Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಮಕ್ಕಳು ಬಾಲ್ಯದಲ್ಲಿರುವಾಗಲೇ ಅವರಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತುವುದರಿಂದ ಉನ್ನತ ಸಾಧನೆ ಮಾಡುವ ಮೂಲಕ ದೇಶದ ಅಮೂಲ್ಯ ಸಂಪತ್ತಾಗಲು ಸಾಧ್ಯವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ (ಸಿಆರ್ ಪಿ) ಬಂದೇನವಾಜ್ ನಾಲತವಾಡ ಹೇಳಿದರು.ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಪ್ರಧಾನಿ,ದೇಶದ ಮೊದಲ ಪ್ರಧಾನಿ ದಿ. ಜವಾಹರಲಾಲ್ ನೆಹರು ಅವರ ಜಯಂತಿ ಅಂಗವಾಗಿ ಮಕ್ಕಳ ದಿನಾಚರಣೆ ಅಂಗವಾಗಿ ” ಪೋಷಕರು ಹಾಗೂ ಶಿಕ್ಷಕರ ಮಹಾ ಸಭೆ ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಂದು ಮಗುವಿನಲ್ಲಿ ವಿಶೇಷ ಕೌಶಲ್ಯ ಅಡಗಿರುತ್ತದೆ ಅದನ್ನು ಗುರುತಿಸಿ ಶಿಕ್ಷಕರು ಹೊರ ತರುವ ಪ್ರಾಮಾಣಿಕ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಹಾಕೋಣ ಬನ್ನಿ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲೆಯ ಮುಖ್ಯಗುರುಗಳಾದ ದೇವಕಿ. ಎಲ್. ಪಾಲಕರು ನಿಮ್ಮ ಮಕ್ಕಳ ಏಳಿಗೆಗಾಗಿ ನೀವು, ನಾವು ಸೇರಿಕೊಂಡು ಮಕ್ಕಳ ಭವಿಷ್ಯವನ್ನು ರೂಪಿಸಬೇಕಾಗಿದೆ. ಅದ್ಕಕಾಗಿ ಪ್ರತಿಯೊಬ್ಬ ಪಾಲಕರು ನಿಮ್ಮ ಮಕ್ಕಳ ಬಗ್ಗೆ ಹೆಚ್ಚಿನ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮೆಗಾ ಪಿ ಟಿ ಎಂ ಪಾಲಕರ, ಶಿಕ್ಷಕರ ಮಹಾಸಭೆ ಶುಕ್ರವಾರ ನಡೆಯಿತು.ಚಡಚಣ ಕ್ಷೆeತ್ರ ಶಿಕ್ಷಣಾಧಿಕಾರಿ ಚಿದಾನಂದ ಕಟ್ಟಿಮನಿ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಭೆಯಲ್ಲಿ ಶಾಲೆಯ ಮಕ್ಕಳ 100 ಕ್ಕೂ ಹೆಚ್ಚು ಪಾಲಕ/ಪೋಷಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಪಾಲಕರೊಂದಿಗೆ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಿದರು. ಬಿ.ಆರ್.ಪಿ.ಗಳಾದ ಆರ್. ಕೆ. ಕಾಮಗೊಂಡ ನಿಗಡಿ ಅವರು ಬಾಲ ಕಾರ್ಮಿಕ ನಿರ್ಮೂಲನೆಯ ಬಗ್ಗೆ ಮಾತನಾಡಿದರು.ಸಿ.ಆರ್.ಪಿ. ಸಂಪನ್ಮೂಲ ವ್ಯಕ್ತಿ ಬಿ.