Author: editor.udayarashmi@gmail.com

ವಿಜಯಪುರದಲ್ಲಿ ರಸ್ತೆ ತಡೆ ನಡೆಸಿ ಗುಂಡಿಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಬಿಜೆಪಿ ವಿಭಿನ್ನ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ರಸ್ತೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ರಾಜ್ಯ ಸರ್ಕಾರ ರಸ್ತೆ ಅಭಿವೃದ್ಧಿ ವಿಷಯದಲ್ಲಿ ಬೇಜವಾಬ್ದಾರಿತನಪ್ರದರ್ಶಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಅಥಣಿ ರಸ್ತೆಯನ್ನು ತಡೆ ಮಾಡಿ ಗುಂಡಿಗಳಲ್ಲಿ ಸಸಿಗಳನ್ನು ನೆಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.ಪ್ರವಾಸಿ ಮಂದಿರದ ಮುಂಭಾಗದಲ್ಲಿ ಅಥಣಿ ರಸ್ತೆಗೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿದರು. ಕಾಂಗ್ರೆಸ್ ಸರ್ಕಾರ – ಜೀವಕ್ಕೆ ಸಂಚಾರ’,ಗುಂಡಿ ಮುಚ್ಚದೇ ರಾಜ್ಯದ ಜನತೆ ಹಾಳು ಮಾಡಿದ ಸರ್ಕಾರಕ್ಕೆ ಧಿಕ್ಕಾರ’, `ಗುಂಡಿಗಳ ಜನಕ ಡಿ.ಕೆ. ಶಿವಕುಮಾರ’ ಎಂಬಿತ್ಯಾದಿ ಪ್ಲೇಕಾರ್ಡ್ಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.ಪ್ರತಿಭಟನೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ರಾಜ್ಯ ಸರ್ಕಾರ ಒಂದೇ ಒಂದು ಸುಸಜ್ಜಿತ ರಸ್ತೆ ನಿರ್ಮಿಸಿಲ್ಲ, ರಸ್ತೆಗಳ ಅವ್ಯವಸ್ಥೆ ಖಂಡಿಸಿ ಅನೇಕ ಉದ್ಯಮಗಳು ರಾಜ್ಯ ಬಿಟ್ಟು ಹೋಗುತ್ತೇವೆ…

Read More

ಎಸ್.ಬಿ ಕಲಾ & ಕೆ.ಸಿ.ಪಿ ವಿಜ್ಞಾನ ಕಾಲೇಜದಲ್ಲಿ ರಾಷ್ಟ್ರೀಯ ಎನ್ ಎಸ್ ಎಸ್ ಸಂಸ್ಥಾಪನಾ ದಿನಾಚರಣೆ | ‘ಏಕ್ ಮುಟ್ಟಿ ಅನಾಜ್ & ಸ್ವಚ್ಛೋತ್ಸವ’ ಅಭಿಯಾನಕ್ಕೆ ಚಾಲನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ಯುವಕರು ಮೊಬೈಲ್ ಗೀಳು ಬಿಟ್ಟು ದೇಶ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು, ಸ್ವಯಂ ಸೇವೆಯ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸನ್ನದ್ಧರಾಗಬೇಕಾಗಿದೆ ಎಂದು ವಿಜಯಪುರ ತಾಲೂಕು ಎನ್ ಎಸ್ ಎಸ್ ನೋಡಲ್ ಅಧಿಕಾರಿ ಪ್ರೊ.ರಾಜು ಬಿ. ಕಪಾಲಿ ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ. ಸಿ. ಪಿ. ವಿಜ್ಞಾನ ಕಾಲೇಜಿನಲ್ಲಿ ಐಕ್ಯೂಎಸಿ, ಎನ್ ಎಸ್ ಎಸ್ ೧ & ೨ ಘಟಕಗಳ ಸಹಯೋಗದಲ್ಲಿ ಬುಧವಾರ ದಂದು ಅಯೋಜಿಸಲಾದ “ಏಕ್ ಮುಟ್ಟಿ ಅನಾಜ್ ಮತ್ತು ಸ್ವಚ್ಛೋತ್ಸವ” ಅಭಿಯಾನದಡಿ ರಾಷ್ಟ್ರೀಯ ಎನ್ ಎಸ್ ಎಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದಿನದ ೨೪ ಗಂಟೆಯೂ ಸದಾ ಸೇವೆಗೆ ಸಿದ್ಧರಾಗಿರಬೇಕು. ಎನ್ ಎಸ್…

Read More

ಇಂಡಿಯಲ್ಲಿ ನಡೆದ ಭೀಮಾ ಪ್ರವಾಹ ಮಳೆ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಆನಂದ ಸೂಚನೆ ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕು ಭೀಮಾ ಪ್ರವಾಹದ ಭೀತಿಯಲ್ಲಿದ್ದು ಮತ್ತು ಮಳೆ ಹೆಚ್ಚಾಗುತ್ತಿದ್ದು ಅಧಿಕಾರಿಗಳು, ಸಿಬ್ಬಂದಿ,ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವದು ಕಡ್ಡಾಯ ಎಂದು ವಿಜಯಪುರ ಜಿಲ್ಲಾಧಿಕಾರಿ ಕೆ. ಆನಂದ ಹೇಳಿದರು.ಪಟ್ಟಣದ ತಾ.ಪಂ ಸಬಾಭವನದಲ್ಲಿ ಭೀಮಾ ಪ್ರವಾಹ ಸಾಧ್ಯತೆ ಕುರಿತು ಮತ್ತು ಮಳೆ ಹೆಚ್ಚಾದ ಕುರಿತು ನಡೆದ ಅಧಿಕಾರಿಗಳ ಮತ್ತು ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.ಯಾರೂ ಮೋಬೈಲ್ ಸ್ವಿಚ್ ಆಫ್ ಮಾಡಬಾರದು. ಭೀಮಾ ನದಿಗೆ ನೀರು ಬಿಟ್ಟರೆ ಜನರಿಗೆ ತೊಂದರೆ ಯಾದರೆ ಕೂಡಲೇ ಸ್ಪಂದಿಸಬೇಕು. ಮನೆ ಬಿದ್ದವರಿಗೆ ಬೇರೆ ಕಡೆ ವ್ಯವಸ್ಥೆ ಮಾಡಬೇಕು. ಈಗಾಗಲೇ ಕಾಳಜಿ ಕೇಂದ್ರ ತೆಗೆಯಲು ತಿಳಿಸಲಾಗಿದ್ದು ಸ್ಥಳಿಯ ಮುಖಂಡರಿಂದ ಮಾಹಿತಿ ಪಡೆದು ಅದಕ್ಕೆ ಸ್ಪಂದಿಸಬೇಕು ಎಂದು ಸೂಚಿಸಿದರು.ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ, ಈ ವರ್ಷ ಮಳೆ ಹೆಚ್ಚು ಆಗುತ್ತಿದೆ. ಅದಲ್ಲದೆ ಮಹಾರಾಷ್ಟ್ರದವರು ಭೀಮಾ ಮತ್ತು ಸೀನಾ ನದಿಯಿಂದ ನೀರು ಬಿಡುತ್ತಿದ್ದು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶ್ವಾದ್ಯಂತ ಮೊಬೈಲ್ ಪ್ರೀಯರು ಹೊಸ ಮಾದರಿ ಐಫೋನ್ ಖರೀದಿಗೆ ನಾನಾ ಮಹಾನಗರಗಳಲ್ಲಿ ಸಾಲಿನಲ್ಲಿ ನಿಲುತ್ತಿದ್ದಾರೆ. ಇಂಥ ಐಫೋನ್ ತಯಾರಿಸುವ ಅಂತಾರಾಷ್ಟ್ರೀಯ ದೈತ್ಯ ಕಂಪನಿ ಫಾಕ್ಸ್ ಕಾನ್, ತನ್ನ ಕಂಪನಿಯಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಬಸವನಾಡು ವಿಜಯಪುರಕ್ಕೆ ಆಗಮಿಸುತ್ತಿರುವುದು ಗಮನ ಸೆಳೆದಿದೆ.ಈ ಕಂಪನಿ ಬಿ.ಎಲ್.ಡಿ.