ರಚನೆ
– ಬಾಲಸುಬ್ರಮಣ್ಯ ವಿ ಎಸ್ ರಾವ್
ಉದಯರಶ್ಮಿ ದಿನಪತ್ರಿಕೆ
ಶಿಲೆಯಲ್ಲದ ಗೋಡೆಯಲಿ ನಿನ್ನ ರೂಪ
ಶಿಲ್ಪಿಯಿಲ್ಲದೆ ಬರೆದಾಯ್ತು ನಿನ್ನ ಬಿಂಬ
ಪಿಸುಗುಟ್ಟಿತು ಗಾಳಿಯದು ನಿನ್ನ ಹೆಸರ
ಮಂಜಿನ ಹನಿಯಲಿ ಸೇರಿಸಿ ಬಿಸಿ ಉಸಿರ
ಕಣಕಣದಲಿ ಬೆರೆತಿದೆ ನನ್ನ ನಿನ್ನ ಪ್ರೀತಿ
ರಿಂಗಣಿಸೆ ದುಂಬಿಗಳು ಮಕರಂದ ಹೀರಿ
ಸುಮ ಸೌರಭ ಹರಡಿದೆ ನಮ್ಮ ಹೆಸರಿಸಿ
ಶುಖ ಪಿಕಗಳು ಹಾಡಿವೆ ನಮ್ಮಿಬ್ಬರ ಹರಸಿ
ಪ್ರೇಮದ ಕಾವ್ಯಕೆ ಪಲ್ಲವಿಯು ನೀನಾದೆ
ಹಾಡುವ ರಾಗಕೆ ಇಂಪಾದ ದನಿಯಾದೆ
ಸ್ವರಲೋಕದ ರಂಗದಿ ಶ್ರುತಿಯಾಗಿ ಮೆರೆದೆ
ಕುಂಚದಲಿ ಬಣ್ಣಗಳ ಓಕುಳಿಯ ಮೂಡಿಸಿದೆ
