Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಕೆಸ್ಕಾಂ ನ ಶಾಖಾ ಕಚೇರಿಯಲ್ಲಿ ಸೆ.೪ ರಂದು ಬೆಳಿಗ್ಗೆ ೧೧ಕ್ಕೆ ಸಲಹಾ ಸಮಿತಿಯ ಸಭೆಯನ್ನು ಆಯೋಜಿಸಲಾಗಿದ್ದು, ಸಮಿತಿಯ ಎಲ್ಲ ಸದಸ್ಯರು, ರೈತರು ಹಾಗೂ ಗ್ರಾಹಕರು ಭಾಗಿಯಾಗುವಂತೆ ಹೆಸ್ಕಾಂ ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರಾಜಶೇಖರ ಹಾದಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದಿಂದ ೨೦೨೫-೨೬ನೇ ಸಾಲಿಗೆ ಅಲೆಮಾರಿ ಸಮುದಾಯದವರ ಆರ್ಥಿಕ ಅಭಿವೃದ್ಧಿಗಾಗಿವಿವಿಧ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗಾಗಿ ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಬ್ಯಾಂಕಿನ ಸಹಯೋಗದೊಂದಿಗೆ ಉದ್ಯಮಶೀಲತಾ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಹಾಗೂ ಪ್ರೇರಣಾ ಮ್ಯಕ್ರೋ ಕ್ರೆಡಿಟ್ ಯೋಜನೆಗಳಡಿ ಅರ್ಜಿಯನ್ನು ಆನಲೈನ್ ಮೂಲಕ ಸಲ್ಲಿಸಬಹುದಾಗಿದೆ.ಸೆಪ್ಟೆಂಬರ್ ೧೭ಕೊನೆಯ ದಿನವಾಗಿದೆ.೨೦೨೩-೨೪ ಮತ್ತು ೨೦೨೪-೨೫ನೇ ಸಾಲಿನಲ್ಲಿ ಆನಲೈನ್ ಮೂಲಕ ಅರ್ಜಿ ಸಲ್ಲಿಸಿದವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖಾ ಉಪ ನಿರ್ದೇಶಕರಾದ ಮಹೇಶ ಪೋತದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ನೇ ಸಾಲಿಗೆ ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವ್ಯಾಪ್ತಿಗೆ ಬರುವ ಅಲೆಮಾರಿ ಸಮುದಾಯದವರು ಆರ್ಥಿಕ ಅಭಿವೃದ್ಧಿಯನ್ನು ಹೊಂದಲು ವಿವಿಧ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಅನುಷ್ಠಾನ ಸಮಿತಿ ರಚಿಸಬೇಕಾಗಿದ್ದು, ಸಮಿತಿಯ ನಾಮನಿರ್ದೇಶಿತ ಸದಸ್ಯತ್ವಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.ಮೇದಾರ ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯಕ್ಕೆ ಸೇರಿದ ಅರ್ಹ ಆಸಕ್ತರು ದಿನಾಂಕ : ೨೦-೦೯-೨೦೨೫ ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶೇ.೨೪.೧೦% ಹಾಗೂ ಶೇ.೭.೨೫% ಯೋಜನೆಯಡಿ ೨೦೨೫-೨೬ನೇ ಸಾಲಿಗೆ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ವಾರ್ಡ್ ನಂ.೦೪ ಹಂಚನಾಳ ತಾಂಡಾ ಪರಿಶಿಷ್ಟ ಜಾತಿ ಜನರಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವುದು ಹಾಗೂ ಶೇ.೭.೨೫% ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗೂ ಇತರೆ ಕ್ರೀಡಾ ಪಟುಗಳಿಗೆ ಕ್ರೀಡಾ ಸಹಾಯ ಧನ ನೀಡುವ ಯೋಜನೆಯಾಗಿದೆ.ಆಸಕ್ತ ಅರ್ಹ ಫಲಾನುಭವಿಗಳು ಪಾಲಿಕೆ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ ೩೦ರೊಳಗಾಗಿ ಪಾಲಿಕೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪಾಲಿಕೆ ಕಚೇರಿಗೆ ಸಂಪರ್ಕಿಸಬಹುದಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುವ ಕೋಲ್ಹಾರ ಮೂಲ ಸ್ಥಾವರದಿಂದ ಜಲನಗರ ಪಂಪಿನ ಮನೆಯವರೆಗೆ ಅಳವಡಿಸಿರುವ ೯೬೫/೯೦೦ಎಂ.ಎಂ ವ್ಯಾಸದ ಎಂ.ಎಸ್-ಪಿ.ಎಸ್.ಸಿ ಮುಖ್ಯ ಏರು ಕೊಳವೆ ಮಾರ್ಗದ ಚೈನೇಜ ೬.೯೩೦ಕಿ.ಮೀ ಗರಸಂಗಿ ಹಳ್ಳದ ಹತ್ತಿರ, ದಿನಾಂಕ:೦೨.೦೯.೨೦೨೫ ರಂದು ೯೬೫ಮಿ.ಮೀ ವ್ಯಾಸದ ಎಂ.ಎಸ್ ಕೊಳವೆ ಮಾರ್ಗದ ಎಂ.ಎಸ್ ಮ್ಯಾನಹೋಲ್ ಬರ್ಸ್ಟ್ ಆಗಿದ್ದು ಹಾಗೂ ಚೈನೇಜ ೨.೪೦೬ಕಿ.ಮೀ ರಾಚಣ್ಣ ಗುಡಿ ಹತ್ತಿರ, ಚೈನೇಜ ೯.೩೩೨ಕಿ.ಮೀ ರೋಣಿಹಾಳ ಗ್ರಾಮದ ಹತ್ತಿರ, ಚೈನೇಜ ೧೩.೧೬೫ಕಿ.ಮೀ ರೋಣಿಹಾಳ ಕೆರೆ ಹತ್ತಿರ ಹಾಗೂ ಚೈನೇಜ ೪೧.೨೯೦ಕಿ.ಮೀ ಬಾರಾಕೋಟರಿ ತಾಂಡಾ ಹತ್ತಿರ ಹಾಗೂ ಮೊದಲನೇ ಹಂತದ ೪೫೦ಮಿ.ಮೀ ವ್ಯಾಸದ ಎಂ.ಎಸ್ ಮುಖ್ಯ ಏರು ಕೊಳವೆ ಮಾರ್ಗದ, ರಮಜಾನ ಹಳ್ಳ ಬಳೂತಿ ಕ್ರಾಸ ಹತ್ತಿರ ನೀರು ಸೋರುವಿಕೆಯ ತುರ್ತು ದುರಸ್ತಿ ಕಾಮಗಾರಿಗಳನ್ನು ಜಲ ಮಂಡಳಿ ವತಿಯಿಂದ ಕೈಗೊಳ್ಳಲಾಗಿದೆ.ಆದ್ದರಿಂದ, ಸೆಪ್ಟೆಂಬರ್ ೩ರಂದು ವಿಜಯಪುರ ನಗರಕ್ಕೆ ಕೋಲ್ಹಾರದ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜು ಆಗುವ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ…

Read More

