ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಯಾಳವಾರ ಗ್ರಾಮದ ಸೋಮೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಪರೀಕ್ಷೆಗೆ ಕುಳಿತ ೭೧ ವಿದ್ಯಾರ್ಥಿಗಳಲ್ಲಿ ಎಲ್ಲಾ ೭೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರಥಮ ಸ್ಥಾನವನ್ನು ಲಕ್ಷಿö್ಮÃ ದೇಸಾಯಿ ಶೇ ೯೬.೬೪, ದ್ವಿತೀಯ ಸ್ಥಾನವನ್ನು ಕಸ್ತೂರಿಬಾಯಿ ಇಬ್ರಾಹಿಂಪೂರ ಶೇ ೯೩.೯೨ ತೃತೀಯ ಸ್ಥಾನವನ್ನು ಕೀರ್ತಿ ಹುಣಶ್ಯಾಳ ಶೇ ೯೧.೬೮ ಫಲಿತಾಂಶ ಪಡೆದಿದ್ದಾರೆ.
ವಿದ್ಯಾರ್ಥಿ,ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ರಾಜುಗೌಡ ನಾಡಗೌಡ್ರ, ಮುಖ್ಯಶಿಕ್ಷಕ ಕೆ.ಆಯ್. ಹೊಸಮನಿ ಹರ್ಷ ವ್ಯಕ್ತಪಡಿಸಿದ್ದಾರೆ.

