Author: editor.udayarashmi@gmail.com

೧೪ ದಿನ ಚಾಲೂ, ೧೦ ದಿನ ಬಂದ್ | ಕೆಬಿಜೆಎನ್ನೆಲ್ ಅಧೀಕ್ಷಕ ಅಭಿಯಂತರ ಶಿವಶಂಕರ ದೇವಾಪುರ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿಗಾಗಿ ರಾಮಪುರ (ಪ.ಆ) ವೃತ್ತದ ವ್ಯಾಪ್ತಿಯ ಕಾಲುವೆ ಹಾಗೂ ಗುತ್ತಿ ಬಸವಣ್ಣ ಕಾಲುವೆಗಳಿಗೆ ೧೪ ದಿನ ಚಾಲೂ ಹಾಗೂ ೧೦ ದಿನ ಬಂದ್ ನಂತೆ ವಾರಬಂದಿ ಪದ್ಧತಿಯನುಸಾರ ೧೧೬ ದಿನಗಳವರೆಗೆ ಜು. ೨೮ರಿಂದ ನೀರು ಹರಿಸಲಾಗುತ್ತಿದೆ ಎಂದು ಕೃಷ್ಣಾ ಭಾಗ್ಯ ಜಲನಿಗಮದ ಅಧೀಕ್ಷಕ ಅಭಿಯಂತರರಾದ ಶಿವಶಂಕರ ದೇವಾಪುರ ತಿಳಿಸಿದ್ದಾರೆ.ಮುಂಗಾರು ಹಂಗಾಮಿಗಾಗಿ ನೀರು ಪೋಲಾಗದಂತೆ, ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯದಡಿ ಬರುವ ಕಾಲುವೆಗಳಿಗೆ ನೀರು ಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಲಸಂಪನ್ಮೂಲ ಸಚಿವರು ಸೂಚಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಎರಡು ಜಲಾಶಯಗಳಲ್ಲಿ ನೀರಾವರಿಗಾಗಿ ಕಾಯ್ದಿರಿಸಿರುವ ನೀರಿನ ಪ್ರಮಾಣದಲ್ಲಿ ಮುಂಗಾರು ಹಂಗಾಮಿಗಾಗಿ ನೀರು ಹರಿಸುವ ಅವಧಿಯನ್ನು, ಆಲಮಟ್ಟಿ ಜಲಾಶಯದಲ್ಲಿ ಒಳಹರಿವು ಹೊರಹರಿವು ಪ್ರಮಾಣಕ್ಕೆ ಸಮನಾಗಿರುವವರೆಗೆ ಸತತವಾಗಿ ಕಾಲುವೆ ಜಾಲಕ್ಕೆ ನೀರು ಹರಿಸಲು ಹಾಗೂ ಒಂದು ವೇಳೆ ಆಲಮಟ್ಟಿಗೆ…

