Author: editor.udayarashmi@gmail.com

ಲೇಖನ- ವಿವೇಕಾನಂದ. ಎಚ್. ಕೆ.ಬೆಂಗಳೂರುಮೊ: 9844013068 ಉದಯರಶ್ಮಿ ದಿನಪತ್ರಿಕೆ ” ಅರಿವೆಂಬುದು ಬಿಡುಗಡೆ ” ಎಂಬ ಆಶಯದೊಂದಿಗೆ ಕರ್ನಾಟಕ ಲೇಖಕಿಯರ ಸಂಘ ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಕೆಲವು ಕವಿಯತ್ರಿಗಳ ಕವನದ ಸಾಲುಗಳು ಒಂದಷ್ಟು ಸಾಮಾಜಿಕ ಜಾಲತಾಣಗಳ ಟ್ರೋಲ್ ಎಂಬ ಸಾಂಕ್ರಾಮಿಕ ಖಾಯಿಲೆಯ ಚರ್ಚಾ ವಸ್ತುವಾದ ಕಾರಣ ಆ ರೋಗಕ್ಕೆ ತುತ್ತಾದ ನನ್ನದೂ ಒಂದು ಅನಿಸಿಕೆ..ಇದನ್ನು ಕೆಲವರು ಅಪಹಸ್ಯವಾಗಿ, ವ್ಯಂಗ್ಯವಾಗಿ, ತಮಾಷೆಯಾಗಿ, ವಿಚಿತ್ರವಾಗಿ ಇರುವಂತೆ, ಇನ್ನೂ ಕೆಲವರು ಇದೊಂದು ಮಹಿಳಾ ಶೋಷಣೆಯ ಅತ್ಯಂತ ಮುಕ್ತ, ಪರಿಣಾಮಕಾರಿ ಮತ್ತು ಸಹಜ ಅಭಿವ್ಯಕ್ತಿ ಎಂಬಂತೆ ಮತ್ತೆ ಮತ್ತೆ ಶೇರ್ ಮಾಡುತ್ತಿದ್ದಾರೆ. ಅದರಲ್ಲಿ ಬಹು ಮುಖ್ಯವಾಗಿ ಮಮತಾ ಸಾಗರ್ ಅವರ ಮೊಲೆ, ಯೋನಿ, ಕತ್ತಲಕೋಶ ಎಂಬ ಕೆಲವು ಕಾವ್ಯದ ಸಾಲುಗಳು ಹೆಚ್ಚು ಚರ್ಚೆಗೆ ಒಳಪಡುತ್ತಿದೆ. ಬಹುತೇಕ ಪರ ಮತ್ತು ವಿರೋಧದ ಎರಡು ವಾದಗಳು ಸಮ ಪ್ರಮಾಣದಲ್ಲಿಯೇ ನಡೆಯುತ್ತಿರುವಂತೆ ಕಾಣುತ್ತಿದೆ.ಇದಕ್ಕೆ ನನ್ನದೊಂದು ಕವಿತೆ..ಬುದ್ಧ, ಮಹಾವೀರರ ಕಾಲದಲ್ಲಿ ಅಹಿಂಸೆಯ ಬಗ್ಗೆ ಹೆಚ್ಚು ಒತ್ತುಕೊಡಲು ಕಾರಣ…

Read More

ಚಿಂತನೆ- ಡಾ.ಸುಮಂಗಲಾ ಮೇಟಿಸಹಾಯಕ ಪ್ರಾಧ್ಯಾಪಕರುಬಾಗಲಕೋಟೆ ಉದಯರಶ್ಮಿ ದಿನಪತ್ರಿಕೆ 12ನೇ ಶತಮಾನದಲ್ಲಿ ಬಲವಾಗಿ ಶಿವಶರಣರು ನಡೆಸಿದ ಚಳುವಳಿಯಲ್ಲಿ ಸಮರ್ಪಣ ಮನೋಭಾವದಿಂದ ದುಡಿದ ಶಿವಶರಣರಲ್ಲಿ ವಯಸ್ಸಿನಲ್ಲಿ ಎಲ್ಲರಿಗಿಂತ ಚಿಕ್ಕವರಾದ ಇವರು ಹಿರಿಯರನ್ನು ಬೆರಗಾಗಿಸುವಂಥ ಜ್ಞಾನ ಪಡೆದವರು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಅಭೂತಪೂರ್ವ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿಗೆ ಒಂದು ಬಗೆಯ ತಾತ್ವಿಕ ನೆಲೆಗಟ್ಟನ್ನು ಒದಗಿಸಿದವರು ಚೆನ್ನಬಸವಣ್ಣನವರು. ಅವರ ವಚನಗಳಲ್ಲಿ ಕಂಡುಬರುವಷ್ಟು ತಾತ್ವಿಕ ವಿವೇಚನೆ ಸಮಕಾಲೀನ ವಚನಕಾರರಲ್ಲಿ ಕಂಡು ಬರುವುದಿಲ್ಲ.