ಬಸವ ನಾಡಿನಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ | ಸಚಿವ ಶಿವಾನಂದ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವ ನಾಡು ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ನಾಡಾಗಿದ್ದು, ಸಾಂಸ್ಕೃತಿಕ ಪರಂಪರೆ ಪೂರ್ವಿಕರ ಬಳುವಳಿ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್.ಪಾಟೀಲ ಅವರು ಹೇಳಿದರು.ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಸವನ ಬಾಗೇವಾಡಿಯ ಶ್ರೀ ಬಸವೇಶ್ವರ ದೇವಾಲಯದ ಅಂತರಾಷ್ಟ್ರೀಯ ಶಾಲೆಯ ಶ್ರೀನಂದೀಶ್ವರ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಸವನ ಬಾಗೇವಾಡಿ ತಹಸೀಲ್ದಾರರಾದ ವಾಯ್. ಎಸ್. ಸೋಮನಕಟ್ಟಿ ಅವರು ಮಾತನಾಡಿ, ಇಂದಿನ ಯುವ ಪೀಳಿಗೆಯು ಮೊಬೈಲ್, ರೀಲ್ಸ್ನಂತಹ ಕೆಟ್ಟ ಸಂಸ್ಕೃತಿಯನ್ನು ಬಿಟ್ಟು ದೇಸಿಯ ಜಾನಪದ ಮತ್ತು ವಚನ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕೆಂದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಿವಕುಮಾರ ಪತ್ತಾರ ಕೊಳಲು ವಾದನ, ಮಹೇಶ್ ಭಂಟನೂರ ಸುಗಮ ಸಂಗೀತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಅತಿವೃಷ್ಟಿ‌ ಮಳೆಯಿಂದ ಬೆಳೆಗಳು ಒಣಗಿ ಹೋಗುತ್ತಿವೆ. ಹೆಸರು, ಉದ್ದು, ಸೊಯಾಬಿನ್, ಹತ್ತಿ, ಮೆಕ್ಕೆಜೋಳ, ಸಜ್ಜೆ ಹಾಗೂ ತೊಗರಿ ಸೇರಿದಂತೆ ಅನೇಕ ಬೆಳೆಗಳು ಒಣಗಿ ಅನ್ನದಾತ ಸಂಕಷ್ಟದಲ್ಲಿದ್ದಾನೆ. ಈ ಕೂಡಲೇ ಹಾನಿಯಾದ ಬೆಳೆ ಸಮಿಕ್ಷೆ ನಡೆಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಲಿ ಮತ್ತು ವಿಶೇಷ ಪರಿಹಾರ ನೀಡಬೇಕೆಂದು ಶಿರಸ್ತೆದಾರ ಎಸ್ ಆರ್ ಮುಜಗೊಂಡ ಅವರಿಗೆಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆ‌ರ್.ಎಸ್) ತಾಲೂಕಾ ಸಮಿತಿಯಿಂದ ಮನವಿ ಸಲ್ಲಿಸಿದರು.ನಗರದ ತಾಲ್ಲೂಕು ಆಡಳಿತ ಸೌಧದ ಎದುರು ಪ್ರತಿಭಟಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಅಧ್ಯಕ್ಷ ಭೀಮರಾಯ ಪೂಜಾರಿ ಮಾತನಾಡಿ, ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ, ಹೆಸರು ಉದ್ದು, ಸೊಯಾಬಿನ್, ಹತ್ತಿ ಬೆಳೆ, ಮೆಕ್ಕೆಜೋಳ, ಸಜ್ಜೆ ಉತ್ತಮ ಫಸಲು ಬಂದಾಗ ಬಂದರೆ ಮಾತ್ರ.