Read More

ಕೆರೆ ಪುನಶ್ಚೇತನ ಕಾಮಗಾರಿ ಭೇಟಿ ವೇಳೆ ವಿಜಯಪುರ ಸಿಇಒ ರಿಷಿ ಆನಂದ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಬಿ-ಜಿ ರಾಮ್-ಜಿ ಯೋಜನೆಯಡಿ ಗ್ರಾಮೀಣ ಕಾರ್ಮಿಕರಿಗೆ ನಿರಂತರ ಉದ್ಯೋಗ ಕಲ್ಪಿಸುವುದರ ಜೊತೆಗೆ ಕಾಮಗಾರಿ ಸ್ಥಳಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ತಾಲೂಕಿನ ನಾಗಠಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ-ಜಿ ರಾಮ್-ಜಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕೆರೆ ಪುನಶ್ಚೇತನ ಕಾಮಗಾರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಾಮಗಾರಿಯ ಪ್ರಗತಿ, ಗುಣಮಟ್ಟ, ಕಾರ್ಮಿಕರ ಹಾಜರಾತಿ ಹಾಗೂ ಮಾನವ ದಿನಗಳ ಸೃಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.ಬಳಿಕ ಮಾತನಾಡಿದ ಅವರು, ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಸೌಲಭ್ಯ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು. ಕಾರ್ಮಿಕರ ಕೂಲಿ ಪಾವತಿಯಲ್ಲಿ ಯಾವುದೇ ತಾಂತ್ರಿಕ ತೊಂದರೆ ಉಂಟಾಗದಂತೆ ಕ್ರಮವಹಿಸಬೇಕು. ಎಲ್ಲ ಕಾರ್ಮಿಕರ ಫೇಸ್ ಅಥೆಂಟಿಕೇಶನ್ ಕಡ್ಡಾಯವಾಗಿ ಪೂರ್ಣಗೊಳಿಸಿ, ನಿರಂತರ ಉದ್ಯೋಗ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ೨೦೨೬-೨೭ನೆಯ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ (ಎಂಎ), ವ್ಯಾಲ್ಯು ಆಡೆಡ್ ಡಿಪ್ಲೋಮಾ ಕೋರ್ಸ್ಗಳ ಪ್ರಥಮ ವರ್ಷದ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಯುಯುಸಿಎಂಎಸ್ ತಂತ್ರ‍್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಕೆ ಅವಧಿಯನ್ನು ಆಗಸ್ಟ್ ೧೭ರವರೆಗೆ ವಿಸ್ತರಿಸಲಾಗಿದೆಸ್ನಾತಕ ಪದವಿಯ ೬ನೆಯ ಸೆಮಿಸ್ಟರ್ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುವ ಅಗತ್ಯವಿಲ್ಲ. ಐದು ಸೆಮಿಸ್ಟರ್‌ಗಳ ಅಂಕಪಟ್ಟಿಯೊಂದಿಗೆ ಈಗಲೇ ಅರ್ಜಿ ಸಲ್ಲಿಸಿ. ಪರೀಕ್ಷಾ ಫಲಿತಾಂಶ ಬಂದ ನಂತರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಆಯಾ ವಿಭಾಗಗಳಿಗೆ ೬ನೆಯ ಸೆಮಿಸ್ಟರ್ ಅಂಕಪಟ್ಟಿ ಸಲ್ಲಿಸಬಹುದಾಗಿದೆ.ಅಭ್ಯರ್ಥಿಗಳು ಆಗಸ್ಟ್ ೧ರಿಂದ ಆಗಸ್ಟ್ ೧೭ರವರೆಗೆ ಯುಯುಸಿಎಂಎಸ್ hಣಣಠಿs://uuಛಿms.ಞಚಿಡಿಟಿಚಿಣಚಿಞಚಿ.gov.iಟಿ/ಐogiಟಿ/Iಟಿಜex ತಂತ್ರಾAಶದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯ ಪ್ರತಿಯನ್ನು ಪತ್ರಿಕೋದ್ಯಮದ ವಿಭಾಗದ ಕಚೇರಿ ಅಥವಾ ವಿಶ್ವವಿದ್ಯಾನಿಲಯದ ಕಚೇರಿಗೆ ಆಗಸ್ಟ್ ೧೭ರೊಳಗೆ ಸಲ್ಲಿಸಬೇಕು. ಆಪ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅರ್ಹ ಅಭ್ಯರ್ಥಿಗಳಿಗೆ ಆಗಸ್ಟ್ ಆಗಸ್ಟ್…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಿಂದಗಿ ತಾಲೂಕಿನ ಯುವ ಘಟಕದ ನೂತನ ಅಧ್ಯಕ್ಷರಾಗಿ ದೇವಣಗಾಂವ ಗ್ರಾಮದ ಯುವಕ ಪ್ರಶಾಂತ ಶಿವಯೋಗೆಪ್ಪ ಭೂಸನೂರ ರವರನ್ನು ಆಯ್ಕೆ ಮಾಡಲಾಗಿದೆ .ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ ಗುರೂಜಿಯವರು ಮತ್ತು ಚೂನ್ನಪ್ಪ ಪೂಜಾರಿ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನೀತಿನ ಮ್ಯಾಕೇರಿ ಮತ್ತು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ರವರ ನೇತೃತ್ವದಲ್ಲಿ ಸಿಂದಗಿ ತಾಲೂಕ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ್, ಕವಿರಾಜ ಲಾಳಸಂಗಿ, ಪ್ರವೀಣ ಭೂಸನೂರ, ಸಂತೋಷ ಪೂಜಾರಿ, ರಘು ಇತರೆ ರೈತ ಮುಖಂಡರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಪುರಸಭೆಯಿಂದ ಬೀದಿಬದಿ ವ್ಯಾಪಾರಸ್ಥರ ಲೈಸನ್ಸ್ದೊಂದಿಗೆ ತಾಳಿಕೋಟೆ ನಗರದ ಕೆಲವು ಭಾಗಗಳಲ್ಲಿ ತಮ್ಮ ಸಣ್ಣ ಪುಟ್ಟ ವ್ಯಾಪಾರಗಳೊಂದಿಗೆ ಜೀವನ ಸಾಗಿಸುತ್ತಾ ಸಾಗಿದ್ದಾರೆ. ಅಂತಹ ವ್ಯಾಪಾರಸ್ಥರನ್ನು ಯಾವುದೇ ಕಾರಣಕ್ಕೂ ತೆರವು ಗೊಳಿಸಕೂಡದೆಂದು ಕರ್ನಾಟಕ ಪ್ರದೇಶ ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.ಬೀದಿಬದಿ ವ್ಯಾಪಾರಿಗಳ ರಕ್ಷಣೆಗಾಗಿ ರೂಪಿಸಲಾದ ಕಾಯ್ದೆಯಡಿ ಸುಮಾರು ೨೦೦ ಕ್ಕೂ ಅಧಿಕ ಬೀದಿಬದಿ ವ್ಯಾಪಾರಸ್ಥರು ಪುರಸಭೆಯಿಂದ ವ್ಯಾಪಾರಿ ಪರವಾನಿಗೆ ಪಡೆದುಕೊಂಡಿದ್ದು ಪ್ರತಿದಿನ ಭೂ ಬಾಡಿಗೆಯನ್ನು ಪುರಸಭೆಗೆ ಭರಣಾ ಮಾಡುತ್ತಿದ್ದಾರೆ, ಕಾರಣ ತಾವುಗಳು ಯಾವುದೇ ರೀತಿಯ ಕಾನೂನು ಕಾಯ್ದೆಗಳನ್ನು ಅನುಸರಿಸದೇ ತಾವುಗಳು ತೆರವುಗೊಳಿಸಲು ಮುಂದಾಗಿದ್ದು, ಈ ತೆರವು ಕಾರ್ಯಚರಣೆಯ ಮುಂಚೆ ಬೀದಿಬದಿ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಬೇರೆಡೆ ವ್ಯಾಪಾರ ಮಾಡುವಂತೆ ಸುಸಜ್ಜಿತ ಜಾಗವನ್ನು ಗುರುತು ಮಾಡಿ ಅಲ್ಲಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಒದು ವೇಳೆ ಯಾವುದೇ ಕಾರಣ ನೀಡದೇ ಬಿದಿ ಬದಿ ವ್ಯಾಪಾರಿಗಳ ಮೇಲೆ ನಿರ್ಲಕ್ಷ ತೋರಿದಲ್ಲಿ ಎಲ್ಲ…

