ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಡಿಜಿಟಲ್ ವಂಚನೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಅವಶ್ಯಕತೆ ಇದೆ, ನಮ್ಮ ಇಲಾಖೆಯಿಂದ ಸಾರ್ವಜನಿಕರಿಗೆ ಎಚ್ಚರ ನೀಡುತ್ತಿದ್ದರು ವಂಚನೆ ಮಾತ್ರ ಕಡಿಮೆಯಾಗುತ್ತಿಲ್ಲ ಆದ್ದರಿಂದ ಸಂಘ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಡಿವೈಎಸ್ಪಿ ಎಸ್ ರೋಷನ ಜಮೀರ ಹೇಳಿದರು.
ಇಲ್ಲಿನ ಬಸವ ಭವನದಲ್ಲಿ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ವತಿಯಿಂದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕಾರ್ಯಾಗಾರದ ನಿಮಿತ್ತ ಡಿಜಿಟಲ್ ವಂಚನೆ ತಡೆಗಟ್ಟುವಿಕೆ, ಹಣಕಾಸು, ಸಾಕ್ಷರತೆ, ಜವಾಬ್ದಾರಿಯುತ ಸಾಲ, ಕ್ರೆಡಿಟ್ ಶಿಸ್ತು ಬಗ್ಗೆ ಉಪನ್ಯಾಸ ಜರುಗಿದವು.
ಬ್ಯಾಂಕ ಖಾತೆ ಕೆವೈಸಿ ಅಪ್ ಡೆಟ್ ಮಾಡಿಕೊಳ್ಳಿ, ಒಟಿಪಿ ಹೇಳುವದು, ಮೊಬೈಲನಲ್ಲಿ ಬರುವ ಲಿಂಕ ಒತ್ತುವದು, ಅನಾಮಿಕ ಕರೆಗಳು, ಬ್ಯಾಂಕ ಸಿಬ್ಬಂದಿ ಹೆಸರಿನಲ್ಲಿ ಕರೆಗಳು ಬಂದಾಗ ಗಾಬರಿಯಾಗಿ ಯಾರು ಸ್ಪಂದಿಸಬಾರದು, ತಾವು ಖುದ್ದಾಗಿ ಬ್ಯಾಂಕಗೆ ಹೋಗಿ ವಿಚಾರಿಸಬೇಕು ಎಂದರು.
ಪ್ರಾದೇಶಿಕ ವ್ಯವಸ್ಥಾಪಕ ರಾಮಕೃಷ್ಣ ಮಾತನಾಡಿ ಆರ್ಥಿಕ ನೆರವು, ಹಣಕಾಸು ಸಾಕ್ಷರತೆ ಬಗ್ಗೆ ಮಾತನಾಡಿ ನಿಮ್ಮ ಹೂಡಿಕೆ ಹಣವನ್ನು ನಿಮ್ಮಷ್ಟು ಕಾಳಜಿಯಿಂದ ನಿರ್ವಹಿಸಲು ಯಾರಿಂದಲೂ ಸಾಧ್ಯವಿಲ್ಲ, ತಜ್ಞರಿಂದ ಸಲಹೆ ಸೂಚನೆಗಳನ್ನು ಪಡೆದು ಅಂತಿಮವಾಗಿ ನಿರ್ಧಾರ ನಿಮ್ಮದಾಗಿರಬೇಕು, ಒಮ್ಮೇಲೆ ಶ್ರೀಮಂತರಾಗುವಂತಹ ಕಡೆಗಳಲ್ಲಿ ಹೂಡಿಕೆ ಮಾಡಿ ಮೋಸ ಹೊಗಬಾರದು, ಸಾಲಮಾಡಿ ಹೂಡಿಕೆ ಮಾಡಬಾರದು ಎಂದರು.
ಕೆನರಾ ಬ್ಯಾಕಿನ ವಿಠ್ಠಲ ಗುರವ ಸಿವಿಲ್ ಸ್ಕೋರ ಬಗ್ಗೆ ಮಾತನಾಡಿ, ಇಂದು ಯಾವುದೇ ಸಾಲ ಸಿಗಬೇಕಾದರೆ ಸಿವಿಲ್ ಸ್ಕೋರ ಪರೀಕ್ಷೆ ಮಾಡಿ ಸಾಲವನ್ನು ನೀಡುತ್ತಾರೆ, ತಾವು ಪಡೆದ ಸಾಲವನ್ನು ಸರಿಯಾಗಿ ಮರುಪಾವತಿಸಬೇಕು, ಸರಿಯಾದ ವ್ಯವಹಾರ ಮಾಡಿದರೆ ತಮ್ಮ ಜೀವನದಲ್ಲಿ ವ್ಯವಹಾರ ಮಾಡಲು ಅನೂಕೂಲವಾಗುತ್ತದೆ ಎಂದರು.ಜಮಖಂಡಿ ಶಾಖಾ ವ್ಯವಸ್ಥಾಪಕರು ಪ್ರವೀಣಕುಮಾರ ಗುಲ್ಬರ್ಗಾ ,ಓಬಳಸ್ವಾಮಿ ಮುಧೋಳ ವಲಯ ವ್ಯವಸ್ಥಾಪಕ ದೇವಪ್ಪ ಮೊಗಲೆ ಸೇರಿದಂತೆ ಇತರರು ಇದ್ದರು.

