ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ

33 ನೆಯ ದಿನದ ಶರಣ ಮಾಲಿಕೆಯಲ್ಲಿ ಶ್ರೀ ಅರವಿಂದ ಜತ್ತಿ ಅವರು ಬಸವ ತತ್ವ ಪ್ರಜ್ಞೆಯಾಗಲಿ ಎನ್ನುವ ವಿಷಯ ದ ಕುರಿತು ಅತ್ಯಂತ ಮನೋಜ್ಞವಾಗಿ ಮಾತನಾಡಿದರು.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀ ಚರಣ ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀ ಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ
ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾ
ಎನ್ನುವ ಬಸವಣ್ಣನವರ ವಚನದ ಮೂಲಕ ಇಡೀ ಉಪನ್ಯಾಸದ ತಿರುಳನ್ನು ನಮ್ಮ ಜೊತೆ ಹಂಚಿಕೊಳ್ಳುತ್ತಾ ಹೋದರು.
ಬಸವ ಪ್ರಜ್ಞೆಯ ಅರಿವು ಆಗದೆ ಹೋದರೆ ಅದೇ ಅಜ್ಞಾನ,
ಎಲ್ಲರಲ್ಲೂ ಬಸವ ಚೈತನ್ಯ ಹುಟ್ಟಬೇಕು, ಅರಿವು ಜಾಗೃತವಾದಾಗ ಮಾತ್ರ ಅದು ಪ್ರಜ್ಞೆಯಾಗುತ್ತದೆ. ಹತ್ತರೊಳಗೆ ಹನ್ನೊಂದಾಗಬೇಡಿ, ನಾವೆಲ್ಲರೂ ಚೌಕಟ್ಟಿನ ಹೊರಗೆ ಬಂದು ವಿಚಾರ ಮಾಡಬೇಕು, ನಮ್ಮನ್ನು ನಾವು ಅರಿಯುವ ಪ್ರಯತ್ನ ಮಾಡಬೇಕು, ವಚನ ಬಾಯಿ ಪಾಠ ಮಾಡಿದರೆ ಏನೂ ಸಿದ್ಧಿಸುವುದಿಲ್ಲ,ಅದರ ಒಳಾರ್ಥವನ್ನು ಅರಿಯಬೇಕು, ಬಸವತತ್ವವನ್ನು ಪ್ರಚಾರ ಮಾಡಬೇಕು ಎಂದು ಹೇಳುತ್ತಾ, ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಎನ್ನುವ ಬಸವಣ್ಣ ನವರ ಮೂಲ ತತ್ವವನ್ನು ಬಿಂಬಿಸುತ್ತ, ಮೂಲ ಚೈತನ್ಯವೇ ಮನದೊಡೆಯ ಎನ್ನುವ ಅರ್ಥದೊಡನೆ, ನಾನು ಮಾಡಿದೆ ಎನ್ನುವ ಅಹಂಭಾವ ಬೇಡ, ಎನ್ನುವ ಕಿವಿಮಾತು ಹೇಳುತ್ತಾ, ನಮ್ಮಲ್ಲಿ ನಿಜವಾದ ಬಸವ ಪ್ರಜ್ಞೆ ಅರಳಿಸಿದರು. ಇನ್ನೂ ಹಲವಾರು ವಚನಗಳ ಮೂಲಕ ಮತ್ತು ಸಂಬಂಧ ಪಟ್ಟ ವಿಡಿಯೋ ಮತ್ತು ಚಿತ್ರ ಗಳ ಮುಖಾoತರ ಅತ್ಯಂತ ಪರಿಣಾಮಕಾರಿಯಾಗಿ ಎಲ್ಲರೊಡನೆ ಸಂಭಾಷಣೆ ನಡೆಸುವ ರೀತಿಯಲ್ಲಿ ಇಂದಿನ ಅನುಭಾವ ಮೂಡಿಬಂದಿತು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಇಡೀ ಜಗತ್ತಿನಾದ್ಯoತ ನಾವು ಬಸವಣ್ಣನವರ ವಚನಗಳ ಸಾರವನ್ನು ಪ್ರಚಾರ ಮಾಡಬೇಕು, ಈ ಮೂಲಕ ಪ್ರತಿಯೊಂದು ಮನೆಯನ್ನು, ಮನವನ್ನು ಮುಟ್ಟಬೇಕು ಎನ್ನುವ ಕಳಕಳಿ ವ್ಯಕ್ತಪಡಿಸಿದರು. ಲಿಂಗಾಯತ ತತ್ವಕ್ಕೆ ಏನಾದರೂ ಅಪಚಾರ ವಾದಾಗ ಅಕ್ಕನ ಅರಿವು ವೇದಿಕೆಯಿಂದ ಮಾಡಿದ ಪ್ರತಿಭಟನೆಗಳನ್ನು ಹಂಚಿಕೊoಡರು.ಬಸವತತ್ವದ ಪ್ರತಿಯೊಂದು ಕಾರ್ಯದಲ್ಲೂ ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂದು ಶ್ರೀ ಅರವಿಂದ ಜತ್ತಿ ಅವರಿಗೆ ಮನದಟ್ಟು ಮಾಡಿದರು. ದತ್ತಿ ದಾಸೋಹಿ ಗಳಾದ ಶರಣೆ ನಳಿನಿ ಮಹಗಾoವಕರ ಅವರು ತಮ್ಮತಂದೆಯ ಬಗೆಗೆ ಮಾತನಾಡಿದರು.
ಡಾ. ಮೃತ್ಯುಂಜಯ ಶೆಟ್ಟರ ಅವರ ವಚನ ಪ್ರಾರ್ಥನೆ, ಶರಣೆ ಗೌರಮ್ಮ ನಾಶಿ ಅವರ ಸ್ವಾಗತ,, ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಮಂಗಳ ಮತ್ತು ಶರಣೆ ಸುಧಾ ಪಾಟೀಲ ಅವರ ನಿರೂಪಣೆ ಪ್ರೊ. ಶಾರದಾ ಪಾಟೀಲ ಅವರ ಶರಣು ಸಮರ್ಪಣೆಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.

ವಿಶೇಷ ದತ್ತಿ ಉಪನ್ಯಾಸ – 330
ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ನಳಿನಿ ಮಹಗಾoವಕರ ಅವರ ತಂದೆಯವರಾದ ಉಳುವಪ್ಪ ಯಲ್ಲಪ್ಪ ಅಗಡಿ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 330