Read More

ಬಸರಕೋಡ ಬಸವೇಶ್ವರ ದೇವಸ್ಥಾನ ಕಳ್ಳತನ ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು | ಗುಜರಾತ್, ರಾಜಸ್ಥಾನದ ಮೂವರು ಆರೋಪಿಗಳ ಬಂಧನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದಿದ್ದ ಬಹುಚರ್ಚಿತ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣವನ್ನು ವಿಜಯಪುರ ಜಿಲ್ಲಾ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ₹52.70 ಲಕ್ಷ ಮೌಲ್ಯದ ಕಳುವಾದ ಮೂರ್ತಿ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷಣ ನಿಂಬರಗಿ ತಿಳಿಸಿದ್ದಾರೆ.ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 5ರ ರಾತ್ರಿ ದೇವಸ್ಥಾನದ ಎರಡು ಕಬ್ಬಿಣದ ಬಾಗಿಲುಗಳ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ಗರ್ಭಗುಡಿಯಲ್ಲಿದ್ದ 32 ಕೆ.ಜಿ. ತೂಕದ, ಅಂದಾಜು ₹51.20 ಲಕ್ಷ ಮೌಲ್ಯದ ಶ್ರೀ ಪವಾಡ ಬಸವೇಶ್ವರರ ಬೆಳ್ಳಿ ಮೂರ್ತಿಯನ್ನು ಕಳವು ಮಾಡಿದ್ದರು. ಈ ಕುರಿತು ದೇವಸ್ಥಾನ ಸಮಿತಿ ಅಧ್ಯಕ್ಷ ಕರನಂದೆಪ್ಪ ಯಮನಪ್ಪ ಬಿರಾದಾರ…

Read More

ಲೇಖನ- ಡಾ.ರಾಜಶೇಖರ ನಾಗೂರಸಂಚಾಲಕರು’ನಮ್ಮ ಕಥಾ ಅರಮನೆ’ ಉದಯರಶ್ಮಿ ದಿನಪತ್ರಿಕೆ ಮನಸ್ಸು ಆಯಾಸಗೊಂಡಾಗ ದೇಹ ವಿಶ್ರಾಂತಿ ಕೇಳುತ್ತದೆ. ಆತ್ಮ ಆಯಾಸಗೊಂಡಾಗ ಸಾಹಿತ್ಯವನ್ನು ಹುಡುಕುತ್ತದೆ.ಇಂದಿನ ಜಗತ್ತು ವೇಗವಾಗಿ ಓಡುತ್ತಿದೆ. ಸಮಯದ ಹಿಂದೆ ಓಡುವ ಮನುಷ್ಯನು ತನ್ನನ್ನೇ ಮರೆತುಬಿಡುವ ಹಂತಕ್ಕೆ ಬಂದಿದ್ದಾನೆ. ಉದ್ಯೋಗದ ಒತ್ತಡ, ಸ್ಪರ್ಧೆಯ ಒತ್ತಡ, ಸಂಬಂಧಗಳ ಸಂಕೀರ್ಣತೆ, ಆರ್ಥಿಕ ಅನಿಶ್ಚಿತತೆ, ಸಾಮಾಜಿಕ ಜಾಲತಾಣಗಳ ನಿರಂತರ ಹೋಲಿಕೆ. ಇವೆಲ್ಲವೂ ಮನಸ್ಸಿನ ಮೇಲೆ ಭಾರವಾಗುತ್ತಿವೆ. ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಸಹಜವಾಗಿ ಮೂಡುತ್ತದೆ. ಒತ್ತಡದ ಬದುಕಿಗೆ ಸಾಹಿತ್ಯ ಪರಿಹಾರ ಆಗಬಲ್ಲುದೇ?ಸಾಹಿತ್ಯವು ಔಷಧಿಯಲ್ಲ ಆದರೆ ಅದು ಮನಸ್ಸಿಗೆ ಮದ್ದು. ಅದು ಸಮಸ್ಯೆಗಳನ್ನು ಮಾಯಗೊಳಿಸುವುದಿಲ್ಲ ಆದರೆ ಸಮಸ್ಯೆಗಳನ್ನು ನೋಡುವ ನಮ್ಮ ದೃಷ್ಟಿಯನ್ನು ಬದಲಾಯಿಸಬಲ್ಲದು. ನೋವನ್ನು ಅಳಿಸಿಹಾಕುವುದಿಲ್ಲ ಆದರೆ ಅದನ್ನು ಹೊತ್ತು ನಡೆಯುವ ಶಕ್ತಿಯನ್ನು ನೀಡಬಲ್ಲದು.ಒಬ್ಬ ವ್ಯಕ್ತಿ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದಾನೆ ಎಂದುಕೊಳ್ಳಿ. ಅವನಿಗೆ ಉಪದೇಶದ ಮಾತುಗಳು ಖಾಲಿಯಾಗಿ ಕೇಳಿಸಬಹುದು. ಆದರೆ ಒಂದು ಕವಿತೆ ಅವನ ಕಣ್ಣೀರಿಗೆ ಪದಗಳನ್ನು ಕೊಡಬಹುದು. ಒಂದು ಕಥೆ ನೀನು ಒಬ್ಬನೇ ಅಲ್ಲ ಎಂಬ ಭರವಸೆಯನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಮಿಥುನ ಸುಸಲಾದಿ ಹಾಲಹಳ್ಳಿ ಗ್ರಾಮದ ಯುವಕ. ಗಂಗಾಬಾಯಿ ಮತ್ತು ರಮೇಶ ಸುಸಲಾದಿ ದಂಪತಿಯ ಪುತ್ರ. ಓದಿದ್ದು ಕನ್ನಡ ಮಾಧ್ಯಮದಲ್ಲಿ. ಇತ್ತೀಚೆಗೆ ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಎಂ. ಎ. ಇಂಗ್ಲಿಷ್ ವಿಭಾಗಕ್ಕೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾನೆ.ತಾಯಿಯ ಜೊತೆ ಹೊಲದಲ್ಲಿ ಕೆಲಸ ಮಾಡುತ್ತ ಉಮರಾಣಿಯಲ್ಲಿರುವ ಚಿಂಚೋಳಿ ಕುಟುಂಬದ ಅಜ್ಜ, ಅಜ್ಜಿ ಹಾಗೂ ಮಾವಂದಿರಾದ ಸುಪರ್ದಿ ಮತ್ತು ಗರಡಿಯಲ್ಲಿ ಬೆಳೆದಿದ್ದಾನೆ. ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಭೀಮಾ ತೀರದ ಉಮರಾಣಿ ಸರಕಾರಿ ಶಾಲೆಯಲ್ಲಿಯೇ ಪೂರ್ಣಗೊಳಿಸಿದ ಈ ಪ್ರತಿಭಾವಂತ ವಿದ್ಯಾರ್ಥಿ ಪಿಯುಸಿ ಮತ್ತು ಬಿ. ಎ ಯನ್ನು ಚಡಚಣದ ಶ್ರೀ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪೂರ್ಣಗೊಳಿಸಿದ್ದಾನೆ.ದಿನಕ್ಕೆ ಸುಮಾರು 8 ರಿಂದ 10 ಗಂಟೆಗಳ ಕಾಲ ಅಧ್ಯಯನ ಮಾಡಿರುವ ಈ ಯುವಕ ಕವಿವಿ ಇಂಗ್ಲಿಷ್ ವಿಭಾಗದ ಸ್ನಾತಕೋತ್ತರ ಪದವಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾನೆ.ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳೇ ಸಾಧನೆ…

