ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ದೇಹವನ್ನು ನಾಶ ಮಾಡುವ ಆಹಾರ, ಮನಸ್ಸನ್ನು ಕೆಡಿಸುವ ಆಲೋಚನೆ, ಮನಸ್ಥಿತಿಯನ್ನೇ ನಾಶ ಮಾಡುವ ಜನರಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದು ವಿಜಯಪುರದ ಬಾಲಕರ ಪದವಿಪೂರ್ವ ಕಾಲೇಜಿನ ಪ್ರೊ; ಎಸ್.ಜಿ. ಕುಂಬಾರ ಹೇಳಿದರು.
ಕೂಡಗಿ ಸರಕಾರಿ ಕಾಲೇಜಿನಲ್ಲಿ ಏರ್ಪಡಿಸಿದ 2025- 26 ನೇ ಸಾಲಿನ ಶೈಕ್ಷಣಿಕ ವರ್ಷದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ, ಭಾರತ ಸೇವಾದಳ ರೋವ್ಹರ್ ರೆಂಜರ್ ಘಟಕ, ಮತದಾರರ ಸಾಕ್ಷರತಾ ಸಂಘ, ಕಾಲೇಜು ಸಂಸತ್ತು ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಾಸ್ಥಾವಿಕ ಮಾತುಗಳನ್ನಾಡಿದ ಪ್ರೊ; ಬಸವರಾಜ ಜಾಲವಾದಿ ಅವಕಾಶಗಳು ಮುಷ್ಠಿಯಲ್ಲಿಯ ನೀರಿದ್ದಂತೆ ಅದು ಸದಾ ಕಾಲ ಇರುವುದಿಲ್ಲ ಇದ್ದಾಗ ವಿದ್ಯಾರ್ಥಿಗಳು ಅದನ್ನು ಪಡೆದುಕೊಳ್ಳುವತ್ತ ಗಮನ ಹರಿಸಬೇಕು ವ್ಯಕ್ತಿತ್ವ ಬೆಳೆಸಿಕೊಳ್ಳಲು ಪಠ್ಯದಂತೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಲು ಇಂಥ ಕಾರ್ಯಕ್ರಮಗಳು ಅವಶ್ಯಕ ಎಂದು ನುಡಿದರು.
ಅಧ್ಯಕ್ಷೀಯ ನುಡಿಗಳನ್ನು ಪ್ರಾಚಾರ್ಯ ಕೆ.ಜಿ. ಲಮಾಣಿ, ಪ್ರೊ;ಶಾಂತಾಬಾಯಿ ಕಾಮನಕೇರಿ, ಪ್ರೊ;ವ್ಹಿ.ಜಿ. ಕಿವುಡಜಾಡರ್ ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾಂತಾಬಾಯಿ ಕಾಮನಕೇರಿ ಇವರನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಸೇನಬಿ ಮಾಶ್ಯಾಳ, ಕೆ.ಪಿ.ಎಸ್ ಕಾಲೇಜಿನ ಉಪಾಧ್ಯಕ್ಷರಾದ ಹನುಮಂತ ಮಸೂತಿ, ಸದಸ್ಯರಾದ ದಾನಪ್ಪ ಇಬ್ರಾಹಿಂಪುರ್, ಅನ್ನಪೂರ್ಣ ಮಠಪತಿ, ಶಫೀಕ್ ಕೊಲ್ಹಾರ, ಪ್ರೊ ಎಸ್. ಬಿ. ದೇಸಾಯಿ. ಪ್ರೊ ವ್ಹಿ. ಜಿ. ಕಿವುಡಜಾಡರ್ ಹಾಜರಿದ್ದರು.
ಲಕ್ಷ್ಮಿ ಹಂಗರಗಿ ಹಾಗೂ ರೇಖಾ ಜಲದಿ ಕಾರ್ಯಕ್ರಮ ನಿರ್ವಹಿಸಿದರು. ರಕ್ಷಿತಾ ಇಬ್ರಾಹಿಂಪುರ್, ಸ್ವಾಗತಿಸಿದರು. ಭಾಗ್ಯಶ್ರೀ ಮೋಡೆ, ಲಕ್ಷ್ಮಿ ಹಳಿಜೋಳ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಾವಿತ್ರಿ ಗಣಾಚಾರಿ ವಂದಿಸಿದರು.