Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್.ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ನಮ್ಮ ಸುತ್ತಲಿನ ಪ್ರಕೃತಿಯನ್ನು ನಾವು ಸದಾ ನೋಡುತ್ತಿದ್ದು ಅದರಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುತ್ತಲೇ ಇರುತ್ತೇವೆ. ಹಾಗೆಯೇ ನಮ್ಮ ಈ ಶರೀರವನ್ನು ಕೂಡ ನಾವು ಗಮನಿಸಲೇಬೇಕು. ನಮ್ಮ ದೇಹದೊಳಗಿರುವ ಅಂಗಗಳ ಕಾರ್ಯನಿರ್ವಹಣೆ, ಶರೀರದಲ್ಲಾಗುವ ಬದಲಾವಣೆಗಳನ್ನು ಕೂಡ ನಾವು ಅರಿಯಲೇಬೇಕು. ದೇಹದ ವೈಜ್ಞಾನಿಕ ಸತ್ಯದ ಅರಿವು ನಮಗೆ ಇರಬೇಕು.ನಾವು ತಿನ್ನುಣ್ಣುವ ಆಹಾರದ ಹಿಂದೆ ನೂರಾರು ಜನರ ಶ್ರಮವಿದೆ. ನಮ್ಮ ತಟ್ಟೆಗೆ ಬಂದು ಬೀಳುವ ಆಹಾರದ ಹಿಂದೆ ಒಬ್ಬ ರೈತನ ಶ್ರಮವಿದ್ದು ಹದವಾದ ಮಳೆ ಬೀಳುವ ಮುನ್ನವೇ ತನ್ನ ಹೊಲವನ್ನು ತಯಾರಿಸಿ ಇಟ್ಟುಕೊಳ್ಳುವ ರೈತ ಒಂದು ಪುಟ್ಟ ಮಳೆಯಾದೊಡನೆ ಆಯ್ದ ಬೀಜಗಳನ್ನು ಹೊಲದಲ್ಲಿ ಬಿತ್ತುತ್ತಾನೆ. ನೀರು ಹಾಯಿಸುತ್ತಾನೆ, ಕಳೆ ತೆಗೆಯುತ್ತಾನೆ, ಹುಲುಸಾದ ಬೆಳೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾ ಹಕ್ಕಿ ಪಕ್ಷಿಗಳು ತೆನೆಯನ್ನು ಹಾಳುಗೆಡವದಂತೆ, ಹುಳು ಹುಪ್ಪಟೆಗಳು ಬೀಳದಂತೆ ಗೊಬ್ಬರ, ರಾಸಾಯನಿಕಗಳನ್ನು ಬಳಸಿ ರಕ್ಷಿಸುತ್ತಾನೆ. ನಂತರ ಬೆಳೆದ ಬೆಳೆಯನ್ನು ತೆನೆ ಮುರಿದು ರಾಶಿ ಮಾಡಿ ಚೀಲಗಳಲ್ಲಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಬ್ರಾಹ್ಮಣ ಆರ್ಗನೈಜೇಷನ್ ಆಫ್ ಇಂಡಿಯಾ ರಾಜ್ಯ ಉಪಾಧ್ಯಕ್ಷ ಗುಂಡು ಕುಲಕರ್ಣಿ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಕಳೆದ ೩೦ವರ್ಷಗಳಲ್ಲಿ ಬ್ರಾಹ್ಮಣ ಸಮುದಾಯವನ್ನು ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಇದೇ ಮೊದಲು. ಪ್ರತಿಯೊಬ್ಬ ಮುಖ್ಯಮಂತ್ರಿಯೂ ೨-೩ ಬ್ರಾಹ್ಮಣ ಶಾಸಕರನ್ನು ಸಚಿವರನ್ನಾಗಿ ಮಾಡಿ ರಾಜ್ಯದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಬ್ರಾಹ್ಮಣ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುತ್ತಾ ಬಂದಿದ್ದರು. ಆದರೆ ಈ ಬಾರಿ ಆ ಶಿಷ್ಟಾಚಾರವನ್ನು ಮುರಿಯಬಾರದು ಎಂದು ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನಕ್ಕೆ ಅರ್ಹತೆ ಹೊಂದಿರುವ ಹಲವಾರು ಬ್ರಾಹ್ಮಣ ಶಾಸಕರಿದ್ದಾರೆ. ಬ್ರಾಹ್ಮಣರು ಅಧಿಕಾರ ಪಡೆದರೆ ಎಲ್ಲ ಸಮುದಾಯಗಳ ಹಿತಕ್ಕಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಅವರಿಗೆ ಸಚಿವ ಸ್ಥಾನ ನೀಡುವುದು ಅಗತ್ಯವಾಗಿದೆ. ಬ್ರಾಹ್ಮಣ ಸಮುದಾಯದಲ್ಲಿ ಆರ್.