ಇ ಸಂಸ್ಥೆ ಸಹಯೋಗದಲ್ಲಿ ನಗರದ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜನಿಯರಿಂಗ್ ಕಾಲೇಜಿನಲ್ಲಿ ಸೆಪ್ಟೆಂಬರ್ 26 ರಂದು ಶುಕ್ರವಾರ ಎಂಜನಿಯರಿಂಗ್ ಮತ್ತು ಡಿಪ್ಲೋಮಾ ಪಾಸಾದ ವಿದ್ಯಾರ್ಥಿಗಳಿಗಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ.2024 ಮತ್ತು 2025 ನೇ ಶೈಕ್ಷಣಿಕ ವರ್ಷದಲ್ಲಿ ಬಿ. ಇ ಮತ್ತು ಡಿಪ್ಲೋಮಾ ಕೋರ್ಸುಗಳಲ್ಲಿ ಮೆಕ್ಯಾನಿಕಲ್, ಇಲೇಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ಮತ್ತು ಎಲೇಕ್ಟ್ರಾನಿಕ್ಸ್ ಎಲೆಕ್ಟ್ರೀಕಲ್ಸ್ ವಿಭಾಗಗಳಲ್ಲಿ ಉತ್ತೀರ್ಣರಾದ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.ಬಸವನಾಡು ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಕಷ್ಟು ಜನ ಪ್ರತಿಭಾವಂತ ಯುವಕರಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗತಿಕ ಕಂಪನಿಗಳು…

Read More

ಶಾಸಕ ಬಸನಗೌಡ ಪಾಟೀಲ ಯತ್ನಾಳರಿಂದ ಸಿಎಂ ಸಿದ್ದರಾಯಯ್ಯನವರಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಾನಪದ ಗಾಯಕ, ತಂತಿ ವಾದ್ಯಗಳ ತಯಾರಕರಾದ ಏಕತಾರಿ ರಾಮಯ್ಯನವರ ಅವರಿಗೆ ರಾಜ್ಯ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು, ಮುಖ್ಯಮಂತ್ರಿ ಸಿದ್ದರಾಯಯ್ಯನವರಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.ಬೆಂಗಳೂರಿನ ಗೊಲ್ಲಹಳ್ಳಿ ಹೋಬಳಿಯ ಕೆಂಚನಪಾಳ್ಯ ಗ್ರಾಮದ ನಿವಾಸಿಯಾಗಿರುವ ಜಾನಪದ ಗಾಯಕ ಏಕತಾರಿ ರಾಮಯ್ಯನವರು ತಮ್ಮ ಕಂಚಿನ ಕಂಠ ಹಾಗೂ ವಿಶಿಷ್ಟ ಪ್ರತಿಭೆಯ ಮೂಲಕ ಜಾನಪದ ಲೋಕಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಏಕತಾರಿ (ತಂಬೂರಿ), ಕಿನ್ನರಿ, ಪುಂಗಿ, ಚಿಟಕಿ, ತಮಟೆ ಕಟ್ಟಿಕೊಂಡು ಊರೂರು ಸುತ್ತುವ ಇವರು ಐದು ವಾದ್ಯಗಳನ್ನು ನುಡಿಸುವಂತ ಪ್ರತಿಭಾವಂತ ಕಲಾವಿದರು. ಜಾನಪದ ಗಾಯಕರಷ್ಟೇ ಅಲ್ಲ, ವಾದ್ಯ ತಯಾರಕರೂ ಹೌದು.ಸುಮಾರು 13 ವಾದ್ಯಗಳನ್ನು ತಯಾರು ಮಾಡುತ್ತ ಸದರಿ ವಾದ್ಯಗಳು ಮುಂದಿನ ಪೀಳಿಗೆಗೂ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮುಸ್ಲಿಂ ಸ್ಮಶಾನಭೂಮಿ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಪಟ್ಟಣ ಪಂಚಾಯಿತಿ ಅಡಿ ಅನುದಾನ ಮಂಜೂರು ಮಾಡುವಂತೆ ಆಗ್ರಹಿಸಿ ಅಂಜುಮನ್ ಎ ಇಸ್ಲಾಮ್ ಕಮಿಟಿಯಿಂದ ಮುಖ್ಯಾಧಿಕಾರಿ ಅಪ್ರೋಜ್ ಪಟೇಲ ಹಾಗೂ ಉಪಾಧ್ಯಕ್ಷ ರಮೇಶ ಮಸಬಿನಾಳ ಅವರಿಗೆ ಮನವಿ ಸಲ್ಲಿಸಲಾಯಿತು.