ವಚನಅರ್ಪಿತ ಅನರ್ಪಿತವೆಂಬ ಉಭಯಕುಳದ ಶಂಕೆವುಳ್ನಕ್ಕರಅಚ್ಚ ಸಂಸಾರಿಯೆಂಬೆ ಅರ್ಪಿತ ಅನರ್ಪಿತವೆಂಬೆರಡ ಕಳೆದು ನಿಂದಾಗಿ ಅಚ್ಚಲಿಂಗವಂತನೆಂಬೆ, ಅರ್ಪಿತ ಅನರ್ಪಿತವನರ್ಪಿಸಿ ಪ್ರಸಾದ ಸ್ವೀಕರಿಸುತ್ತಿತ್ತು ವಾಙ್ಮನಾತೀತನೆಂಬೆ, ಅರ್ಪಿತವಿಲ್ಲ ಅರ್ಪಿತವಿಲ್ಲ, ಅಕಲ್ಪಿತವಯ್ಯಾ ಕೂಡಲಚೆನ್ನಸಂಗಮದೇವಾ ವಿಶ್ಲೇಷಣೆ ಅರ್ಪಣ ವಿಧಾನದ ಮೂಲಕ ಪದಾರ್ಥವನ್ನು ಪ್ರಸಾದವಾಗಿಸುವ, ಅಂಗಭೋಗವನ್ನು ಲಿಂಗರೂಪಿಯಾಗಿ ವಿನೂತನ ವಿಧಾನವನ್ನು ಅಳವಡಿಸಿದರು.ಚೆನ್ನಬಸವಣ್ಣನವರ ಮುಖ್ಯ ಉದ್ದೇಶ ಲಿಂಗಾಯತ ಸಿದ್ಧಾಂತವನ್ನು ಯುಗಧರ್ಮಕ್ಕೆ ಹೊಂದಿಕೊಳ್ಳುವಂತೆ ಸಾಮಾನ್ಯ ಜನರಿಗೆ ವಿವರಿಸುವದಾಗಿತ್ತು.ಅರ್ಪಿತ ಎಂಬ ಸಮರ್ಪಣ ಭಾವ ಮತ್ತು ಅನರ್ಪಿತ ಎಂಬ ಅಸಮರ್ಪಣ ಭಾವಗಳ ಮಹತ್ವವನ್ನು ಈ ವಚನದ ಮೂಲಕ ತಿಳಿಸಿದ್ದಾರೆ.ಸಮರ್ಪಣ ಮತ್ತು…

Read More

ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಚನ್ನಪ್ಪ ಯರಂತೇಲಿ (ಮಸೂತಿ) ಪುತ್ರ ರಾಹುಲ್ ಯರಂತೇಲಿ ಅಗಾಧ ಸಾಧನೆ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಹಲವು ರಂಗಗಳಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದ ಮಸೂತಿ ಗ್ರಾಮ ಪ್ರಸ್ತುತ ಯುಪಿಎಸ್‌ಸಿ (ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್) ಪರೀಕ್ಷೆಯಲ್ಲಿ ತಮ್ಮೂರಿನ ಮಗ ರಾಹುಲ್ ಯರಂತೇಲಿ 462 ನೇ ರ‍್ಯಾಂಕ್ ತಂದು ಕೊಡುವ ಮೂಲಕ ಮತ್ತೊಮ್ಮೆ ಹೆಸರುವಾಸಿಯಾಗಿದೆ. ಮಸೂತಿ ಗ್ರಾಮದ ಒಂದು ಬಡ ರೈತ ಕುಟುಂಬದಲ್ಲಿ ಜನಿಸಿದ್ದ ಚನ್ನಪ್ಪ ಯರಂತೇಲಿ ತಮ್ಮ ಸ್ವಪ್ರಯತ್ನದಿಂದ ಶಿಕ್ಷಕರಾಗಿ ಪ್ರಸ್ತುತ ಮುದ್ದೇಬಿಹಾಳ ತಾಲೂಕಿನ ಗೋನಾಳ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗಿರುವ ಮೂವರು ಮಕ್ಕಳಲ್ಲಿ ಚೊಚ್ಚಲ ಪುತ್ರ ರಾಹುಲ್ ಯರಂತೇಲಿ ಪ್ರಸ್ತುತ ಯುಪಿಎಸ್‌ಸಿ ಪರೀಕ್ಷೆಯಲ್ಲಿ462 ನೇ ರ‍್ಯಾಂಕ್ ಪಡೆಯುವ ಮೂಲಕ ಹೆತ್ತವರ, ಹುಟ್ಟಿ ಬೆಳೆದ ಮಸೂತಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ರಾಹುಲ್ ಶಿಕ್ಷಣದ ಹೆಜ್ಜೆಒಂದರಿಂದ ಐದನೇ ತರಗತಿಯನ್ನು ಮುದ್ದೇಬಿಹಾಳ ತಾಲೂಕಿನ ಇನಚಗಲ್ ಗ್ರಾಮದಲ್ಲಿ ಪೂರೈಸಿದ ರಾಹುಲ್ ೬ ರಿಂದ ಪಿಯೂಸಿವರೆಗೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಗರ್ಭಿಣಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವುದರಿಂದ ಮಗುವಿನ ಬೆಳವಣಿಗೆ ಮತ್ತು ತಾಯಿಯ ಆರೋಗ್ಯಕ್ಕೆ ಪೂರಕವಾಗಿರುತ್ತದೆ ಎಂದು ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕವಿತಾ ದೊಡಮನಿ ಹೇಳಿದರು.ತಾಲೂಕಿನ ಕೂಡಗಿ ಎನ್‌ಟಿಪಿಸಿ ವ್ಯಾಪ್ತಿಯ ಮಹಾಶಕ್ತಿನಗರದಲ್ಲಿ ಪ್ರಸಕ್ತ ಸಾಲಿನ ಎನ್‌ಟಿಪಿಸಿ ಸಿಎಸ್‌ಆರ್ ಯೋಜನೆಯಡಿ ಇತ್ತೀಚೆಗೆ ನಡೆದ ಗರ್ಭಿಣಿಯರಿಗೆ ಪೌಷ್ಟಿಕಾಂಶ ಆಹಾರಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ರೋಗಕ್ಕೆ ಔಷಧಿ ನೀಡುವ ಬದಲಾಗಿ ರೋಗ ಬರದಂತೆ ನೋಡಿಕೊಳ್ಳುವುದು ಜಾಣತನ. ಗರ್ಭಿಣಿಯರಿಗೆ ಪೌಷ್ಟಿಕಾಂಶ ಆಹಾರಗಳ ಕಿಟ್ ವಿತರಣೆ ಆ ಒಂದು ಪ್ರಯತ್ನವಾಗಿದೆ. ಗರ್ಭಿಣಿಯರು ಪಡೆದಂತ ಈ ಕಿಟ್‌ನಲ್ಲಿ ಹೆಸರುಕಾಳು, ಮಾತ್ ದಾಲ್, ಬೆಲ್ಲ, ಕಡಲೆಕಾಳು, ಫೋಲಿಕ್ ಆ್ಯಸಿಡ್ ಸಿರಫ್ ಮತ್ತು ಪ್ರೋಟಿನ್ ಪೌಡರ್ ಇದ್ದು ಗರ್ಭಿಣಿಯರು ತಮ್ಮ ಗರ್ಭಧಾರಣೆಯ ೫ ರಿಂದ ೮ ನೇ ತಿಂಗಳಿನಲ್ಲಿ ಇದನ್ನು ಸೇವಿಸುವುದರಿಂದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸಲು ಸಹಕಾರಿಯಾಗಲಿದೆ ಎಂದರು.ಎನ್‌ಟಿಪಿಸಿ ಮಿತಾಲಿ ಮಹಿಳಾ ಮಂಡಳಿ ಅಧ್ಯಕ್ಷೆ ಅಂಜು ಝಾ ಮಾತನಾಡಿ, ಪ್ರಸ್ತುತ ೧೬೦ ಜನ…

Read More

ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಅದೆಷ್ಟೋ ಜೀವ ಸಂಕುಲಗಳಿಗೆ ಆಶ್ರಯ ನೀಡಿರುವ ಭೂಮಿಗೆ ತೊಂದರೆಯಾಗದಂತೆ ನೋಡಿಕೊಳ್ಳುವದು ನಮ್ಮೆಲ್ಲರ ಜವಾಬ್ದಾರಿ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಪರಿಸರದ ಮೇಲೆ ಮನುಷ್ಯನ ಪ್ರಹಾರ ಹೆಚ್ಚುತ್ತಿರುವದರಿಂದ ಸಧ್ಯದ ದಿನಗಳಲ್ಲಿ ಪರಿಸರವನ್ನು ರಕ್ಷಿಸುವ ತೀವ್ರ ಅಗತ್ಯತೆ ಇದೆ. ಸಾರ್ವಜನಿಕರ ಸಹಭಾಗಿತ್ವ ಮತ್ತು ದೈನಂದಿನ ಜೀವನದಲ್ಲಿ ಸಕಾರಾತ್ಮಕ ಕ್ರಮಗಳ ಅಳವಡಿಕೆಯಿಂದ ಮಾತ್ರ ಪರಿಸರವನ್ನು ಸ್ವಚ್ಛವಾಗಿಡಲು ಸಾಧ್ಯ. ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ಭೂಮಿಯನ್ನು ರಕ್ಷಿಸಲು ಸಾಧ್ಯ. ಹಾಗಾಗಿ ಇವತ್ತಿನಿಂದಲೇ ಭೂಮಿಗೆ ಮಾರಕವಾದ ವಸ್ತುಗಳ ಬಳಕೆಯನ್ನು ಪ್ರತಿಯೊಬ್ಬರೂ ಕೈಬಿಡೋಣ,…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಮುದ್ದೇಬಿಹಾಳ ರಸ್ತೆಯಲ್ಲಿರುವ ಇವಣಗಿ ಕೂಡು ರಸ್ತೆ ಹತ್ತಿರ ಇರುವ ಟೀ ಜೋನ್ ಅಂಗಡಿ ಮುಂಭಾಗ ಬೀದಿ ವ್ಯಾಪಾರಿಗಳ ಮೇಲೆ ಆಗುತ್ತಿರುವ ದೌರ್ಜನ್ಯ ಎಸಗುವ ಪುರಸಭೆ ಆಡಳಿತ ಹಾಗೂ ಮುಖ್ಯಾಧಿಕಾರಿಗಳ ದುರಾಡಳಿತವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಕ್ಕೂಟ ಶಾಖೆಯ ಮುಖಂಡರು ಮಂಗಳವಾರ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.ಪ್ರತಿಭಟನೆ ಉದ್ದೇಶಿಸಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಪರಶುರಾಮ ದಿಂಡವಾರ, ಅಶೋಕ ಚಲವಾದಿ, ಗುರುರಾಜ ಗೂಡಿಮನಿ ಮಾತನಾಡಿ, ಪಟ್ಟಣದಲ್ಲಿ ಕೆಲ ಗಣ್ಯ ವರ್ತಕರು ಕಾನೂನು ಬಾಹಿರವಾಗಿ ಪಾದಚಾರಿ ರಸ್ತೆ ಮೇಲೆ ತಮ್ಮ ಅಂಗಡಿಗಳ ಮೆಟ್ಟಿಲು ಮಾಡಿಕೊಂಡಿದ್ದಾರೆ. ಪುರಸಭೆ ಮುಖ್ಯಾಧಿಕಾರಿಗಳು ಇದನ್ನು ಬಿಟ್ಟು ಬಡ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಪಾದಚಾರಿ ರಸ್ತೆ ಬಿಟ್ಟು ಇದರ ಹಿಂದೆ ಇಂರುವ ಅಂಗಡಿಗಳನ್ನು ತೆರವು ಗೊಳಿಸುವ ಮೂಲಕ ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮುಖ್ಯಾಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಂಡು ಬಡವರಿಗೆ ನ್ಯಾಯ ಒದಗಿಸಬೇಕು. ಒಂದು ವೇಳೆ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಿಂದ ಇವಣಗಿ ಗ್ರಾಮದ ಕೂಡುರಸ್ತೆಯವರೆಗೂ ರಸ್ತೆ ಎರಡು ಬದಿಯಿರುವ ಪಾದಚಾರಿ ರಸ್ತೆಯಲ್ಲಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆ ಮಂಗಳವಾರ ಪುರಸಭೆಯಿಂದ ಬೆಳಗ್ಗೆ ೬.