ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಕಾಂಗ್ರೆಸ್ ಪಕ್ಷದ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ವಿವಿಧ ಸಮಿತಿಗಳಿಗೆ ನೂತನವಾಗಿ ಆಯ್ಕೆಯಾದ ಮಹಿಪಾಲರೆಡ್ಡಿ ಡಿಗ್ಗಾವಿ ( ಯಾದಗಿರಿ ಜಿಲ್ಲಾ ಬ್ಲಾಕ ಕಾಂಗ್ರೆಸ್ ಉಪಾಧ್ಯಕ್ಷ) ಲಾಡ್ಲೆ ಪಟೇಲ್ ಹೆಗನದೊಡ್ಡಿ (ಅಲ್ಪಸಂಖ್ಯಾತರ ಹೋಬಳಿ ಘಟಕದ ಕೆಂಭಾವಿ) ಶಿವರಾಜ ಬೂದೂರ (ಯಾದಗಿರಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ) ರಹೇಮಾನ್ ಪಟೇಲ್ ಯಲಗೋಡ (ಪುರಸಭೆ ಅಧ್ಯಕ್ಷರು ಕೆಂಭಾವಿ) ಸಾಹೇಬ್ ಲಾಲ್ ಆಂದೇಲಿ (ಕೆಂಭಾವಿ ಹೋಬಳಿ ಬ್ಲಾಕ್ ಕಾಂಗ್ರೆಸ್ ಕಾರ್ಯಧ್ಯಕ್ಷ) ಇವರುಗಳಿಗೆ ಶನಿವಾರ ” ಮೆಕ್ಕಾ ಮಸ್ಜಿದ್ ಕಮಿಟಿ” ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತರ ಹೋಬಳಿ ಘಟಕದ ಅಧ್ಯಕ್ಷ ಲಾಡ್ಲೆ ಪಟೇಲ್, ಹೆಗನದೊಡ್ಡಿ ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯ, ಶಿಕ್ಷಣ, ಮತ್ತು ಸಮುದಾಯ ವಿಕಾಸಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದ್ದು ಹಲವಾರು ಬಡ ಜನರಗೆ ಗ್ಯಾರಂಟಿ ಯೋಜನೆಗಳು ಅನುಕೂಲವಾಗಿದೆ. “ಜಾತಿ ಮತ್ತು ಧರ್ಮವು ಮನೆಯೊಳಗಿನ ಆಚರಣೆಯಾಗಲಿ” ಎಂಬ ನೀತಿಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರತಿಪಾದಿಸುತ್ತದೆ ಎಂದು ಹೇಳಿದರು.
ಪ್ರಮುಖರಾದ ಖಾಜಾಪಟೇಲ್ ಕಾಚೂರು ಪುರಸಭೆ ಸದ್ಯಸರಾದ ಆರೀಫ್ ಹುಸೇನ್ ಖಾಜಿ, ರಾಘವೇಂದ್ರ ದೇಶಪಾಂಡೆ, ಹಿರಿಯರಾದ ಸೈಯದ್ ಹುಸೇನ್ ಮೌಲಾನಾ, ಗಾಲಿಬ್ ಖಾನ್ ಇನಾಮದಾರ, ರಫೀಕ್ ವಡಕೇರಿ, ಬಿ. ಜೆಡ್. ನಾಲತವಾಡ, ರಂಗಪ್ಪ ವಡ್ಡರ, ಶಫೀಕ್ ದಫೇದಾರ್, ಹನೀಫ್ ಸಾಸನೂರ್, ಜಿಲ್ಹಾನಿ ನಾಶಿ, ಆರೀಫ್ ಸಾಸನೂರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

