Author: editor.udayarashmi@gmail.com

ವಿಜಯಪುರದಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳ ಸುರಿಮಳೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿಸೋಣ.. ಬೆಲೆ ಏರಿಕೆ ವಿರುದ್ದ ಧಿಕ್ಕಾರ..ಎಂಬ ಘೋಷಣೆಗಳು ಬಿಜೆಪಿ ಸಾವಿರಾರು ಕಾರ್ಯಕರ್ತರಿಂದ ಗುರುವಾರ ನಗರದಲ್ಲಿ ಮೊಳಗಿದವು‌.ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ, ದಲಿತರ ಶ್ರೇಯೋಭಿವೃದ್ದಿ ಹಣ ಲೂಟಿ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯದಾದ್ಯಂತ ಬಿಜೆಪಿ ಆರಂಭಿಸಿರುವ ಜನಾಕ್ರೋಶ ಯಾತ್ರೆ ಗುರುವಾರ ವಿಜಯಪುರಕ್ಕೆ ತಲುಪಿತು. ಈ ವೇಳೆ ಸಹಸ್ರಾರು ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ರಮೇಶ‌ ಜಿಗಜಿಣಗಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ವಿಜುಗೌಡ ಪಾಟೀಲ, ಉಮೇಶ ಕಾರಜೋಳ ಮೊದಲಾದ ನಾಯಕರು ಸಾಥ್ ನೀಡಿದರು.ತೆರೆದ ವಾಹನದಲ್ಲಿ ನಾಯಕರು ಜನಾಕ್ರೋಶ ಯಾತ್ರೆಯಲ್ಲಿ ಭಾಗಿಯಾದರು.ಸಾವಿರಾರು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾದರು. ನಗರದ ಶ್ರೀ ಶಿವಾಜಿ…

Read More

ಆದ್ಯಾಳ ಸಹೋದರಿಗೆ ’ಅಮ್ಮನ ಮಡಿಲು’ ಟ್ರಸ್ಟಿನಿಂದ ಶೈಕ್ಷಣಿಕ ನೆರವಿನ ಭರವಸೆ ನೀಡಿದ ಸಂಗಮೇಶ ಬಬಲೇಶ್ವರ ಉದಯರಶ್ಮಿ ದಿನಪತ್ರಿಕೆ ಹುಬ್ಬಳ್ಳಿ: ಇಲ್ಲಿಯ 5 ವರ್ಷದ ಮಗು ಆದ್ಯಾಳ ಮೇಲೆ ನಡೆದ ಅತ್ಯಾಚಾರ ಯತ್ನ ಹಾಗೂ ಕೊಲೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದ್ದು, ಆದ್ಯಾಳಿಗೆ ಆದ ಅನ್ಯಾಯ ಎಂದೂ ಯಾರಿಗೂ ಆಗದಿರಲಿ. ಇಂತಹ ಹೇಯ ಕೃತ್ಯಗಳು ಮತ್ತೆಂದೂ ಮರುಕಳಿಸದಿರಲಿ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಅವರು ಗುರುವಾರ ಹುಬ್ಬಳ್ಳಿಯಲ್ಲಿ ಆದ್ಯ ಕುರಿ ಪಾಲಕರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು.