ರಚನೆ
– ವಿದ್ಯಾಮಣಿ ನರೇಶ್ ರಾವ್
ಮಂಗಳೂರು
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ಅಂತರಂಗದ ಆಸೆಯು ನಾಚಿ ಚಿಮ್ಮುತ್ತಿದೆ
ಅಡವಿಯೊಳಗೆ ನೀ ಸಿಗಬಹುದೆಂಬ ಕಾತುರ
ಅನುಮಾನವಿದೆ ಇದು ನಿನ್ನದೆ ಬಿಸಿ ಉಸಿರೆ
ಅಂಜುತ್ತಿರುವ ಅಭಿಲಾಷೆಗೆ ಅನುಮತಿ ನೀಡಲೆ?
ಬಳ್ಳಿಯಂತೆ ಸುತ್ತಿದೆ ನಿನ್ನ ತುಂಬಿದ ತೋಳುಗಳು
ಮುಳ್ಳಿನಂತೆ ತೊಳಲಾಡುತ್ತಿದೆ ಅಸೆಯ ಕಂಗಳು
ಮರದ ತೊಗಟೆಯೊಳಗು ನಿನ್ನದೆ ಪಿಸುಮಾತು
ಮರದಷ್ಟೆ ವರಟು ನಿನ್ನ ಮಾತಿನ ಬಿರುಸು!
ಆಸೆಯ ಕೊಳದೊಳಗೆ ದಿನವು ಮೀಯುವೆ
ನಿನ್ನದೆ ಗುಂಗಿನಲಿ ಹಂಸವನ್ನು ಕೆಣಕುವೆ
ಮನದೊಳಗಿನ ಆಸೆ ಮುಚ್ಚಿಡಲಾರೆ
ರವಿಯ ಜೊತೆಗೂಡಿ ನಿನ್ನ ಎದೆಗೆ ಜಾರುವೆ..
ಕಪ್ಪನೆಯ ಇರುಳಲ್ಲಿ ಬೆಪ್ಪಗೆ ಕುಳಿತಿರುವೆ
ಕಪ್ಪೆಯ ಶಬ್ದಕೆ ಕಾವೆರುತ್ತಿದೆ ಕಾದ ಮನಸುಗಳು ಅನುಮಾನವಿಲ್ಲದ ಅನುರಾಗಕೆ ಅಭಿಮತವಿದ್ದರೆ
ಅಂತರಂಗದೊಳಗು ನಾನು ನಿನ್ನ ಸೇರಬಹುದು!