ಕೆ. ವಾಘಮೋರೆ ಅವರು ಶಾಲೆಯಲ್ಲಿ ನೂತನವಾಗಿ ಪ್ರಾರಂಭವಾದ ಸ್ಮಾರ್ಟ್ ಕ್ಲಾಸ್ ನ ಬಗ್ಗೆ ಪ್ರಾಯೋಗಿಕವಾಗಿ ಪಾಲಕರೊಂದಿಗೆ ವಿಷಯ ಹಂಚಿಕೊಂಡರು.ಶಾಲೆಯ ಮುಖ್ಯ ಗುರು ಎಸ್.ಎಸ್. ಪಾಟೀಲ ಅವರು ಮಾತನಾಡಿ ಶಾಲೆಯ ಪ್ರಗತಿ, ಸರಕಾರದ ಸೌಲಭ್ಯಗಳನ್ನು ಕುರಿತು ಪಾಲಕರಿಗೆ ತಿಳಿಸಿದರು.ಕಾರ್ಯಕ್ರಮವನ್ನು ಶಾಲೆಯ ಮಕ್ಕಳೇ ನಿರೂಪಿಸಿ ನಿರ್ವಹಿಸಿದರು.ನಂತರ ಆಗಮಿಸಿದ ಎಲ್ಲ ಪಾಲಕ/ ಪೋಷಕರಿಗೆ ಸವಿಯಾದ ಊಟದ ವ್ಯವಸ್ಥೆ ಮಾಡಲಾಗಿತ್ತು ಮಧ್ಯಾಹ್ನದ ಅವಧಿಯ ನಂತರ…
ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ | ನಾದ ಗ್ರಾಮ ಸಂಪೂರ್ಣ ಬಂದ್ ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಕಬ್ಬು ಬೆಳೆಗಾರರು ಕಬ್ಬಿಗೆ ದರ ನಿಗದಿ ಪಡಿಸಿ ಕಾರ್ಖಾನೆ ಪ್ರಾರಂಭಿಸಿರುವ ಹೋರಾಟ ಮುಂದುವರೆದಿದೆ.ಶುಕ್ರವಾರ ಇಂಡಿ ಸಿಂದಗಿ ರಸ್ತೆಯ ಮಧ್ಯದಲ್ಲಿರುವ ನಾದ ಕೆಡಿ ಗ್ರಾಮ ಬಂದ್ ಮಾಡಿ ಮತ್ತು ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದರು.ಇಂದರಿಂದ ಯಾವದೇ ವಾಹನಗಳು ಚಲಿಸಲಿಲ್ಲ.ಇಂಡಿಯಿಂದ ಸಿಂದಗಿ, ಆಲಮೇಲ, ಗುಲಬರ್ಗಾ ಹೈದ್ರಾಬಾದಗಳಿಗೆ ಯಾವದೇ ವಾಹನಗಳು ಹೋಗದೆ ಪ್ರಯಾಣಿಕರಿಗೆ ಅತೀವ ತೊಂದರೆಯಾಯಿತು.ನಾದ ಗ್ರಾಮದವರು ಕೂಡ ಸಹಕರಿಸಿ ಯಾವದೇ ಅಂಗಡಿ , ಚಹಾ ಅಂಗಡಿ ಹೋಟೆಲಗಳು ತೆರೆಯಲಿಲ್ಲ.ಹೋರಾಟ ಸಮಿತಿಯ ಬಾಳು ಮುಳಜಿ ಮಾತನಾಡಿ, ಕಾರ್ಖಾನೆಯವರಿಗೆ ಜಿಲ್ಲಾಧಿಕಾರಿಗಳು ದರ ನಿಗದಿ ಪಡಿಸಲು ತಿಳಿಸಬೇಕು. ರೈತರು ಸಹನೆ ಕಳೆದುಕೊಂಡರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆಯಾಗುತ್ತಾರೆ. ದರ ನಿಗದಿ ಪಡಿಸಲು ಕಾರ್ಖಾನೆಯವರಿಗೆ ನಿರ್ದೇಶನ ನೀಡಬೇಕು ಎಂದರು.ನಾದ ಗ್ರಾಮದ ಎಸ್.ಟಿ.ಪಾಟೀಲ, ಸಿದ್ದು ತಳವಾರ, ಎಂ.ಎಸ್.ಮುಲ್ಲಾ, ಕಲ್ಯಾಣಿ ಹಿಟ್ನಳ್ಳಿ, ಶ್ರೀಮಂತ ಖಸ್ಕಿ, ಶ್ರೀಶೈಲ ಮದರಿ, ಯಲ್ಲು ಹಳ್ಳಿ, ಸಂಗಣ್ಣ ದೇವರಮನಿ, ಸುರೇಶ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ಆಯ್. ಕೆ.ರಾಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳು ಮತ್ತು ಆಟದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ ನಂತರ ಮಕ್ಕಳಿಗೆ ಸಿಹಿ ವಿತರಿಸಲಾಯಿತು..ಈ ಸಂದರ್ಭದಲ್ಲಿ ಮುಖ್ಯ ಗುರು ಸಂತೋಷ ಚೆಂಗಟ್ಟಿ,ಶಿಕ್ಷಕಿಯರಾದ ಸಂಜನಾ ಬೇನೂರ,ಅಶ್ವಿನಿ ರಸ್ತಾಪೂರಮಠ, ರುಕ್ಸಾನಾ ಬೆಣ್ಣಿಶಿರೂರ, ಹೇಮಾ ಬಪ್ಪನಕೇರ, ಸೀಮಾ ಆಸಂಗಿಹಾಳ, ಪೂಜಾ ಕುಂಟೋಜಿ ,ಶ್ರದ್ದಾ ಅಂಬೂರೆ ಸೇರಿದಂತೆ ಮಕ್ಕಳಿದ್ದರು.
ಕೃಷ್ಣಾ ಮೇಲ್ದಂಡೆ ಯೋಜನೆ | ೧೪ದಿನ ಚಾಲು, ೧೦ದಿನ ಬಂದ್ ಪದ್ದತಿ ಅನುಸರಿಸಿ ನೀರು ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯ ೨೦೨೫-೨೬ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳಿಗೆ ೧೪ದಿನ ಚಾಲು, ೧೦ದಿನ ಬಂದ್ ಪದ್ದತಿ ಅನುಸರಿಸಿ ೨೦೨೬ ಏ.೩ರವರೆಗೆ ಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರು ಹರಿಸಲು ತೀರ್ಮಾನಿಸಲಾಯಿತು. ನೀರಾವರಿ ಸಲಹಾ ಸಮಿತಿ ನಿಯಮದಂತೆ ಸಭೆಯನ್ನು ಆರ್. ಬಿ. ತಿಮ್ಮಾಪುರ ಅಬಕಾರಿ ಸಚಿವರು, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧ್ಯಕ್ಷರು, ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷತೆಯಲ್ಲಿ ದಿನಾಂಕ:೧೪.೧೧.೨೦೨೫ ರಂದು ಬೆಳಗ್ಗೆ ೧೧.೦೦ ಗಂಟೆಗೆ ಕೊಠಡಿ ಸಂಖ್ಯೆ :೩೧೭, ೩ನೇ ಮಹಡಿ ವಿಕಾಸ ಸೌಧ, ಬೆಂಗಳೂರು ಸಭಾಂಗಣದಲ್ಲಿ ಜರುಗಿಸಲು ತೀರ್ಮಾನಿಸಲಾಗಿತ್ತು.ಕಾರಣಾಂತರದಿಂದ ಆರ್. ಬಿ. ತಿಮ್ಮಾಪುರ ಅಬಕಾರಿ ಸಚಿವರು, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧ್ಯಕ್ಷರು, ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಇವರಿಗೆ ಖುದ್ದಾಗಿ ಸಭೆಗೆ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ…
ಕೇಂದ್ರ ಜಲ ಆಯೋಗದ ಸಹಾಯಕ ನಿರ್ದೇಶಕ ಅಧಿಕಾರಿಗಳಿಗೆ ಅಕ್ಷಯ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಣೆಕಟ್ಟುಗಳ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಅಣೆಕಟ್ಟು ಸುರಕ್ಷತಾ ಕಾಯ್ದೆಯನ್ನೇ ಜಾರಿಗೆ ತಂದಿದ್ದು, ಆಣೆಕಟ್ಟುಗಳ ಶಿಥಿಲದಿಂದ ಜೀವ ಹಾನಿಯಾದರೆ ಅದಕ್ಕೆ ಅಣೆಕಟ್ಟೆಗಳ ಅಧಿಕಾರಿಗಳನ್ನೇ ಹೊಣೆ ಮಾಡಿ, ಅದಕ್ಕೆ ಅಧಿಕಾರಿಗಳಿಗೆ ಕಾನೂನಿನಡಿ ಶಿಕ್ಷೆಗೂ ಅವಕಾಶ ಇದೆ ಎಂದು ಕೇಂದ್ರ ಜಲ ಆಯೋಗದ ಸಹಾಯಕ ನಿರ್ದೇಶಕ ಅಕ್ಷಯ ಹೇಳಿದರು.