ವಿ.ದೇಶಪಾಂಡೆ, ದಿನೇಶ್ ಗುಂಡೂರಾವ್ ಅಂತಹ ಹಿರಿಯ ಶಾಸಕರಿದ್ದಾರೆ. ಅವರಲ್ಲಿ ಒಬ್ಬರನ್ನು ಸಚಿವ ಸಂಪುಟಕ್ಕೆ ಪರಿಗಣಿಸಬೇಕಾಗಿತ್ತು. ಸಚಿವ ಸಂಪುಟದಲ್ಲಿ…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ಪತ್ರಿಕಾ ದಿನಾಚರಣೆ’ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಪತ್ರಿಕೋದ್ಯಮವು ಹೆಮ್ಮರವಾಗಿ ಬೆಳೆಯಲು ನಾಡಿನ ಹಿರಿಯ ಪರ್ತಕರ್ತರ ಕೊಡುಗೆ ಅಪಾರವಾಗಿದ್ದು, ಅವರ ಸನ್ಮಾರ್ಗದಲ್ಲಿ ನಾವಿಂದು ನಡೆಯಬೇಕಾಗಿದೆ ಎಂದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಎಂ.ಎಲ್.ಜಮಾದಾರ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಆಶ್ರಯದಲಿ ಹಮ್ಮಿಕೊಂಡ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕನ್ನಡ ಪ್ರತಿಕಾ ದಿನಾಚರಣೆ ಪ್ರತಿ ವರ್ಷ ಜುಲೈ ೧ ರಂದು ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ. ಕನ್ನಡದ ಮೊಟ್ಟಮೊದಲ ದಿನ ಪತ್ರಿಕೆ ಮಂಗಳೂರು ಸಮಾಚಾರ ಜುಲೈ ೧ ೧೮೪೩ ರಂದು ಪ್ರಾರಂಭಿಸಲಾಯಿತು. ಅದರ ಹಿನ್ನೆಲೆ ಪ್ರತಿ ವರ್ಷ ಜುಲೈ ೧ ರಂದು ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ ಎಂದರು.ಕನ್ನಡ ಪತ್ರಿಕೋಧ್ಯಮವು ಡವಿಜಿ. ಪಾಟೀಲ ಪುಟ್ಟಪ್ಪ, ಮೊಹರೆ ಹನುಮಂತರಾಯ ಇಂತಹ ಹಲವಾರು ವ್ಯಕ್ತಿಗಳಿಂದ ಬೃಹತ್ತಾಗಿ ಬೆಳೆದು…
ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆˌ (ಜಮಖಂಡಿ): “ಸಂಶೋಧನೆ ಎಂದರೆ ಕೇವಲ ಪದವಿ ಪಡೆಯುವ ಸಾಧನವಲ್ಲ; ಅದು ಸತ್ಯದ ಅನ್ವೇಷಣೆಯ ಮೂಲಕ ಸಮಾಜಕ್ಕೆ ಹೊಸ ಜ್ಞಾನವನ್ನು ನೀಡುವ ಸೃಜನಾತ್ಮಕ ಪ್ರಕ್ರಿಯೆ” ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯ, ವಿಜಯಪುರದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಮಹೇಶ ಚಿಂತಾಮಣಿ ಅಭಿಪ್ರಾಯಪಟ್ಟರು.ಜಮಖಂಡಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗ ಆಯೋಜಿಸಿದ್ದ “ಕನ್ನಡ ಸಂಶೋಧನೆಯ ವಿಧಿ-ವಿಧಾನಗಳು” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.”ಸಂಶೋಧನೆ ಮಾನವನ ಸಹಜ ಪ್ರವೃತ್ತಿ. ಸತ್ಯದ ಅನ್ವೇಷಣೆಯೇ ಸಂಶೋಧನೆಯ ಮೂಲ ಆಶಯ. ಸಂಶೋಧನೆಯ ಶಕ್ತಿಯಿಂದಲೇ ಇಂದು ಮನುಷ್ಯ ಮಂಗಳ ಗ್ರಹದ ಅಂಗಳದವರೆಗೂ ತನ್ನ ಹೆಜ್ಜೆ ಇಟ್ಟಿದ್ದಾನೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಸಂಶೋಧನೆಯಿಂದ ಅನೇಕ ಅಪರೂಪದ ಕೃತಿಗಳು ಬೆಳಕಿಗೆ ಬಂದಿವೆ. ವಿದ್ಯಾರ್ಥಿಗಳು ಆಸಕ್ತಿ, ಅವಧಾನ, ಪರಿಶ್ರಮ ಮತ್ತು ತ್ಯಾಗದ ಮನೋಭಾವದಿಂದ ಸಂಶೋಧನಾ ಕ್ಷೇತ್ರಕ್ಕೆ ಕಾಲಿಟ್ಟಾಗ ಮಾತ್ರ ಹೊಸ ಸಾಧ್ಯತೆಗಳು ಅನಾವರಣಗೊಳ್ಳುತ್ತವೆ” ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ…
ರೈತರ ಹೋರಾಟಕ್ಕೆ ಸಿಕ್ಕ ಫಲ | ಏಕ್ಕಲಮರಡಿ ಏತ ನೀರಾವರಿ ಯೋಜನೆಯ ಪಂಪ್ ವರ್ಕ್ ಪೂರ್ಣ ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ (ಜಮಖಂಡಿ): ಸುಮಾರು 13 ವರ್ಷಗಳಿಂದ ಏತ ನೀರಾವರಿ ಯೋಜನೆ ಪೂರ್ಣಗೊಳ್ಳದೆ ರೈತರು ಸಂಕಷ್ಟ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳ ಹಿಂದೆ ಚಿಕ್ಕಲಕಿ ಕ್ರಾಸ್‌ನಲ್ಲಿ ರೈತರು ನಡೆಸಿದ ಐತಿಹಾಸಿಕ ಹೋರಾಟಕ್ಕೆ ಕೊನೆಗೂ ಫಲ ದೊರೆತಿದೆ. ಹೋರಾಟದ ವೇಳೆ ನಿರಾಣಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಮುರಗೇಶ ನಿರಾಣಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬಾಕಿ ಉಳಿದಿದ್ದ ಪಂಪ್ ವರ್ಕ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ನೀಡಿದ ಭರವಸೆಯಂತೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ನಿರಾಣಿ ಸಕ್ಕರೆ ಕಾರ್ಖಾನೆಯ ತಾಂತ್ರಿಕ ವಿಭಾಗದ ಇಂಜಿನಿಯರಿಂಗ್ ಸಿಬ್ಬಂದಿಯನ್ನು ಏಕ್ಕಲಮರಡಿ ಏತ ನೀರಾವರಿ ಹೋರಾಟ ಸಮಿತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ರೈತ ಮುಖಂಡರು, ಇಂಜಿನಿಯರಿಂಗ್ ಸಿಬ್ಬಂದಿ ಅತ್ಯಂತ ಗುಣಮಟ್ಟದಿಂದ, ಸಮಯಪ್ರಜ್ಞೆಯಿಂದ ಹಾಗೂ ಕಾರ್ಯನಿಷ್ಠೆಯಿಂದ ಕಾಮಗಾರಿ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಸಿಂದಗಿ ಡಿಪೋದಿಂದ ಬರುವ ಸಿಂದಗಿ ಕೆಂಭಾವಿ ಪುಣೆ (ಕೆಎ-28 .ಎಫ್ -2449) ಬಸ್ಸಲ್ಲಿ ಕೆಂಭಾವಿಗೆ ಆಗಮಿಸಿದ ಮುದನೂರು ಗ್ರಾಮದ ಮಹಿಳೆ ತಮ್ಮ ಚೀಲವನ್ನು ಮರೆತು ಬಿಟ್ಟು ಹೋಗಿದ್ದರು, ಹೌಹಾರಿದ ಮಹಿಳೆ ಮರೆತು ಹೋದ ಚೀಲವನ್ನು ಪುನಃ ಕೆಂಭಾವಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಪುಣೆ ಬಸ್ಸಿನ ಕಂಡಕ್ಟರ್ ಆರ್ ಎಸ್ ಬೂದಿಹಾಳ (206) ಡ್ರೈವರ್ ಬಿ ಎಂ ಪೂಜಾರಿ (134) ಇವರನ್ನು ಕೇಳಿದಾಗ ಆ ಚೀಲದಲ್ಲಿ ಏನಿದೆ ಎಂದು ಪ್ರಶ್ನಿಸಿದ ಕಂಡಕ್ಟರ ಚೀಲದಲ್ಲಿ ಸುಮಾರು 2-3 ತೊಲೆ ಬಂಗಾರದ ತಾಳಿ ಕಿವಿಯೋಲೆ ಇವೆ ಎಂದಾಗ ಕೆಂಭಾವಿಯ ಸಂಚಾರಿ ನಿರೀಕ್ಷರ ಸಮ್ಮುಖದಲ್ಲಿ ಮಹಿಳೆಯನ್ನು ವಿಚಾರಣೆ ನಡೆಸಿ ಮರೆತು ಹೋದ ಚೀಲವನ್ನು ಮತ್ತು ಬಂಗಾರದ ಒಡವೆಗಳನ್ನು ಮರಳಿ ಕೊಟ್ಟ ಕಂಡಕ್ಟರ್ ಹಾಗೂ ಡ್ರೈವರ್ ಈರ್ವರು ಪ್ರಾಮಾಣಿಕತೆಗೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದರು.ಪುಣೆ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಮಲ್ಲಿಕಾರ್ಜುನ ಮರಡ್ಡಿ ಮಾತನಾಡಿ ಬಂಗಾರ ಎಂದರೆ ಬಾಯಿ ತೆರೆಯುವ ಕಾಲಘಟ್ಟದಲ್ಲಿ…
10 ಕೋಟಿ ನಶಾಮುಕ್ತ ಮಹಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದ ಶಂಕರರಾವ ದೇಶಮುಖ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಒಬ್ಬ ವ್ಯಕ್ತಿ ನಶೆಯಿಂದ ಮುಕ್ತನಾದರೆ ಒಂದು ಕುಟುಂಬ ಉಳಿಯುತ್ತದೆ. ಒಂದು ಕುಟುಂಬ ಉಳಿದರೆ ಸಮಾಜ ಸದೃಢವಾಗುತ್ತದೆ;ಸಮಾಜ ಸದೃಢವಾದರೆ ರಾಷ್ಟ್ರ ಸಶಕ್ತವಾಗುತ್ತದೆ ಎಂದು ಶಂಕರರಾವ ದೇಶಮುಖ ಹೇಳಿದರು. ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಓಂ ಶಾಂತಿ ಭವನದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ರಾಜ್ಯ ಸರ್ಕಾರ ಮತ್ತು ಮಾದಕ ದ್ರವ್ಯ ನಿಯಂತ್ರಣ ಮಂಡಳಿ ಹಾಗೂ ಬ್ರಹ್ಮಾಕುಮಾರಿಸ್ ಸಹಯೋಗದಲ್ಲಿ ಹಮ್ಮಿಕೊಂಡ 10 ಕೋಟಿ ನಶಾಮುಕ್ತ ಮಹಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಶೆ ಕ್ಷಣಿಕ ಸುಖ ನೀಡಬಹುದು ಆದರೆ ಶಾಶ್ವತ ದುಃಖವನ್ನೇ ಉಡುಗೊರೆಯಾಗಿ ಕೊಡುತ್ತದೆ ಸಂಯಮವೇ ಜೀವನದ ನಿಜವಾದ ಶಕ್ತಿ ಎಂದರು.ಅತಿಥಿಯಾಗಿ ಮಾತನಾಡಿದ ಇನ್ನರ್ ವಿಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿಯುವಕರ ಕೈಯಲ್ಲಿ ಮಾದಕ ವಸ್ತು ಬದಲಾಗಿ, ಪುಸ್ತಕ ಇರಲಿ, ಮನದಲ್ಲಿ ವ್ಯಸನದ ಬದಲು ಗುರಿ ಇರಲಿ…
ಸ್ಥಳ ಬದಲಾವಣೆಗೆ ಸಾರ್ವಜನಿಕರ ಆಗ್ರಹ | ಸ್ಥಳ ಬದಲಾವಣೆ ಪ್ರಶ್ನೆಯೇ ಇಲ್ಲ” ಎಂದ ಕಾರ್ಯದರ್ಶಿ ಔರಂಗಾಬಾದ ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಎಪಿಎಂಸಿ ಉಪಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಮಾರು ಮೂರುಕೋಟಿ(3ಕೋಟಿ)ರೂಪಾಯಿಗಳ ವಿವಿಧ ಕಾಮಗಾರಿಗಳ ಕ್ಯಾಂಟೀನ್, ಗೋಡವಾನ್ ನಿರ್ಮಾಣ,ನಾಲ್ಕು ವ್ಯಾಪಾರ ಮಳಿಗೆ, ಹೈಟೆಕ್ ಆಫೀಸ್ ಹಾಗೂ ಶೌಚಾಲಯಗಳ ಕಟ್ಟಡ ಕಾಮಗಾರಿಗಳಿಗೆ ಮಂಜುರಾತಿ ದೊರೆತಿದ್ದು ಶೀಘ್ರದಲ್ಲಿಯೆ ಕಾಮಗಾರಿ ನಡೆಯಲಿದೆ ಎಂದು ಕಾರ್ಯದರ್ಶಿ ಐ.