Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆರೋಪಿತರಿಂದ ಕೃತ್ಯಕ್ಕೆ ಬಳಸಲಾದ 01 ಕಂಟ್ರಿ ಪಿಸ್ತೂಲ್, 04 ಜೀವಂತ ಗುಂಡುಗಳು ಹಾಗೂ 03 ಮೋಟಾರ್ ಸೈಕಲ್‌ಗಳ ಜಪ್ತಿ | ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಳೆದ ಜು.14 ರಂದು ನಗರದ ಎಸ್.ಎಸ್. ಕಾಂಪ್ಲೇಕ್ಸ್ ದಲ್ಲಿ ನಡೆದ ಸುಶೀಲಕುಮಾರ ಕಾಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.ಈ ಕುರಿತು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ ಅವರು, ಸುಶೀಲ ಕಾಳೆ ಕೊಲೆ ಕುರಿತು ಮೃತನ ತಾಯಿ ಸುಚಿತ್ರಾ ಗಂಡ ತುಳಜಾರಾಮ ಕಾಳೆ, ಇವರು ಕೊಟ್ಟ ದೂರಿನ ಮೇರೆಗೆ ಗಾಂಧಿಚೌಕ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣದ ತನಿಖಾಧಿಕಾರಿ ಪ್ರದೀಪ ತಳಕೇರಿ, ಪಿಐ ಗಾಂಧಿಚೌಕ ಪೊಲೀಸ್ ಠಾಣಿ ಹಾಗೂ ತಂಡದವರು ಕಾರ್ಯಪ್ರವೃತ್ತರಾಗಿ ಆರೋಪಿತರಾದ 1) ಆಕಾಶ ತಂದೆ ವಿಠೋಬಾ ಕಲ್ಲವ್ವಗೋಳ, 29 ವರ್ಷ, ಸಾ: ಹಿಟ್ನಳ್ಳಿ ಹಾ:ವ: ಸಾಯಿ ಪಾರ್ಕ, ವಿಜಯಪುರ. 2) ಸುದೀಪ @ ಸುಭಾಸ ತಂದೆ ರಮೇಶ…
ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದ ಶಾಸಕ ಕಟಕದೊಂಡ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಜಿಲ್ಲಾಡಳಿತ ವಿಜಯಪುರ ಮತ್ತು ತಾಲೂಕಾಡಳಿತ ಚಡಚಣ ವತಿಯಿಂದ ಹಮ್ಮಿಕೊಳ್ಳಲಾದ ಭೂ ಸುರಕ್ಷಾ ಯೋಜನೆ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರು ಬುಧುವಾರ ತಹಶೀಲ್ದಾರ ಕಾರ್ಯಾಲಯದಲ್ಲಿ ಉಧ್ಘಾಟಿಸಿದರು.ಈ ವೇಳೆ ಮಾತನಾಡಿದ ವಿಠ್ಠಲ ಕಟಕಧೋಂಡ ಅವರು, ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಜನಸಾಮಾನ್ಯರಿಗೆ ಸುಲಭವಾಗಿ ತಲುಪುವಂತಹ ಕಂದಾಯ ಇಲಾಖೆಯ ಎಲ್ಲ ದಾಖಲಾತಿಗಳನ್ನು ಪಡೆಯಬಹುದಾಗಿದೆ. ಅದಕ್ಕಾಗಿ ಯಶಸ್ವಿಯಾದ ಪಂಚ ಗ್ಯಾರಂಟಿ ಯೋಜನೆಯ ಜೊತಗೆ ಆರನೆ ಗ್ಯಾರಂಟಿ ಯೋಜನೆಯನ್ನು ಸಚಿವ ಕೃಷ್ಣ ಭೈರೆಗೌಡರು ಕೊಟ್ಟಿದ್ದಾರೆ ಎಂದರು.ಮೊದಲು ಭೂದಾಖಲೆಗಳನ್ನು ಪಡೆಯುವುದು ಅಷ್ಟು ಸುಲಭದಕೆಲಸ ಆಗಿತ್ತಿರಲಿಲ್ಲ ಸುಮಾರು ದಿನಗಳು ಬೇಕಾಗುತ್ತಿತ್ತು ಈಗ ಸರಕಾರದ ಮಹತ್ವಾಕಾಂಕ್ಷಿ ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದೆ ಇದರಿಂದ ರೈತರ ತೊಂದರೆ ಹಾಗೂ ವಿಳಂಬಕ್ಕೆ ತಿಲಾಂಜನಿ ಕೊಟ್ಟಂತಾಗಿದೆ, ನಿಮ್ಮ ಜಮೀನಿನ ದಾಖಲಾತಿಗಳನ್ನು ಇನ್ನುಮುಂದೆ ನೀವು ಮನೆಯಲ್ಲಿ, ಕರ್ನಾಟಕದ, ಜಗತ್ತಿನ ಯಾವ ಮೂಲೆಯಲ್ಲಿ ಕುಳಿತು ತಮ್ಮ ಜಮೀನಿನ…
ವಿಜಯಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ್ ಎ. ಪ್ರಧಾನ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನ್ಯಾಯವಾದಿಗಳು ನ್ಯಾಯದ ರಕ್ಷಕರಾಗಿರಬೇಕು. ದೀನ- ದುರ್ಬಲರ, ಧ್ವನಿಯಿಲ್ಲದವರ ಧ್ವನಿಯಾಗಿರಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ್ ಎ. ಪ್ರಧಾನ ಹೇಳಿದ್ದಾರೆ.ಬುಧವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾನೂನು ವೃತ್ತಿಯು ಬಲವಾದ ನೀತಿಶಾಸ್ತ್ರವಾಗಿದ್ದು, ನಿರಂತರ ಕಲಿಕೆ ಮತ್ತು ಆಳವಾದ ಕರ್ತವ್ಯ ಪ್ರಜ್ಞೆಯನ್ನು ಬಯಸುತ್ತದೆ. ಕಾನೂನು ವಿದ್ಯಾರ್ಥಿಗಳು ಕಾನೂನಿನ ನಿಬಂಧನೆಗಳನ್ನು ಕಲಿಯುವುದಲ್ಲದೆ, ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವ ಮೌಲ್ಯಗಳ ಪ್ರಕಾರ ಬದುಕಲು ಕಲಿಯಬೇಕು ಎಂದು ಅವರು ಹೇಳಿದರು.ಡೀಮ್ಡ್ ವಿವಿ ಕುಲಪತಿ ಡಾ. ಅರುಣ ಚಂ. ಇನಾಮದಾರ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮತ್ತು ಸತತ ಪ್ರಯತ್ನದಿಂದ ಯಶಸ್ಸು ಸಾಧಿಸಬೇಕು. ಪ್ರಯ್ತನಗಳು ಮಾತ್ರ ಫಲಿತಾಂಶಗಳನ್ನು ನೀಡುತ್ತವೆ. ಅಲ್ಲದೇ, ವಿದ್ಯಾರ್ಥಿಗಳು ಹೊಸ ಕಾನೂನುಗಳ ಬಗ್ಗೆ ತಿಳಿದಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಹೇಳಿದರು.ವಿವಿ ಸಮಕುಲಾಧಿಪತಿ ಡಾ. ವೈ.…
ಉದ್ಯಮಿಗಳಿಗೆ ನಾವು ಕೇವಲ ಭೂಮಿ ಕೊಡುವುದಿಲ್ಲ | ಆಂಧ್ರ ಸಚಿವ ನಾರಾ ಲೋಕೇಶ್ ಗೆ ಸಚಿವ ಎಂಬಿ ಪಾಟೀಲ್ ತಿರುಗೇಟು ಬೆಂಗಳೂರು: ರಾಜ್ಯದಲ್ಲಿ ಉದ್ಯಮಿಗಳಿಗೆ ನಾವು ಕೇವಲ ಭೂಮಿ ನೀಡುವುದಿಲ್ಲ. ಭಾರತದ ನಂ.1 ಏರೋಸ್ಪೇಸ್, ರಕ್ಷಣಾ ಪರಿಸರ ವ್ಯವಸ್ಥೆಯನ್ನು ನೀಡುತ್ತೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು ಬುಧವಾರ ಆಂಧ್ರ ಪ್ರದೇಶ ಸಚಿವ ನಾರಾ ಲೋಕೇಶ್ ಅವರಿಗೆ ತಿರುಗೇಟು ನೀಡಿದ್ದಾರೆ.ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ದೇವನಹಳ್ಳಿಯಲ್ಲಿ ನಡೆಯಬೇಕಾಗಿದ್ದ ಭೂಸ್ವಾಧೀನವನ್ನು ರಾಜ್ಯ ಸರ್ಕಾರ ಕೈಬಿಟ್ಟ ನಂತರ ನಾರಾ ಲೋಕೇಶ್ ಅವರು, “ಡಿಯರ್ ಏರೋಸ್ಪೇಸ್ ಇಂಡಸ್ಟ್ರಿ, ಸುದ್ದಿ ತಿಳಿದು ಬೇಸರವಾಯ್ತು. ನನ್ನ ಬಳಿ ಉತ್ತಮ ಐಡಿಯಾ ಇದೆ. ನೀವು ಯಾಕೆ ಆಂಧ್ರಪ್ರದೇಶದತ್ತ ನೋಡಬಾರದು?” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಾರಾ ಲೋಕೇಶ್ ಪೋಸ್ಟ್ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಎಂಬಿ ಪಾಟೀಲ್ ಅವರು, ರೈತರ ಹಿತದೃಷ್ಟಿಯಿಂದ ಭೂಸ್ವಾಧೀನ ಕೈಬಿಡಬೇಕಾಯಿತು. ಆದರೆ ಈ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಳವಾರ ಸಮಾಜದ ಪ್ರತಿಭಾ ಪುರಸ್ಕಾರ ಸಮೀತಿ ವತಿಯಿಂದ 2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವೀತಿಯ ಪಿ.ಯು.ಸಿಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಆಗಸ್ಟ್ 17ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದ್ದು ಅರ್ಹ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ, ಅಂಕಪಟ್ಟಿ, ಆಧಾರ್ ಕಾರ್ಡ್ಗಳ ನಕಲು ಪ್ರತಿ ಹಾಗೂ ಇತ್ತೀಚಿನ ಎರಡು ಫೊಟೋಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಅಂಚೆ ಮೂಲಕ ಇಲ್ಲವೆ ಖುದ್ದಾಗಿ ನಗರದ ಬಸ್ ನಿಲ್ಧಾಣ ಹತ್ತಿರ ಲಲಿತ ಮಹಲ್ ಹೊಟೆಲ್ ಆವರಣದಲ್ಲಿರುವ ಜ್ಞಾನಗಂಗಾ ವಿವಿದೊದ್ದೇಶ ಸಹಕಾರ ಸಂಘದಲ್ಲಿರುವ ರವಿ ಮೈಲಿಕರ್ ಮೋ.ಸಂ 9986486452, ಗಾಂಧಿ ಚೌಕ್ ಹತ್ತಿರ ವಿರುವ ಹಳೆಯ ಪುಸ್ತಕ ಅಂಗಡಿಯ ಶಿವಾನಂದ ಅಂಬಿಗೇರ ಮೋ.ಸಂ9448342873 ಹಾಗೂ ಮೀನಾಕ್ಷೀ ಚೌಕ ಆವರಣದಲ್ಲಿರುವ ಮಧುರಾ ಬಟ್ಟೆ ಅಂಗಡಿಯ ಪರಶುರಾಮ ಅಳಗುಂಡಗಿ ಇವರಲ್ಲಿ ಅರ್ಜಿಗಳನ್ನು ದಿನಾಂಕ 31ನೇ ಜುಲೈ2025ರ ರೊಳಗಾಗಿ ಸಲ್ಲಿಸುವಂತೆ ಪ್ರತಿಭಾ ಪುರಸ್ಕಾರ ಸಮೀತಿ…
*ಉದಯರಶ್ಮಿ ದಿನಪತ್ರಿಕೆ* ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೂ) ವು ಜುಲೈ ೨೦೨೫ರ ಪದವಿ, ಸ್ನಾತಕ ಪದವಿ, ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಿದೆ.