Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಹೊನ್ನೊಪ್ಪಗವಡ ಲೇಔಟ್‌ನಲ್ಲಿ ರೂ.೨ಕೋಟಿ ವೆಚ್ಚದಲ್ಲಿ ಸಾಲುಮರದ ತಿಮ್ಮಕನ ವೃಕ್ಷೆೋದ್ಧಾನ ನಿರ್ಮಾಣವಾದ ಉದ್ಯಾನ ಉದ್ಘಾಟನೆ ಹಾಗೂ ಬಸವೇಶ್ವರ ವೃತ್ತದಿಂದ ವಿವೇಕಾನಂದ ವೃತ್ತದ, ವಿವೇಕಾನಂದ ವೃತ್ತದಿಂದ ಗೋಲಗೇರಿ ರಸ್ತೆಯವರೆಗೆ ಹೊಸ ವಿದ್ಯುತ್ ಕಂಬಗಳ ಜೋಡಣಾ ಕಾಮಗಾರಿ ಉದ್ಘಾಟನೆ ಸಮಾರಂಭವು ಜು.೨೮ರಂದು ಸೋಮವಾರ ಸಾಯಂಕಾಲ ೬ರಂದು ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಸಚಿವ ಈಶ್ವರ ಖಂಡ್ರೆ ಹಾಗೂ ಶಾಸಕ ಅಶೋಕ ಮನಗೂಳಿ ನೆರವೇರಿಸುವರು. ಕಾರ್ಯಕ್ರಮದಲ್ಲಿ ಸಮಗ್ರ ತಾಲೂಕಿನ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ವಿಧ್ಯಾರ್ಥಿಗಳು ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಂಡು ವಿದ್ಯಾವಂತರಾಗಬೇಕು, ಪಾಲಕರು ಪೋಷಕರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವುದರ ಜೊತೆಗೆ ಯಾವುದೇ ಕಾರಣಕ್ಕೂ ಯಾವೊಬ್ಬ ಮಗುವೂ ಕೂಡಾ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು, ಈ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಯಡ್ರಾಮಿ ಹೇಳಿದರು.ಕಲಕೇರಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ನಡೆದ ಕಲಕೇರಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವಂತಹ ವಿವಿದ ಸರಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಕೇಂದ್ರ ಸರ್ಕಾರದ ರಾಷ್ಟಿçÃಯ ಸಾಕ್ಷರತಾ ಮಿಷನ್ ಸದಸ್ಯ ಡಾ.ನಾಗರಾಜ್ ಗೌರಿಬಿದನೂರ ಇವರ ಸಾರಥ್ಯದಲ್ಲಿ ಕಲಕೇರಿ ಗ್ರಾಮದ ಭಗೀರಥ ಸಮಾಜದ ಮುಖಂಡರಾದ ಭಾಗ್ಯವಂತ ಮೋಪಗಾರ ಇವರ ನೇತೃತ್ವದಲ್ಲಿ ಹಮ್ಮಿಕೊಂಡ ಉಚಿತ ಸಮವಸ್ತç ಹಾಗೂ ಪಠ್ಯಪುಸ್ತಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕಲಕೇರಿ ಗ್ರಾಮದ ಶಾಲೆಯಲ್ಲಿ ವಲಯ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ನಡೆಸಬೇಕೆಂದು ಇಲ್ಲಿನ ಸ್ಥಳಿಯ ಮುಖಂಡರು ಮನವಿಯನ್ನು ಮಾಡಿದ್ದು,…

Read More