ಪಟ್ಟಣದ ಪಂಚಾಯಿತಿ ಕಾರ್ಯಾಲಯಕ್ಕೆ ಬುಧವಾರ ಆಗಮಿಸಿದ ಅಂಜುಮನ್ ಎ ಇಸ್ಲಾಂ ಕಮಿಟಿಯ ಸದಸ್ಯರು ಸ್ಮಶಾನ ಭೂಮಿ ಕುರಿತು ಮುಖ್ಯಾಧಿಕಾರಿ ಗಮನ ಸೆಳೆದರು.ಈ ಸಂದರ್ಭದಲ್ಲಿ ಇಸ್ಲಾಮ್ ಕಮಿಟಿ ಅಧ್ಯಕ್ಷ ಮೈಬೂಬ್‌ಸಾಬ್ ಹುಂಡೇಕಾರ ಮಾತನಾಡಿ, ಪಟ್ಟಣದ ೧೫ ಸಾವಿರಕ್ಕಿಂತ ಹೆಚ್ಚಿನ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿಂತೆ ಒಂದೇ ಸ್ಮಶಾನ ಭೂಮಿಯಿದೆ. ಈ ಸ್ಮಶಾನ ಭೂಮಿಗೆ ೪ ದಿಕ್ಕುಗಳಲ್ಲಿ ರಕ್ಷಣೆಯಿಲ್ಲದೇ ಹಾಳಾಗುತ್ತಿದೆ. ಆದ್ದರಿಂದ ಇದರ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಪಂಚಾಯಿತಿಯಿಂದ ಅನುದಾನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಉಪಾಧ್ಯಕ್ಷ ರಮೇಶ, ಈ ಬಾರಿ ಜರುಗುವ ಸಭೆಯಲ್ಲಿ ಇದರ ಕುರಿತು ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ಕಮಿಟಿ ಉಪಾಧ್ಯಕ್ಷ ಎಂ.ಎಚ್.ಪಾನಪರೋಶ, ಹೈದರಸಾಬ್ ಮುಲ್ಲಾ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಸಾರಸ್ವತ ಲೋಕದ ಮಹಾನ್ ದಿಗ್ಗಜ ಡಾ.ಎಸ್.ಎಲ್. ಭೈರಪ್ಪ ಅವರ ಅಕಾಲಿಕ ನಿಧನಕ್ಕೆ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಸಮಸ್ತ ಮುಖಂಡರು ಹಾಗೂ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.ಈ ಕುರಿತು ಶೋಕ ಸಂದೇಶ ನೀಡಿರುವ ಸಂಸದ ರಮೇಶ ಜಿಗಜಿಣಗಿ ಅವರು, ಡಾ.ಎಸ್.ಎಲ್. ಭೈರಪ್ಪ ಅವರು ದೇಶ ಕಂಡ ಮಹಾನ್ ಸಾಹಿತ್ಯ ದಿಗ್ಗಜ, ಅವರ ಅಗಲಿಕೆಯಿಂದ ಇಡೀ ಸಾರಸ್ವತ ಲೋಕಕ್ಕೆ ಹಾನಿಯಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಕಾದಂಬರಿಗಳನ್ನು ನೀಡಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಡಾ.ಎಸ್.ಎಲ್. ಭೈರಪ್ಪ ಸಾಹಿತ್ಯದ ಜೊತೆಗೆ ಭವ್ಯ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ ಪ್ರತಿಪಾದಿಸಿದ ಮಹಾನ್ ಚೇತನ. ಅವರ ಅನೇಕ ಕಾದಂಬರಿಗಳು ಬೇರೆ ಬೇರೆ ಭಾಷೆಗೆ ಅನುವಾದಗೊಂಡಿವೆ. ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಶೋಕ ಸಂದೇಶ ನೀಡಿದ್ದು, ಡಾ.ಎಸ್.ಎಲ್. ಭೈರಪ್ಪ ಶ್ರೇಷ್ಠ ಸಾಹಿತಿ, ಚಿಂತಕರಲ್ಲಿ ಒಬ್ಬರಾಗಿದ್ದರು, ಒಬ್ಬ ಶ್ರೇಷ್ಠ ಚಿಂತಕ, ವಿದ್ವತಪೂರ್ಣ ಚೇತನವನ್ನು ನಾಡು ಕಳೆದುಕೊಂಡು ಬಡವಾಗಿದೆ,…

Read More

ಖ್ಯಾತ ಕಲಾವಿದ ಹಾಗೂ ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ರಮೇಶ ಚೌಹಾಣ ಸಂತಾಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾಡಿನ ಸಾಹಿತ್ಯ ಲೋಕದ ದಿಗ್ಗಜ, ಪದ್ಮಭೂಷಣ ಡಾ. ಎಸ್.ಎಲ್.ಭೈರಪ್ಪ ಅವರ ಅಗಲಿಕೆಯಿಂದ ಇಡೀ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನಗರದ ಖ್ಯಾತ ಕಲಾವಿದ ಹಾಗೂ ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ರಮೇಶ ಚೌಹಾಣ ಕಂಬನಿ ಮಿಡಿದಿದ್ದಾರೆ.ಬುಧವಾರ ಈ ಕುರಿತು “ಉದಯರಶ್ಮಿ” ಯೊಂದಿಗೆ ಮಾತನಾಡಿದ ಅವರು, ನಾಡಿನ ಶ್ರೇಷ್ಠ ಚಿಂತಕರಾಗಿದ್ದ ಡಾ. ಎಸ್.ಎಲ್.ಭೈರಪ್ಪ ಅವರ ಸಾಹಿತ್ಯ ಕೊಡುಗೆ ಅಜರಾಮರ. ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಕಾದಂಬರಿಗಳನ್ನು ನೀಡಿ, ಅನೇಕ ಉನ್ನತ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದ ಡಾ. ಎಸ್. ಎಲ್. ಭೈರಪ್ಪ ಭವ್ಯ ಭಾರತದ ಸಂಸ್ಕೃತಿಯ ಶ್ರೇಷ್ಠತೆ ಪ್ರತಿಪಾದಿಸಿದ ಮಹಾನ್ ಚೇತನ. ನಾಡು ಒಬ್ಬ ಶ್ರೇಷ್ಠ ಸಾಹಿತಿ, ಸಂಸ್ಕೃತಿಯ ಆರಾಧಕನನ್ನು ಕಳೆದುಕೊಂಡಿದೆ ಎಂದು ಕಲಾವಿದ ರಮೇಶ ಚೌಹಾಣ ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ರೈತ ಈ ದೇಶದ ಬೆನ್ನೆಲುಬು. ರೈತರ ಪ್ರಗತಿಯೇ ದೇಶದ ಪ್ರಗತಿ ಎಂದು ಯಾಳವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಹೇಳಿದರು.ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಬುಧವಾರ ವಿ.ಪ್ರಾ.ಗ್ರಾ.ಕೃ.ಸ ಸಂಘದ ೪೯ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರೈತ ಸ್ವಾವಲಂಬಿಯಾಗಿ, ಬದುಕನ್ನು ಆರ್ಥಿಕವಾಗಿ ಉಜ್ವಲಗೊಳಿಸಿಕೊಳ್ಳಬೇಕಾದರೆ ಸಹಕಾರಿ ಸಂಘಗಳಿAದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಹಕಾರ ಸಂಘಗಳ ಬೆಳವಣಿಗೆಗೆ ರೈತರು ಸಹಕಾರ ನೀಡಬೇಕು ಜೊತೆಗೆ ಸಮಯಕ್ಕನುಸಾರ ಸಾಲ ಮರುಪಾವತಿಸಬೇಕು. ಇದರಿಂದ ಉಳಿದ ರೈತರು ಸಾಲಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.