ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳಗಾರರ ಸಂಘ ಬೆಂಗಳೂರು, ವಿಜಯಪುರ ಪ್ರಾದೇಶಿಕ ಕಚೇರಿಯ ವತಿಯಿಂದ ಜಿಲ್ಲಾಧಿಕಾರಿ ಕೆ.ಆನಂದ ಅವರಿಗೆ ಶುಕ್ರವಾರ 2024-25 ನೇ ಸಾಲಿನ ದ್ರಾಕ್ಷಿ ಬೆಳೆ ವಿಮೆ ಪರಿಹಾರ ಬಿಡುಗಡೆಗೊಳಿಸುವಂತೆ ರಾಜ್ಯಧ್ಯಕ್ಷ ಅಭಯಕುಮಾರ ನಾಂದ್ರೇಕರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ನಾಂದ್ರೇಕರ ದ್ರಾಕ್ಷಿ ಬೆಳೆ ವಿಮೆ ಪರಿಹಾರವನ್ನು ಜಿಲ್ಲೆಯಲ್ಲಿರುವ ಎಲ್ಲ ದ್ರಾಕ್ಷಿ ಬೆಳೆಗಾರರಿಗೆ ಒಂದೇ ರೂಪದ ದ್ರಾಕ್ಷಿ ಬೆಳೆ ವಿಮೆ ಬಿಡುಗಡೆ ಮಾಡಬೇಕು. ವಿಮಾ ಕಂಪನಿಯವರ ಕಾರ್ಯಾಲಯವು ಬೆಂಗಳೂರಿನಲ್ಲಿ ಇರುವುದು ಅವರನ್ನು ಸಂಪರ್ಕಿಸಲು ರೈತರಿಗೆ ತೊಂದರೆಯಾಗುತ್ತದೆ, ಅದಕ್ಕಾಗಿ ವಿಜಯಪುರ ಮತ್ತು ಸುತ್ತಲೂ ಇರುವ ಜಿಲ್ಲೆಯಲ್ಲಿ 93ಕ್ಕೂ ಹೆಚ್ಚು ದ್ರಾಕ್ಷಿ ಬೆಳೆ ಬೆಳೆಯುವುದರಿಂದ ವಿಮಾ ಕಂಪನಿಯ ಕಾರ್ಯಾಲಯವನ್ನು ವಿಜಯಪುರದಲ್ಲಿ ತೆರೆಯಬೇಕು. 2025-26 ನೇ ಸಾಲಿನ ಹಂಗಾಮಿನಲ್ಲಿ ವಾತಾವರಣವು ದ್ರಾಕ್ಷಿ ಬೆಳೆಗೆ ಯೋಗ್ಯವಾಗಿಲ್ಲವೆಂದು ಕಂಡುಬಂದಿದ್ದು, ದ್ರಾಕ್ಷಿ ಬೆಳೆ ಬರುವ ಲಕ್ಷಣಗಳು ಕಾಣುತ್ತಿಲ್ಲ ಕಾರಣ ಕಂದಾಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಸರಕಾರಕ್ಕೆ ಹಾಗೂ ವಿಮಾ ಕಂಪನಿಗಳಿಗೆ ವರದಿ ಸಲ್ಲಿಸಬೇಕು ಹಾಗೂ ಕಳಪೆ ಗುಣಮಟ್ಟದ ಔಷಧಿಗಳ ವ್ಯಾಪಾರ ನಿಲ್ಲಿಸಲು ಮುಂಜಾಗೃತವಾಗಿ ಕ್ರಮವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳಗಾರರ ಸಂಘ ಪ್ರಾದೇಶಿಕ ಕಛೇರಿ ವಿಜಯಪೂರ ಅಧ್ಯಕ್ಷ ಎಂ.ಎಸ್. ಲೋಣಿ, ಭರತೇಶ ಜಮಖಂಡಿ, ಉಪಾಧ್ಯಕ್ಷ ಎಸ್. ಎಚ್. ನಾಡಗೌಡರ, ಪ್ರಧಾನ ಕಾರ್ಯದರ್ಶಿ ಸಿದಗೊಂಡ ರುದ್ರಗೌಡರ,ಗುರು ಮಾಳಿ, ಭೀಮರಾಯ ಮಸಳಿ, ಯಾಕೂಬ ಜತ್ತಿ, ಪ್ರಕಾಶ ಆಯತವಾಡ, ಸುಭಾಷಗೌಡ ಪಾಟೀಲ್, ಪ್ರಶಾಂತ ಪಾಟೀಲ, ಶರಣು ಅವಟಿ, ರಾಜಕುಮಾರ ಪೂಜಾರಿ, ಅಶೋಕ ಬಿರಾದಾರ್, ಮಹಮ್ಮದ್ ಅಲೀಫ್ ಮಕಾನದಾರ ಹಾಗೂ ವಿಜಯಪೂರ,ಬಾಗಲಕೋಟ, ಬೇಳಗಾವಿ, ಕೊಪ್ಪಳ, ಗದಗ, ಗುಲಬರ್ಗಾ ಹಾಗೂ ಬೀದರ ಜಿಲ್ಲೆಗಳ ರೈತರು ಹಾಜರಿದ್ದರು.