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಆರ್ಥಿಕ ಸೇರ್ಪಡೆ ಪರಿಪೂರ್ಣತೆ ಅಭಿಯಾನ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆಯಿತು.ಕಲಕೇರಿ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆ ಹಾಗೂ ಜಿಲ್ಲೆಯ ಅಗ್ರಾಣಿಯ ಬ್ಯಾಂಕ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಜನರಿಗೆ ಕೇಂದ್ರ ಯೋಜನೆಗಳ ಕುರಿತು ಮಾಹಿತಿ ನೀಡಿ, ಯೋಜನೆಗಳಿಗೆ ನೋಂದಣಿ ಮಾಡಿಸಿದರು.ಇದೆ ವೇಳೆ ಮಾತನಾಡಿದ ಜಿಲ್ಲಾ ಆಗ್ರಣಿಯ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶ್ರೀ ಸಿದ್ದಯ್ಯ ಮಾತನಾಡಿ ಕೇಂದ್ರ ಸರ್ಕಾರ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಮತ್ತು ಸುರಕ್ಷ ಯೋಜನೆ ಅಕಾಲಿಕ ಮರಣ ಮತ್ತು ಅಪಘಾತ ವಿಮೆ ಕುರಿತು ಮತ್ತು ಆನಲೈನ್ ವಂಚನೆಗಳ ಕುರಿತು ವಿವರಣೆ ನೀಡಿ ಸಾರ್ವಜನಿಕರು ಯೋಜನೆಗಳ ಸದುಪಯೋಗ ಡೆದುಕೊಳ್ಳಬೇಕು ಎಂದರು.ಇದೆ ವೇಳೆ ಉಪಸ್ಥಿತರಿದ್ದ ಕಲಕೇರಿ ಹೀರೆಮಠದ ಸಿದ್ದರಾಮ ಶಿವಾಚಾರ್ಯರು ಮಾತನಾಡಿ ಬ್ಯಾಂಕ್ ಮೂಲಕ ದೊರೆಯವ ಸರ್ಕಾರದ ಯೋಜನೆಗಳನ್ನು ಕುಟುಂಬದ ಸುರಕ್ಷತೆ ದೃಷ್ಟಿಯಿಂದ ಇಂದೆ ನೊಂದಾಯಿಸಿಕೊಳ್ಳಲು ಸಲಹೆ ನೀಡಿದರು.ಗ್ರಾಮ ಪಂಚಾಯತ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಬರೀ ರ‍್ಯಾಂಕ್ ಗಳಿಸುವುದೊಂದೇ ಶಿಕ್ಷಣವಲ್ಲ, ನಮ್ಮ ಸಂಸ್ಕಾರ ನಡುವಳಿಕೆಗಳನ್ನು ಉತ್ತಮ ಗೊಳಸಿಕೊಳ್ಳುವುದು ನಿಜವಾದ ಶಿಕ್ಷಣದ ಧ್ಯೇಯವೆಂದು ಸಾಹಿತಿ, ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು.ಗ್ರಾಮದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಪಿಯೂಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಢೆ, ಸಾಂಸ್ಕçತಿಕ ಚಟುವಟಿಕೆಗಳ ಉದ್ಘಾಟಣಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಉಪನ್ಯಾಸ ನೀಡಿದ ಅವರು ಸಧ್ರಡ ದೇಹದಲ್ಲಿ ಸಧ್ರಡ ಮನಸ್ಸಿರುತ್ತದೆ, ಪ್ರತಿಯೊಂದು ಪಠ್ಠೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು, ಓದುವ ಸಮಯದಲ್ಲಿ ತಮ್ಮ ಗಮನವನ್ನು ಬೇರೆಡೆ ತಿರುಗಿಸದೆ ನೇರ ಗುರಿಯೊಂದಿಗೆ ಸತತ ಅಧ್ಯಯನ ಮಾಡಿದಲ್ಲಿ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಾಧನೆ ಮಾಡಬಹುದು ಎಂದರು.ಉಪನ್ಯಾಸಕರಾದ ಎ.ಬಿ. ಗೌಡಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರಮ ಪಟ್ಟರೆ ಮಾತ್ರ ಆತ್ಮವಿಶಾಸ ಬರುತ್ತದೆ, ಆತ್ಮವಿಶ್ವಾಸ ಉನ್ನತಿ ನೀಡುತ್ತದೆ, ಒಳ್ಳೆಯ ನಡುವಳಿಕೆಯಿಂದ ತಂದೆ ತಾಯಿಯರಿಗೆ ವಿಧೇಯರಾಗಿ ಸತತ ಅದ್ಯಯನ ಮಾಡಿದಲ್ಲಿ ಒಳ್ಳೆಯ ಫಲ ದೊರೆಯಲಿದೆ ಮಕ್ಕಳ ಸರ್ವತೋಮುಖ ಅಭಿವೃದ್ದಿಯೇ ಶಿಕ್ಷಣದ ಮೂಲ ಉದ್ದೇಶ ಎಂದರು.ಅಭಿವೃದ್ದಿ ಸಮೀತಿಯ ಪ್ರಭು ನೇಸೂರ,…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಯಾವುದೇ ದೇಶ ಯುದ್ಧ ಬಯಸುವುದಿಲ್ಲ ಮತ್ತು ಯುದ್ಧ ಅನಿವಾರ್ಯ ಅಲ್ಲ. ಆಕಸ್ಮಿಕವಾಗಿ ಯುದ್ಧ ನಡೆಯುತ್ತವೆ.ಯುದ್ಧಗಳು ದೇಶಗಳ ಪ್ರಗತಿಗೆ ಮಾರಕ ಎಂದು ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ| ಮುರುಗೇಶ ಕೆ.ಎಂ. ಅಭಿಪ್ರಾಯಪಟ್ಟರು.ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್.ಸಿ.ಸಿ. ಘಟಕ ಭಾರತವು ೨೬ನೇ ಕಾರ್ಗಿಲ್ ವಿಜಯ ದಿವಸವನ್ನು ೧೯೯೯ರ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಶೌರ್ಯ, ಬಲಿದಾನ ಮತ್ತು ರಾಷ್ಟ್ರೀಯ ಏಕತೆಯ ಸ್ಮರಣಾರ್ಥವಾಗಿ ನೆನಪಿಸಿಕೊಳ್ಳಲಾಗುತ್ತದೆ ಕಾರ್ಗಿಲ್ ವಿಜಯ ದಿವಸದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಯೋಧರ ಪರಾಕ್ರಮ ಜಗತ್ತಿಗೆ ಗೊತ್ತಿದೆ. ಎಂಥ ಭಯಾನಕ ಪರಿಸ್ಥಿತಿ ಎದುರಾದರೂ ಭಾರತೀಯ ಯೋಧರು ದೇಶದ ಗಡಿಯಲ್ಲಿ ತಮ್ಮ ಜೀವದ ಹಂಗು ತೊರೆದು ಹೋರಾಡಿ ಭಾರತ ದೇಶದ ನಾಗರಿಕರು ನೆಮ್ಮದಿಯಾಗಿ ಜೀವಿಸುವಂತೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ| ಎಸ್. ಬಿ. ರಾಠೋಡ ಅವರು ಮಾತನಾಡಿ,…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಕಾಂಗ್ರೆಸ್ ಪಕ್ಷದ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ವಿವಿಧ ಸಮಿತಿಗಳಿಗೆ ನೂತನವಾಗಿ ಆಯ್ಕೆಯಾದ ಮಹಿಪಾಲರೆಡ್ಡಿ ಡಿಗ್ಗಾವಿ ( ಯಾದಗಿರಿ ಜಿಲ್ಲಾ ಬ್ಲಾಕ ಕಾಂಗ್ರೆಸ್ ಉಪಾಧ್ಯಕ್ಷ) ಲಾಡ್ಲೆ ಪಟೇಲ್ ಹೆಗನದೊಡ್ಡಿ (ಅಲ್ಪಸಂಖ್ಯಾತರ ಹೋಬಳಿ ಘಟಕದ ಕೆಂಭಾವಿ) ಶಿವರಾಜ ಬೂದೂರ (ಯಾದಗಿರಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ) ರಹೇಮಾನ್ ಪಟೇಲ್ ಯಲಗೋಡ (ಪುರಸಭೆ ಅಧ್ಯಕ್ಷರು ಕೆಂಭಾವಿ) ಸಾಹೇಬ್ ಲಾಲ್ ಆಂದೇಲಿ (ಕೆಂಭಾವಿ ಹೋಬಳಿ ಬ್ಲಾಕ್ ಕಾಂಗ್ರೆಸ್ ಕಾರ್ಯಧ್ಯಕ್ಷ) ಇವರುಗಳಿಗೆ ಶನಿವಾರ ” ಮೆಕ್ಕಾ ಮಸ್ಜಿದ್ ಕಮಿಟಿ” ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತರ ಹೋಬಳಿ ಘಟಕದ ಅಧ್ಯಕ್ಷ ಲಾಡ್ಲೆ ಪಟೇಲ್, ಹೆಗನದೊಡ್ಡಿ ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯ, ಶಿಕ್ಷಣ, ಮತ್ತು ಸಮುದಾಯ ವಿಕಾಸಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದ್ದು ಹಲವಾರು ಬಡ ಜನರಗೆ ಗ್ಯಾರಂಟಿ ಯೋಜನೆಗಳು ಅನುಕೂಲವಾಗಿದೆ. “ಜಾತಿ ಮತ್ತು ಧರ್ಮವು ಮನೆಯೊಳಗಿನ ಆಚರಣೆಯಾಗಲಿ” ಎಂಬ ನೀತಿಯನ್ನು ಸಿದ್ದರಾಮಯ್ಯ ನೇತೃತ್ವದ…

Read More

ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಶರಣ ಮಾಸದ ಎರಡನೆಯ ದಿವಸದ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಡಾ. ಸದಾಶಿವ ಮರ್ಜಿ ಅವರು ಕರ್ನಾಟಕ ಏಕೀಕರಣಕ್ಕೆ ಧಾರವಾಡ ಜಿಲ್ಲೆಯ ಲಿಂಗಾಯತರ ಕೊಡುಗೆ ಎನ್ನುವ ವಿಷಯದ ಬಗೆಗೆ ಅತ್ಯಂತ ಪ್ರಬುದ್ಧ ತೆಯಿಂದ ಎಳೆ ಎಳೆಯಾಗಿ ನಮಗೆಲ್ಲರಿಗೂ ತಿಳಿಸಿಕೊಟ್ಟರು. ಇದೊಂದು ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಿ ಅಖಂಡ ಕರ್ನಾಟಕವನ್ನು ಹುಟ್ಟುಹಾಕಿದ ಚಳುವಳಿಯೆಂದು ವರ್ಣಿಸಿದರು.ಕನ್ನಡವನ್ನು ಬೆಳೆಸುವ ಮತ್ತು ಕಾಪಾಡುವ ಕಾರ್ಯ ಇದರಿಂದ ಸಾಧ್ಯವಾಯಿತು. ಮರಾಠಿ, ಉರ್ದು, ಪರ್ಷಿಯನ್, ಇಂಗ್ಲಿಷ್ ಪ್ರಭಾವದಿಂದ ಕಳಾ ಹೀನವಾಗಿದ್ದ ಕನ್ನಡದ ಅಸ್ಮಿತೆಯ ಮತ್ತು ಅಸ್ತಿತ್ವದ ಹೋರಾಟವಿದು ಎಂದು ಅಭಿಪ್ರಾಯ ಪಟ್ಟರು. ಕನ್ನಡ ಕಲಿಯಲು ತೋರುವ ಅನಾದರ,ಅಸಡ್ಡೆ, ಮೂಲಭೂತ ಸೌಕರ್ಯ ಇಲ್ಲದೆ ಕನ್ನಡ ಶಾಲೆ ಮುಚ್ಚುವಿಕೆ, ಬೇರೆ ಭಾಷೆಗಳ ಪ್ರಾಬಲ್ಯ, ಹೀಗೆ ನಾನಾ ವಿಷಯಗಳಿಂದ ನೊಂದು ಕರ್ನಾಟಕ ಏಕೀಕರಣದ ಹೋರಾಟ ಹುಟ್ಟಲು ಕಾರಣ ವಾಯ್ತು…

Read More