ಆಸಕ್ತ ಅಭ್ಯರ್ಥಿಗಳು https://ignouadmission.samarth.edu.inಹಾಗೂhttps://ignouiop.samarth.edu.in ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ೨೦೨೫ರ ಮರು ಪ್ರವೇಶಾತಿಗೆ https://onlenerr.ignou.ac.in ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಜುಲೈ ೩೧ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂ: ೦೮೩೫೨-೨೫೨೦೦೬, ಇ-ಮೇಲ್: rcbijapur@ignou.ac.inಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ನೇ ಸಾಲಿನ ಕೇಂದ್ರ ಸರ್ಕಾರದ ನ್ಯಾಷನಲ್ ಇ-ಸ್ಕಾಲರ್ ಶಿಪ್ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಮೇಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ : ೩೧-೦೮-೨೦೨೫ ಹಾಗೂ ಮೆಟ್ರಿಕ್ ನಂತರದ ಹಾಗೂ ಉನ್ನತ ತರಗತಿ ವಿದ್ಯಾರ್ಥಿವೇತನಕ್ಕೆ ದಿನಾಂಕ : ೩೧-೧೦-೨೦೨೫ ಕೊನೆಯ ದಿನವಾಗಿದ್ದು, ಅರ್ಹ ವಿಕಲಚೇತನ ವಿದ್ಯಾರ್ಥಿಗಳು ಅರ್ಜಿಯನ್ನು ನ್ಯಾಶನಲ್ ಸ್ಕಾಲರ್ ಶಿಪ್ ಪೊರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರಾದ ಪ್ರತಿಭಾ ಮೊ:೯೬೦೬೧೫೧೧೪೯ ಹಾಗೂ ತಾಲೂಕಾ ಪಂಚಾಯತ್ ಕಾರ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ವಿಜಯಪುರ ರವಿ ರಾಠೋಡ ಮೊ: ೯೦೩೫೫೫೩೩೩೭, ಇಂಡಿ ಪರಶುರಾಮ ಭೋಸಲೆ ಮೊ: ೯೯೭೨೪೪೧೪೬೪, ಸಿಂದಗಿ ಮುತ್ತುರಾಜ ಸಾತಿಹಾಳ ಮೊ: ೯೯೮೦೦೧೯೬೩೫, ಬಸವನಬಾಗೇವಾಡಿ ಶಿವಲೀಲಾ ಮೊ: ೮೭೨೨೧೩೫೬೬೦ ಹಾಗೂ ಮುದ್ದೇಬಿಹಾಳ ಎಸ್.ಕೆ.ಘಾಟಿ ಮೊ: ೯೭೪೦೬೮೨೯೭೯ ಹಾಗೂ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಸರ್ಕಾರದಿಂದ ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ನೀಡುವ ರಾಷ್ಟ್ರಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ದಿನಾಂಕ : ೩೧-೦೭-೨೦೨೫ ಕೊನೆಯ ದಿನವಾಗಿದ್ದು, ೨ ಪಾಸ್ ಪೋರ್ಟ ಅಳತೆಯ ಭಾವಚಿತ್ರ (ವ್ಯಕ್ತಿ ವಿಭಾಗ), ಒಂದು ಪುಟಕ್ಕೆ ಮೀರದಷ್ಟು ಅರ್ಜಿದಾರರ ವ್ಯಕ್ತಿ, ಸಂಸ್ಥೆಗಳಿಂದ ಸ್ವ-ವಿವರ ಹಾಗೂ ಸಾಧನೆಗಳ ಸಾರಾಂಶ ಪೂರಕ ದಾಖಲೆ ಹಾಗೂ ಇತರೆ ದಾಖಲೆಗಳೊಂದಿಗೆ ಅರ್ಜಿಯನ್ನು www.awards.gov.in & www.depwd.gov.inವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕು. ಆನ್‌ಲೈನಲ್ಲಿ ತಮ್ಮ ಎಲ್ಲಾ ದಾಖಲಾತಿಗಳನ್ನು ಭರ್ತಿ ಮಾಡಿ ಸಲ್ಲಿಸಿದ ಅರ್ಜಿ ಮತ್ತು ದಾಖಲೆಗಳ ಪ್ರತಿಯನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಪಂಚಾಯತ್ ಆವರಣ ವಿಜಯಪುರ ಕಚೇರಿಗೆ ಸಲ್ಲಿಸಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ದೂ: ೦೮೩೫೨-೭೯೬೦೬೦ ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ-೩ರ ಪರೀಕ್ಷೆಯ ಮೌಲ್ಯಮಾಪನವು ನಗರದ ಫಿನಿಕ್ಸ ಪ್ರೌಢ ಶಾಲೆ, ಸ್ನೇಹ ಸಂಗಮ ಪ್ರೌಢ ಶಾಲೆ ಹಾಗೂ ಮರಾಠಿ ವಿದ್ಯಾಲಯದಲ್ಲಿ ದಿನಾಂಕ:೧೭-೦೭-೨೦೨೫ ರಿಂದ ೨೧-೦೭-೨೦೨೫ರವರೆಗೆ ನಡೆಯಲಿದೆ. ಸದರಿ ಮೌಲ್ಯಮಾಪನ ಕೇಂದ್ರಗಳ ೨೦೦ ಮೀಟರ ಸುತ್ತಮುತ್ತಲಿನ ಪ್ರದೇಶದಲ್ಲಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ೨೦೨೩ರ ಕಲಂ ೧೬೩ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾರಿಗೆ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಬೇಕಾಗಿದ್ದ ಸರ್ಕಾರವು ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕೆ ನಷ್ಟಕ್ಕೆ ನೂಕಿದೆ. ಭವಿಷ್ಯ ನಿಧಿ (ಪಿ.ಎಫ್) ಪಾವತಿ ಮಾಡುವುದಕ್ಕೂ ಹಣವಿಲ್ಲದೆ ಈಗ ಅದಕ್ಕೂ ಸಾಲ ಮಾಡಲು ನಿರ್ಧರಿಸಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ.ಎರಡು ದಿನಗಳ ಹಿಂದೆಯಷ್ಟೇ ‘ಶಕ್ತಿ’ ಯೋಜನೆಯ ಬಗ್ಗೆ ಸರ್ಕಾರ ಎಲ್ಲಾ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಯೋಜನೆಯ ಯಶಸ್ಸಿನ ಬಗ್ಗೆ ಜಾಹೀರಾತು ನೀಡಿತ್ತು. ಸಾರಿಗೆ ನೌಕರರಿಗೆ 38 ತಿಂಗಳ ಭತ್ಯೆ ಮತ್ತು ವೇತನ ಹೆಚ್ಚಳ ಮಾಡದೆ ಇರುವುದರಿಂದ ಮುಷ್ಕರ ಮಾಡುವುದಾಗಿ ಕರೆ ಕೊಟ್ಟಿದ್ದಾರೆ.ಆರ್ಥಿಕ ತಜ್ಞ, ಅತಿ ಹೆಚ್ಚು ಬಜೆಟ್ ಕೊಟ್ಟ ಮುಖ್ಯಮಂತ್ರಿಗಳು ರಾಜ್ಯವನ್ನು ಸಾಲದ ಸುಳಿಗೆ ನೂಕಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ ಎಂಬುದು ಗೊತ್ತಿರುವ ವಿಷಯವೇ. ಕಾಂಗ್ರೆಸ್ ಪಕ್ಷಕ್ಕೆ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಗ್ಯಾರಂಟಿ ಯೋಜನೆಗಳು ಬೇಕಾದವೇ ಹೊರತು ಜನರ ಏಳಿಗೆಗೆ, ಅಭ್ಯುದಯಕ್ಕೆ, ಕಲ್ಯಾಣಕ್ಕಲ್ಲ…
