ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ತ್ಯಾಜ್ಯ ನಿರ್ವಹಣೆಗೆ ಈಗಾಗಲೇ ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯ ಸಹಾಯವಾಣಿ ಘೋಷಿಸಿದ್ದು, ಸಾರ್ವಜನಿಕರು ಕಸವಿರುವ ಜಾಗೆಯ ಪೋಟೋ ತೆಗೆದು ಅದನ್ನು ಸಹಾಯವಾಣಿ ಸಂಖ್ಯೆಯಾದ ೭೩೩೭೮೮೮೮೪೯೦ ವ್ಯಾಟ್ಸಪ್ ಮೂಲಕ ರವಾನಿಸಿದರೆ ೨೪ಗಂಟೆಯಲ್ಲಿ ಆ ಜಾಗೆಯಲ್ಲಿರುವ ಕಸ ವಿಲೇವಾರಿ ಮಾಡಲಾಗುವುದು ಎಂದು ಸಿಂದಗಿ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ನಬಿರಸೂಲ್ ಉಸ್ತಾದ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.