‌ ಆದರೆ ಅದೆ ಬೆಳೆಗಳು ಕೈ ಕೊಟ್ಟಾಗ ಅನ್ನದಾತರ ಬದುಕು ಹಾಗೂ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಏನಾಗಿರಬಾರದು. ಅದಕ್ಕಾಗಿ ಅತ್ಯಂತ ಕಷ್ಟದ ಶೋಚನೀಯ ಪರಿಸ್ಥಿತಿಯಲ್ಲಿರುವ ಅನ್ನದಾತನ ಬದುಕಿಗೆ ಆಶ್ರಯಬೇಕಾಗಿದ್ದು…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಡಿಜೆ ಸಹಿತ ಯಾವುದೇ ಅಬ್ಬರದ ಸಂಗೀತವಿಲ್ಲದೇ, ಸ್ವಾತಂತ್ರ‍್ಯ ಹೋರಾಟಗಾರರ ಭಾವಚಿತ್ರಗಳನ್ನು ಹಿಡಿದು, ಬಸವಣ್ಣನವರ ವಚನ, ಶಿವನಾಮ ಹಾಗೂ ಭಜನೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಗಣೇಶ ವಿಸರ್ಜನೆ ಜರುಗಿತು.ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಭಾನುವಾರ ಸಾಯಂಕಾಲ ಗಣೇಶ ವಿಸರ್ಜನೆಯ ಅಂಗವಾಗಿ ಸೈಕಲ್‌ಗಳ ಮೂಲಕ ಮೆರವಣಿಗೆಯನ್ನು ಮಾಡಿ, ಸ್ವಾತಂತ್ರ‍್ಯ ಹೋರಾಟಗಾರರ ಭಾವಚಿತ್ರಗಳನ್ನು ಹಿಡಿದುಕೊಂಡು, ಬಸವಣ್ಣನವರ ವಚನಗಳನ್ನು ಹಾಡುತ್ತಾ, ಜೊತೆಗೆ ಶಿವನಾಮ ಪಠಿಸುತ್ತಾ, ಭಜನೆಯೊಂದಿಗೆ ಗ್ರಾಮದ ಪ್ರತಿಯೊಂದು ಬೀದಿಗಳ ಮೂಲಕ ಹಾದು ಬಹಳ ವಿಶಿಷ್ಟ ರೀತಿಯಲ್ಲಿ ಗಣನಾಥನ ವಿಸರ್ಜನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದÀ ಅಧ್ಯಕ್ಷ ಜಿ.ಪಿ.ಬಿರಾದಾರ, ಮುತ್ತು ಮೆಳ್ಳಿಗೇರಿ, ಮಲಕು ಸುರಗಿಹಳ್ಳಿ, ಕಲ್ಲಪ್ಪ ಮೂಲಿಮನಿ, ಸಿದ್ದು ಹದರಿ, ವಿಶ್ವನಾಥ ಸರಬಡಗಿ, ಸಿದ್ದು ಬಡಿಗೇರ, ಹಣಮಂತ ನಾಗರಳ್ಳಿ, ಸಂಜು ನಾಯ್ಕೋಡಿ, ಶಿವಪುತ್ರ ಗಬ್ಬೂರ, ಸಂದೀಪ ಬಿರಾದಾರ, ಸಂತೋಷ ಬಿರಾದಾರ, ಸಾಹೇಬಗೌಡ ಸುರಗಿಹಳ್ಳಿ, ಸಾಹೇಬಗೌಡ ನಾಗರಳ್ಳಿ, ಸಿದ್ದಾರ್ಥ ವಾಲೀಕಾರ ಹಾಗೂ ಶಾಲಾಮಕ್ಕಳು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ ಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿ ಶ್ರೀಮತಿ ಕಾಶಿಬಾಯಿ ಬಿರಾದಾರ ಅವರ ವೃತ್ತಿಯಿಂದ ನೀವೃತ್ತಿಹೊಂದಿದ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭ ನಡೆಯಿತು.