ಆದ್ಯಾಳ ತಾಯಿ-ತಂದೆ ಹಾಗೂ ಬಂಧುಗಳ ಕಣ್ಣೀರು ಕಂಡು ಭಾವುಕರಾಗಿ ಕಂಬನಿ ಮಿಡಿದ ಸಂಗಮೇಶ ಬಬಲೇಶ್ವರ, ಆದ್ಯಾಳ ಸಹೋದರಿಯ ಶಿಕ್ಷಣಕ್ಕೆ ತಮ್ಮ ’ಅಮ್ಮನ ಮಡಿಲು’ ಟ್ರಸ್ಟಿನಿಂದ ಶೈಕ್ಷಣಿಕ ನೆರವು ನೀಡುವುದಾಗಿ ಭರವಸೆ ನೀಡಿದರು.ನತದೃಷ್ಟೆ ಆದ್ಯ ಕುಟುಂಬಕ್ಕೆ ಸರಕಾರದಿಂದ ದೊರಕಬಹುದಾದ ಎಲ್ಲ ರೀತಿಯ ನೆರವನ್ನು ಉಸ್ತುವಾರಿ ಸಚಿವರು ಒದಗಿಸಿಕೊಡಲಿದ್ದು, ಸರಕಾರ ಮತ್ತು ನಾವೆಲ್ಲರೂ ಸದಾ ನಿಮ್ಮೊಂದಿಗೆ ಇದ್ದೇವೆ ಎಂದು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ನರ್ಸಿಂಗ್ ಮಹಾವಿದ್ಯಾಲಯದಲ್ಲಿ 2024-25 ಶೈಕ್ಣಣಿಕ ವರ್ಷದ ಮೊದಲನೇ ವರ್ಷದ ಜಿ.ಏನ್.ಎಂ ಮತ್ತು ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪದಾನ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಬುಧವಾರ ಕಾಲೇಜಿನಲ್ಲಿ ನಡೆಯಿತು.ಈ ಕಾರ್ಯಕ್ರಮದಕ್ಕೆ ಚಾಲನೆ ನೀಡಿದ ಬೆಂಗಳೂರಿನ ಎಂ. ಎಸ್. ರಾಮಯ್ಯ ಇನಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನ ಡೀನ್ ಮತ್ತು ಪ್ರಿನ್ಸಿಪಾಲ ಡಾ. ಸೋನಾಲಿ ಜಾಧವ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳು ಜೀವನ ಮತ್ತು ವೃತ್ತಿಯಲ್ಲಿ ವಹಿಸಬೇಕಾದ ಶಿಸ್ತು ಮತ್ತು ಇತರ ವೃತ್ತಿಗಳಿಗೆ ಇರುವ ನಡುವಿನ ವ್ಯತ್ಯಾಸದ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಮತ್ತು ರೇಡಿಯಾಲಾಜಿಸ್ಟ್ ಡಾ. ವೀರೇಶ ಹಂಚಿನಾಳ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಿಸರ್ಚ್ ಮತ್ತು ಡೆವಲೆಪಮೆಂಟ್ ಸೆಲ್ ನಿರ್ದೇಶಕ ಡಾ. ಎಂ. ಎಂ. ಪಾಟೀಲ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಿ. ಎಸ್. ಬಗಲಿ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ.…

Read More