೩೦ ಗಂಟೆಯಿಂದ ಆರಂಭವಾಗಿ ಮಧ್ಯಾನ್ಹ ೧೨ ಗಂಟೆಯವರೆಗೂ ನಡೆಯಿತು.ಪಾದಚಾರಿ ರಸ್ತೆಗೆ ಹೊಂದಿಕೊಂಡಂತೆ ಇದ್ದ ವಿವಿಧ ಹಣ್ಣಿನ ಅಂಗಡಿ, ಹೊಟೇಲ್, ಚಹಾದಂಗಡಿ, ಎಗ್ಗರೈಸ್ ಅಂಗಡಿ ಸೇರಿದಂತೆ ವಿವಿಧ ಗೂಡಂಗಡಿಗಳನ್ನು ಈಗಾಗಲೇ ಈ ಹಿಂದೆ ಪುರಸಭೆಯಿಂದ ಎರಡು-ಮೂರು ಸಲ ಕಾರ್ಯಾಚರಣೆ ಮಾಡಿ ತೆರವು ಮಾಡಲಾಗಿತ್ತು. ಮತ್ತೆ ಗೂಡಂಗಡಿಗಳು ತಲೆ ಎತ್ತಿದ್ದ ಪರಿಣಾಮ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ನೇತೃತ್ವದಲ್ಲಿ ಮಂಗಳವಾರ ಮತ್ತೆ ಗೂಡಂಗಡಿಗಳ ತೆರವು ಕಾರ್ಯಾಚರಣೆ ಜರುಗಿತು. ಗೂಡಂಗಡಿಗಳ ಮಾಲೀಕರು ಇಲ್ಲದೇ ಇರುವ ಗೂಡಂಗಡಿಗಳನ್ನು ತೆರವುಗೊಳಿಸಿ ಮೆಗಾಮಾರುಕಟ್ಟೆಯಲ್ಲಿ ಪುರಸಭೆ ಸಿಬ್ಬಂದಿ ತೆಗೆದುಇಟ್ಟರು. ಸ್ಥಳದಲ್ಲಿದ್ದ ಗೂಡಂಗಡಿ ಮಾಲೀಕರು ತಮ್ಮ ತಮ್ಮ ಅಂಗಡಿಗಳನ್ನು ತೆರವು ಮಾಡಿಕೊಳ್ಳುವದು ಕಂಡುಬಂದಿತ್ತು. ಪಿಐ ಗುರುಶಾಂತ ದಾಶ್ಯಾಳ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಪುರಸಭೆಯಿಂದ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮ ಸೇರಿದಂತೆ ವಿವಿಧೆಡೆ ಅಬ್ಬರದ ಗಾಳಿ, ಗುಡುಗು-ಸಿಡಿಲು ಮಂಗಳವಾರ ಸಂಜೆ ಕಂಡುಬಂದಿತ್ತಾದರೂ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ತಾಲೂಕಿನ ಇಂಗಳೇಶ್ವರ ಗ್ರಾಮದ ಹೊರವಲಯದಲ್ಲಿ ಮುದ್ದೇಬಿಹಾಳ ತಾಲೂಕಿನ ಕೊಪ್ಪ ಎಲ್ಟಿ ಗ್ರಾಮದಿಂದ ಉಳ್ಳಾಗಡ್ಡಿ ಆರಿಸುವ ಕೆಲಸಕ್ಕೆಂದು ಬಂದಿದ್ದ ಸುನೀತಾ ಕಾಂತೇಶ ಲಮಾಣಿ(34) ಎಂಬುವವರಿಗೆ ಅಬ್ಬರದ ಗಾಳಿಯಿಂದ ಹಾರಿ ಬಂದ ತಗಡಿನ ಶೆಡ್ ಶೀಟ್ ಮಹಿಳೆಯ ಕುತ್ತಿಗೆಗೆ ಬಡಿದ ಪರಿಣಾಮ ಮಹಿಳೆಯು ಮೃತ ಪಟ್ಟ ಘಟನೆ ಜರುಗಿದೆ.ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸ್ ಠಾಣೆಯ ಪಿಐ ಗುರುಶಾಂತ ದಾಶ್ಯಾಳ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಬರುವ ೧೨೮ ಗ್ರಾಮಗಳಲ್ಲಿ, ೩೧ ತಾಂಡಾಗಳಲ್ಲಿ ಯಾವ ಸಮಸ್ಯೆಗಳಿವೆ ಎಂಬುವದನ್ನು ಅರಿತು ಅಗತ್ಯತೆ ಇರುವ ಕಾಮಗಾರಿಗಳನ್ನು ಮತಕ್ಷೇತ್ರದಲ್ಲಿ ಆದ್ಯತೆ ಮೇರೆಗೆ ಮೊದಲು ಕೈಗೊಳ್ಳುವ ಮೂಲಕ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಮತಕ್ಷೇತ್ರದ ಮತದಾರರ ಋಣ ತೀರಿಸುವುದಾಗಿ ದೇವರಹಿಪ್ಪರಗಿ ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ ಹೇಳಿದರು.ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ೫೦೫೪ ಸಿಆರ್ಐಎಫ್ ೨೦೨೩-೨೪ ಸಾಲಿನ ಕೇಂದ್ರ ರಸ್ತೆ ನಿಧಿ ಯೋಜನೆಯಡಿಯಲ್ಲಿ ಅಂದಾಜು ರೂ.೬ ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿಜಯಪುರ-ಉಕ್ಕಲಿ-ದಿಂಡವಾರ-ಸಾಸನೂರ ರಸ್ತೆ(ಆಯ್ದ ಭಾಗಗಳಲ್ಲಿ) ಸುಧಾರಣೆ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಆಡಳಿತ ಸರ್ಕಾರದ ಟೀಕೆ ಮಾಡಲು ನಾನು ಹೋಗಲ್ಲ. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆಯಾಗುತ್ತಿದೆ ಎಂಬುವದು ಜಗಜಾಹೀರರಾಗಿದೆ. ಇಂತಹ ಸನ್ನಿವೇಶದಲ್ಲಿಯೂ ನಾನು ವಿವಿಧ ಇಲಾಖೆಗಳನ್ನು ಸಂಪರ್ಕಿಸಿ ಮತಕ್ಷೇತ್ರದಲ್ಲಿರುವ ಗ್ರಾಮಗಳಿಗೆ ಬೇಕಾದ ಅಭಿವೃದ್ಧಿ ಕಾಮಗಾರಿಗೆ ಬೇಕಾದ ಅನುದಾನ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇಂಡೋ-ನೇಪಾಳದ ನಡುವೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಯುತ್ ಕಬಡ್ಡಿ ಸರಣಿಗೆ ಸಿಂದಗಿ ಜೈಭೀಮ ದಳದ ತಾಲೂಕಾಧ್ಯಕ್ಷ ಆನಂದ ಮಾಣಸುಣಗಿ ಅವರ ಮಗ ಪ್ರಮೋದ ಮಾಣಸುಣಗಿ ಅವರು ಆಯ್ಕೆಯಾಗಿ ಪಾಲ್ಗೊಳ್ಳಲಿದ್ದಾರೆ.ಅವರಿಗೆ ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಸಂತೋಷ ಮಣಿಗಿರಿ, ಪ್ರವೀಣ ಹಾಲಹಳ್ಳಿ, ಜೈಭೀಮ ಕೂಚಬಾಳ ಸೇರಿದಂತೆ ಸಮಸ್ತ ಸಿಂದಗಿ ತಾಲೂಕಿನ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

Read More