Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ

ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ

ವಿದ್ಯಾರ್ಥಿಗಳೆ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಿ :ಎಸಿ ದಡ್ಡೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಪವಾಡ ಪುರುಷ ಬಾಲಲೀಲಾ ಮಹಾಂತ ಶಿವಯೋಗಿ
ವಿಶೇಷ ಲೇಖನ

ಪವಾಡ ಪುರುಷ ಬಾಲಲೀಲಾ ಮಹಾಂತ ಶಿವಯೋಗಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ ಶಶಿಕಾಂತ ಪಟ್ಟಣ
ರಾಮದುರ್ಗ

ಉದಯರಶ್ಮಿ ದಿನಪತ್ರಿಕೆ

ಕನ್ನಡ ಸಾಹಿತ್ಯದಲ್ಲಿ ಕೈವಲ್ಯ ಪದ್ದತಿಯನ್ನು ಪರಂಪರೆಯನ್ನು ಮುಂದುವರೆಸಿಕೊಂಡು ಹೋದವರಲ್ಲಿ ಬಾಲಲೀಲಾ ಮಹಾಂತ ಸ್ವಾಮಿಗಳು ಪ್ರಮುಖರು.
ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳು ಪ್ರಸಿದ್ಧ ಶಿವಯೋಗಿಗಳು ಮತ್ತು ಪವಾಡ ಪುರುಷ ಎಂದು ಹೆಸರುವಾಸಿಯಾಗಿದ್ದಾರೆ. ಅವರು ಮುಳಗುಂದ ಪಟ್ಟಣದಲ್ಲಿ ನೆಲೆಸಿದ್ದರು ಮತ್ತು ಅವರ ಸ್ಮರಣಾರ್ಥ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಅವರು ಬಾಲ್ಯದಲ್ಲಿಯೇ ವೈರಾಗ್ಯ ತಳೆದು, ದೇಶ ಸಂಚಾರ ಮಾಡಿ, ಅನೇಕ ಪವಾಡಗಳನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತದೆ.