ಕ್ರೀಡಾಪಟು ಎಂ.ಡಿ.ಪೈಗಂಬರ್ ಗೌಂಡಿ ಗೆ ಎಂಎಲ್ಸಿ ಸುನೀಲಗೌಡ ಪಾಟೀಲ ಚೆಕ್ ವಿತರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಏಷಿಯನ್ ಗೇಮ್ಸ್- 2026ಕ್ಕೆ ತಯಾರಿ ನಡೆಸುತ್ತಿರುವ ಬಡ ಪ್ರತಿಭಾವಂತ ಕ್ರೀಡಾಪಟುವಿಗೆ ಹೆಚ್ಚಿನ ತರಬೇತಿಗಾಗಿ ಬಿ.ಎಲ್.ಡಿ.ಇ ಸಂಸ್ಥೆಯಿಂದ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಅವರು ಆರ್ಥಿಕ ನೆರವು ನೀಡುವ ಮೂಲಕ ಓಟಗಾರರ ಕನಸು ನನಸಾಗಲು ಸಹಾಯ ಹಸ್ತ ಚಾಚಿದ್ಧಾರೆ.ಸಂಸ್ಥೆಯ ಅಧ್ಯಕ್ಷರ ಆಶಯದಂತೆ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅವರು ಗುರುವಾರ ನಗರದಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ತಿಕೋಟಾ ತಾಲೂಕಿನ ಬಾಬಾನಗರದ ಯುವ ಕ್ರೀಡಾಪಟು ಎಂ. ಡಿ. ಪೈಗಂಬರ್ ಗೌಂಡಿ ಅವರಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಿದರು.ಈ ಕ್ರೀಡಾಪಟು ಏಷಿಯನ್ ಗೇಮ್ಸ್ಗೆ ತಯಾರಿ ನಡೆಸುತ್ತಿದ್ದು, ಹೆಚ್ಚಿನ ತರಬೇತಿಗಾಗಿ ಕೇರಳದಲ್ಲಿರುವ ಅಂತಾರಾಷ್ಟ್ರೀಯ ಸಲೀಂ ಶೇಕ ಅಕಾಡೆಮಿ ತರಬೇತಿಗೆ ಸೇರಿದ್ದಾರೆ. ಇವರಿಗೆ ಅಥ್ಲೇಟಿಕ್ ತರಬೇತಿಗೆ ಅಗತ್ಯವಾಗಿರುವ ಕ್ರೀಡಾ ಸಲಕರಣೆ, ವಸತಿ ಮತ್ತೀತರ ಶುಲ್ಕಕ್ಕೆ ಒಟ್ಟು ರೂ. 4.60 ಅಗತ್ಯವಿದ್ದು, ಇದರ ಮೊದಲ ಕಂತಾದ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಿಸರ್ಗದಲ್ಲಿ ದೇವರಿದ್ದಾನೆ. ಆದರೆ, ಗೋಚರಿಸುವುದಿಲ್ಲ. ಹಾಲಿನಲ್ಲಿ ತುಪ್ಪವಿದ್ದರೂ ಕಾಣುವುದಿಲ್ಲ. ಹಾಲಿಗೆ ಸಂಸ್ಕಾರ ಕೊಟ್ಟಾಗ ತುಪ್ಪವಾಗುವುದು. ಹಾಗೆಯೇ ಸಂಸ್ಕಾರವಂತರಾದರೆ ದೇವರನ್ನು ಅನುಭವಿಸಲು ಸಾಧ್ಯ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.