎಂ.ಬಿ. ಪಾಟೀಲರಿಗೆ ಸಚಿವ ಸ್ಥಾನ ಒಲಿದಿತ್ತು. ಈ ಬಾರಿ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಸಿಗುವ ಆಶಾಭಾವನೆ ಇತ್ತು. ಎಲ್ಲ ಕಾಂಗ್ರೆಸ್ ಕಾರ್ಯಕರ್ತರ ಬಯಕೆಯೂ ಆಗಿತ್ತು. ಈ ಕುರಿತು ಎಂ.ಬಿ.ಪಾಟೀಲರು ಕೂಡ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಅದು ಕೈಗೂಡಲಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ಸಿಗುವ ವಿಶ್ವಾಸವಿದೆ. ಈ ಮಧ್ಯೆ ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಎಂ.ಬಿ. ಪಾಟೀಲರೇ ಕಾರಣ ಎಂದು ಆರೋಪಿಸುವುದು ಸರಿಯಲ್ಲ. ಒಂದು ವೇಳೆ ಇವರಿಗೆ ಸಚಿವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಿರುಪತಿಗೆ ಪ್ರಯಾಣ ಬೆಳೆಸುವ ಭಕ್ತಾದಿಗಳ ಬೇಡಿಕೆ ಈಡೇರಿದಂತಾಗಿದ್ದು, ಸೊಲ್ಲಾಪೂರ-ಅನಕಪಲ್ಲಿ ರೈಲನ್ನು ವಿಜಯಪುರ ಮಾರ್ಗವಾಗಿ ತಿರುಪತಿಗೆ ಸಂಚಾರ ಬೆಳೆಸಲಿದೆ. ಆ ಮೂಲಕ ವಿಜಯಪುರದಿಂದ ತಿರುಪತಿಗೆ ಹೋಗುವ ಲಕ್ಷಾಂತರ ಭಕ್ತಾದಿಗಳಿಗೆ ಅನುಕೂಲವಾಗಲಿದ್ದು, ಅನೇಕ ವರ್ಷಗಳ ಬೇಡಿಕೆ ಈಡೇರಿಕೆಯಾದಂತಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರದಿಂದ ಸುಕ್ಷೇತ್ರ ತಿರುಪತಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪ್ರಯಾಣ ಬೆಳೆಸುತ್ತಾರೆ, ವಿಜಯಪುರದಿಂದಲೇ ನೇರವಾಗಿ ರೈಲು ಸಂಪರ್ಕ ಇರಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ವಿಶೇಷ ಕಾಳಜಿ ಹಾಗೂ ಮುತವರ್ಜಿ ವಹಿಸಿ ಈ ಕಾರ್ಯಕ್ಕೆ ಪ್ರಯತ್ನಿಸುತ್ತಿದ್ದೆ, ಅದರ ಭಾಗವಾಗಿ ಈಗ ತಿರುಪತಿಗೆ ನೇರವಾಗಿ ಪ್ರಯಾಣ ಬೆಳೆಸುವ ನಿಟ್ಟಿನಲ್ಲಿ ಅನುಕೂಲವಾಗಲು ಸೊಲ್ಲಾಪೂರ-ಅನಕಪಲ್ಲಿ ರೈಲನ್ನು ತಿರುಪತಿಗೆ ಹೆಚ್ಚುವರಿಯಾಗಿ ಪ್ರಯಾಣ ಬೆಳೆಸುವ ಅನುಕೂಲ ಕಲ್ಪಿಸಲಾಗಿದೆ, ಆ ಮೂಲಕ ಈ ರೈಲು ಸೊಲ್ಲಾಪೂರ-ವಿಜಯಪುರ-ಗದಗ, ಹೊಸಪೇಟೆ ಮಾರ್ಗವಾಗಿ ತಿರುಪತಿಗೆ ತಲುಪಲಿದೆ. ಇದರಿಂದ ಉಳಿದ ಜಿಲ್ಲೆಗಳ ಪ್ರಯಾಣಿಕರಿಗೂ ಅತ್ಯಂತ ಅನುಕೂಲವಾಗಿದೆ, ಒಟ್ಟಾರೆಯಾಗಿ…