ನವದೆಹಲಿಯ ಕೇಂದ್ರ ಜಲ ಆಯೋಗ, ಜಲಸಂಪನ್ಮೂಲ ಇಲಾಖೆ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಸಹಯೋಗದಡಿ, ಅಣೆಕಟ್ಟುಗಳ ನವೀಕರಣ ಮತ್ತು ಸುಧಾರಣೆ ಯೋಜನೆ (ಡ್ರಿಪ್) ಅಡಿ ಇಲ್ಲಿಯ ಸಮುದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಲಮಟ್ಟಿ ಅಣೆಕಟ್ಟು ಸುರಕ್ಷತೆಯ ಬಗ್ಗೆ ಸಮುದಾಯ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.ಅಣೆಕಟ್ಟುಗಳ ಸುರಕ್ಷತೆ, ಭದ್ರತೆ, ಮೇಲ್ವಿಚಾರಣೆ ಎಂಬುದು ಜಲಾಶಯದ ಅಧಿಕಾರಿಗಳ ಅತ್ಯಂತ ಮಹತ್ವದ ಹೊಣೆಗಾರಿಕೆ ಎಂದರು.ಕೇಂದ್ರ ಜಲ ಆಯೋಗ ಪ್ರತಿ ರಾಜ್ಯದಲ್ಲಿ ಒಂದೊಂದು ಅಣೆಕಟ್ಟುಗಳನ್ನು ಆಯ್ದು ಅಲ್ಲಿ ಅಣೆಕಟ್ಟುಗಳ ಬಗ್ಗೆ ಜಾಗೃತಿ ಮಾಡುತ್ತದೆ. ಪ್ರಸ್ತುತ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಕ್ಕಳು ದೇಶಕ್ಕಾಗಿ ಶ್ರಮಿಸಿದ ಮಹನೀಯರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಮಾದರಿಯಾಗಿರಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸನ್ಮಾರ್ಗದಲ್ಲಿ ನಡೆಯುವಂತೆ ಶಿಕ್ಷಕರು ಮತ್ತು ಪಾಲಕರು ಮಾರ್ಗದರ್ಶನ ನೀಡಬೇಕು ಎಂದು ಎಚ್.ಜಿ.ಪಪೂ ಕಾಲೇಜಿನ ಕನ್ನಡ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಹೇಳಿದರು.ಪಟ್ಟಣದ ಸಮರ್ಥ ವಿದ್ಯಾವಿಕಾಸ ವಿವಿದೋದ್ದೇಶಗಳ ಸಂಸ್ಥೆಯ ಪ್ರೇರಣಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹ.ಮ. ಪೂಜಾರ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಮೂಲಕ ಮಾನವೀಯ ಮೌಲ್ಯಗಳನ್ನು ಕಲಿಸಲು ಸಾಧ್ಯ. ಪುಟಾಣಿ ಮಕ್ಕಳಿಗೆ ಒಳ್ಳೆಯ ವಿಚಾರ, ನಡವಳಿಕೆಗಳನ್ನು ಬಾಲ್ಯದಿಂದಲೇ ಕಲಿಸಿದರೆ ಅವರು ಸಮಾಜದ ಆಸ್ತಿಯಾಗುತ್ತಾರೆ ಎಂದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮಕ್ಕಳ ಸಾಹಿತಿ ಹ.