Read More

₹5 ಲಕ್ಷ ಶೂನ್ಯ ಬಡ್ಡಿ ಸಾಲ ಘೋಷಣೆ ಕಾಗದದಲ್ಲೇ | ಎಕರೆಗೆ ₹1 ಲಕ್ಷ ಸಾಲ ನೀಡಲು ರೈತರ ಆಗ್ರಹ ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ, (ಜಮಖಂಡಿ): ರೈತರಿಗೆ ₹5 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದರೂ, ಬ್ಯಾಂಕ್‌ಗಳಲ್ಲಿ ಕೇವಲ ₹40 ಸಾವಿರದಿಂದ ₹50 ಸಾವಿರದವರೆಗೆ ಮಾತ್ರ ಸಾಲ ವಿತರಿಸಲಾಗುತ್ತಿದೆ. ಸರ್ಕಾರದ ಘೋಷಣೆ ಮತ್ತು ಬ್ಯಾಂಕ್‌ಗಳ ಅನುಷ್ಠಾನದ ನಡುವಿನ ತೀವ್ರ ವ್ಯತ್ಯಾಸದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿ ಎಕರೆಗೆ ಕನಿಷ್ಠ ₹1 ಲಕ್ಷವನ್ನು ಶೂನ್ಯ ಬಡ್ಡಿದರದಲ್ಲಿ ಸಾಲವಾಗಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ರೈತರು ಒತ್ತಾಯಿಸಿದರು.ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಜಮಖಂಡಿಯ ಡಿಸಿಸಿ ಬ್ಯಾಂಕ್ ಎದುರು ರೈತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡ ಚುನಪ್ಪ ಪೂಜಾರಿ, ಕೃಷಿ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೇವಲ ಒಂದು ಎಕರೆ ಈರುಳ್ಳಿ ಬೆಳೆಯಲು ಸುಮಾರು ₹1 ಲಕ್ಷ ವೆಚ್ಚವಾಗುತ್ತಿದೆ. ಕಬ್ಬು ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳಿಗೂ ಲಕ್ಷಾಂತರ…

Read More