ಇಲ್ಲಿ ಅವರ ಬಗ್ಗೆ ಇನ್ನಷ್ಟು ಮಾಹಿತಿ ಇದೆ:
ಜೀವನ ಮತ್ತು ವೈರಾಗ್ಯ
ಬಾಲಲೀಲಾ ಮಹಾಂತ ಶಿವಯೋಗಿಗಳು ವಿಜಯಪುರ ಜಿಲ್ಲೆಯ ಎರಿನಾಳ ಗ್ರಾಮದಲ್ಲಿ ಜನಿಸಿದರು ಎಂದು ನಂಬಲಾಗಿದೆ. ಅವರು ಎಂಟು ವರ್ಷದವರಾಗಿದ್ದಾಗ ವೈರಾಗ್ಯ ಪಡೆದು, ದೇಶ ಸಂಚಾರ ಮಾಡಿದರು.
ಪವಾಡಗಳು
ಶಿವಯೋಗಿಗಳು ಅನೇಕ ಪವಾಡಗಳನ್ನು ಮಾಡಿದ್ದಾರೆಂದು ಹೇಳಲಾಗುತ್ತದೆ. ಮೈಸೂರು ಮಹಾರಾಜರ ರೋಗ ವಾಸಿ ಮಾಡಿದ್ದು, ಭಕ್ತನೊಬ್ಬನಿಗೆ ಪ್ರಸಾದದ ತಟ್ಟೆ ತುಂಬಿಸಿದ್ದು, ಮತ್ತು ಮಹಿಳೆಯೊಬ್ಬರಿಗೆ ಸಂತಾನ ಪ್ರಾಪ್ತಿಯಾಗುವಂತೆ ಆಶೀರ್ವಾದ ಮಾಡಿದ್ದು ಇವು ಕೆಲವು ಉದಾಹರಣೆಗಳು.
ಮುಳಗುಂದದಲ್ಲಿ ನೆಲೆ
ಅವರು ಮುಳಗುಂದ ಪಟ್ಟಣಕ್ಕೆ ಬಂದು ನೆಲೆಸಿದರು ಮತ್ತು ಅಲ್ಲಿಯೇ ತಮ್ಮ ಜೀವನ ಕಳೆದರು. ಅವರ ನೆನಪಿಗಾಗಿ ಮುಳಗುಂದದಲ್ಲಿ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.
ಸಾಹಿತ್ಯ ರಚನೆ
ಬಾಲಲೀಲಾ ಮಹಾಂತ ಶಿವಯೋಗಿಗಳು “ಕೈವಲ್ಯದರ್ಪಣ” ಎಂಬ ಅಮೂಲ್ಯ ಗ್ರಂಥವನ್ನು ರಚಿಸಿದ್ದಾರೆ, ಇದು ಅವರ ಅನುಭಾವದ ಪ್ರತೀಕವಾಗಿದೆ.
ಜಾತ್ರಾ ಮಹೋತ್ಸವ
ಮುಳಗುಂದದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ, ಶಿವಯೋಗಿಗಳ ಭಾವಚಿತ್ರವನ್ನು ತೊಟ್ಟಿಲಲ್ಲಿ ಹಾಕಿ ಮೆರವಣಿಗೆ ಮಾಡಲಾಗುತ್ತದೆ.
ಬಾಲಲೀಲಾ ಮಹಾಂತ ಶಿವಯೋಗಿ ಸುಮಾರು 1823-59. ಪ್ರಸಿದ್ಧ ಶಿವಯೋಗಿಗಳು. ಇವರ ಜನನ, ಬಾಲ್ಯಗಳ ಬಗೆಗೆ ಖಚಿತವಾಗಿ ತಿಳಿದುಬರುವುದಿಲ್ಲ ಇವರ ಊರು ಬಿಜಾಪುರ ಜಿಲ್ಲೆಯ ಎರಿನಾಳ ಗ್ರಾಮವೆಂದು ನಂಬಲಾಗಿದೆ. ಈ ಹೇಳಿಕೆಗೆ ಆಧಾರಗಳೂ ಇಲ್ಲದಿಲ್ಲ. ಎರಿನಾಳ ವಿರಕ್ತ ಮಠದ ಶ್ರೀಗಳವರ ವಂಶಪರಂಪರೆಯಲ್ಲಿ ಮಹಾಂಶ ಶಿವಯೋಗಿಗಳ ಹೆಸರು ಸಿಗುತ್ತದೆ. ಹುಟ್ಟಿದಾಗಲೇ ಇವರನ್ನು ಆ ವಿರಕ್ತಮಠಕ್ಕೆ ಮರಿಯೆಂದು ಕರೆದಿದ್ದರಂತೆ. ಇವರು ಮಸೂತಿ ಎಂಬ ಸ್ಥಳದಲ್ಲಿ ಜನ್ಮ ಪಡೆದರೆಂದು ಹೇಳಲಾಗುತ್ತದೆ. ಇವರ ಜನನಿ ಜನಕರು ಅಯ್ಯಮ್ಮ ಹಾಗೂ ಪರ್ವತಯ್ಯ. ಈ ಹಿನ್ನೆಲೆಯಲ್ಲಿ ಆಲಮಟ್ಟಿಯ ಹಿರಿಯಮಠಕ್ಕೂ ಮಸೂತಿಯ ಜಗದೀಶ್ವರ ಮಠಕ್ಕೂ ಮೊದಲಿನಿಂದಲೂ ಬೀಗತನ ವಿದ್ದುದು ತಿಳಿದು ಬರುತ್ತದೆ. ಆಲಮಟ್ಟಿಯ ಆಯವ್ವೆ ಹಾಗೂ ಅಣ್ಣವ್ವೆಯರನ್ನು ಮಾಸೂತಿಯ ಜಗದೀಶ್ವರ ಮಠಕ್ಕೆ ವಿವಾಹಮಾಡಿಕೊಟ್ಟಿದ್ದರು. ಶಿವಯೋಗಿಗಳು ಚಿಕ್ಕವರಿದ್ದಾಗಲೇ ತಂದೆತಾಯಿಗಳನ್ನು ಕಳೆದುಕೊಂಡು ದೊಡ್ಡಮ್ಮನಾದ ಅಣ್ಣವ್ವೆಯ ಲಾಲನೆ ಪಾಲನೆಯಲ್ಲಿ ಬೆಳೆದರು. ಆ ಸಮಯದಲ್ಲಿ ದೂರದರ್ಶಿಗಳೂ ಮಹಾಜ್ಞಾನಿಗಳೂ ಆಗಿದ್ದ ಮುಳಗುಂದ ಕಲ್ಮಠದ ಗುರುಮಹಾಂತ ದೇಶಿಕdರು ಸಂಚಾರ ಮಾಡುತ್ತ ಆಲಮಟ್ಟಿಗೆ ಬಂದರು. ಬಾಲಕ ಮಹಾಂತನನ್ನು ಕಂಡು ಮಂತ್ರೋಪ್ರದೇಶ ಮಾಡಿಹೋದರು. ಬಾಲಕನಲ್ಲಿ ವೈರಾಗ್ಯದ ಕಳೆಯಿದ್ದು ದಿನದಿನಕ್ಕೆ ತೇಜಸ್ಸು ಪಡೆಯಿತು. ಮಹಾಂತರಿಗೆ ಗುರುಗಳ ದರ್ಶನ ಪಡೆಯುವ ಹಂಬಲವುಂಟಾಯಿತು. ಇವರು ಗುರುಶೋಧನೆ ಮಾಡಲು ಬಾಲ್ಯದಲ್ಲಿಯೇ ಮನೆಬಿಟ್ಟು ದೇಶಸಂಚಾರ ನಡೆಸಿದರು. ಅಂಥ ಸಂದರ್ಭದಲ್ಲಿ ಲಿಂಗನಾಯಕನ ಹಳ್ಳಿಯ ಶಿವಯೋಗಿ ಚೆನ್ನವೀರಸ್ವಾಮಿಗಳ ಬಳಿ ಕೆಲಕಾಲವಿದ್ದು ಸಕಲಶಾಸ್ತ್ರ ಪುರಾಣಗಳನ್ನೂ ವೀರಶೈವ ತತ್ತ್ವಜ್ಞಾನವನ್ನೂ ಆಳವಾಗಿ ಅಭ್ಯಾಸ ಮಾಡಿದರು. ಆಚಾರ ವಿಚಾರಗಳನ್ನು ಶುದ್ಧವಾಗಿಟ್ಟುಕೊಂಡು ಶರಣರ ಮಧ್ಯೆ ಶರಣು ಎನಿಸಿಕೊಂಡರು. ಅನಂತರ ಬಿದರಹಳ್ಳಿ. ಗೋಕಾವಿ, ಬನವಾಸಿ ಕಂಚಿ, ಶ್ರೀಶೈಲ ಮೊದಲಾದ ಕ್ಷೇತ್ರಗಳಿಗೆ ಸಂದರ್ಶನ ಕೊಟ್ಟು. ತನ್ನ ಗುರು ಮುಳಗುಂದದಲ್ಲಿ ಇದ್ದಾರೆಂದು ಕೇಳಿ ಅಲ್ಲಿಗೆ ದಯಮಾಡಿಸಿದರು. ಅಷ್ಟರಲ್ಲಿ ಗುರುಮಹಾಂತದೇಶಿಕರು ಲಿಂಗೈಕ್ಯರಾಗಿದ್ದರು. ಮಹಾಂತಶಿವಯೋಗಿ ತಮ್ಮ ಉಳಿದ ಜೀವನವನ್ನು ಅಲ್ಲಿಯೇ ನಡೆಸಿದರು; ಅಲ್ಲಿಯೇ ಲಿಂಗೈಕ್ಯರಾದರು.
ಇವರು ಹಲವು ಪವಾಡಗಳನ್ನು ಮೆರೆದಂತೆ ತಿಳಿದುಬರುತ್ತದೆ. ಬಿದರಹಳ್ಳಿಯ ಭಕ್ತ ರಾಮಪ್ಪನ ಬಾವಿಯಲ್ಲಿ ನೀರು ತರಿಸಿದ್ದು, ಮುಮ್ಮಡಿ ಕೃಷ್ಣರಾಜ ಒಡೆಯರ ಪ್ರಾರ್ಥನೆಯಂತೆ ಮೈಸೂರು ಅರಮನೆಗೆ ಬಂದು, ಮಹಾರಾಜರ ಬೇನೆಯನ್ನು ಪರಿಹರಿಸಿ ಅವರು ಒಪ್ಪಿಸಿದ ನವರತ್ನ ಖಚಿತ ಅಭರಣಗಳನ್ನೂ ಅಮೂಲ್ಯ ವಸ್ತುಗಳನ್ನೂ ನಿರಾಕರಿಸಿ ಕೇವಲ ಒಂದು ಸೋರೆಬುರುಡೆಯನ್ನು ಸ್ವೀಕರಿಸಿ ಅನುಗ್ರಹಸಿದ್ದು, ಒಮ್ಮೆ ತಮ್ಮ ಟೊಪ್ಬಿಗೆಯನ್ನು ಹರಿಗೋಲಾಗಿ ಮಾಡಿ ಹೊಳೆ ದಾಟಿದ್ದು-ಇವರು ನಡೆಸಿದರೆನ್ನಲಾದ ಮುಖ್ಯ ಪವಾಡಗಳು. ಇವರು ಅನುಭಾವಿ ಕವಿಯೂ ಆಗಿದ್ದು ಕೈವಲ್ಯ ದರ್ಪಣ ಎಂಬ ಗ್ರಂಥ ರಚಿಸಿದ್ದಾರೆ. ಇದರಲ್ಲಿ ಅಧ್ಯಾತ್ಮಕ್ಕೆ ಸಂಬಂಧಿಸಿದ ಹಾಡುಗಳಿವೆ. ಮಹಾಂತಲಿಂಗ ಎಂಬುದು ಈ ಹಾಡುಗಳ ಅಂಕಿತ. ಇವರನ್ನು ಕುರಿತು ಪುರಾಣವೊಂದು ಹುಟ್ಟಿದೆ. ಇವರ ಶತಮನೋತ್ಸವವನ್ನು ಆಚರಿಸಿದ ಸಂದರ್ಭದಲ್ಲಿ ವೈರಾಗ್ಯದಲ್ಲಿರು ಎಂಬ ಗ್ರಂಥ ಪ್ರಕಟವಾಗಿದೆ. ಇವರ ಗದ್ದುಗೆ ಗದಗ ಜಿಲ್ಲೆಯ ಮುಳಗುಂದದಲ್ಲಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ

ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ

ವಿದ್ಯಾರ್ಥಿಗಳೆ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಿ :ಎಸಿ ದಡ್ಡೆ

ಸಂಭ್ರಮದ ದೀಪಾವಳಿ ಹಬ್ಬಕ್ಕೆ ನಾಗರಿಕರ ಭರದ ಸಿದ್ದತೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ
    In (ರಾಜ್ಯ ) ಜಿಲ್ಲೆ
  • ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳೆ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳಿ :ಎಸಿ ದಡ್ಡೆ
    In (ರಾಜ್ಯ ) ಜಿಲ್ಲೆ
  • ಸಂಭ್ರಮದ ದೀಪಾವಳಿ ಹಬ್ಬಕ್ಕೆ ನಾಗರಿಕರ ಭರದ ಸಿದ್ದತೆ
    In (ರಾಜ್ಯ ) ಜಿಲ್ಲೆ
  • ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿಗೆ ಅರ್ಜಿ ಕರೆ
    In (ರಾಜ್ಯ ) ಜಿಲ್ಲೆ
  • ಅ.೨೧ ರಂದು ಪೊಲೀಸ್ ಹುತಾತ್ಮರ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಉಚಿತ ಕಾನೂನು ಸೇವೆಗಳ ಕ್ಲಿನಿಕ್ ಪ್ರಾರಂಭ
    In (ರಾಜ್ಯ ) ಜಿಲ್ಲೆ
  • ಕ್ರೀಡಾ ಸಾಧಕರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ಯುವ ಕೇಂದ್ರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಗಾಯನ ಸ್ಪರ್ಧೆ: ವಿಜಯ ಕೊಲ್ಹಾರ ರಾಜ್ಯಕ್ಕೆ ಪ್ರಥಮ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.