ಮ.ಪೂಜಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಗು ಬೆಳೆಯುವ ಮನೆ ಹಾಗೂ ಸುತ್ತಲಿನ ಪರಿಸರ ಅವರ ಮಾನಸಿಕ ಮತ್ತು ಬೌದ್ಧಿಕ ವಿಕಸನಕ್ಕೆ ಪೂರಕವಾಗಿರಬೇಕು. ಮಕ್ಕಳು ಬೆಳೆಯುತ್ತಲೇ ಸಂಸ್ಕಾರ, ಸಂಸ್ಕೃತಿ, ಪರಂಪರೆ ಕಲಿಯುತ್ತಾರೆ. ಮಕ್ಕಳ…
ಆಲಮೇಲ ದಲ್ಲಿ ನಡೆದ ರೈತ ಹೋರಾಟದಲ್ಲಿ ರಾಜ್ಯ ರೈತಸಂಘದ ಅದ್ಯಕ್ಷ ಚುನ್ನಪ್ಪ ಪೂಜಾರಿ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಸರ್ಕಾರ ನಿಗದಿ ಮಾಡಿದ ದರ ನೀಡುವವರೆಗೂ ಹೋರಾಟ ನಿರಂತರವಾಗಿರಲಿದೆ ಎಂದು ರಾಜ್ಯ ರೈತಸಂಘದ ಅದ್ಯಕ್ಷ ಚುನ್ನಪ್ಪ ಪೂಜಾರಿ ಹೇಳಿದರು.ಶುಕ್ರವಾರ ಆಲಮೇಲ ದಲ್ಲಿ ನೆರೆದ ರೈತರ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಾರ್ಖಾನೆ ಮಾಲಿಕರು ಮೊಂಡುವಾದ ಮಾಡುತ್ತಿದ್ದು ಆದಷ್ಟು ಬೇಗ ಸರ್ಕಾರ ನಿಗದಿ ಮಾಡಿರುವ ದರ ಘೋಷಣೆ ಮಾಡಿ ಕಾರ್ಖಾನೆ ಪ್ರಾರಂಬಿಸಬೇಕು ಎಂದರು.ತೂಕ ದಲ್ಲಿ ಮೋಸ ಅದನ್ನು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಬಗ್ಗೆನು ಹೋರಾಟ ಮಾಡಲಾಗುವದು. ಡಿಜಿಟಲ್ ತೂಕ ಯಂತ್ರದಲ್ಲಿ ಅವ್ಯವಹಾರ ನಡೆದಿದ್ದು ಅದನ್ನು ನಿರ್ಮೂಲನೆ ಮಾಡಲು ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ವಿರಕ್ತ ಮಠದ ಶ್ರೀಗಳು, ಶಶಿಧರ ಗಣಿಯಾರ, ಮಾಂತೇಶ ಕತ್ತಿ, ಅಪ್ಪು ಶೆಟ್ಟಿ, ಶ್ರೀಮಂತ ದುದ್ದಗಿ ಸೇರಿದಂತೆ ಸಾವಿರಾರು ಜನ ರೈತರು ಭಾಗವಹಿಸಿದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ದೇಶ ಹಾಗೂ ನಾಡು ಕಂಡ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿರುವ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ದೇಶದ ಸನಾತನ ಧರ್ಮದ ಪ್ರಚಾರದ ಜೊತೆಗೆ ರೈತ ಬಾಂಧವರಿಗೆ ಅನುಕೂಲವಾಗುವ ಅನೇಕ ಕೃಷಿ ಚಟುವಟಿಕೆಗಳನ್ನು, ಸಮಾಜ ಮುಖಿ ಕಾರ್ಯ ಮಾಡಿದ್ದಾರೆ. ಇಂತಹ ಶ್ರೀಗಳನ್ನು ವಿಜಯಪುರ ಜಿಲ್ಲೆಗೆ ಪ್ರವೇಶಕ್ಕೆ ಜಿಲ್ಲಾಡಳಿತವು ನಿರ್ಬಂಧ ಆದೇಶ ಹೊರಡಿಸುವದು ಅತ್ಯಂತ ನೋವಿನ ಸಂಗತಿಯಾಗಿದೆ. ಕೂಡಲೇ ಸಿಎಂ ಸಿದ್ದರಾಮಯ್ಯನವರು ಈ ನಿರ್ಬಂಧ ಆದೇಶವನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು ಆಗ್ರಹಿಸಿದರು.