ಈ ವೇಳೆಯಲ್ಲಿ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಮಾತನಾಡಿ ನಮ್ಮ ಮಹಾವಿದ್ಯಾಲಯದಲ್ಲಿ ಅತ್ಯಂತ ಕರ್ತವ್ಯ ನಿಷ್ಠೆಯಿಂದ, ಯಾವುದೆ ನ್ಯೂನ್ಯತೆ ಇಲ್ಲದೆ, ಪ್ರಾಮಾಣಿಕತೆಯಿಂದ ಸಂಸ್ಥೆಯಲ್ಲಿ ತಿಕೋಟಾದಿಂದ ವೃತ್ತಿ ಪ್ರಾರಂಭಿಸಿ ನಮ್ಮ ಮಹವಿದ್ಯಾಲಯ ಸೇರಿಂದಂತೆ ಒಟ್ಟು ೩೧ ವರ್ಷಗಳ ತಮ್ಮ ಸೇವೆಯನ್ನು ಗೈದಿದ್ದಾರೆ ಇವರ ನೀವೃತ್ತಿ ಜೀವನದ ಸುಖಕರವಾಗಿ ಸಾಗಲೆಂದು ಶುಭ ಹಾರೈಸಿದರು.ಈ ವೇಳೆಯಲ್ಲಿ ಎಲ್ ಎಸ್ ಪೂಜಾರಿ, ದುಲಂಗೆ ಮಾತನಾಡಿದರು.ಮಹಾವಿದ್ಯಾಲಯದಿಂದ ಶ್ರೀಮತಿ ಕಾಶಿಬಾಯಿ ಬಿರಾದಾರ ದಂಪತಿಗಳಿಗೆ ಸನ್ಮಾಸಿಲಾಯಿತು.ಈ ಸಂದರ್ಭಲ್ಲಿ ಬಿಎಲ್‌ಡಿಇ ಸಂಸ್ಥೆಯ ಕಛೇರಿ ನಿವೃತ್ತ ಅಧೀಕ್ಷಕರು ಶ್ರೀ.ಎಸ್.ಕೆ ಬಿರಾದಾರ, ಕೆ.ಕೆ.ಪಾಟೀಲ, ಉಪ್ರಾಚಾರ್ಯ ಡಾ.ಅನೀಲ.ಭೀ,ನಾಯಕ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್ ಪಾಟೀಲ, ಕಛೇರಿ ಆಧೀಕ್ಷಕ ಎಸ್.ಬಿ.ಹೇರಲಗಿ, ಜಗದೀಶ ಪಾಟೀಲ ಸೇರಿದಂತೆ ಇನ್ನಿತರ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.ಡಾ.ಉಷಾದೇವಿ…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶೇಷ ಅತಿಥಿ ಉಪನ್ಯಾಸ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೈನಂದಿನ ಜೀವನದಲ್ಲಿ ವ್ಯಾಯಾಮವು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹಲವಾರು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ದೈಹಿಕ ವ್ಯಾಯಾಮದಲ್ಲಿ ತೊಡಗುವುದು ಅವಶ್ಯಕ ಎಂದು ನಗರದ ಬಿ ಎಲ್ ಡಿ ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ದೈಹಿಕ ನಿರ್ದೇಶಕಿ ಡಾ.ಸವಿತಾ ಅನ್ನೆಪ್ಪನವರ ಹೇಳಿದರು.ನಗರದ ಬಿ ಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ,ಕ್ರೀಡಾ ವಿಭಾಗದ ಸಹಯೋದಲ್ಲಿ ದಿನಾಂಕ ೩೦-೦೮-೨೦೨೫ ಶನಿವಾರದಂದು ಅಯೋಜಿಸಿದ ‘ದೈನಂದಿನ ಜೀವನದಲ್ಲಿ ಫಿಟ್‌ನೆಸ್‌ನ ಮಹತ್ವ’ ದ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ನಮ್ಮ ಜೀವನದಲ್ಲಿ ವ್ಯಾಯಾಮದ ಪ್ರಾಮುಖ್ಯತೆ ವಹಿಸುತ್ತದೆ ಅದರಂತೆ ನಿಯಮಿತವಾಗಿ ನಿದ್ರೆ,ಊಟ ಎಲ್ಲವನ್ನು ನಮ್ಮ ಜೀವನದ್ಲಿ ಫಿಟ್ನೆಸ್ಸ್ ಕಾಯ್ದುಕೊಳ್ಳಲು ಸಾಹಯಕ ಆದ್ದರಿಂದ ದಿನಂಪ್ರತಿಯಾಗಿ…

Read More