ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಹೊನ್ನೊಪ್ಪಗವಡ ಲೇಔಟ್‌ನಲ್ಲಿ ರೂ.೨ಕೋಟಿ ವೆಚ್ಚದಲ್ಲಿ ಸಾಲುಮರದ ತಿಮ್ಮಕನ ವೃಕ್ಷೆೋದ್ಧಾನ ನಿರ್ಮಾಣವಾದ ಉದ್ಯಾನ ಉದ್ಘಾಟನೆ ಹಾಗೂ ಬಸವೇಶ್ವರ ವೃತ್ತದಿಂದ ವಿವೇಕಾನಂದ ವೃತ್ತದ, ವಿವೇಕಾನಂದ ವೃತ್ತದಿಂದ ಗೋಲಗೇರಿ ರಸ್ತೆಯವರೆಗೆ ಹೊಸ ವಿದ್ಯುತ್ ಕಂಬಗಳ ಜೋಡಣಾ ಕಾಮಗಾರಿ ಉದ್ಘಾಟನೆ ಸಮಾರಂಭವು ಜು.೨೮ರಂದು ಸೋಮವಾರ ಸಾಯಂಕಾಲ ೬ರಂದು ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಸಚಿವ ಈಶ್ವರ ಖಂಡ್ರೆ ಹಾಗೂ ಶಾಸಕ ಅಶೋಕ ಮನಗೂಳಿ ನೆರವೇರಿಸುವರು. ಕಾರ್ಯಕ್ರಮದಲ್ಲಿ ಸಮಗ್ರ ತಾಲೂಕಿನ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
