ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಎರಡೂ ಪಕ್ಷಗಳಿಗೆ ಶಾಶ್ವತ ಪರಿಹಾರ ದೊರಕುತ್ತದೆ. ಹಾಗಾಗಿ ಪಕ್ಷಗಾರರು ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಮುಂದೆ ಬರಬೇಕು ಎಂದು ೫ನೇ ಹೆಚ್ಚುವರಿ ಮತ್ತು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅವರು ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ಕಾನೂನು ಸೇವಾ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿ ಅವರು ಮಾತನಾಡಿದರು.
ವರ್ಷದಲ್ಲಿ ಒಟ್ಟು ನಾಲ್ಕು ಲೋಕ್ ಅದಾಲತ್‌ಗಳನ್ನು ನಡೆಸಲಾಗುತ್ತದೆ. ಇಲ್ಲಿ ಪಕ್ಷಗಾರರ ಸಮಕ್ಷಮ ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾದ ಎಲ್ಲ ಮಾರ್ಗಗಳನ್ನು ತಿಳಿಸಿ ಎರಡೂ ಪಕ್ಷಗಳ ಒಪ್ಪಿಗೆಯಂತೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಎರಡೂ ಪಕ್ಷಗಳು ಗೆದ್ದಂತಾಗುತ್ತದೆ. ಹಾಗಾಗಿ ಪಕ್ಷಗಾರರು ತಮ್ಮ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಂಡು ನೆಮ್ಮದಿಯಾಗಿರಬಹುದು ಎಂದರು.
ಸದರಿ ಲೋಕ ಅದಾಲತ್ ನಲ್ಲಿ ಮೂರು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು ೭೫೫೭ ಬಾಕಿ ಇರುವ ಪ್ರಕರಣಗಳಲ್ಲಿ ೨೧೩೩ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ ಒಟ್ಟು ೧೩೬೬ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅವುಗಳಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣ ಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್.ಎ.ಸಿ ಇಪಿ ಪ್ರಕರಣಗಳು, ಎಮ್.ವಿ.ಸಿ,.ಇ.ಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು. ಮತ್ತು ಪೂರ್ವದಾವೆ ಪ್ರಕರಣಗಳಲ್ಲಿ, ಟ್ರಾಫಿಕ್ ಚಲನ್ ಪ್ರಕರಣಗಳು, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಹಾಗೂ ಬ್ಯಾಂಕಿನ ಪ್ರಕರಣಗಳು ಹೀಗೆ ಒಟ್ಟು ೨೬೪೩ ಪ್ರಕರಣಗಳಲ್ಲಿ ೧೩೬೦ ಪ್ರಕರಣಗಳು ರಾಜಿ ಸಂಧಾನದ ಮೂಲಕ ೫ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್, ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ಶ್ರೀ ರಾಮಮೂರ್ತಿ ಎನ್. ಇವರುಗಳು ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.
