ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕಟಬು ಕಟಬರ ಸಮಾಜ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಕಟಬು ಕಟಬರ ಜನಾಂಗದ ಕು.ಅರುಣಾ ಶಿಳ್ಳಿಕ್ಯಾತರ(೧೪ವರ್ಷದ) ಜುಲೈ ೦೯ರಂದು ಬೆಂಗಳೂರಿನಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಕೊಲೆಯನ್ನು ಖಂಡಿಸಿ ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಅವರಿಗೆ ಮನವಿ ಕೊಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಟಬು ಕಟಬರ ಸಮಾಜದ ವಿಜಯಪುರ ಜಿಲ್ಲೆಯ ಉಪಾಧ್ಯಕ್ಷ ಮಹೇಶ್ ಶಿಂಧೆ ಮಾತನಾಡಿ, ಕು.ಅರುಣಾ ಶ್ರೀಕ್ಯಾತರ್ ತಂದೆ ನಾಗಪ್ಪ ಶಿಳ್ಳಿಕ್ಯಾತರ ಹೊಟ್ಟೆಯ ಉಪಜೀವನಕ್ಕಾಗಿ ಬೆಂಗಳೂರು ಪಟ್ಟಣಕ್ಕೆ ಕೂಲಿ ಕೆಲಸಕ್ಕೆ ಹೋದವರು. ಕೂಲಿ ಕೆಲಸ ಮಾಡಲು ತಂದೆ-ತಾಯಿಯು ಹೊರಗಡೆ ಹೋದಾಗ ದುಷ್ಕರ್ಮಿಗಳು ೧೪ ವರ್ಷದ ಅರುಣಾ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದು ಪರಾರಿಯಾಗಿರುವ ಕೃತ್ಯ ಖಂಡನೀಯ ಎಂದು ಹೇಳಿದರು.
ಕಟಬು ಕಟಬರ್ ಚಡಚಣ ತಾಲೂಕ ಅಧ್ಯಕ್ಷ ದತ್ತು ಶಿಂಧೆ ಮಾತನಾಡಿ, ನಿರ್ದಾಕ್ಷಿಣ್ಯವಾಗಿ ದಯತೋರದೆ ಇಂತಹ ಕೃತ್ಯವೆಸಗಿದವರು ಯಾರೆ ಇರಲಿ ಅಂತಹ ವ್ಯಕ್ತಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಹೇಳಿದರು.
ಚೇತನ ಮಠ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕುಬೇರ್ ಶಿಂಧೆ, ನಾಗಪ್ಪ ಶಿಂಧೆ, ಚಿದಾನಂದ ಶಿಂಧೆ, ಹಣಮಂತ ಕ್ಷತ್ರಿ, ಸುನಿಲ ಕ್ಷತ್ರಿ, ರವಿ ಶಿಂಧೆ, ಜಟಿಂಗರಾಯ ಕ್ಷತ್ರಿ,ಸುಭಾಷ ಶಿಂಧೆ, ಪತ್ರಕರ್ತರಾದ ಪ್ರಕಾಶ್ ಕ್ಷತ್ರಿ ಮತ್ತು ಲಕ್ಷ್ಮಣ ಶಿಂಧೆ, ಪಿಂಟು ಶಿಂಧೆ ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದರು.