ರಚನೆ
– ಅನಸೂಯಾ ಕಾರಂತ್
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ಚೈತ್ರ ಮಾಸದಿ ಮತ್ತೆ ವಸಂತನ ಆಗಮನ
ಭೂದೇವಿಯ ಒಡಲಲ್ಲೊಂದು ನವಚೇತನ
ಮಾಮರದಿ ಕೋಗಿಲೆಗಳ ಇಂಪಾದ ಕೂಜನ
ಗರಿಬಿಚ್ಚಿದ ನವಿಲುಗಳ ಸಂತಸದ ನರ್ತನ
ವೃಕ್ಷರಾಶಿಯು ಹಣ್ಣುಕಾಯಿಗಳ ಹೊತ್ತಿದೆ
ದುಂಬಿಯೊಂದು ಮಕರಂದವ ಹೀರುತಿದೆ
ಕುಳಿರ್ಗಾಳಿಯು ಬೀಸಿ ತಂಪನ್ನೆರೆಯುತಿದೆ
ಪ್ರಕೃತಿಯಲಿ ಎಲ್ಲೆಲ್ಲೂ ಹಚ್ಚ ಹಸಿರು ತುಂಬಿದೆ
ತರುಲತೆಗಳಲಿ ಹೊಸ ಚಿಗುರಿನ ಸಂಚಲನ
ಪ್ರೇಮಿಗಳಿಗಿದು ಮಧುರ ಭಾವದ ಬಂಧನ
ನವ ವರುಷದ ಯುಗಾದಿಯಾಚರಣೆಯ ದಿನ
ಸಕಲರಿಗೂ ಒಳಿತಾಗಲೆಂದು ಹಾರೈಸಿದೆ ಮನ