ನ್ಯಾಯಾಂಗ ಸಂಧಾನಕಾರರಾಗಿ ಬಿ.ಪಿ.ಮ್ಯಾಗೇರಿ, ಎನ್.ಬಿ.ಮುದ್ನಾಳ ಹಾಗೂ ಎಚ್.ಜಿ.ನಾಗೋಡ ವಕೀಲರುಗಳು ಭಾಗಿಯಾಗಿದ್ದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ, ಮತ್ತು ತಾಲೂಕಾ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ನ್ಯಾಯಾಲಯದ ಸಿಬ್ಬಂದಿಗಳಾದ ವಾಯ್.ಎಮ್.ತಳವಾರ, ಜ್ಯೋತಿ ಹಕಾರಿ, ಸುರೇಶ ಬಳಗಾನೂರ, ಎಸ್.ಜಿ.ವನಕುದರಿ, ಎಸ್.ಎಮ್.ಪೂಜಾರಿ, ವಿ.ಸಿ.ಶಿವಣಗಿ, ರಮೇಶ ಕಮ್ಮಾರ, ಪುನೀತ ದೊಡ್ಡಮನಿ, ಜ್ಯೋತಿ ಹೆಬ್ಬಾಳ, ಬಸವರಾಜ ಬೂದಿಹಾಳ, ನರ್ಮದಾ ಮರೋಳ, ಲತಾ ಗುರಿಕಾರ, ಗೀತಾ ರಾಂಪುರ್, ರೇಣುಕಾ ಜಾನಮಟ್ಟಿ, ಅಮೀದಾ ನದಾಫ್, ಮೀನಾಕ್ಷಿ ದೊಡಮನಿ, ಮಹಾಂತೇಶ ಹಚರೆಡ್ಡಿ, ಮಂಜುಳಾ ಹೊಸಮನಿ, ನಾಗೇಶ ಮದಿಹಳ್ಳಿ, ಮಧು ಧರ್ಮಗಿರಿ, ಮಂಜುಳಾ ಗಾಡದ, ನಾಗಮ್ಮ ಹೂಗಾರ, ಸುಷ್ಮಾ ಬಾನಿ, ಇಸಾಕ್ ಒಂಟಿ ಪೊಲೀಸ್ ಸಿಬ್ಬಂದಿಗಳಾದ ಅರ್ಜುನ್ ಚವಾಣ್, ಚಪ್ಪರಬಂದ ಹಿರಿಯ ನ್ಯಾಯವಾದಿಗಳಾದ ವಿ.ಎಮ್.ನಾಗಠಾಣ, ಜೆ.ಎ.ಚಿನಿವಾರ, ಎಂ.ಎಸ್.ನಾವದಗಿ, ಎಸ್.ಆರ್.ಸಜ್ಜನ, ಎನ್.ಜಿ.ಕುಲಕರ್ಣಿ, ಸಿ.ಎಂ.ಅಸ್ಕಿ, ಎನ್.ಆರ್.ಮೊಕಾಶಿ, ಎಮ್.ಆರ್.ಪಾಟೀಲ, ಸಂಗಮೆಶ ಹೂಗಾರ ನ್ಯಾಯವಾದಿಗಳಾದ ಚೇತನ್ ಶಿವಶಿಂಪಿ, ಎಸ್.ಆರ್.ಜೋಗಿ, ಬಿ.ಎ.ಚಿನಿವಾರ, ಬಿ.ಎಮ್.ಮುಂದಿನಮನಿ, ಆಯ್.ಎಸ್.ಹಗಟಗಿ, ಎಸ್.ಎಂ.ಕಿಣಗಿ, ಎಲ್.ಎಸ್.ಮೇಟಿ, ಎಂ.ಬಿ.ಬಿರಾದಾರ, ಸಾಬಣ್ಣ ಚಳ್ಳಗಿ, ಎಚ್.ವಾಯ್.ಪಾಟೀಲ, ಎಚ್.ಟಿ.ಪೂಜಾರಿ, ನಾಗನಗೌಡ ಪಾಟೀಲ, ಎಸ್.ಆರ್.ಅಮರಣ್ಣವರ, ಸಿದ್ದನಗೌಡ ಬಿರಾದಾರ, ಹಸೀನಾ ಅನಂತಪೂರ, ಶ್ರೀದೇವಿ ರಾಜೂರ, ವಿ.ಸಿ.ಉರಾನ್, ಮಾರುತಿ ಭೋವಿ, ವಿಜು ಹಿರೇಮಠ, ಸಿದ್ದನಗೌಡ ಬಿರಾದಾರ, ಎಲ್.ಆರ್.ನಾಲತವಾಡ, ಬಿ.ಎಸ್.ಹತ್ತಿ, ಬಿ.ವೈ.ಮೇಟಿ, ಎನ್.ಬಿ.ಮುದ್ನಾಳ, ಪಿ.ಬಿ.ಗುಡಗುಂಟಿ, ಪಿ.ಬಿ.ಜಾಧವ, ಎಸ್.ಸಿ.ಹಿರೇಮಠ, ಎಸ್.ಇ.ಹಿರೇಮಠ ಸೇರಿದಂತೆ ನ್ಯಾಯವಾದಿಗಳು ನ್ಯಾಯಾಲಯದ ಎಲ್ಲ ಸಿಬ್ಬಂದಿಗಳು ಭಾಗಿಯಾಗಿದ್ದರು.
“ನಮ್ಮ ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ರಾಜೀ ಸಂಧಾನದ ಮೂಲಕ ಬಗೆಹರೆಸಿಕೊಳ್ಳುವದು ಬಹಳ ಉತ್ತಮ. ಇದರಿಂದ ಸಮಯ ಮತ್ತು ಹಣ ಎರಡೂ ಉಳಿದು ನೆಮ್ಮದಿ ಪಡೆಯಬಹುದು. ಲೋಕ್ ಅದಾಲತ್ ಹಮ್ಮಿಕೊಂಡಿದ್ದಕ್ಕಾಗಿ ಸರ್ಕಾರಕ್ಕೆ ಮತ್ತು ನ್ಯಾಯಾಂಗ ಇಲಾಖೆಗೆ ಧನ್ಯವಾದಗಳನ್ನು ಅರ್ಪಿಸುವೆ.”
– ಸಿದ್ರಾಮಪ್ಪ ನಾರಗಲ್
ಪಕ್ಷಗಾರ
“ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆದು ಅಲೆದು ಸಾಕಾಗಿ ಹೋಗಿತ್ತು. ಇಂದು ಲೋಕ್ ಅದಾಲತ್ ನಲ್ಲಿ ನಮ್ಮ ಪ್ರಕರಣ ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿದೆ. ತುಂಬ ಸಂತೋಷವಾಗುತ್ತಿದೆ. ಪಕ್ಷಗಾರರಿಗೆ ಲೋಕ್ ಅದಾಲತ್ ಸಾಕಷ್ಟು ಸಹಕಾರಿಯಾಗಿದೆ.”
– ರಾಮಣ್ಣ ಹಂದಿಗನೂರ
ಪಕ್ಷಗಾರ