ಎಸ್.ಔರಂಗಾಬಾದ ಅವರು ಚಡಚಣದ ಎಪಿಎಮ್‌ಸಿ ಯಲ್ಲಿ ಹೇಳಿದರು.ಚಡಚಣ ಎಪಿಎಮ್‌ಸಿ ಉಪಮಾರುಕಟ್ಟೆಯ ಒಟ್ಟು ಜಾಗ 7 ಎಕರೆ 10 ಗುಂಟೆ ಇದ್ದು ಈಗ ಕೇವಲ 6 ಎಕರೆ 20 ಗುಂಟೆ ಜಾಗ ಮಾತ್ರ ಲಭ್ಯವಿದೆ ಎಂದು ತಮ್ಮ ಅಳಲನ್ನು ಪತ್ರಕರ್ತರ ಮುಂದೆ ತೋಡಿಕೊಂಡರು.ಹೈಟೆಕ್ ಶೌಚಾಲಯದ ಸ್ಥಳ ಆಯ್ಕೆ ವಿವಾದಕ್ಕೆ ಕಾರಣವಾಗಿದ್ದು, ಸಾರ್ವಜನಿಕರ ವಾಸದ ಮನೆಗಳಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸಲು ಮುಂದಾಗಿರುವ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಗ್ಯ, ಪರಿಸರ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಈ ಸ್ಥಳ ಸೂಕ್ತವಲ್ಲ ಎಂದು…
ಉದಯರಶ್ಮಿ ದಿನಪತ್ರಿಕೆ ಚಡಚಣ: ಆ.15ರಂದು ಆಯೋಜಿಸುವ 80 ನೇ ಸ್ವಾತಂತ್ಯೋತ್ಸವದ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸುವ ಹಿನ್ನೆಲೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ದತೆ ಕೈಗೊಳ್ಳುವಂತೆ ತಹಶೀಲ್ದಾರ ಸಂಜಯ ಇಂಗಳೆ ಸೂಚನೆ ನೀಡಿದರು.ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ವಾತಂತ್ರೋತ್ಸವದ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸ್ವಾತಂತ್ರೋತ್ಸವದ ದಿನಾಚರಣೆ ಪ್ರಯುಕ್ತ ಆ.15ರಂದು ಬೆಳಗ್ಗೆ 8:30 ಕ್ಕೆ ಪಟ್ಟಣದ ಶ್ರೀ ಸಂಗಮೇಶ್ವರ ಶಾಲಾ ಕಾಲೇಜ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದರು.ಮುಖ್ಯ ವೇದಿಕೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಲ್ಲ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದರಲ್ಲದೆ, ಸರ್ಕಾರದ ಶಿಷ್ಟಾಚಾರವನ್ನು ಚಾಚೂ ತಪ್ಪದೆ ಪಾಲಿಸಿ ಕಾರ್ಯಕ್ರಮ ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ನಿರ್ದೇಶನ ನೀಡಿದರು.ಪಟ್ಟಣದ ಪ್ರಮುಖ ಬೀದಿ ಹಾಗೂ ವೃತ್ತಗಳ ಸ್ವಚ್ಛತೆ ಕುರಿತು ಪ.ಪಂ.ಮುಖ್ಯಾಧಿಕಾರಿಗಳು ನಿಗಾ ವಹಿಸಬೇಕು. ಕುಡಿಯುವ ನೀರು, ಸ್ವಾತಂತ್ರ್ಯ ಚಳುವಳಿಯ ಮಹತ್ವ ಸಾರುವ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸೇರಿದಂತೆ ಕಾರ್ಯಕ್ರಮದ ವೇದಿಕೆ ವ್ಯವಸ್ಥೆ…