ಸಹಕಾರ ಭಾರತಿ ಕರ್ನಾಟಕ, ವಿಜಯಪುರ ಜಿಲ್ಲಾ ಘಟಕದ ವಿವಿಧ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಹಕಾರ ಭಾರತಿ ಒಂದು ರಾಷ್ಟ್ರೀಯ ಸಂಘಟನೆಯಾಗಿದೆ. ಅಲ್ಲದೆ ಸಹಕಾರಿ ಕ್ಷೇತ್ರದಿಂದ ದೇಶದ ಸಮೃದ್ಧಿ ಸಾಧಿಸಬಹುದಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.ಅವರು ಸಹಕಾರ ಭಾರತಿ ಕರ್ನಾಟಕ, ವಿಜಯಪುರ ಜಿಲ್ಲಾ ಘಟಕದ ವಿವಿಧ ಪದಾಧಿಕಾರಿಗಳ ಹಾಗೂ ಜಿಲ್ಲಾ ಅಧ್ಯಕ್ಷ, ಸಂಘಟನಾ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಗಳ ಪದಗ್ರಹಣ ಕಾರ್ಯಕ್ರಮ ನಗರದ ಬಾವಸಾರ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ಸಹಕಾರ ಸಂಘಗಳಲ್ಲಿ ಜನರು ತೊಡಗಿಸಿದ ಹಣ ಅದು ಸಾರ್ವಜನಿಕ ಹಣ ಆ ಹಣವನ್ನು ಕಾಯುವ ಜವಾಬ್ದಾರಿ ಪ್ರತಿಯೊಬ್ಬ ನಿರ್ದೇಶಕರ ಜವಾಬ್ದಾರಿ ಅಧಿಕಾರ ಇದೆ ಎಂದು ಸಾರ್ವಜನಿಕ ದುಡ್ಡನ್ನು ಭಿಕಾಬಿಟ್ಟೆ ಸಾಲ ನೀಡಿದರೆ ಸಹಕಾರಿ ಸಂಘಗಳು ಮಹತ್ವ ಕಳೆದು ಕೊಳ್ಳುತ್ತವೇ ಎಂದರು.ಇದೆ ಸಂದರ್ಭದಲ್ಲಿ ಕೇಂದ್ರ ಸರಕಾರ ತಂದ ಹೊಸ ಸಹಕಾರ ನೀತಿಯ ಮಾಹಿತಿ ಇರುವ ಕರಡನ್ನು ಸಹಕಾರ ಭಾರತಿ ರಾಜಾಧ್ಯಕ್ಷರಿಗೆ ನೀಡಿದರು.ಮುಖ್ಯ ಅತಿಥಿಗಳಾದ ಸಹಕಾರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಜಿಲ್ಲೆಯ ನಿಡಗುಂದಿ ಪಟ್ಟಣ ಪಂಚಾಯತ್ ವಾರ್ಡ-೦೫ರ ಉಪ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಜುಲೈ ೨೫ ರಂದು ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಕರಡು ಮತದಾರರ ಪಟ್ಟಿಗೆ ಜುಲೈ ೨೪ರವರೆಗೆ ಸ್ವೀಕೃತವಾದ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ಜುಲೈ ೨೫ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಆದರ್ಶ ವಿದ್ಯಾಲಯದಲ್ಲಿ ನೂತನ ಎಸ್.ಡಿ.ಎಂ.ಸಿ ರಚನೆ ಮಾಡಲಾಯಿತು.ಅಧ್ಯಕ್ಷೆಯಾಗಿ ಪೂರ್ಣಿಮಾ ಬೆಳಗಲ್ ಉಪಾಧ್ಯಕ್ಷರಾಗಿ ಸಂಗನಗೌಡ ಪಾಟೀಲ ಇವರನ್ನ ಆವಿರೊದ ಆಯ್ಕೆ ಮಾಡಲಾಯಿತು. ಎಸಿ೧ ಯಲ್ಲಪ್ಪ ಮ್ಯಾಗೇರಿ, ಎಸ್ ಟಿ೧ ಶರಣಪ್ಪ ಸುತಗೊಂಡ ಅವರನ್ನ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಅಲ್ಪಸಂಖ್ಯಾತರ ಕೋಟಾದಲ್ಲಿ ಬಂದೇನವಾಜ ಕುಮಸಿ ಅವರನ್ನು ಆವಿರೊಧವಾಗಿ ಆಯ್ಕೆ ಮಾಡಲಾಯಿತು. ಮುಖ್ಯಗುರು ಅನಿಲ್ ಕುಮಾರ್ ರಾಠೋಡ ಅವರು ಖಜಾಂಚಿ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್, ಸೋಮನಗೌಡ ಪಾಟೀಲ್, ಗುಂಡಪ್ಪ ಕೋಟಿಗಿ, ಮಹಮ್ಮದ್ ರಸೂಲ್ ಮುಲ್ಲಾ ಸೇರಿದಂತೆ ಹಲವರು ಇದ್ದರು.

Read More