ಜಮಖಂಡಿ ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.15 ರಿಂದ ಏ.29 ರವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ, ಸದ್ಭಾವನ ಪಾದಯಾತ್ರೆ ಅಂಗವಾಗಿ ಮಂಗಳವಾರ ಸಂಜೆ ನಡೆದ ವಚನ ಜಾತ್ರಾ ಮಹೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಚಿಂತನೆಯ ಮೂಲಕ ಎಲ್ಲರನ್ನೂ ಪುನೀತರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಸದ್ಭಾವನಾ ಪಾದಯಾತ್ರೆ ಕೈಗೊಂಡು ದುಶ್ಚಟಗಳ ಭಿಕ್ಷೆ ಬೇಡುವ ಹಾಗೂ ಸದ್ಗುಣಗಳ ದೀಕ್ಷೆ ನೀಡುವ ಶ್ರೀಮಠದ ಸತ್ಕಾರ್ಯ ಶ್ಲಾಘನೀಯವಾಗಿದೆ. ದೇವರಿಗೆ ಮೊರೆ ಹೋದರೆ ಮಾತ್ರ ಸುಖ, ಶಾಂತಿ, ನೆಮ್ಮದಿ ದೊರೆಯಲು ಸಾಧ್ಯ ಎಂದರು.ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮುಖ್ಯ ಅತಿಥಿಯಾಗಿ ಮಾತನಾಡಿ, ಜಮಖಂಡಿ ಆಧ್ಯಾತ್ಮಿಕ ಕ್ಷೇತ್ರದ ಕೇಂದ್ರವಾಗಿದೆ. ಜಗತ್ತಿಗೆ ಆಧ್ಯಾತ್ಮಿಕ ಸಂದೇಶಗಳು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದ ನಾಗರಿಕತೆ, ಸಂಸ್ಕೃತಿ, ಸಹಬಾಳ್ವೆ, ಧಾರ್ಮಿಕ, ಸಾಮಾಜಿಕ ವೈವಿಧ್ಯತೆಯ ಬೇರುಗಳನ್ನು ಭದ್ರ ಪಡಿಸಿಕೊಳ್ಳುವ ಜತೆಗೆ ಉದಾರೀಕರಣ, ಖಾಸಗೀಕರಣ, ಜಾಗತಿಕರಣದ ಸವಾಲುಗಳನ್ನು ಎದುರಿಸಿ, ಭಾರತೀಯರಾದ ನಾವು ‘ವಿಶ್ವಪ್ರಜೆ’ ಗಳಾಗಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಅವರು ಬುಧವಾರದಂದು ಅರಕೇರಿಯ ಜ್ಞಾನ ಜ್ಯೋತಿ ವಸತಿ ಶಾಲೆಯಲ್ಲಿ ಭಾರತೀಯ ಶಿಕ್ಷಣ ಮಂಡಲ ಜಿಲ್ಲಾ ಶಾಖೆಯಿಂದ ಶ್ರೀ ರಾಮನವಮಿ ಅಂಗವಾಗಿ ಹಮ್ಮಿಕೊಂಡ ಭಾರತೀಯ ಶಿಕ್ಷಣ ಮಂಡಲದ 56 ನೇ ಸಂಸ್ಥಾಪನ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿ, ವಿಶ್ಲೇಷಣಾತ್ಮಕ, ಸೃಜನಶೀಲ ಕೌಶಲ್ಯಗಳ ಜತೆಗೆ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು. ವಿದ್ಯಾರ್ಥಿಗಳು ಜ್ಞಾನ, ಶಿಸ್ತು, ಉತ್ಸಾಹ, ನೈತಿಕತೆ ಮೂಲಕ ಆವಿಷ್ಕಾರ, ಸಾಧನೆಗೆ ಮುಂದಾಗಬೇಕು ಎಂದು ಹೇಳಿದರು.