ಸಚಿವ ಎಂ.ಬಿ.ಪಾಟೀಲರೂ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ | ಮರು ಪರೀಕ್ಷೆ ನಡೆಸಲಿ | ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಿಕೋಟಾ ಪಟ್ಟಣದಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದ್ದು, ಕೂಡಲೇ ಈ ವಿಷಯವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಾ.ಎಂ.ಬಿ. ಪಾಟೀಲರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡುವಂತೆ ಹಾಗೂ ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮಂಗಳವಾರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂಧ ಆರಂಭಗೊಂಡ ರ‍್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು.ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ತಿಕೋಟಾ ಪಟ್ಟಣದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡಿದೆ, ಓಎಂಆರ್ – ಪ್ರಶ್ನೆ ಪತ್ರಿಕೆ ಗೊಂದಲ ಬಗೆ…
ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ಪಟ್ಟಣದ 12ನೇ ವಾರ್ಡ್ ನ ಸ್ಟೇಡಿಯಂ ಬಡಾವಣೆಯಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ನಡೆಯುತ್ತಿರುವ ಚರಂಡಿ ಕಾಮಗಾರಿ ಅವೈಜಾನಿಕವಾಗಿ ಕೂಡಿದ್ದು, ನೀಲನಕ್ಷೆ ಪ್ರಕಾರ ಯಾವುದೇ ಕೆಲಸ ನಡೆಯುತ್ತಿಲ್ಲ. ಈ ಬಗ್ಗೆ ಗುತ್ತಿಗೆ ತೆಗೆದುಕೊಂಡಿರುವ ನಿರ್ಮಿತಿ ಕೇಂದ್ರದ ಇಂಜಿನಿಯರ್ ಸುಪ್ರೀತ್ ಅವರನ್ನ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಪುರಸಭೆ ಮುಖ್ಯಾಧಿಕಾರಿ ಸುರೇಶ್ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ , ಅವರು ಹಸಿರುನಿಶಾನೆ ತೋರುವರೆಗೂ ಕಾಮಗಾರಿ ಬಿಲ್ ತಡೆ ಹಿಡಿಯಬೇಕೆಂದು ಪುರಸಭೆ ಮಾಜಿ ಸದಸ್ಯ ಐಡಿಯಾ ವೆಂಕಟೇಶ್ ಒತ್ತಾಯಿಸಿದರು.ಪಟ್ಟಣದ ಸ್ಟೇಡಿಯಂ ಬಡಾವಣೆಯಲ್ಲಿ ಶಾಸಕರ ನಿಧಿಯಲ್ಲಿ ಒಂದು ಕೋಟಿ 30 ಲಕ್ಷದ ವೆಚ್ಚದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಕ್ರಿಯಾ ಯೋಜನೆ ಪ್ರಕಾರ ನಡೆಯುತ್ತಿಲ್ಲ. ಕಾಮಗಾರಿ ಗುತ್ತಿಗೆ ತೆಗೆದುಕೊಂಡಿರುವ ನಿರ್ಮಿತಿ ಕೇಂದ್ರ ಇಂಜಿನಿಯರ್ ಸುಪ್ರೀತ್ ಎಂಬುವವರು, ತಮಗೆ ಇಷ್ಟ ಬಂದ ರೀತಿಯಲ್ಲಿ ಕೆಲಸ ಮಾಡಿಸುತ್ತಿದ್ದಾರೆ. ಮೇಲುಗಡೆಯಲೆಲ್ಲ ಎರಡು ಅಡಿ ಅಗಲ ಚರಂಡಿ…