ಪಟ್ಟಣದ ಮಿನಿವಿಧಾನಸೌಧದಲ್ಲಿರುವ ತಹಸೀಲ್ದಾರ ಕಚೇರಿ ಮುಂಭಾಗ ಬಸವಾದಿ ಶರಣರ ಹಿಂದು ವೇದಿಕೆ ಹಾಗೂ ಭಾರತೀಯ ಜನತಾ ಪಕ್ಷದ ಸಹಯೋಗದಲ್ಲಿ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ಗಂಟೆ ಕಾಲ ಹಮ್ಮಿಕೊಂಡಿದ್ದ ಸಾಂಕೇತಿಕ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ಕನ್ಹೇರಿ ಸ್ವಾಮೀಜಿಯವರ ವ್ಯಕ್ತಿತ್ವ ಅನೇಕ ಜನರಿಗೆ ಮಾದರಿಯಾಗಿದೆ. ಶ್ರೀಗಳು ಉತ್ತರ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿಕೂಟ ಚಾರಿತ್ರಿಕ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರು, ಕಾರ್ಯಕರ್ತರು ಶುಕ್ರವಾರ ಸಿಹಿ ಹಂಚಿ ಸಂಭ್ರಮಾಚರಿಸಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಕೇಂದ್ರದಲ್ಲಿರುವ ಎನ್.ಡಿ.ಎ. ಮೈತ್ರಿಕೂಟ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಅನೇಕ ಸುಧಾರಣೆ ಮಾಡಲಾಗಿದೆ. ದೇಶದ ಜನರು ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿಕೊಂಡಿದೆ. ಇದು ಬೇರೆ ರಾಜ್ಯಗಳಿಗೂ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಬಿಹಾರ ಮತದಾರರು ಎನ್.ಡಿ.ಎ. ಮೈತ್ರಿ ಕೂಟ ಪರ ಹೆಚ್ಚು ಮತಗಳನ್ನು ನೀಡುವ ಮೂಲಕ ಮೈತ್ರಿಕೂಟದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್.ಡಿ.ಎ.ಮೈತ್ರಿಕೂಟ ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆಯನ್ನು ದಾಟಿ ಮುನ್ನಡೆ ಸಾಧಿಸಿದೆ. ಇದು ಆರ್.ಜೆ.ಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧಗೆ ಭಾರಿ ಮುಖಭಂಗವಾಗಿದೆ ಎಂದರು.ಸಂಭ್ರಮಾಚರಣೆಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿಜಾಪುರ, ಮುಖಂಡರಾದ ಮಲ್ಲಿಕಾರ್ಜುನ ಶೇಬಗೊಂಡ, ರಾಜು ಮುಳವಾಡ,…