ಮುಖ್ಯ ವಕ್ತಾರ ಸಿದ್ದು ಮದರಖಂಡಿ ಮಾತನಾಡಿ,ಪ್ರಾಚೀನ ಭಾರತದ ಶಿಕ್ಷಣವು ವೇದಗಳಿಂದ ಪ್ರಭಾವಿತವಾಗಿದೆ. ಉದ್ಯೋಗ ಪಡೆಯುವದಕ್ಕಾಗಿ ಮಾತ್ರ ಓದು-ಬರಹ ಬೇಡ. ದೇಶದ ಬೇರು ಗಟ್ಟಿಗೊಳಿಸಲು ಜ್ಞಾನಾರ್ಜನೆ ಅಗತ್ಯ. ಹಿರಿಯರನ್ನು ಗೌರವಿಸುವ ಜತೆಗೆ ಎಲ್ಲರನ್ನು ನಿರಂತರವಾಗಿ ಪ್ರೀತಿಸುವ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪದವಿ ಕಾಲೇಜುಗಳ ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಕಡ್ಡಾಯ ಮಾನ್ಯತೆ ಪಡೆಯಬೇಕು ಎಂದ ಸುರಪುರ ಶ್ರೀ ಪ್ರಭು ಕಾಲೇಜಿನ ಪ್ರಾಂಶುಪಾಲ ಡಾ, ಎಂಡಿ ವಾರಿಸ್ ಹೇಳಿದರು.ಪಟ್ಟಣದ ಮಾತೋಶ್ರೀ ಗಂಗಾಬಾಯಿ ಶಾಂತಗೌಡ ಪೊಲೀಸ್ .ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಪದವಿ ಕಾಲೇಜುಗಳ ನ್ಯಾಕ್ ಮಾನ್ಯತೆ ಪಡೆಯುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ನೆರವಾಗುತ್ತದೆ ಎಂದರು.ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಾಧ್ಯಾಪಕ ಡಾ.ಸಿ.ವಿ.ಕಲಬುರ್ಗಿ, ಹಾಗೂ ಡಾ, ಗೌಡಪ್ಪಗೌಡ ಪಾಟೀಲ್ ಈರ್ವರು ವಿಶೇಷ ಉಪನ್ಯಾಸ ನೀಡಿದರು.ಪ್ರಾಂಶುಪಾಲ ಡಾ ನಾಗಪ್ಪ ಚಾವಲ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಿಬ್ಬಂದಿ ವರ್ಗ ಮತ್ತು ಸ್ಥಳಿಯ ಮುಖಂಡರ ಸಹಕಾರದೊಂದಿಗೆ ನ್ಯಾಕ್ ದಲ್ಲಿ ಉತ್ತಮ ಫಲಿತಾಂಶ ಪಡೆಯುವ ಭರವಸೆ ವ್ಯಕ್ತಪಡಿಸಿದರು.ದೈಹಿಕ ನಿರ್ದೇಶಕ ಪ್ರಸಾದ್ ಭಂಡಾರಿ, ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ.ಬಸಮ್ಮ ಎಸ್, ಡಾ. ಪೂಜಾ ಹೊನ್ನುಟಗಿ, ಮಲ್ಲಿಕಾರ್ಜುನ ಮರಡ್ಡಿ, ನಸ್ರೀನ್ ತಾಜ್,…

Read More

ದಾವಣಗೆರೆಯಲ್ಲಿ ಪುಟ್ಟರಾಜರ ಅಭಿಮಾನಿ ಭಕ್ತರ ೩ನೆಯ ಸಮಾವೇಶ ಉದಯರಶ್ಮಿ ದಿನಪತ್ರಿಕೆ ದಾವಣಗೆರೆ: ಡಾ. ಪಂಡಿತ ಪುಟ್ಟರಾಜ ಗವಾಯಿಗಳು ಕರ್ನಾಟಕ ಮಾತ್ರ ಸೀಮಿತವಾಗದೆ ತಮ್ಮ ಸಂಗೀತದ ಮೂಲಕ ಇಡೀ ವಿಶ್ವಕ್ಕೆ ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ ಅವರು ಸಂಗೀತದ ಎಲ್ಲಾ ಪ್ರಕಾರಗಳಲ್ಲಿ ಅಪಾರವಾದ ಜ್ಞಾನ ಮತ್ತು ಪ್ರೌಢಿಮೆಯನ್ನು ಸಾಧಿಸಿದ್ದರು ಎಂದು ಸಂಗೀತ ಭಾರತಿ ಸಂಸ್ಥಾಪಕ ಹೆಚ್. ಪಿ. ಕಲ್ಲಂಭಟ್ ಬಣ್ಣಿಸಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಡಾ. ಪಂಡಿತ್ ಪುಟ್ಟರಾಜ ಸೇವಾ ಸಮಿತಿ ಗದಗ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೂಜ್ಯ ಗುರು ಡಾ. ಪಂಡಿತ ಪುಟ್ಟರಾಜರ ಅಭಿಮಾನಿ ಭಕ್ತರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿವರು ಅವರು ಮಾತನಾಡಿದರು.ಗವಾಯಿಗಳ ಸಂಗೀತ ಕೇವಲ ಮನರಂಜನೆಯನ್ನು ನೀಡದೆ ಒಂದು ರೀತಿಯ ದಿವ್ಯ ಅನುಭೂತಿಯನ್ನು ನೀಡುವ ಶಕ್ತಿಯನ್ನು ಹೊಂದಿತ್ತು. ಹೀಗಾಗಿಯೇ ಅವರ ಕೀರ್ತಿ ವಿಶ್ವದಾದ್ಯಂತ ಪ್ರಸರಿಸಿದೆ. ಪ್ರಸ್ತುತ ರಾಜ್ಯದ ಪ್ರತಿ ಗ್ರಾಮ ತಾಲೂಕು ಮತ್ತು ಜಿಲ್ಲೆಗಳಲ್ಲಿ ಪುಟ್ಟರಾಜ ಗವಾಯಿಗಳವರ ಹೆಸರಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿರುವುದು ಅವರ ಹಿರಿಮೆ ಸಾಕ್ಷಿಯಾಗಿದೆ.…

Read More

ಚಿಂತನೆ- ಡಾ.ಸಂಗಮೇಶ ಕಲಹಾಳಶರಣ ತತ್ವ ಚಿಂತಕರುಕೊಪ್ಪಳ ಉದಯರಶ್ಮಿ ದಿನಪತ್ರಿಕೆ ಅಭ್ಯಾಸವೆನ್ನ ವರ್ತಿಸಿತ್ತಯ್ಯಾ,ಭಕ್ತಿ ಸಾಧ್ಯವಾಗದು ನಾನೇವೆನಯ್ಯಾಅನು ನಿಮ್ಮ ಮನಂಬೊಗುವನ್ನಕ್ಕ,ನೀವೆನ್ನ ಮನಂಬೊಗುವನ್ನಕ್ಕಕಾಯಗುಣಂಗಳ ಕಳೆದವರಿಗೆಶರಣೆಂಬೆ ಕೂಡಲಸಂಗಮದೇವಾ.(ಬಸವಣ್ಣ, ಸಮಗ್ರ ವಚನ ಸಂಪುಟ : 1 ವಚನದ ಸಂಖ್ಯೆ : 511)ವಚನದಲ್ಲಿನ ಶಬ್ದಾರ್ಥಗಳುಅಭ್ಯಾಸ : ಸಾಧನೆವರ್ತನೆ : ನಿರಂತರ ಅನುಕರಣೆ, ಪಾಲಿಸುವ ಕ್ರಮವರ್ತನೆಗಳು : ಅಭ್ಯಾಸ ಅಥವಾ ಸಾಧನೆಯು ಜಪ, ತಪ, ಧ್ಯಾನ, ಶಿವಯೋಗಾದಿ ಕ್ರಮಗಳನ್ನು ಒಳಗೊಂಡಿರುತ್ತವೆ.ಜಪ : ಸ್ತುತಿ, ಅತೀಂದ್ರಿಯ ಉಚ್ಚಾರಣೆ, ಭಕ್ತಿ ಉದ್ದೇಶಕ್ಕಾಗಿ ಚಿಂತನೆ, ಬಯಸಿದ ವಿಷಯದ ನಿರಂತರ ಚಿಂತನೆ, ಪದೇ ಪದೇ ಪಠಿಸುವುದು.ತಪ : ಸಾಧನೆಗಾಗಿ ದೃಢತೆ, ಕಠಿಣ ಆಚರಣೆ, ಸಮಚಿತ್ತತೆ, ಆಂತರಿಕ ನೆನಹು.