ಕಡಕೋಳ ಹಿರೇಮಠದ ಮಹಾಲಿಂಗಸ್ವಾಮೀಜಿ ಸಾನಿಧ್ಯ ವಹಿಸಿ, ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆಯ್.ಲಗಳಿ ವರದಿ ವಾಚಿಸಿ, ಸಂಘ ೨೦೨೪-೨೫ನೇ ಸಾಲಿನಲ್ಲಿ ೬.೮೪ ಲಕ್ಷ ರೂ.ಗಳ ಲಾಭಗಳಿಸಿದೆ ಎಂದರು. ಹುಸೇನಸಾಬ್ ಕರಡಿ ರೈತಗೀತೆ ಮೂಲಕ ಸ್ವಾಗತಿಸಿ, ವಂದಿಸಿದರು.ವ್ಹಿಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಎಲ್.ಎಂ.ನದಾಫ್, ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೇಂದ್ರ ಬಡಿಗೇರ, ಸಂಘದ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ರೈತ ಈ ದೇಶದ ಬೆನ್ನೆಲುಬು. ರೈತರ ಪ್ರಗತಿಯೇ ದೇಶದ ಪ್ರಗತಿ ಎಂದು ಯಾಳವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಹೇಳಿದರು.ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಬುಧವಾರ ವಿ.ಪ್ರಾ.ಗ್ರಾ.ಕೃ.ಸ ಸಂಘದ ೪೯ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರೈತ ಸ್ವಾವಲಂಬಿಯಾಗಿ, ಬದುಕನ್ನು ಆರ್ಥಿಕವಾಗಿ ಉಜ್ವಲಗೊಳಿಸಿಕೊಳ್ಳಬೇಕಾದರೆ ಸಹಕಾರಿ ಸಂಘಗಳಿAದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಹಕಾರ ಸಂಘಗಳ ಬೆಳವಣಿಗೆಗೆ ರೈತರು ಸಹಕಾರ ನೀಡಬೇಕು ಜೊತೆಗೆ ಸಮಯಕ್ಕನುಸಾರ ಸಾಲ ಮರುಪಾವತಿಸಬೇಕು. ಇದರಿಂದ ಉಳಿದ ರೈತರು ಸಾಲಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.ಕಡಕೋಳ ಹಿರೇಮಠದ ಮಹಾಲಿಂಗಸ್ವಾಮೀಜಿ ಸಾನಿಧ್ಯ ವಹಿಸಿ, ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆಯ್.ಲಗಳಿ ವರದಿ ವಾಚಿಸಿ, ಸಂಘ ೨೦೨೪-೨೫ನೇ ಸಾಲಿನಲ್ಲಿ ೬.೮೪ ಲಕ್ಷ ರೂ.ಗಳ ಲಾಭಗಳಿಸಿದೆ ಎಂದರು. ಹುಸೇನಸಾಬ್ ಕರಡಿ ರೈತಗೀತೆ ಮೂಲಕ ಸ್ವಾಗತಿಸಿ, ವಂದಿಸಿದರು.ವ್ಹಿಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಎಲ್.ಎಂ.ನದಾಫ್, ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೇಂದ್ರ ಬಡಿಗೇರ, ಸಂಘದ…

Read More