ಲೇಖನ- ಸಂತೋಷ್ ರಾವ್ ಪೆರ್ಮುಡ.ಪೆರ್ಮುಡ ಮನೆ,ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಎಲ್ಲರಿಗೂ ಜೀವನದಲ್ಲಿ ಏನಾದರೊಂದು ಸಾಧನೆಯನ್ನು ಮಾಡಬೇಕು ಎನ್ನುವ ಹಂಬಲವಿರುವುದು ಸಹಜ. ಅದರಲ್ಲೂ ಎಲ್ಲರೂ ಗುರುತಿಸುವಂತಹ ಸಾಧನೆಯನ್ನು ಮಾಡಬೇಕು ಎನ್ನುವ ಆಸೆಯಿರುವವರು ಒಂದಷ್ಟು ಮಂದಿ. ಇದಕ್ಕಾಗಿ ‘ಎಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ’ ಎನ್ನುವ ವಿವೇಕಾನಂದರ ವಾಣಿಯನ್ನು ನೆನಪಿಸಿಕೊಳ್ಳುತ್ತಾರೆ. ಈ ಬದುಕಿರುವುದೇ ಸಾಧಿಸುವುದಕ್ಕಾಗಿ, ಸಾಧನೆಯಿಲ್ಲದ ಈ ಬದುಕೇ ವ್ಯರ್ಥವೆಂದು ಒಂದಷ್ಟು ಮಂದಿ ಭಾವಿಸಿರುತ್ತಾರೆ. ಇದಕ್ಕಾಗಿ ವಿವಿಧ ರೀತಿಯ ಸಾಧನೆಯನ್ನು ಮಾಡಲು ಹೊರಟು ಅಂತಿಮವಾಗಿ ಅವರು ತಲುಪುವುದೇ ಸ್ವಾರ್ಥದ ಬದುಕಿಗೆ. ಇಂಥಹ ಬಹುತೇಕ ಸಾಧಕರು ತಮ್ಮ ಸ್ವಾರ್ಥ ಸಾಧನೆಯಲ್ಲಿ ಕಳೆದೇ ಹೋಗುತ್ತಾರೆ. ನಿಜವಾದ ಸಾಧನೆಯೆಂದರೆ ಒಂದಷ್ಟು ಮಂದಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಿ, ಅದನ್ನು ಜನರೇ ಗುರುತಿಸುವಂತಹ ಸಾಧನೆ. ಒಂದು ದಟ್ಟವಾದ ಕಾಡಿನಲ್ಲಿ ಸೋಮಾರಿಯಾದ ಕ್ರೂರಿ ಸಿಂಹವೊಂದು ಇತ್ತು. ಸಿಂಹವೆಂದರೆ ಎಲ್ಲೆಡೆ ಕಾಡಿನ ರಾಜನೆಂದೇ ಚಿರಪರಿಚಿತ. ಈ ಸಿಂಹವು ಕಾಡಿನ ರಾಜನಾಗಿ ಯಾವುದೇ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸದೇ ಸೋಮಾರಿಯಾಗಿ…
ಲೇಖನ- ಶ್ರದ್ಧಾ ಮುಂಡಾಜೆಮುಂಡಾಜೆದಕ್ಷಿಣ ಕನ್ನಡ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ “ಈ ಹಾಳೆಗಳ ಮೇಲೆ ಸಹಿ ಹಾಕಿ ಮೇಡಂ. ನೀವು ಸೈನ್ ಮಾಡಿದ ನಂತರ “ಲೀಗಲಿ ಯೂ ಬೋತ್ ಆರ್ ಡೈವೋರ್ಸ್ಡ್” ಎನ್ನುತ್ತಾ ವಕೀಲರು ತಮ್ಮ ಕುರ್ಚಿಗೆ ಒರಗಿ ಕುಳಿತರು. ಅವರ ಮಾತುಗಳನ್ನು ಕೇಳಿ ಸೀತಾಳ ಮನವು ದುಃಖ, ನೋವು, ಹತಾಶೆ ಯಿಂದ ಸ್ತಬ್ದವಾಗತೊಡಗಿತು . ಜೀವಕ್ಕೆ ಜೀವವಾಗಿರುತ್ತೇನೆಂದು ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ್ದ ಗಂಡ ಇಂದು ನನ್ನನ್ನು ಯಾವುದೋ ಕಾರಣಕ್ಕೆ ದೂರ ಇಟ್ಟುಕೊಂಡಿರುವುದನ್ನು ಅರಗಿಸಲು ಸಾಧ್ಯವಾಗದೆ ಆಕೆಯ ಮನಸ್ಸೆಂಬ ಗಾಜಿಗೆ ಮೋಸವೆಂಬ ಕಲ್ಲು ಜೋರಾಗಿ ಬಡಿದು, ಅವಳ ಮನಸ್ಸು ಮುರಿದೆ ಹೋಗಿತ್ತು. ಇಬ್ಬರು ಪುಟಾಣಿ ಮಕ್ಕಳು, ಜೀವನ ನಡೆಸಲು ನೌಕರಿಯಿಲ್ಲ, ಗಂಡನಿಂದ ಒಂದು ಪೈಸೆಗೂ ಕೈ ಚಾಚಲಿಲ್ಲ. ಖಾಲಿ ಕೈ, ಖಾಲಿ ಮನಸ್ಸು , ಭಾರವಾದ ಹೃದಯ ಹೊತ್ತು ಹೊರ ನಡೆದಳು ಸೀತಾ. ಮಕ್ಕಳನ್ನು ಕರೆದುಕೊಂಡು ನಡೆಯುತ್ತಾ ನಡೆಯುತ್ತಾ ದೇವಸ್ಥಾನ ತಲುಪಿದ ಆಕೆಗೆ ಕೇಳಿಸಿದ್ದು ಗುರುಗಳು ತಮ್ಮ ಶಿಷ್ಯಯರಿಗೆ ನೀಡುತ್ತಿದ್ದ ಅಂದಿನ ಪ್ರವಚನ.”…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಜುಲೈ-೨೦೨೬ ರ ಶೈಕ್ಷಣಿಕ ಸಾಲಿನ ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಹಾಗೂ ಪ್ರಮಾಣಪತ್ರ ಕೋರ್ಸ್ಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಆ. ೧೬ ರವರೆಗೆ ವಿಸ್ತರಿಸಲಾಗಿದೆ.ಜುಲೈ-೨೦೨೬ರ ಮರು ಪ್ರವೇಶಾತಿ ಅರ್ಜಿಗಳನ್ನೂ ಅಗಸ್ಟ್ ೧೬ ರೊಳಗೆ ಇಗ್ನೋ ಅಧಿಕೃತ ವೆಬ್‌ಸೈಟ್ hಣಣಠಿs://oಟಿಟiಟಿeಡಿಡಿ.Igಟಿou.ಚಿಛಿ.iಟಿ ಲಿಂಕ್ ಮೂಲಕ ಆಸಕ್ತ ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ವಿಜಯಪುರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಅಥವಾ ದೂರವಾಣಿ ಸಂಖ್ಯೆ ೦೮೩೫೨೨೫೨೦೦೬ ಹಾಗೂ emಚಿiಟ: ಡಿಛಿbiರಿಚಿಠಿuಡಿ@igಟಿou.ಚಿಛಿ.iಟಿ ಅನ್ನು ಸಂಪರ್ಕಿಸಬಹುದು ಎಂದು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪ್ರಮುಖ ಕೊಳವೆ ಮಾರ್ಗದಲ್ಲಿ ಏಕಾಏಕಿ ಸೋರಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ, ನಗರದ ಹಲವು ಪ್ರದೇಶಗಳಲ್ಲಿ ಆಗಸ್ಟ್ ೩) ಮತ್ತು ೪ ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಕೋಲಾರ ಮೂಲ ಸ್ಥಾವರದಿಂದ ಜಲನಗರ ಪಂಪ್‌ಹೌಸ್‌ಗೆ ನೀರು ತಲುಪಿಸುವ ೯೬೫/೯೦೦ ಎಂ.ಎA. ವ್ಯಾಸದ ಮುಖ್ಯ ಏರು ಕೊಳವೆ ಮಾರ್ಗದ ಶುದ್ಧ ನೀರೆತ್ತುವ ಪಂಪ್‌ಹೌಸ್ ಹತ್ತಿರ ಹಾಗೂ ವಿವಿಧ ಸ್ಥಳಗಳಲ್ಲಿ ಆಗಸ್ಟ್ ೦೩ ರಂದು ಕೊಳವೆ ಮಾರ್ಗ ಹಾನಿ ಆಗಿದೆ.ಈ ನೀರು ಸೋರಿಕೆ ತಡೆಯಲು ಜಲಮಂಡಳಿ ವತಿಯಿಂದ ತಕ್ಷಣವೇ ತುರ್ತು ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಪಡೆಯುವ ನಗರದ ಪ್ರದೇಶಗಳಿಗೆ ಆಗಸ್ಟ್ ೩ ಮತ್ತು ೪ ರಂದು ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