ಧ್ಯಾನ : ಒಳನೋಟ, ಆಳವಾದ ಏಕಾಗ್ರತೆ, ಪ್ರಾಣದಲ್ಲಿ ಮಗ್ನತೆ.ಶಿವಯೋಗ : ಪರಶಿವನೇ ಪರತತ್ವವೆಂಬ ಸಾಧಕನ ಮಗ್ನತೆ. ಜೀವಚೈತನ್ಯವು ವಿಶ್ವಚೈತನ್ಯದಲ್ಲಿ ಬೆರೆಯುವುದು, ಜೀವಶಕ್ತಿಯು ವಿಶ್ವಶಕ್ತಿಯೊಂದಿಗೆ ಕೂಡುವುದು, ಪರತತ್ವದಲ್ಲಿ ಒಂದಾಗುವುದು.ಭಕ್ತಿ : ಶುದ್ಧಅಂತಃಕರಣ, ಪರಶಿವನ ಉಪಾಸನೆ, ಪರತತ್ವದಲ್ಲಿ ನಿಷ್ಠೆ, ದೇವನಲ್ಲಿ ಶರಣಾಗತಿ ಮತ್ತು ಪರಮಾತ್ಮನೊಂದಿಗೆ ಏಕತೆ ಸಾಧಿಸುವುದು.ಮನಂಬೊಗುವನ್ನಕ್ಕ : ಮನಸ್ಸು ಲಯವಾಗುವಿಕೆ.ವಚನ ವಿಶ್ಲೇಷಣೆಅಭ್ಯಾಸ…

Read More

ಲೇಖನ- ಡಾ ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಮಿರ್ಜಿ ಅಣ್ಣಾರಾಯ ಎಂಬುದು ಹೊಸಗನ್ನಡ ಸಾಹಿತ್ಯದಲ್ಲಿ ಚಿರಪರಿಚಿತ ಹೆಸರು. ಅನುಭವಿ ಶಿಕ್ಷಕ, ಮಿತಭಾಷಿ, ಆದರ್ಶಜೀವಿ, ಸತತಾಭ್ಯಾಸಿ, ಸಾಹಿತ್ಯಕಾರ – ಈ ಪಂಚ ಸೂತ್ರಗಳಲ್ಲಿ ಹಿರಿಯ ಸಾಹಿತಿ ಮಿರ್ಜಿ ಅಣ್ಣಾರಾಯರ ಒಟ್ಟು ವ್ಯಕ್ತಿತ್ವ ಹರಳುಗೊಳ್ಳುತ್ತದೆ.ಬೆಳಗಾವಿಯಿಂದ ಉತ್ತರಕ್ಕೆ ಸುಮಾರು 125 ಕಿ.ಮೀ ದೂರದ ಹಳ್ಳಿ ಸೇಡಬಾಳ ಮಿರ್ಜಿ ಅಣ್ಣಾರಾಯರ ಕಾರ್ಯಕ್ಷೇತ್ರ. ಅಣ್ಣಾರಾಯರ ಹೆಸರಿನಲ್ಲಿರುವ ಮಿರ್ಜಿ ಎಂಬುದು ಅಣ್ಣಾರಾಯರ ಪೂರ್ವಜರಿದ್ದ ಊರು. ಸೇಡಬಾಳ ಕರ್ನಾಟಕದ ಜನಮನದ ನೆನಪಿನಲ್ಲಿ ನಿಂತಿರುವುದು ಮಿರ್ಜಿ ಅಣ್ಣಾರಾಯರಿಂದ. ಬೆಳಗಾವಿಯಂತೆಯೇ, ಆ ಜಿಲ್ಲೆಗೆ ಸೇರಿದ ಸೇಡಬಾಳವೂ ಕರ್ನಾಟಕದ ಗಡಿಯಲ್ಲಿದೆ. ಈ ಗಡಿಯನ್ನು ಕರ್ನಾಟಕದ ಸೆರಗಿನೊಳಗೇ ನಿಲ್ಲುವಂತೆ ಮೂರುವರೆ ದಶಕಗಳ ಕಾಲ ದುಡಿದವರು, ಪ್ರತಿಫಲಾಪೇಕ್ಷೆಯಿಲ್ಲದೆ ಶ್ರಮಿಸಿದವರು ಅಣ್ಣಾರಾಯರು.ತಮ್ಮ ಹಡೆದವರನ್ನು ಕುರಿತು ಅಣ್ಣಾರಾಯರು ಹೇಳುತ್ತಾರೆ, “ನನ್ನ ತಂದೆ ತಾಯಂದಿರು ಅಕ್ಷರಗಳನ್ನು ಕಲಿತವರಲ್ಲ, ಆದರೆ ತುಂಬಾ ಸುಸಂಸ್ಕೃತರು”. ಹೀಗೆ ಶ್ರೀಸಾಮಾನ್ಯರ ಮನೆತನದಲ್ಲಿ 1918ರ ಆಗಸ್ಟ್ 25ರಂದು ಜನಿಸಿದ ಅಣ್ಣಾರಾಯರು ತಮ್ಮ 57 ವರ್ಷಗಳ ಜೀವಿತ ಕಾಲದಲ್ಲಿ ಮಾಡಿದ್ದು ಮಾತ್ರ…

Read More